ನೈಟ್ ಪಾರ್ಟಿಯಲ್ಲಿ ಹಾರ್ದಿಕ್ರನ್ನ ಭೇಟಿಯಾಗಿದ್ದ ನತಾಶಾ
2023ರ ಫೆಬ್ರುವರಿಯಲ್ಲಿ ಮಗನ ಎದುರೇ ಅಧಿಕೃತ ಮದುವೆ
ಅದ್ಧೂರಿ ವಿವಾಹಕ್ಕೆ ಕ್ರಿಕೆಟಿಗರು, ಬಾಲಿವುಡ್ ಸ್ಟಾರ್ಸ್ ಸಾಕ್ಷಿ
ದುರಾದೃಷ್ಟವೋ, ಬ್ಯಾಡ್ಲಕ್ಕೋ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಬೆನ್ನು ಬಿದ್ದಂತಿದೆ. ಮುಂಬೈ ನಾಯಕತ್ವದ ವಿವಾದ ಐಪಿಎಲ್ ಅಂತ್ಯದ ಬಳಿಕ ಇದೀಗ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ. ಜೀವನಪೂರ್ತಿ ಜೊತೆಗಿರೋ ಮಾತು ಕೊಟ್ಟಿದ್ದ ಮಡದಿ ನತಾಶಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಒಂದು ವೇಳೆ ವಿಚ್ಛೇದನ ಕೊಟ್ಟಿದ್ದೇ ಆದಲ್ಲಿ ಹಾರ್ದಿಕ್ ಅವರ ಸಂಪತ್ತಲ್ಲಿ ಶೇ.70ರಷ್ಟು ಆಸ್ತಿ ನತಾಶಾ ಪಾಲಾಗಲಿದೆ.
ಇದನ್ನೂ ಓದಿ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ.. ಮೈಸೂರಲ್ಲಿ ಒಡನಾಡಿ ಸಂಸ್ಥೆ ಜೊತೆ ಪೊಲೀಸರ ರೇಡ್; ಆಮೇಲೇನಾಯ್ತು?
ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಆಲ್ರೌಂಡರ್ ಆಗುವ ಭರವಸೆ ಹುಟ್ಟಿಸಿದ್ದ ಆಟಗಾರ. ಆದ್ರೇ ಅದ್ಯಾಕೋ ಏನೋ ಈ ವರ್ಷ ಹಾರ್ದಿಕ್ ಪಾಂಡ್ಯ ಗ್ರಹಗತಿ ಸರಿಯಿಲ್ಲ ಅಂತ ಕಾಣ್ಸತ್ತೇ. ಕಡು ಬಡತನ ಕುಟುಂಬದಿಂದ ಜೀವನ ಆರಂಭಿಸಿದ್ದ ಹಾರ್ದಿಕ್ ಪಾಂಡ್ಯ ಜೀವನದಲ್ಲಿ ಎಲ್ಲವನ್ನು ಸಾಧಿಸಿದ್ದರು. ಟೀಂ ಇಂಡಿಯಾದಲ್ಲಿ ಸ್ಥಾನ, ಐಷಾರಾಮಿ ಜೀವನ ಎಲ್ಲವೂ ಚೆನ್ನಾಗೇ ಇತ್ತು, ಆದ್ರೇ ಈಗ ಎಲ್ಲ ಬದಲಾಗಿ ಹೋಗಿದೆ. ಒಂದ್ಕಡೆ ಕ್ರಿಕೆಟ್ ಜೀವನದಲ್ಲಿ ಫೇಲ್ ಆದ್ರೇ, ಅತ್ತ ವೈಯಕ್ತಿಕ ಜೀವನದಲ್ಲೂ ಫೇಲ್ ಆಗಿದ್ದಾರೆ.
ಮನೆ ತೊರೆದ ಪತ್ನಿ ನತಾಶಾ, ಪ್ರತ್ಯೇಕ ವಾಸ
ಐಪಿಎಲ್ ಸೀಸನ್ 17 ಅಂತ್ಯ ಕಂಡ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಬೇಸರದ ಸುದ್ದಿ ಹೊರಬಿದ್ದಿದೆ. ಪತ್ನಿ ನತಾಶಾ ಸ್ಟಾನ್ಕೋವಿಕ್, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇಷ್ಟೇ ಅಲ್ಲ, ಹಾರ್ದಿಕ್ ಮನೆ ತೊರೆದಿರುವ ನತಾಶಾ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತಿದ್ರೂ ಕೂಡ ನತಾಶಾ, ಹಾರ್ದಿಕ್ ಬೆಂಬಲಿಸಿ ಏನೂ ಮಾತನಾಡದೇ ಮೌನಕ್ಕೆ ಶರಣಾಗಿದ್ರು. ಜೊತೆಗೂ ಈ ಬಾರಿ ಐಪಿಎಲ್ ಟೂರ್ನಿಯಲ್ಲೂ ಕಾಣಿಸಿಕೊಳ್ಳದೇ ಹಾರ್ದಿಕ್ ಅವರಿಂದ ದೂರನೇ ಉಳಿದಿದ್ರು.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
ಹಾರ್ದಿಕ್ ಸಂಪತ್ತಲ್ಲಿ 70% ನತಾಶಾ ಪಾಲು..?
ಸದ್ಯ ಹಾರ್ದಿಕ್ ಮತ್ತು ನತಾಶಾ ಡಿವೋರ್ಸ್ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ. ಆದ್ರೇ ನತಾಶಾ ತಮ್ಮ ಇನ್ಸ್ಟಾದಿಂದ ಹಾರ್ದಿಕ್ ಪಾಂಡ್ಯ ಹೆಸರನ್ನು ತೆಗೆದಿರುವುದು ಇದಕ್ಕೆಲ್ಲ ಪುಷ್ಠಿ ನೀಡುವಂತಿದೆ. ಒಂದು ವೇಳೆ ನತಾಶಾ ಮತ್ತು ಹಾರ್ದಿಕ್ ವಿಚ್ಛೇದನ ಪಡೆದಿದ್ದೇ ಆದಲ್ಲಿ ಹಾರ್ದಿಕ್ ಸಂಪತ್ತಿನ ಶೇ. 70ರಷ್ಟು ಪಾಲಿಗೆ ನತಾಶಾ ದಾವೆ ಹೂಡಲು ಮುಂದಾಗಿದ್ದಾರೆನ್ನಲಾಗಿದೆ. ಒಂದು ಕಾಲದಲ್ಲಿ ಜನುಮದ ಜೋಡಿಯಂತೆ ಕಾಣಿಸಿಕೊಳ್ಳುತ್ತಿದ್ದ ಜೋಡಿ ಈಗ ಬೇರೆ ಬೇರೆ ಆಗಿರುವ ಸುದ್ದಿ ಕೇಳಿ ಕ್ರಿಕೆಟ್ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ