ಬಾಲಕಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಓಡೋಡಿ ಬಂದು ಮಾಡಿದ್ದೇನು?
ಬಾಲಕಿ ಹೋಗುವಾಗ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡ್ತಿದ್ದ ಕಿಡಿಗೇಡಿ
ಸಿಕ್ಕಿಬಿದ್ದ ಆರೋಪಿ ಮೇಲೆ ಸೆಕ್ಷನ್ 354, 352, 504 ಮತ್ತು 509 ಅಡಿ ಪ್ರಕರಣ
ಲಕ್ನೋ: ವ್ಯಕ್ತಿಯೊಬ್ಬ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವಾಗ ಬಾಲಕಿ ಜೊತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ಸ್ಥಳೀಯರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗ್ರೇಟರ್ ನೋಯ್ಡಾದ ಉನೈದ್ಪುರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: VIDEO: ಕ್ಲಾಸ್ ರೂಮ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಆರೋಪಿಯನ್ನು ಅಜಿತ್ ಎಂದು ಗುರುತಿಸಲಾಗಿದೆ. ಬಾಲಕಿ ಹೋಗುವಾಗ ರಸ್ತೆ ಬದಿ ಬೇಕಂತಲೆ ವ್ಯಕ್ತಿ ಪ್ಯಾಂಟ್ ಬಿಚ್ಚಿ ಮೂತ್ರವಿಸರ್ಜನೆಗೆ ಮುಂದಾಗಿದ್ದಾನೆ. ಆದರೆ ಈ ವೇಳೆ ಬಾಲಕಿಗೆ ತನ್ನ ಖಾಸಗಿ ಅಂಗಗಳನ್ನ ತೋರಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಬಾಲಕಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಏನಾಯಿತೆಂದು ಓಡಿ ಬಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ
ಇನ್ನು ಈ ಸಂಬಂಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಬಾಲಕಿ ಹೋಗುವಾಗ ಅಸಭ್ಯ ವರ್ತನೆ ಮಾಡಿದ್ದಲ್ಲದೇ ತನ್ನ ಖಾಸಗಿ ಅಂಗಗಳನ್ನ ತೋರಿಸಿದ್ದಾನೆ. ಕೈ ಹಿಡಿದು ಎಳೆದುಕೊಂಡು ಹೋಗಲು ಯತ್ನಿಸಿದ್ದನು ಎಂದು ಬಾಲಕಿ ಹೇಳಿದ್ದಾಳೆ. ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ಆರೋಪಿ ನಾನು ಇನೋಸೆನ್ಸ್, ಆ ರೀತಿ ಮಾಡಿಲ್ಲ ಎಂದಿದ್ದಾನೆ. ಸದ್ಯ ಪೊಲೀಸರು ಆರೋಪಿ ಮೇಲೆ ಐಪಿಸಿ ಸೆಕ್ಷನ್ 354, 352, 504 ಮತ್ತು 509 ಅಡಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ