ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯೆಂಕಾ ಮಾಡಿದ್ದೇನು?
ಹೈದರಾಬಾದ್ ತಂಡದ ವಿರುದ್ಧ ಎಲ್ಎಸ್ಜಿ ತಂಡ ಹೀನಾಯವಾಗಿ ಸೋತಿತ್ತು
ಕೆ.ಎಲ್ ರಾಹುಲ್ ಹಾಗೂ ಸಂಜೀವ್ ಗೋಯೆಂಕಾ ಹೊಸ ಪೋಟೋ ವೈರಲ್!
ಈ ಬಾರಿಯ ಐಪಿಎಲ್ ಹಣಾಹಣಿ ರಣರೋಚಕ ಹಂತ ತಲುಪಿದ್ದು, ಪ್ಲೇ ಆಫ್ಗೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಪ್ಲೇ ಆಫ್ ಸಸ್ಪೆನ್ಸ್ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ ಸಖತ್ ಸುದ್ದಿಯಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯೆಂಕಾ ಅವರ ವರ್ತನೆ ಭಾರೀ ಟೀಕೆಗೆ ಗುರಿಯಾಗಿತ್ತು.
ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್ ರಾಹುಲ್ ಅವರನ್ನು ಬಹಿರಂಗವಾಗಿ ನಡೆಸಿಕೊಂಡ ರೀತಿಗೆ ಭಾರೀ ಖಂಡನೆ ವ್ಯಕ್ತವಾಗುತ್ತು. ಹೈದರಾಬಾದ್ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಎಲ್ಎಸ್ಜಿ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಿಗದಿತ 20 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತ್ತು. ಈ ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು 9.4 ಓವರ್ನಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತು. ಇದು ಎಲ್ಎಸ್ಜಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: KL ರಾಹುಲ್ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!
ಹೈದರಾಬಾದ್ ತಂಡದ ವಿರುದ್ಧ ಹೀನಾಯ ಸೋಲಿಗೆ ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೆ.ಎಲ್ ರಾಹುಲ್ ಅವರ ಮೇಲೆ ಆಕ್ರೋಶ ಹೊರ ಹಾಕಿದ್ದರು. ಸಂಜೀವ್ ಗೋಯೆಂಕಾ ಅವರು ಕೆ.ಎಲ್ ರಾಹುಲ್ ವಿರುದ್ಧ ತೋರಿದ ವರ್ತನೆ ಬಹಳಷ್ಟು ಚರ್ಚೆಗೆ ಗುರಿಯಾಗಿತ್ತು.
ಇದನ್ನೂ ಓದಿ: ಅಂದು ಧೋನಿ ಕೆಳಗೆ ಇಳಿಸಿದ್ದ ಗೋಯೆಂಕಾ.. ಇಂದು KL ರಾಹುಲ್ ಅಷ್ಟೇ..!
ಸಂಜೀವ್ ಗೋಯೆಂಕಾ ಕೋಪಕ್ಕೆ ತುತ್ತಾದ ಕೆ.ಎಲ್ ರಾಹುಲ್ ಪರ ಅನೇಕ ಕ್ರಿಕೆಟಿಗರು ಧ್ವನಿ ಎತ್ತಿದ್ದು, ಇದೀಗ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್ ರಾಹುಲ್ ಅವರನ್ನು ಡಿನ್ನರ್ಗಾಗಿ ಮನೆಗೆ ಕರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾಯಕ ಕೆ.ಎಲ್ ರಾಹುಲ್ ಹಾಗೂ ಸಂಜೀವ್ ಗೋಯೆಂಕಾ ತಬ್ಬಿಕೊಂಡಿರುವ ಫೋಟೋ ವೈರಲ್ ಆಗಿದೆ.
Sanjeev Goenka invited KL Rahul to his home for dinner.
– Both hugged each other. ❤️ pic.twitter.com/Zq2JV8ow5l
— Mufaddal Vohra (@mufaddal_vohra) May 14, 2024
ಕಳೆದ ರಾತ್ರಿ ಸಂಜೀವ್ ಗೋಯೆಂಕಾ ಅವರು LSG ನಾಯಕ ಕೆ.ಎಲ್ ರಾಹುಲ್ ಅನ್ನು ತಮ್ಮ ಮನೆಯ ಡಿನ್ನರ್ಗೆ ಆಹ್ವಾನಿಸಿದ್ದಾರೆ. ಈ ವೇಳೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೈದರಾಬಾದ್ ವಿರುದ್ಧ ಹೀನಾಯ ಸೋಲಿಗೆ ಆಕ್ರೋಶಗೊಂಡಿದ್ದ ಸಂಜೀವ್ ಗೋಯೆಂಕಾ ತಮ್ಮ ವಿರುದ್ಧದ ಟೀಕೆಗೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ