newsfirstkannada.com

×

‘ಚಾಯ್​ವಾಲಾ ಅಂದ್ರೆ ಕೇವಲ ಮೋದಿಯಲ್ಲ’- ಟ್ರೋಲಿಗರಿಗೆ ಬುದ್ಧಿವಾದ ಹೇಳಿದ ನಟ ಪ್ರಕಾಶ್ ರಾಜ್

Share :

Published August 22, 2023 at 1:06pm

    ಚಂದ್ರಯಾನ-3 ಬಗ್ಗೆ ಎಕ್ಸ್‌ನಲ್ಲಿ ಫೋಟೋ ಶೇರ್​ ಮಾಡಿದ್ದ ಪ್ರಕಾಶ್ ರಾಜ್​

    ಮಲಯಾಳಂ ಚಾಯ್​ವಾಲಾ ಬಗ್ಗೆ ತಿಳ್ಕೊಳ್ಳಿ ಎಂದು ಟ್ರೋಲಿಗರಿಗೆ ಟಾಂಗ್

    ಚಂದ್ರಯಾನ ಬಗ್ಗೆ ವ್ಯಂಗ್ಯ ಫೋಟೋ ಹಾಕಿದ್ದಕ್ಕೆ ಪ್ರಕಾಶ್ ರಾಜ್ ಫುಲ್ ಟ್ರೋಲ್​

ಬಹುಭಾಷಾ ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿವಾದ ಸೃಷ್ಟಿ ಮಾಡುತ್ತಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಅವರು ಚಹಾ ಮಾಡುತ್ತಿರೋ ಫೋಟೋ ಹಾಕಿದ್ದಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಸಂಬಂಧ ಇವತ್ತು ತಮ್ಮ ಎಕ್ಸ್​ ಅಧಿಕೃತ ಜಾಲತಾಣದಲ್ಲಿ ಮತ್ತೊಂದು ಎಕ್ಸ್ ಪೋಸ್ಟ್ ಮಾಡಿ ಟ್ರೋಲಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನು ಓದಿ: ಚಂದ್ರಯಾನ-3 ಬಗ್ಗೆ ವ್ಯಂಗ್ಯ: ತನ್ನನ್ನು ಟ್ರೋಲ್​ ಮಾಡಿದವರಿಗೆ ಕೌಂಟರ್​ ಕೊಟ್ಟ ಪ್ರಕಾಶ್​ ರಾಜ್​​ ಏನಂದ್ರು?

ನಟ ಪ್ರಕಾಶ್ ರಾಜ್ ಶೇರ್ ಮಾಡಿರುವ ಎಕ್ಸ್​ನಲ್ಲಿ, ಕೇವಲ ಚಾಯ್​ವಾಲಾ ಅಂದರೆ ಪ್ರಧಾನಿ ಮೋದಿ ಮಾತ್ರ ಅಂತಾ ಅನ್​ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್​ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ. ನೀವು ಈ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಪ್ಲೀಸ್​ ಇದನ್ನು ಓದಿ ಎಂದು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನು ಓದಿ: ‘ಚಂದ್ರಯಾನ-3 ಬಿಜೆಪಿ ಪಕ್ಷದ ಯೋಜನೆಯಲ್ಲ’- ಟ್ರೋಲ್ ಆದ ನಟ ಪ್ರಕಾಶ್ ರಾಜ್‌ಗೆ ಹಿಗ್ಗಾಮುಗ್ಗ ತರಾಟೆ

ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಅನ್ನು ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್ ಟೇಕಾಫ್ ಆಗಿತ್ತು. ಇದು ಕೇವಲ ವಿಜ್ಞಾನಿಗಳು ಮಾತ್ರವಲ್ಲ ಇಡೀ ಭಾರತೀಯರು ಹೆಮ್ಮೆಪಟ್ಟಿದ್ದರು. ಈಗಾಗಲೇ ಚಂದ್ರಯಾನ-3 ಅಂತಿಮಘಟ್ಟ ತಲುಪಿದ್ದು ನಾಳೆ ಸ್ಮೂತ್ ಲ್ಯಾಂಡಿಂಗ್ ಆಗಲಿದೆ. ಈ ಕ್ಷಣಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ.

ಈ ಮಧ್ಯೆ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ಮೋದಿ, ಇಸ್ರೋ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಇದಕ್ಕೆ ಪ್ರಕಾಶ್ ರಾಜ್​ ಎಕ್ಸ್​ನಲ್ಲಿ ಮಾಹಿತಿ ಶೇರ್ ಮಾಡುವ ಮೂಲಕ ಚಾಯ್​ವಾಲಾ ಅಂದರೇ ಟ್ರೋಲಿಗರಿಗೆ ಮೋದಿ ಅಂತಾ ಮಾತ್ರ ಗೊತ್ತು. ಈ ಸುದ್ದಿಯನ್ನು ಕೂಡ ತಿಳಿದುಕೊಳ್ಳಿ ಎಂದು ಒಂದು ಲಿಂಕ್​ ಶೇರ್ ಮಾಡಿ ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಚಾಯ್​ವಾಲಾ ಅಂದ್ರೆ ಕೇವಲ ಮೋದಿಯಲ್ಲ’- ಟ್ರೋಲಿಗರಿಗೆ ಬುದ್ಧಿವಾದ ಹೇಳಿದ ನಟ ಪ್ರಕಾಶ್ ರಾಜ್

https://newsfirstlive.com/wp-content/uploads/2023/08/PRAKASH_RAJ.jpg

Load More