ಸತತ ಸೋಲಿನ ಬಳಿಕ ಹ್ಯಾಟ್ರಿಕ್ ಜಯದ ದಾಖಲೆ
RCB ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮವೋ ಸಂಭ್ರಮ
ಹ್ಯಾಟ್ರಿಕ್ ಗೆಲುವು, ಪ್ಲೇ ಆಫ್ ಲೆಕ್ಕಾಚಾರ ಜೋರು
ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಇದೀಗ ಫುಲ್ ಜೋಶ್ನಲ್ಲಿದೆ. ಹ್ಯಾಟ್ರಿಕ್ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ. ಹಾಗಂತ ಆರ್ಸಿಬಿ ರಿಲ್ಯಾಕ್ಸ್ ಆಗುವಂತೇ ಇಲ್ಲ. ಅಸಲಿ ಅಗ್ನಿಪರೀಕ್ಷೆ ಆರ್ಸಿಬಿಗೆ ಈಗ ಶುರುವಾಗಿದೆ.
ಐಪಿಎಲ್ ಸೀಸನ್ 17ನಲ್ಲಿ ಪಾತಾಳಕ್ಕೆ ಕುಸಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯೂ ಮಾಡದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಆಡಿದ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿದ್ದ, ಆರ್ಸಿಬಿ ನಂತರದ 3 ಪಂದ್ಯದಲ್ಲಿ ಅದ್ಧೂರಿ ಗೆಲುವು ದಾಖಲಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಹೊಸ ಚೈತನ್ಯ ಬಂದಿದೆ.
ಇದನ್ನೂ ಓದಿ:ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳ ಗುಡ್ಡೆ.. ಈ ಕಾಂಗ್ರೆಸ್ ನಾಯಕನ ಹಿನ್ನೆಲೆ ಏನು?

ಚಿನ್ನಸ್ವಾಮಿ ಅಂಗಳದಲ್ಲಿ ಗುಜರಾತ್ ಎದುರು ಆರ್ಸಿಬಿ ಭರ್ಜರಿ ಜಯಭೇರಿ ಬಾರಿಸಿತು. ಹೈದ್ರಾಬಾದ್, ಅಹ್ಮದಾಬಾದ್ ಬಳಿಕ ಇದೀಗ ಬೆಂಗಳೂರಲ್ಲೂ ವಿಜಯಪತಾಕೆ ಹಾರಿಸಿರೋ ಆರ್ಸಿಬಿಯ ಡ್ರೆಸ್ಸಿಂಗ್ ರೂಮ್ನ ವಾತಾವರಣವೇ ಬದಲಾಗಿದೆ. ಗೆಲುವಿನ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ.
ಹ್ಯಾಟ್ರಿಕ್ ಗೆಲುವು, ಪ್ಲೇ ಆಫ್ ಲೆಕ್ಕಾಚಾರ ಜೋರು.!
ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ವಿನ್ನಿಂಗ್ ಟ್ರ್ಯಾಕ್ಗೆ ಮರಳಿದ ಬೆನ್ನಲ್ಲೇ, ಪ್ಲೇ ಆಫ್ ಲೆಕ್ಕಾಚಾರ ಜೋರಾಗಿ ನಡೀತಿದೆ. ಬೇಸರದಿಂದ ಕುಗ್ಗಿ ಹೋಗಿದ್ದ ಫ್ಯಾನ್ಸ್ ಇದೀಗ ಕ್ಯಾಲ್ಕುಲೇಟರ್ ಹಿಡಿದು ಪ್ಲೇ ಆಫ್ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ. ಆರ್ಸಿಬಿ ಪ್ಲೇ ಆಫ್ ಎಂಟ್ರಿಗೆ ಚಾನ್ಸ್ ಇಲ್ಲ ಅಂತಿಲ್ಲ. ಸದ್ಯ ಸತತ 3 ಪಂದ್ಯ ಗೆದ್ದು, ಒಟ್ಟಾರೆ 8 ಅಂಕ ಸಂಪಾದಿಸಿದ್ರೂ ಉಳಿದ 3 ಪಂದ್ಯಗಳಲ್ಲಿ ಆರ್ಸಿಬಿಗೆ ಗೆಲುವು ಅನಿವಾರ್ಯವಾಗಿದೆ. ಉಳಿದೆಲ್ಲಾ ಪಂದ್ಯ ಗೆದ್ದು ಅದೃಷ್ಟ ಕೈಹಿಡಿದ್ರೆ ಮಾತ್ರ ಪ್ಲೇ ಆಫ್ ಎಂಟ್ರಿ ಸಾಧ್ಯ.
ಇದನ್ನೂ ಓದಿ:ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್ಗಳು.. ಮೊನ್ನೆ ಕಟ್ಟಿದ್ದ ವಾಚ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!
ಪಂಜಾಬ್ ವಿರುದ್ಧ ಕಾದಿದೆ ರಿಯಲ್ ಅಗ್ನಿ ಪರೀಕ್ಷೆ
ಗೆಲುವಿನ ಆತ್ಮವಿಶ್ವಾಸದಲ್ಲಿ ತೇಲಾಡ್ತಿರೋ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಕಳೆದ ಕೆಲ ಪಂದ್ಯಗಳಿಂದ ಕೆಚ್ಚೆದೆಯ ಹೋರಾಟ ನಡೆಸ್ತಿರೋ ಪಂಜಾಬ್ ಕಿಂಗ್ಸ್ ತಂಡವನ್ನ ಎದುರಿಸಲಿದೆ. ಸೀಸನ್ನ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ಸುಲಭದ ಜಯ ದಾಖಲಿಸಿದೆ. ಆದ್ರೆ, ಸದ್ಯ ಅಮೋಘ ಪರ್ಫಾಮೆನ್ಸ್ ನೀಡ್ತಾ ಇರೋ ಪಂಜಾಬ್ ಪಡೆಯನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ. ಅದ್ರಲ್ಲೂ ಧರ್ಮಶಾಲಾದಲ್ಲಿ ಪಂಜಾಬ್ ಸೋಲಿಸೋದು ನಿಜಕ್ಕೂ ಟಫ್ ಟಾಸ್ಕ್..!
ಚಿನ್ನಸ್ವಾಮಿಯಲ್ಲಿ ಡೇಂಜರ್ ಡೆಲ್ಲಿಯ ಸವಾಲ್.!
ಧರ್ಮಶಾಲಾದಲ್ಲಿ ಪಂಜಾಬ್ ಚಾಲೆಂಜ್ ಎದುರಿಸಿದ್ರೆ ನಂತರದ ಪಂದ್ಯದಲ್ಲಿ ಡೇಂಜರ್ ಡೆಲ್ಲಿ ಸವಾಲು ಆರ್ಸಿಬಿಗೆ ಎದುರಾಗಲಿದೆ. ಪ್ಲೇ ಆಫ್ ರೇಸ್ನಲ್ಲಿ ಆರ್ಸಿಬಿಗಿಂತ ಡೆಲ್ಲಿ ಒಂದೆಜ್ಜೆ ಮುಂದಿದ್ದು, ಅಷ್ಟು ಸುಲಭಕ್ಕೆ ಡೆಲ್ಲಿ ಸೋಲಿಗೆ ಶರಣಾಗೀ ಸೀನೇ ಇಲ್ಲ. ಹೀಗಾಗಿ ಹೋಮ್ಗ್ರೌಂಡ್ನಲ್ಲಿ ಆರ್ಸಿಬಿ, ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೆ ಮಾತ್ರವೇ ಗೆಲುವು ಸಾಧ್ಯವಾಗಲಿದೆ.
ಚೆನ್ನೈ ವಿರುದ್ಧದ ಸೂಪರ್ ಕಾಳಗವೇ ಅಂತಿಮ ಪರೀಕ್ಷೆ
ಪಂಜಾಬ್, ಡೆಲ್ಲಿ ಎದುರು ಗೆದ್ದರೂ 3ನೇ ಟಾರ್ಗೆಟ್ ಆರ್ಸಿಬಿ ಪಾಲಿನ ಕಬ್ಬಿಣದ ಕಡಲೆ ಅಂದ್ರೆ ತಪ್ಪಾಗಲ್ಲ. ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್ಸಿಬಿ ಅಂತಿಮ ಪರೀಕ್ಷೆ ಎದುರಿಸಲಿದೆ. ಈ ಟೆಸ್ಟ್ನಲ್ಲಿ ರನ್ರೇಟ್ ದೃಷ್ಟಿಯಿಂದ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಲೇಬೇಕಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!
ಒಟ್ಟಿನಲ್ಲಿ ಆರ್ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿರಬೇಕಂದ್ರೆ ಮುಂದಿರೋ ಮೂರು ಕಠಿಣ ಸವಾಲನ್ನ ಗೆಲ್ಲಬೇಕಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಾತ್ರಕ್ಕೆ ಫುಲ್ ರಿಲ್ಯಾಕ್ಸ್ ಆದ್ರೆ, ಪ್ಲೇ ಆಫ್ ಕನಸು ನುಚ್ಚು ನೂರಾಗಲಿದೆ.
ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್