ವಿಶ್ವಕಪ್ ಆಡೋ ಅವಕಾಶ ಯಾರಿಗೆ ಸಿಗುತ್ತದೆ?
ವಿಶ್ವಕಪ್ ಸೆಲೆಕ್ಷನ್ ರೇಸ್ಗೆ ಧುಮುಕಿದ ದಿನೇಶ್ ಕಾರ್ತಿಕ್
ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಸ್ಥಾನ ಸಿಕ್ಕೇ ಸಿಗುತ್ತಾ..?
ಐಪಿಎಲ್ ಟೂರ್ನಿಯ ನಡುವೆ ವಿಶ್ವಕಪ್ ಟೂರ್ನಿಯ ಸದ್ದು ಜೋರಾಗಿದೆ. ವಿಶ್ವಕಪ್ ಆಡೋ ಅವಕಾಶ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಆರ್ಸಿಬಿಯ ಫಿನಿಷರ್ ದಿನೇಶ್ ಕಾರ್ತಿಕ್ ಇದೀಗ ವಿಶ್ವಕಪ್ ಸೆಲೆಕ್ಷನ್ ರೇಸ್ಗೆ ಧುಮುಕಿದ್ದಾರೆ. 38 ವರ್ಷದ ಕಾರ್ತಿಕ್ಗೆ ಅದೃಷ್ಟದ ಬಾಗಿಲು ತೆರೆಯುತ್ತಾ?
ಐಪಿಎಲ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ಅಬ್ಬರ ಜೋರಾಗಿದೆ. ಪೈಪೋಟಿಗೆ ಬಿದ್ದವರಂತೆ ಆಟಗಾರರು ಪರ್ಫಾಮ್ ಮಾಡ್ತಿದ್ದು, ಟೀಮ್ ಇಂಡಿಯಾ ಸೆಲೆಕ್ಟರ್ಸ್ಗೆ ಹೊಸ ಹೆಡ್ಡೇಕ್ ಶುರುವಾಗಿದೆ. ಮುಂಬರುವ ವಿಶ್ವಕಪ್ ಟೂರ್ನಿಗೆ ಯಾರನ್ನ ಸೆಲೆಕ್ಟ್ ಮಾಡೋದು, ಯಾರನ್ನ ಬಿಡೋದು ಅನ್ನೋ ಗೊಂದಲ ಶುರುವಾಗಿದೆ. ಆರ್ಸಿಬಿಯ ದಿನೇಶ್ ಕಾರ್ತಿಕ್ ಈ ಆಯ್ಕೆ ಕಗ್ಗಂಟನ್ನ ಇನ್ನಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ:ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!
ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಿದ ಕಾರ್ತಿಕ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಹಂಗಾಮ ಸೃಷ್ಟಿಸಿದ್ದಾರೆ. 38 ವರ್ಷದ ಡಿಕೆ ಬಾಸ್ ಆಟದ ಮುಂದೆ ಯಂಗ್ಸ್ಟರ್ಸ್ಗಳು ಕೂಡ ಕಳೆದುಹೋಗಿದ್ದಾರೆ. ಕಿಂಚಿತ್ತೂ ಹಿಂಜರಿಕೆ ಇಲ್ಲದೇ ಬ್ಯಾಟ್ ಬೀಸ್ತಿರುವ ದಿನೇಶ್ ಕಾರ್ತಿಕ್ ಕ್ಲಾಸ್ ಅಂಡ್ ಮಾಸ್ ಆಟಕ್ಕೆ ಎಲ್ರೂ ಕಳೆದು ಹೋಗಿದ್ದಾರೆ. ಬೌಂಡರಿ-ಸಿಕ್ಸರ್ಗಳ ಸಲೀಸಾಗಿ ಬಾರಿಸ್ತಿರೋ ಶೈಲಿಗೆ ಎಲ್ರೂ ಬೆರಗಾಗಿದ್ದಾರೆ.
ವಿಶ್ವಕಪ್ ರೇಸ್ಗೆ ಡಿಕೆ ಬಾಸ್ ರಾಯಲ್ ಎಂಟ್ರಿ
ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಿರೋ ದಿನೇಶ್ ಕಾರ್ತಿಕ್ ಇದೀಗ ವಿಶ್ವಕಪ್ ಸೆಲೆಕ್ಷನ್ ರೇಸ್ಗೆ ಧುಮುಕಿದ್ದಾರೆ. ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ರೇಸ್ನಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಾರೆ. ಫಿನಿಷರ್ ಸ್ಲಾಟ್ನಲ್ಲಿ ಡಿಕೆ ಬಾಸ್ ಮಾಡ್ತಿರುವ ಮೋಡಿ ಹಂಗಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಆರ್ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್
ಈ ಸೀಸನ್ ಐಪಿಎಲ್ನಲ್ಲಿ 6 ಇನ್ನಿಂಗ್ಸ್ಗಳನ್ನಾಡಿರುವ ಕಾರ್ತಿಕ್, 75.33ರ ಸರಾಸರಿಯಲ್ಲಿ 226 ರನ್ ಸಿಡಿಸಿದ್ದಾರೆ. ಬರೋಬ್ಬರಿ 205.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಸದ್ಯಕ್ಕಂತೂ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಫಿನಿಷರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಪರ್ಫೆಕ್ಟ್ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡ್ತಿರುವ ಕಾರ್ತಿಕ್ ಬರೋಬ್ಬರಿ 205.45ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸುತ್ತ ಇದ್ದಾರೆ. ಮಿಡಲ್ ಓವರ್ನಲ್ಲಿ ಕಣಕ್ಕಿಳಿದ್ರೂ ಕೂಡ ಒತ್ತಡವನ್ನ ಸಲೀಸಾಗಿ ನಿಭಾಯಿಸ್ತಾ ಇದ್ದಾರೆ. ಫಿನಿಷರ್ ಸ್ಥಾನದ ಕಂಟೆಡರ್ಗಳಾಗಿದ್ದ ಉಳಿದ ಆಟಗಾರರು ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ.
ರಿಂಕು ಸಿಂಗ್, ರಿಷಭ್ ಪಂತ್ ಜೊತೆಗಿನ ಪೈಪೋಟಿಯಲ್ಲಿ ಗೆಲ್ತಾರಾ?
ಟೀಮ್ ಇಂಡಿಯಾ ಫಿನಿಷರ್ ಸ್ಲಾಟ್ಗೆ ಪೈಪೋಟಿ ಏರ್ಪಟ್ಟಿರೋದು ರಿಂಕು ಸಿಂಗ್, ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವೆ. ರಿಂಕು ಸಿಂಗ್ ಈ ಐಪಿಎಲ್ನಲ್ಲಿ ವಾವ್ಹ್ ಅನ್ನುವಂತಹ ಪರ್ಫಾಮೆನ್ಸ್ ನೀಡಿಲ್ಲ. ಪಂತ್ ಇನ್ಕನ್ಸಿಸ್ಟೆನ್ಸಿ ಸಮಸ್ಯೆಗೆ ಸಿಲುಕಿದ್ದಾರೆ. ಇಬ್ಬರಿಗೆ ಹೋಲಿಸಿದ್ರೆ ಫಿಯರ್ಲೆಸ್ ಆಟವಾಡ್ತಿರೋ ದಿನೇಶ್ ಕಾರ್ತಿಕ್ ಬೌಲರ್ಗಳನ್ನ ಚೆಂಡಾಡ್ತಿದ್ದಾರೆ. ಪರ್ಫಾಮೆನ್ಸ್ ಆಧಾರದಲ್ಲಿ ನೋಡಿದ್ರೆ ರಿಂಕು ಹಾಗೂ ಪಂತ್ಗಿಂತ ಕಾರ್ತಿಕ್ ಮೇಲಿದ್ದಾರೆ.
ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ
ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಸ್ಥಾನ ಫಿಕ್ಸ್..!
ರಿಷಭ್ ಪಂತ್ ತಂಡದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಯ್ಕೆಯಾಗಿದ್ದಾರೆ. ಪಂತ್ ಹೊರತುಪಡಿಸಿದ್ರೆ, ಸೆಲೆಕ್ಷನ್ ಕಮಿಟಿ ಹದ್ದಿನ ಕಣ್ಣಿಟ್ಟಿದ್ದ ಜಿತೇಶ್ ಶರ್ಮಾ, ಕೆ.ಎಲ್ ರಾಹುಲ್ ನಿರಾಸೆ ಮೂಡಿಸಿದ್ದಾರೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ಇಂಪ್ರೆಸ್ ಮಾಡಿದ್ದಾರೆ. ಇವರ್ಯಾರೂ ಫಿನಿಷರ್ ರೋಲ್ ಪ್ಲೇ ಮಾಡಲ್ಲ. ಹೀಗಾಗಿ ದಿನೇಶ್ ಕಾರ್ತಿಕ್ಗೆ ಪಂತ್ಗೆ ಬ್ಯಾಕ್ ಅಪ್ ಪ್ಲೇಯರ್ ಆಗಿ ಆಯ್ಕೆಯಾದ್ರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ:ಸತತ 17 ವರ್ಷಗಳಿಂದ ಧೋನಿ, ಡಿಕೆ ಸೇವೆ; ‘ಅಂಕಲ್’ ಎಂದು ಗೇಲಿ ಮಾಡೋರು ಓದಲೇಬೇಕಾದ ಸ್ಟೋರಿ
ಮುಂಬೈ ಹಾಗೂ ಆರ್ಸಿಬಿ ನಡುವಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನೋಡಿ ಕಿಚಾಯಿಸಿದ್ರು. ವಿಶ್ವಕಪ್ ಸೆಲೆಕ್ಷನ್ ಇದೆ ಅಂತಾ ಹೀಗೆ ಆಡ್ತಿರೋದು ಅಂತಾ ಕಾಲೆಳೆದಿದ್ರು. ಭರ್ಜರಿ ಪ್ರದರ್ಶನ ನೀಡ್ತಿರೋ ಕಾರ್ತಿಕ್ ಮನದಾಳದಲ್ಲಿ ವಿಶ್ವಕಪ್ ಆಡೋ ಆಸೆ ಇದ್ದೇ ಇದೆ. ಮುಂದಿನ ಪಂದ್ಯಗಳಲ್ಲೂ ಹೀಗೆ ಅಬ್ಬರಿಸಿದ್ರೆ ವಿಶ್ವಕಪ್ ಸಿಗೋದು ಬಹುತೇಕ ಪಕ್ಕಾನೇ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್