newsfirstkannada.com

×

ಸತತ 17 ವರ್ಷಗಳಿಂದ ಧೋನಿ, ಡಿಕೆ ಸೇವೆ; ‘ಅಂಕಲ್​’ ಎಂದು ಗೇಲಿ ಮಾಡೋರು ಓದಲೇಬೇಕಾದ ಸ್ಟೋರಿ

Share :

Published April 17, 2024 at 1:35pm

    ಡೆತ್ ಓವರ್​ಗಳಲ್ಲಿ ಮನರಂಜನೆಗಿಲ್ಲ ಬ್ರೇಕ್

    IPL​ನ ಅತಿ ಹಿರಿಯ ವಿಕೆಟ್ ಕೀಪರ್ಸ್​​​ ಅಂಡ್ ಫಿನಿಷರ್ಸ್

    ಇಳಿ ವಯಸ್ಸಲ್ಲಿ ಯುವಕರನ್ನ ನಾಚಿಸುವ ಆಟ

16 ಐಪಿಎಲ್ ಸೀಸನ್​​ ಒಂದು ಲೆಕ್ಕವಾದ್ರೆ, ಪ್ರಸಕ್ತ ಐಪಿಎಲ್ ಸೀಸನ್​ನದ್ದೇ ಮತ್ತೊಂದು ಲೆಕ್ಕ. ಇದನ್ನ ಮೋಸ್ಟ್​ ಸ್ಪೆಷಲ್ ಸೀಸನ್​ ಅಂದ್ರೆ ತಪ್ಪಾಗಲ್ಲ​​​​​.. ಪ್ರತಿ ಸೀಸನ್​ ಯಂಗ್​ಸ್ಟರ್​ಗಳ ಆರ್ಭಟವಾದ್ರೆ, ಈ ಸೀಸನ್​ನಲ್ಲಿ ಈ ಸೀನಿಯರ್​​ಗಳ ದರ್ಬಾರ್​​ ನಡೀತಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್​ ಕಾರ್ತಿಕ್ ಆಟ ಯುವಕರೂ ನಾಚಿಸುವಂತಿದೆ.

ಐಪಿಎಲ್​ನಲ್ಲಿ ಮನರಂಜನೆಗೆ ಕೊರತೆ ಇಲ್ಲ. ರೆಕಾರ್ಡ್​ ಬ್ರೇಕರ್ ಮ್ಯಾಚ್​ಗಳು, ಹೊಸ ಪ್ರತಿಭೆಗಳ ಪರ್ಫಾಮೆನ್ಸ್​, ಬೌಂಡರಿ, ಸಿಕ್ಸರ್​ಗಳ ಭರಾಟೆ ಜೋರಾಗಿ ನಡೀತಿದೆ. ಈ ಎಲ್ಲದರ ನಡುವೆ ಹೆಚ್ಚು ಗಮನ ಸೆಳೀತಾ ಇರೋದು ಇವರಿಬ್ಬರ ಬ್ಯಾಟಿಂಗ್​. ಬ್ಯಾಟಿಂಗ್ ಅಂದ್ರೆ, ಹೀಗಿರಬೇಕು ಅಂತ ಎ್ಲರಲೂ ಅಂತಿದ್ದಾರೆ. ಅಂದ್ಹಾಗೆ ಆ ಇಬ್ಬರು ಮಾಂತ್ರಿಕರು ಬೇರಾರೂ ಅಲ್ಲ.. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್​ ಕಾರ್ತಿಕ್.

ಇದನ್ನೂ ಓದಿ:ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!

ಪ್ರಸಕ್ತ ಸೀಸನ್​ನಲ್ಲಿ ಯಾರ ಆಟ ಹೆಚ್ಚು ನೆನಪಿಗೆ ಬರ್ತಿದೆಯೋ ಇಲ್ವೋ, ಯಾರ ಆಟದ ಬಗ್ಗೆ ಫ್ಯಾನ್ಸ್​ ಬಹುಪರಾಕ್ ಎಂದು ಮೆಚ್ಚಿಕೊಂಡಿದ್ದಾರೋ ಇಲ್ವೋ.. ಆದ್ರೆ, ಪ್ರಸಕ್ತ ಐಪಿಎಲ್​ನಲ್ಲಿ ಇವರಿಬ್ಬರ ಆಟವನ್ನ ಮೆಚ್ಚಿಕೊಳ್ಳದ ಕ್ರಿಕೆಟ್ ಅಭಿಮಾನಿ ಒಬ್ಬರೂ ಇರಲಾರರು. ಇಳಿ ವಯಸ್ಸಿನಲ್ಲಿ ಇವ್ರು ಮಾಡ್ತಿರೋ ಮೋಡಿ.. ವಾವ್ಹ್​​ ಅನ್ನಿಸುವಂತಿದೆ.

ಪ್ರಸಕ್ತ ಐಪಿಎಲ್​ನಲ್ಲಿ ಧೋನಿ, ಡಿಕೆ ಅಬ್ಬರ
ಮಹೇಂದ್ರ ಸಿಂಗ್ ಧೋನಿ, ದಿನೇಶ್​ ಕಾರ್ತಿಕ್. ಪ್ರಸಕ್ತ ಐಪಿಎಲ್​ನಲ್ಲಿ ಬಿಂದಾಸ್ ಬ್ಯಾಟಿಂಗ್​​​​​​​​​​​​ ನಡೆಸ್ತಿರೋ ಆಟಗಾರರು. ಚೆನ್ನೈ ಸೂಪರ್​ ಕಿಂಗ್ಸ್​ ಪರ ಧೋನಿ ದರ್ಬಾರ್ ನಡೆಸ್ತಿದ್ರೆ. ಆರ್​ಸಿಬಿ ಪರ ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​​ ದಂಡಯಾತ್ರೆ ನಡೆಸ್ತಿದ್ದಾರೆ. ಡೆತ್ ಓವರ್​​ಗಳಲ್ಲಿ ಕ್ರೀಸ್​​ಗೆ ಎಂಟ್ರಿ ನೀಡ್ತಿರೋ ಇವರಿಬ್ಬರು, ಸ್ಟೇಡಿಯಂನಲ್ಲಿ ಫ್ಯಾನ್ಸ್​ಗೆ ಭರಪೂರ ಮನರಂಜನೆಯನ್ನೇ ನೀಡ್ತಿದ್ದಾರೆ. ಅದು ಕೂಡ ಬರೋಬ್ಬರಿ 200ರ ಸ್ಟ್ರೈಕ್​ರೇಟ್​ನಲ್ಲಿ.

ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

ಪ್ರಸಕ್ತ ಐಪಿಎಲ್​ನಲ್ಲಿ ಧೋನಿ-ದಿನೇಶ್​
ಪ್ರಸಕ್ತ ಐಪಿಎಲ್​ನಲ್ಲಿ ಧೋನಿ ಎದುರಿಸಿದ 25 ಎಸೆತಗಳಿಂದ 59 ರನ್ ಸಿಡಿಸಿದ್ರೆ. 236ರ ಸ್ಟ್ರೈಜ್​​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಧೋನಿ, 4 ಬೌಂಡರಿ, 6 ಸಿಕ್ಸರ್​ ದಾಖಲಿಸಿದ್ದಾರೆ. ಇನ್ನು ದಿನೇಶ್​ ಕಾರ್ತಿಕ್​, 110 ಎಸೆತಗಳಿಂದ 226 ರನ್ ಸಿಡಿಸಿದ್ದು, 16 ಬೌಂಡರಿ, 18 ಸಿಕ್ಸರ್ ಬಾರಿಸಿರುವ ದಿನೇಶ್​, 205.45ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಝಳಪಿಸಿದ್ದಾರೆ. ಆ ಮೂಲಕ ಡೆತ್ ಓವರ್​​ಗಳಲ್ಲಿ ನಮ್ಮನ್ನ ಮೀರಿಸುವವರು ಯಾರಿಲ್ಲ ಅಂತಿದ್ದಾರೆ.

ಐಪಿಎಲ್​ನ ಅತಿ ಹಿರಿಯ ವಿಕೆಟ್ ಕೀಪರ್ಸ್​​​ ಅಂಡ್ ಫಿನಿಷರ್ಸ್..!
ಧೋನಿ ಹಾಗೂ ದಿನೇಶ್​ ಕಾರ್ತಿಕ್​.. ಐಪಿಎಲ್​ ಇತಿಹಾಸದ ಅತಿ ಹಿರಿಯ ವಿಕೆಟ್ ಕೀಪರ್ಸ್ ಹಾಗೂ ಮ್ಯಾಚ್ ಫಿನಿಷರ್ಸ್.. 2008ರ ಚೊಚ್ಚಲ ಐಪಿಎಲ್​ನಿಂದ ಈವರೆಗೆ.. ಅಂದ್ರೆ, ಸತತ 17 ಸೀಸನ್​ಗಳಲ್ಲಿ ವಿಕೆಟ್ ಕೀಪರ್​ಗಳಾಗಿ, ಮ್ಯಾಚ್ ಫಿನಿಷರ್​ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೀಸನ್​ನಿಂದ ಸೀಸನ್​ಗೆ ಇವ್ರ ಬ್ಯಾಟಿಂಗ್​ ಖದರ್​ ಹೆಚ್ಚಾಗ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪ್ರಸಕ್ತ ಸೀಸನ್​ನಲ್ಲೂ ತಾವು ಆಡ್ತಿರೋ ಮೊದಲ ಐಪಿಎಲ್​​​​ ಸೀಸನ್ ಎಂಬ ಉತ್ಸಾಹದಲ್ಲೇ ಬ್ಯಾಟಿಂಗ್ ನಡೆಸ್ತಿದ್ದಾರೆ. ವಿಕೆಟ್ ಹಿಂದೆಯೂ ಜಾದೂ ಮಾಡ್ತಿದ್ದಾರೆ. ತಂಡದ ಗೆಲುವಿಗಾಗಿ ಛಲದ ಹೋರಾಟ ನಡೆಸ್ತಿದ್ದಾರೆ. ಇನ್​ಫ್ಯಾಕ್ಟ್.. ಇವರಿಬ್ಬರ ಆಟ ನಿಜಕ್ಕೂ ಯುವಕರೂ ನಾಚುವಂತಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ಈ ಬಾರಿಯ ಐಪಿಎಲ್​ ‘ಗೋಲ್ಡೆಸ್ಟ್ ಸೀಸನ್’..!
ಕಳೆದ 16 ಸೀಸನ್​ಗಳಿಗೆ ಹೋಲಿಸಿದ್ರೆ ಈ ಸೀಸನ್​ ನಿಜಕ್ಕೂ ಗೋಲ್ಡನ್ ಸೀಸನ್. ಯಾಕಂದ್ರೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ 37ರ ವಯಸ್ಸಿನ ಬಳಿಕ ವಿಕೆಟ್ ಕೀಪರ್ ಅಂಡ್ ಮ್ಯಾಚ್ ಫಿನಿಷರ್​ಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳೇ ಇಲ್ಲ. ಅಂತಹದ್ರಲ್ಲಿ, 42 ವರ್ಷದ ಧೋನಿ, 38 ವರ್ಷದ ದಿನೇಶ್ ಐಪಿಎಲ್​ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ಮ್ಯಾಚ್ ಫಿನಿಷರ್​ಗಳಾಗಿ ಯುವ ಆಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ.

ಬೇಸರದ ಸಂಗತಿ ಅಂದ್ರೆ ಈ ಹಿರಿಯ ವಿಕೆಟ್ ಕೀಪರ್ಸ್​ ಆ್ಯಂಡ್ ಮ್ಯಾಚ್ ಫಿನಿಷರ್ಸ್​ ನಿವೃತ್ತಿಯ ಅಂಚಿನಲ್ಲಿದ್ದಾರೆ. ಬಹುತೇಕ ಇದೇ ಸೀಸನ್​ ಇವರಿಬ್ಬರಿಗೂ ಕೊನೆಯ ಐಪಿಎಲ್​​. ಈ ಸೀಸನ್​ನ ಉಳಿದ ಪಂದ್ಯಗಳಲ್ಲಿ ಧೋನಿ, ಕಾರ್ತಿಕ್​​​ ಮತ್ತಷ್ಟು ಆರ್ಭಟಿಸಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸತತ 17 ವರ್ಷಗಳಿಂದ ಧೋನಿ, ಡಿಕೆ ಸೇವೆ; ‘ಅಂಕಲ್​’ ಎಂದು ಗೇಲಿ ಮಾಡೋರು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2024/04/MS-DHONI-10.jpg

Load More