ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಅಮಿತ್ ಶಾ ಟಕ್ಕರ್
50 ದಿನಗಳ ಸೆರೆವಾಸ ಅನುಭವಿಸಿ ಹೊದ ಬಂದ ದೆಹಲಿ ಸಿಎಂ
ಪ್ರಧಾನಿ ಕುರ್ಚಿ ಅಲುಗಾಡುವಂತೆ ಮಾಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್
ತಿಹಾರ್ ಜೈಲಿನಿಂದ ಹೊರ ಬರ್ತಿದ್ದಂತೆ ಆಪ್ ನಾಯಕ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯನ್ನೇ ಟಾರ್ಗೆಟ್ ಮಾಡಿ ಮಾತಿನ ಪ್ರಹಾರ ನಡೆಸಿದ ಕೇಜ್ರಿವಾಲ್ ಪ್ರಧಾನಿ ಕುರ್ಚಿ ಅಲುಗಾಡುವಂತೆ ಮಾಡಿದ್ದರು, ಆದ್ರೇ ಇದಕ್ಕೆ ಟಕ್ಕರ್ ಕೊಟ್ಟಿರೋ ಅಮಿತ್ ಶಾ, 75 ವರ್ಷ ಆದ್ರೂ ಮೋದಿಯೇ ಪ್ರಧಾನಿ ಆಗ್ತಾರೇ ಅಂತ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಆದ್ರೇ 75 ವರ್ಷಕ್ಕೆ ನಿವೃತ್ತಿಯಾಗೋ ನಿಯಮ ತಂದಿದ್ದ ಬಿಜೆಪಿ, ಮೋದಿ ವಿಚಾರದಲ್ಲಿ ಈ ನಿಯಮಕ್ಕೆ ತಿಲಾಂಜಲಿ ಇಟ್ಟಿತಾ ಅನ್ನೋ ಪ್ರಶ್ನೇ ಹುಟ್ಟಿಸಿದೆ.
ತಿಹಾರ್ ಜೈಲಿನಲ್ಲಿ 50 ದಿನಗಳ ಸೆರೆವಾಸ ಅನುಭವಿಸಿ ಹೊದ ಬಂದ ದೆಹಲಿ ಸಿಎಂ ಅರವಿಂದ್ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. ಬಿಜೆಪಿ ಆಂತರಿಕ ವಿಷಯಗಳಿಗೆ ಕೈ ಹಾಕಿ ಬಿಜೆಪಿ ಬೇಸ್ ಅನ್ನೇ ಅಲುಗಾಡಿಸುವ ಪ್ರಯತ್ನ ಮಾಡಿದ್ದರು.
ಮೋದಿಗೆ 75 ವರ್ಷ.. ಅಮಿತ್ ಶಾ ನೆಕ್ಸ್ಟ್ ಪ್ರಧಾನಿ!
ನಿನ್ನೆ ಸುದ್ದಿಗೋಷ್ಟಿ ನಡೆಸಿ ಗುಜರಾತ್ ಲಾಭಿಯನ್ನೇ ಟಾರ್ಗೆಟ್ ಮಾಡಿದ್ದ ಕೇಜ್ರಿವಾಲ್ ಬಿಜೆಪಿಯಲ್ಲಿ ಮೋದಿ ನಂತರ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ಮುನ್ನೆಲೆಗೆ ತಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಮುಂದಿನ ಸೆಪ್ಟೆಂಬರ್ 17ಕ್ಕೆ ರಿಟೈರ್ ಆಗ್ತಿದ್ದಾರೆ. ಒಂದ್ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೇ ಸರ್ಕಾರ ಬಂದ್ರೆ ಯೋಗೀಜಿಯನ್ನ ಮೂಲೆಗುಂಪು ಮಾಡ್ತಾರೇ. ಬಳಿಕ ಮೋದಿಯವ್ರ ಆಪ್ತ ಅಮಿತ್ ಶಾರನ್ನ ಪ್ರಧಾನಿ ಮಾಡ್ತಾರೆ ಅಂತ ಹೇಳಿದ್ದರು.
3ನೇ ಬಾರಿಗೆ ಮೋದಿನೇ ಪಿಎಂ ಎಂದ ಬಿಜೆಪಿ ಚಾಣಕ್ಯ
ದಿಲ್ಲಿ ಸಿಎಂ ಹೇಳಿಕೆಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಟಕ್ಕರ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿಗೆ 75 ವರ್ಷ ತುಂಬಿದ ಬಗ್ಗೆ ಕೇಜ್ರಿವಾಲ್ ಸಂತೋಷ ಪಡಬೇಕಾಗಿಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಯ್ಯೋ.. ಜಲಾವೃತವಾದ ಪೊಲೀಸ್ ಠಾಣೆ, ಕೊಚ್ಚಿ ಹೋದ ಕಾರುಗಳು.. ರಾಜ್ಯದಲ್ಲಿ ಮಳೆಗಾದ ಅವಾಂತರ ಒಂದಾ.. ಎರಡಾ..
‘ಮೋದಿಗೆ 75 ವರ್ಷದ ಬಗ್ಗೆ ಕೇಜ್ರಿವಾಲ್ ಮತ್ತು ಇಂಡಿ ಅಲಾಯನ್ಸ್ ಸಂತೋಷ ಪಡಬೇಕಿಲ್ಲ, ಆ ರೀತಿ ಬಿಜೆಪಿಯ ಸಂವಿಧಾನದಲ್ಲಿ ಎಲ್ಲೂ ಕೂಡ ಉಲ್ಲೇಖಿಸಿಲ್ಲ, ಮೋದಿ ಅವರೇ ಮುಂದಿನ ಅವಧಿ ಪೂರ್ಣಗೊಳಿಸುತ್ತಾರೆ. ಮೋದಿ ಜಿ ಅವರೇ ದೇಶದ ನೇತೃತ್ವವನ್ನು ವಹಿಸುತ್ತಾರೆ. ಈ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ’-ಅಮಿತ್ ಶಾ
ನಿವೃತ್ತಿ ನಿಯಮಕ್ಕೆ ತಿಲಾಂಜಲಿ ಇಟ್ಟಿತಾ ಬಿಜೆಪಿ?
ಇತ್ತ, ಮೋದಿ ಅವರು ಮೂರನೇ ಬಾರಿಗೆ ಮತ್ತೇ ಆಗ್ತಾರೇ ಎಂದು ಅಮಿತ್ ಶಾ ಹೇಳಿರುವುದು ಸಾಕಷ್ಟು ಚರ್ಚೆ ಕಾರಣವಾಗಿದೆ. ಬಿಜೆಪಿಯಲ್ಲಿ 75 ವರ್ಷ ದಾಟಿದ ನಾಯಕರು ನಿವೃತ್ತರಾಗಬೇಕು ಎಂದು ಸ್ವತಃ ಬಿಜೆಪಿ ನಿಯಮ ರೂಪಿಸಿತ್ತು. ಅದರಂತೆ ಎಲ್ಕೆ ಅಡ್ವಾಣಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರಿಗೆ ವಯಸ್ಸಾಯ್ತು ಅನ್ನೋ ಕಾರಣ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಮಾಡಿದ್ದರು. ಆದ್ರೇ ಮೋದಿ ವಿಚಾರದಲ್ಲಿ ಈ ನಿಯಮವನ್ನು ಕೈ ಬಿಟ್ರಾ ಅನ್ನೋ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಎಸ್ಐಟಿ ತನಿಖೆ ಬಗ್ಗೆ ಕೇಳಿ ಬರುತ್ತಿದೆ ಅಪಸ್ವರ.. ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ತನಿಖೆ ಸಿಬಿಐಗೆ?
ಒಟ್ಟಿನಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೇ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಮತ್ತೆ ಪಿಎಂ ಗದ್ದುಗೆ ಏರುವುದು ಖಚಿವಾಗಿದೆ.. ಆದ್ರೆ ಕೇಜ್ರಿವಾಲ್ ಸಿಡಿಸಿರೋ ಬಾಂಬ್ ಬಿಜೆಪಿಯಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ