ಟಿ-20 ವಿಶ್ವಕಪ್ ಆಡಲು ಪಾಂಡ್ಯ vs ದುಬೆ ಮಧ್ಯೆ ಫೈಟ್..!
ಹಾರ್ದಿಕ್ ಓವರ್ಟೇಕ್ ಮಾಡ್ತಾರಾ ಶಿವಂ ದುಬೆ..?
ವಿಧ್ವಂಸಕ ಬ್ಯಾಟರ್ಗೆ ತೆರೆಯುತ್ತಾ ವಿಶ್ವಕಪ್ ಬಾಗಿಲು..?
ಜಸ್ಟ್ ಐದಿನೈದು ದಿನ. ಅಷ್ಟರೊಳಗೆ ಟಿ20 ವಿಶ್ವಕಪ್ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಬೇಕಿದೆ. ಆಯ್ಕೆಯಂತೂ ಕಗ್ಗಂಟಾಗಿದೆ. ಎಸ್ಪೆಷಲಿ ಆಲ್ರೌಂಡರ್ ಸ್ಲಾಟ್ಗಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಮಧ್ಯೆ ಮೆಗಾ ಫೈಟ್ ಏರ್ಪಟ್ಟಿದೆ. ಯಾರು ಸೆಲೆಕ್ಟ್ ಆಗ್ತಾರೆ ಅನ್ನೋದು ಇಲ್ಲಿ ತನಕ ಸಸ್ಪೆನ್ಸ್ ಆಗಿ ಉಳಿದಿದೆ.
ದೇಶದೆಲ್ಲೆಡೆ ಐಪಿಎಲ್ ಫೀವರ್ ಜೋರಾಗಿದೆ. ಇದರ ನಡುವೆ ಬಿಸಿಸಿಐಗೆ ದೊಡ್ಡ ಸವಾಲೊಂದು ಎದುರಾಗಿದೆ. ಅದೇನಂದ್ರೆ ಟಿ20 ವಿಶ್ವಕಪ್ಗೆ ಬಲಿಷ್ಠ ಸೈನ್ಯವನ್ನ ಪ್ರಕಟಿಸುವುದು. ಮೇ 1 ರ, ಒಳಗಾಗಿ ತಂಡವನ್ನ ಅನೌನ್ಸ್ ಮಾಡಬೇಕಿದ್ದು, ತಂಡದ ಆಯ್ಕೆ ಬಿಸಿಸಿಐಗೆ ಕಗ್ಗಂಟಾಗಿ ಪರಿಣಮಿಸಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳು ಕೇಸರಿ ವಸ್ತ್ರ ಹಾಕೊಂಡು ಬಂದಿದ್ಕೆ ಪ್ರಿನ್ಸಿಪಾಲ್ ಗರಂ, ಮದರ್ ತೆರೆಸಾ ಸ್ಕೂಲ್ನಲ್ಲಿ ಭಾರೀ ಗಲಾಟೆ
ಹಾರ್ದಿಕ್ ಪಾಂಡ್ಯ V/S ಶಿವಂ ದುಬೆ
ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲು ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಮೆಗಾ ಫೈಟ್ ಏರ್ಪಟ್ಟಿದೆ. ಪ್ರಸಕ್ತ ಐಪಿಎಲ್ ಪರ್ಫಾಮೆನ್ಸ್ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಇಬ್ಬರಲ್ಲಿ ಯಾರು ಫಸ್ಟ್ ಚಾಯ್ಸ್ ಆಲ್ರೌಂಡರ್ ಆಗಿ ಸೆಲೆಕ್ಟ್ ಆಗ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಒಂದು ವೇಳೆ ಸೀಸನ್ 17ನೇ ಐಪಿಎಲ್ ಪ್ರದರ್ಶನವೇ ಆಯ್ಕೆಗೆ ಮಾನದಂಡವಾದ್ರೆ ಶಿವಂ ದುಬೆಗೆ ಲಾಟರಿ ಹೊಡೆಯೋದು ಪಕ್ಕಾ. ಯಾಕಂದ್ರೆ ಸಿಎಸ್ಕೆ ಪರ ಸ್ಪಿನ್ ಬೀಸ್ಟ್ ಬ್ಲಾಕ್ಬಸ್ಟರ್ ಪ್ರದರ್ಶನ ನೀಡಿದ್ದಾರೆ. ಆದರೆ ಸುದೀರ್ಘ ಸಮಯದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.
ಇದನ್ನೂ ಓದಿ:ಅದೃಷ್ಟ ಗಟ್ಟಿ ಇತ್ತು, ಜೀವ ಉಳಿಸಿಕೊಂಡ ಬೈಕ್ ಸವಾರ; ವಿಡಿಯೋ ನೋಡಿದ್ರೆ ಮೈ ಝಮ್ ಎನ್ನುತ್ತೆ..!
ಪ್ರಸಕ್ತ ಐಪಿಎಲ್ನಲ್ಲಿ ದುಬೆ-ಹಾರ್ದಿಕ್
17ನೇ ಸೀಸನ್ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಆರು ಪಂದ್ಯಗಳನ್ನಾಡಿದ್ದಾರೆ. 145.56ರ ಸ್ಟ್ರೈಕ್ರೇಟ್ನಲ್ಲಿ 131 ರನ್ ಕೊಳ್ಳೆ ಹೊಡೆದಿದ್ದಾರೆ. ಒಂದೂ ಅರ್ಧಶತಕ ಆಗಲಿ ಅಥವಾ ಶತಕ ಮೂಡಿ ಬಂದಿಲ್ಲ. ಇನ್ನು ಪಾಂಡ್ಯರಷ್ಟೇ ಪಂದ್ಯಗಳನ್ನ ಆಡಿರುವ ಶಿವಂ ದುಬೆ 163.51ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 242 ರನ್ ಬಾರಿಸಿದ್ದಾರೆ. ಎರಡು ಅರ್ಧಶತಕಗಳನ್ನ ಹೊಡೆದಿದ್ದಾರೆ.
ಪ್ರಚಂಡ ಫಾರ್ಮ್ ಬಿಗ್ ಹಿಟ್ಟರ್ಗೆ ವರದಾನ
ಹಾರ್ದಿಕ್ ವರ್ಸಸ್ ಶಿವಂ ದುಬೆ ಫೈಟ್ನಲ್ಲಿ ಫೈರಿ ಲೆಫ್ಟಿ ಬ್ಯಾಟರ್ ಒಂದು ಒಂದು ಹೆಜ್ಜೆ ಮುಂದಿದ್ದಾರೆ. ಬ್ಯಾಟ್ನಿಂದ ಸಿಕ್ಸರ್-ಬೌಂಡ್ರಿಗಳ ಸರಮಾಲೆಯನ್ನ ಕಟ್ತಿದ್ದಾರೆ. ಆದ್ರಲ್ಲೂ ಸ್ಪಿನ್ನರ್ಸ್ ಪಾಲಿಗಂತೂ ದುಬೆ ವಿಲನ್ ಆಗಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ರನ್ ಹೊಳೆ ಹರಿಸ್ತಿರೋ ದುಬೆ ಇಲ್ಲಿತನಕ ಬೌಲಿಂಗ್ ಅನ್ನೆ ಮಾಡಿಲ್ಲ. ಸಿಎಸ್ಕೆ ಅವರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರಿ ಬ್ಯಾಟಿಂಗ್ನಲ್ಲಿ ಬಳಸಿಕೊಳ್ತಿದೆ. ಈ ವೀಕ್ನೆಸ್ ಶಿವಂ ದುಬೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್ ಕೊಟ್ಟ ಆಯ್ಕೆ ಸಮಿತಿ..!
ಬ್ಯಾಟಿಂಗ್, ಬೌಲಿಂಗ್ನಲ್ಲಿ ಹಾರ್ದಿಕ್ ಕನ್ಸಿಸ್ಟನ್ಸಿ ಮಾಯ
ಹಾರ್ದಿಕ್ ಪಾಂಡ್ಯ ಮುಂಬೈ ನಾಯಕನಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಾಂಟ್ರಿಬ್ಯೂಟ್ ನೀಡ್ತಿದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಒಂದು ಮ್ಯಾಚ್ನಲ್ಲಿ ಅಬ್ಬರಿಸಿ, ಮತ್ತೊಂದು ಮ್ಯಾಚ್ನಲ್ಲಿ ನಿರಾಸೆ ಮೂಡಿಸ್ತಿದ್ದಾರೆ. ಜೊತೆಗೆ ಹಿಂದಿನ ಖದರ್ ಕೂಡ ಮಾಯವಾಗಿದೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ಟಿಕೆಟ್ಗಾಗಿ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಏರ್ಪಟ್ಟಿರೋದಂತೂ ನಿಜ. ದುಬೆಗೆ ವೆಸ್ಟ್ಇಂಡೀಸ್ ಹಾಗೂ ಅಮೆರಿಕಾ ಕಂಡಿಷನ್ ಸಖತ್ ಸೂಟ್ ಆಗುತ್ತೆ. ಇನ್ನೊಂದೆಡೆ ಅನುಭವಿ ಆಲ್ರೌಂಡರ್ ಹಾರ್ದಿಕ್ ರನ್ನ ಕಡೆಗಣಿಸುವಂತಿಲ್ಲ. ಹೀಗಾಗಿ ಆಲ್ರೌಂಡರ್ ಆಯ್ಕೆ ಕಗ್ಗಂಟಾಗಿದೆ. ಆಯ್ಕೆಗಾರರು ಇದನ್ನ ಹೇಗೆ ಬಿಡಿಸ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್