/newsfirstlive-kannada/media/post_attachments/wp-content/uploads/2023/06/exam.jpg)
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಎಂಎ ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಎಲ್ಲರ ಗಮನ ಸೆಳೆದಿದ್ದಾರೆ.
ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಇದಾಗಿದ್ದು, ಅವರ ಓದಿನ ಬಗ್ಗೆ ಇರುವ ಹಂಬಲ ಮತ್ತು ಇಚ್ಛಾಶಕ್ತಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರಿಗೆ ಮಾದರಿಯಾಗಿದೆ. ಮೂಲತಃ ಬಾಗಲಕೋಟೆಯ ಗುಡೂರು ಬಳಿಯ ಎಸ್.ಸಿ. ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಮಗಳು ಹಾಗೂ ಐವರು ಮೊಮ್ಮಕ್ಕಳಿದ್ದಾರೆ.
ಹಿಂದೆ ಸರ್ಕಾರಿ ನೌಕರಿಯಲ್ಲಿದ್ದ ಇವರು, ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಿದ್ದೂ ವಿದ್ಯಾಭಾಸ ಮಾಡುವ ಹವ್ಯಾಸ ಮಾತ್ರ ಇವರಿಗೆ ಕಡಿಮೆ ಆಗದಿರೋದು ಗಮನಾರ್ಹವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್