ಮಿಸ್ಟರ್ ಐಪಿಎಲ್ ರೈನಾ ಅಲ್ಲ.. ಮತ್ಯಾರು..?
ವಿರಾಟ್ ಕೊಹ್ಲಿ.. ನಯಾ ಮಿಸ್ಟರ್ ಐಪಿಎಲ್..!
ಇನ್ಮುಂದೆ ವಿರಾಟ್ ಕೊಹ್ಲಿನೇ ಮಿಸ್ಟರ್ ಐಪಿಎಲ್
ಮಿಸ್ಟರ್ ಐಪಿಎಲ್.. ಈ ಹೆಸರು ಕೇಳಿದಾಕ್ಷಣ ಸುರೇಶ್ ರೈನಾ ಥಟ್ ಅಂತಾ ಕಣ್ಮುಂದೆ ಬರ್ತಾರೆ. ಇನ್ಮೇಲೆ ಮಿಸ್ಟರ್ ಐಪಿಎಲ್ ಅಂದ್ರೆ ನಿಮಗೆ ವಿರಾಟ್ ಕೊಹ್ಲಿ ನೆನಪಗಬೇಕು.
ಸುರೇಶ್ ರೈನಾ. ಮಿಸ್ಟರ್ ಐಪಿಎಲ್ ಅಂತಾನೇ ಫೇಮಸ್. ರೈನಾರ ಕನ್ಸಿಸ್ಟೆನ್ಸಿ ಆಟಕ್ಕೆ ಸಿಕ್ಕ ಬಿರುದೇ ಮಿಸ್ಟರ್ ಐಪಿಎಲ್. ಆದ್ರೀಗ ಈ ಮಿಸ್ಟರ್ ಐಪಿಎಲ್ ಪಟ್ಟ, ರೆಕಾರ್ಡ್ ಬ್ರೇಕರ್. ಹಿಸ್ಟರಿ ಕ್ರಿಯೇಟರ್. ವಿಶ್ವ ಕ್ರಿಕೆಟ್ನ ರೂಲರ್ ಕಿಂಗ್ ಕೊಹ್ಲಿ ಪಾಲಾಗಿದೆ. ಇದಕ್ಕೆಲ್ಲಾ ಕಾರಣ ಕಿಂಗ್ ಕೊಹ್ಲಿಯ ಕನ್ಸಿಸ್ಟೆನ್ಸಿ.
ಹೌದು! ಸದ್ಯ ಫ್ರಾಂಚೈಸಿ ಲೀಗ್ನಲ್ಲಿ ಅಬ್ಬರಿಸ್ತಿರುವ ವಿರಾಟ್, ಇಂಡಿಯನ್ ಪ್ರೀಮಿಯರ್ ಲೀಗ್ನ ಅಧೀಪತಿಯಾಗಿ ಮೆರೆದಾಡ್ತಿದ್ದಾರೆ. ಕನ್ಸಿಸ್ಟೆನ್ಸಿ ಆಟದಿಂದ ನಾನೇ ಮಿಸ್ಟರ್ ಐಪಿಎಲ್ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಅಪ್ಪನ ಕಳೆದುಕೊಂಡು ರಸ್ತೆಯಲ್ಲಿ ರೋಲ್ಗಳ ಮಾರಾಟ; 10 ವರ್ಷದ ಬಾಲಕನ ಕಣ್ಣೀರ ಬದುಕು..!
ಶ್ರೀಮಂತ ಲೀಗ್ನಲ್ಲಿ ಕಿಂಗ್ ಕೊಹ್ಲಿಯ ದರ್ಬಾರ್
ದಾಖಲೆಗಳ ವೀರ ವಿರಾಟ್, ರಿಚೆಸ್ಟ್ ಲೀಗ್ನ ಗರಿಷ್ಠ ರನ್, ಗರಿಷ್ಠ ಸೆಂಚೂರಿ, ಹಾಫ್ ಸೆಂಚೂರಿ ಲಿಸ್ಟ್ನ ಟಾಪರ್. ಕಳೆದ 17 ವರ್ಷಗಳಿಂದ ಐಪಿಎಲ್ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡ್ತಿರೋ ವಿರಾಟ್, ಪ್ರಸಕ್ತ ಆವೃತ್ತಿಯಲ್ಲೂ ರನ್ಭೇಟೆಯಾಡ್ತಿದ್ದಾರೆ. 1 ಶತಕ, 4 ಅರ್ಧಶತಕ ಸಹಿತ 542 ರನ್ ಸಿಡಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
15 ವರ್ಷದಿಂದ ಕನ್ಸಿಸ್ಟೆನ್ಸಿ ಆಟಕ್ಕೆ ಕೊಹ್ಲಿಯೇ ಸಾಟಿ
ಸೀಸನ್-17ರಲ್ಲಿ ಅದ್ಭುತ ಆಟವಾಡ್ತಿರೋ ಕೊಹ್ಲಿ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಈ ಅದ್ಭುತ ಆಟ ಆರಂಭವಾಗಿದ್ದು 2010ರಿಂದ. ಅಂದಿನಿಂದ ಸತತ 15 ಸೀಸನ್ಗಳಲ್ಲಿ 300+ ರನ್ ಸಿಡಿಸಿದ ಏಕೈಕ ಬ್ಯಾಟರ್ ಅನ್ನೋ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ಸೋಲಿನಿಂದ ಆರ್ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!
ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ 5 ಸೀಸನ್ಗಳಲ್ಲಿ 300 ಪ್ಲಸ್ ರನ್ ದಾಖಲಿಸಿರುವ ಕೊಹ್ಲಿ, 3 ಸೀಸನ್ಗಳಲ್ಲಿ 400 ಪ್ಲಸ್ ರನ್ ಸಿಡಿಸಿದ್ದಾರೆ. 4 ಬಾರಿ ಐನೂರಕ್ಕೂ ಅಧಿಕ ರನ್, 2 ಬಾರಿ 600ಕ್ಕೂ ಅಧಿಕ ರನ್ ಪೇರಿಸಿರುವ ವಿರಾಟ್, ಒಮ್ಮೆ ದಾಖಲೆಯ 973 ರನ್ ಪೇರಿಸಿದ್ದಾರೆ.
12 ಸೀಸನ್ಗಳಲ್ಲಿ 300ಕ್ಕೂ ಅಧಿಕ ರನ್ ದಾಖಲಿಸಿರುವ ರೈನಾ, 3 ಬಾರಿ 300ಕ್ಕೂ ಅಧಿಕ ರನ್ ಗಳಿಸಿದ್ರೆ. 6 ಬಾರಿ 400ಕ್ಕೂ ಅಧಿಕ ರನ್, 3 ಸಲ 500ಕ್ಕೂ ಅಧಿಕ ರನ್ ಕಲೆ ಹಾಕಿರುವುದೇ ರೈನಾ ಸಾಧನೆಯಾಗಿದೆ. ಹೀಗಾಗಿ ವಿರಾಟ್, ಮಿಸ್ಟರ್ ಐಪಿಎಲ್ ಎಂಬ ಪಟ್ಟಕ್ಕೆ ಫರ್ಪೆಕ್ಟ್ ಚಾಯ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇದರಲ್ಲೇ ಅಲ್ಲ.. ಫೀಲ್ಡರ್ ಆಗಿ ಅತಿ ಹೆಚ್ಚು ವಿಕೆಟ್ ಬೇಟೆಯಾಡಿರುವ ಟ್ರ್ಯಾಕ್ ರೆಕಾರ್ಡ್ನಲ್ಲೂ ವಿರಾಟ್ ಕೊಹ್ಲಿ ಅಗ್ರಸ್ಥಾನಿಯಾಗಿದ್ರೆ. ಸುರೇಶ್ ರೈನಾ 2ನೇ ಪ್ಲೇಸ್ನಲಲ್ಲಿದ್ದಾರೆ. ಈ ಅಂಕಿ-ಅಂಶಗಳನ್ನು ನೋಡಿದ್ಮೇಲೆ ನೀವೇ ಹೇಳಿ, ಈ ಇಬ್ಬರಲ್ಲಿ ಯಾರು ಮಿಸ್ಟರ್ ಐಪಿಎಲ್ ಅನ್ನೋದನ್ನ.
ಇದನ್ನೂ ಓದಿ:ಸುನಿಲ್ ಗವಾಸ್ಕರ್ ಟೀಕೆಗೆ ಕೊಹ್ಲಿ ಕೌಂಟರ್.. ವಿರಾಟ್ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್