ಇಂದು ರಾಯಲ್ ಚಾಲೆಂಜರ್ಸ್ಗೆ ಹೈದ್ರಾಬಾದ್ ಸವಾಲ್
ವಿರಾಟ್ ಕೊಹ್ಲಿಯೇ ಇಂದಿನ ಪಂದ್ಯದ ಕೇಂದ್ರಬಿಂದು
ಫೇವರಿಟ್ ಗ್ರೌಂಡ್ನಲ್ಲಿ ವಿರಾಟ ರೂಪ ದರ್ಶನ ಪಕ್ಕಾ
ಆರ್ಸಿಬಿ vs ಎಸ್ಆರ್ಹೆಚ್.. ಇಂದಿನ ಈ ಹೈವೋಲ್ಟೆಜ್ ಕದನದ ಸೆಂಟರ್ ಆಫ್ ಅಟ್ರಾಕ್ಷನ್ ವಿರಾಟ್ ಕೊಹ್ಲಿ. ಆರೆಂಜ್ ಆರ್ಮಿ ವಿರುದ್ಧ ಆರ್ಸಿಬಿ ಪರ ಕಣಕ್ಕಿಳಿಯೋದು 11 ಮಂದಿ ಆಟಗಾರರಾದ್ರೂ, ಫ್ಯಾನ್ಸ್ ಭರವಸೆ ಇಟ್ಟಿರೋದು ಕೊಹ್ಲಿ ಮೇಲೆ ಮಾತ್ರ. ಹಾಗಾದ್ರೆ ಇಂದು ಕಿಂಗ್ಡಮ್ನಲ್ಲಿ ಕಿಂಗ್ ಕೊಹ್ಲಿ ಕಮಾಲ್ ಮಾಡ್ತಾರಾ? ಎಂಬ ಪ್ರಶ್ನೆ ಎದ್ದಿದೆ.
ಹೊಸ ಅಧ್ಯಾಯ ಅಂತಾ ಸೀಸನ್ 17ರ ಐಪಿಎಲ್ ಆರಂಭಿಸಿದ ಆರ್ಸಿಬಿ, ನಿರೀಕ್ಷೆಯೂ ಮಾಡದಂತಹ ಕಳಪೆ ಪರ್ಫಾಮೆನ್ಸ್ ನೀಡ್ತಿದೆ. ಆಟಗಾರರು ನೀಡ್ತಿರುವ ಹೀನಾಯ ಪ್ರದರ್ಶನ ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ಹುಟ್ಟಿಸಿದೆ. ಈ ಸಲ ಕಪ್ ನಮ್ದೇ ಅಂತಿದ್ದ ಫ್ಯಾನ್ಸ್, ಸತತ ಸೋಲುಗಳನ್ನ ನೋಡಿದ ಮೇಲೆ ತೀವ್ರ ನಿರಾಶರಾಗಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಸ್ಟೇರಿಂಗ್.. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಜಾರಿದ ಕಾರು..
ಆಡಿದ 6 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು, 5 ಪಂದ್ಯ ಸೋತಿರೋ ಆರ್ಸಿಬಿ ಈ ಸಲ ಚಾಂಪಿಯನ್ ಪಟ್ಟಕ್ಕೇರೋದು ಕನಸಿನ ಮಾತೇ. ಮುಂಬೈ ವಿರುದ್ಧ ಹೀನಾಯ ಸೋಲನ್ನು ಕಂಡ ಮೇಲಂತೂ ಅಭಿಮಾನಿಗಳ ಆತ್ಮ ವಿಶ್ವಾಸ ಕುಸಿದೇ ಹೋಗಿದೆ. ಒಂದು ಭರವಸೆಯು ಹಾಗೆಯೇ ಉಳಿದಿದೆ. ಆ ಭರವಸೆಯೇ ಕಿಂಗ್ ಕೊಹ್ಲಿ.
ಅಭಿಮಾನಿಗಳಿಗೆ ಕೊಹ್ಲಿ ಏಕಮಾತ್ರ ಭರವಸೆ
ಆರ್ಸಿಬಿ ಅಂದರೆ ಕೊಹ್ಲಿ.. ಕೊಹ್ಲಿ ಅಂದ್ರೆ ಆರ್ಸಿಬಿ ಅನ್ನೋ ಮಾತಿದೆ. ಅದು ಈ ಸೀಸನ್ನಲ್ಲಂತೂ ಅಕ್ಷರಶಃ ನಿಜವಾಗಿದೆ. ವಿರಾಟ್ ಕೊಹ್ಲಿಯನ್ನ ಬಿಟ್ರೆ ಉಳಿದೆಲ್ಲಾ ಬ್ಯಾಟ್ಸ್ಮನ್ಗಳು ರನ್ಗಳಿಕೆಗೆ ತಡಬಡಾಯಿಸ್ತಿದ್ದಾರೆ. ಕೊಹ್ಲಿ ಏಕಾಂಗಿಯಾಗಿ ಹೋರಾಡಿದ್ದಾರೆ. 2 ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಎದುರಾಳಿಯ ದಾಳಿಯನ್ನ ಹಿಮ್ಮೆಟ್ಟಿಸಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್ನ ಓವರ್ ಟೇಕ್ ಮಾಡುವಾಗ ಅನಾಹುತ; ಪೊಲೀಸ್ ಜೀಪ್ ಪಲ್ಟಿ
17ನೇ ಸೀಸನ್ನಲ್ಲಿ ವಿರಾಟ್ ಕೊಹ್ಲಿ
ಪ್ರಸಕ್ತ ಐಪಿಎಲ್ನಲ್ಲಿ 6 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 79.75ರ ಸರಾಸರಿಯಲ್ಲಿ 319 ರನ್ಗಳಿಸಿದ್ದಾರೆ. 141.79ರ ಸ್ಟ್ರೈಕ್ರೇಟ್ ಹೊಂದಿರೋ ಕೊಹ್ಲಿ., 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ.
ಕಿಂಗ್ಡಮ್ಗೆ ಕಿಂಗ್ ಕೊಹ್ಲಿ ಕಮ್ಬ್ಯಾಕ್..!
2 ಅವೇ ಪಂದ್ಯಗಳನ್ನಾಡಿದ ಬಳಿಕ ಕಿಂಗ್ಡಮ್ ಚಿನ್ನಸ್ವಾಮಿ ಮೈದಾನಕ್ಕೆ ಕಿಂಗ್ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಇಂದು ಸನ್ರೈಸರ್ಸ್ ಹೈದ್ರಾಬಾದ್ನ ಸವಾಲು ಎದುರಾಗಲಿದ್ದು ರಣಕಣದಲ್ಲಿ ಆರ್ಭಟಿಸಲು ವಿರಾಟ್, ಭರ್ಜರಿ ತಯಾರಿ ನಡೆಸಿದ್ದಾರೆ. ನೆಟ್ಸ್ನಲ್ಲಿ ಗಂಟೆಗಟ್ಟಲೇ ಬೆವರಿಳಿಸಿರುವ ಕೊಹ್ಲಿ, ಅಭ್ಯಾಸದ ಕಣದಿಂದಲೇ ಹೈದ್ರಾಬಾದ್ ಪಡೆಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ
ಹೈದ್ರಾಬಾದ್ ಎದುರು ಅಬ್ಬರಿಸುತ್ತಾ ವಿರಾಟ್ ಬ್ಯಾಟ್?
ಐಪಿಎಲ್ ಟೂರ್ನಿಯ ಮಹಾರಾಜನಾಗಿರುವ ವಿರಾಟ್ ಕೊಹ್ಲಿ, ಸನ್ರೈಸರ್ಸ್ ಹೈದ್ರಾಬಾದ್ ಡಿಸೆಂಟ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 1 ಶತಕ, 4 ಅರ್ಧಶತಕ ಸಿಡಿಸಿದ್ರೂ ಕೂಡ, ಕೇವಲ 31.21ರ ರನ್ಗಳಿಕೆಯ ಸರಾಸರಿಯನ್ನ ಹೊಂದಿದ್ದಾರೆ. ಹೀಗಾಗಿಯೇ ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸಿರುವ ವಿರಾಟ್ ಕೊಹ್ಲಿ, ಎಸ್ಆರ್ಹೆಚ್ ಬೌಲರ್ಗಳ ಮೇಲೆ ಸವಾರಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
ಹೈದ್ರಾಬಾದ್ ವಿರುದ್ಧ ವಿರಾಟ್ ಕೊಹ್ಲಿ
ಹೈದ್ರಾಬಾದ್ ವಿರುದ್ಧ 21 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 31.21ರ ಸರಾಸರಿಯಲ್ಲಿ 669 ರನ್ಗಳಿಸಿದ್ದಾರೆ. 1 ಶತಕ, 2 ಅರ್ಧಶತಕ ಸಿಡಿಸಿದ್ದು, 139.66ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಹೇಳಿ-ಕೇಳಿ ಚಿನ್ನಸ್ವಾಮಿ ಮೈದಾನ ವಿರಾಟ್ ಕೊಹ್ಲಿ ಫೇವರಿಟ್ ಗ್ರೌಂಡ್. ನೆಚ್ಚಿನ ಅಭಿಮಾನಿಗಳ ಎದುರು ಧಮ್ಧಾರ್ ಪರ್ಫಾಮೆನ್ಸ್ ನೀಡಲು ವಿರಾಟ್ ಸದಾ ರೆಡಿಯಾಗಿರ್ತಾರೆ. ಸಾಲಿಡ್ ಫಾರ್ಮ್ನಲ್ಲಿ ಕೂಡ ಇರೋ ಕೊಹ್ಲಿ, ಹೈದ್ರಾಬಾದ್ ವಿರುದ್ಧ ತೊಡೆ ತಟ್ಟಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಭಿಮಾನಿಗಳು ಕೂಡ ಕೊಹ್ಲಿ ಮೇಲೆ ಅಪಾರ ಭರವಸೆಯನ್ನ ಇಟ್ಟಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಇಂದು ವಿರಾಟರೂಪ ದರ್ಶನವಾಗುತ್ತಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್