ಅಮೆರಿಕಾದಲ್ಲಿ ವಿರಾಟ್ ಅಟ್ಟರ್ ಫ್ಲಾಪ್ ಶೋ..!
ಎರಡು ಪ್ರವಾಸದಲ್ಲಿ ರನ್ ಮಷೀನ್ ಕೆಟ್ಟ ಆಟ
ಸವಾಲಿನ ಚಕ್ರವ್ಯೂಹ ಬೇಧಿಸ್ತಾರಾ ವಿರಾಟ್..?
ಐಸಿಸಿ ಟೂರ್ನಿಗಳಲ್ಲಿ ಕಿಂಗ್ ಕೊಹ್ಲಿ ಭಾರತಕ್ಕೆ ಆಪತ್ಬಾಂಧವ. ಮುಂಬರೋ ಟಿ20 ವಿಶ್ವಕಪ್ನಲ್ಲಿ ವಿರಾಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ ಐಪಿಎಲ್ ಆರೆಂಜ್ ಕ್ಯಾಪ್ ವಿನ್ನರ್, ಅದೇ ಖದರ್ ಅನ್ನ ಚುಟುಕು ದಂಗಲ್ನಲ್ಲಿ ರಿಪೀಟ್ ಮಾಡ್ತಾರಾ ಅನ್ನೋ ಅನುಮಾನ ಕಾಡ್ತಿದೆ.
ಕೊಹ್ಲಿ, ಕೊಹ್ಲಿ, ಕೊಹ್ಲಿ..! 2024ನೇ ಐಪಿಎಲ್ನುದ್ದಕ್ಕೂ ಗುನುಗಿದ್ದು ಒಂದೇ ಹೆಸರು ಅದುವೇ ಕಿಂಗ್ ಕೊಹ್ಲಿ. ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ ಕೊಹ್ಲಿ 741 ರನ್ ಚಚ್ಚಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ್ರು. ಇದೇ ಆರ್ಭಟ ಮುಂಬರೋ ಟಿ20 ವಿಶ್ವಕಪ್ನಲ್ಲಿ ಮೂಡಿಬರುತ್ತೆ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದ್ರೆ ಭರವಸೆ ಸುಳ್ಳಾಗುತ್ತಾ ಅನ್ನೋ ಅನುಮಾನ ಕಾಡ್ತಿದೆ.
ಇದನ್ನೂ ಓದಿ:ಭಾರೀ ಮಳೆಗೆ ದುರಂತ.. 10 ಮಂದಿ ಒಂದೇ ಸ್ಥಳದಲ್ಲಿ ದಾರುಣ ಸಾವು, ಹಲವರು ನಾಪತ್ತೆ
ತಡವಾಗಿ ಅಮೆರಿಕಾಗೆ ಪ್ರಯಾಣ.. ಸಿದ್ಧತೆಗೆ ತೊಡಕು..!
ಕ್ಯಾಪ್ಟನ್ ರೋಹಿತ್ ಶರ್ಮಾ ಆ್ಯಂಡ್ ಗ್ಯಾಂಗ್ನ ಅನೇಕ ಆಟಗಾರರು ಟಿ20 ವಿಶ್ವಕಪ್ ಆಡಲು ಅಮೇರಿಕಾಗೆ ತೆರಳಿದ್ದಾರೆ. ಆದರೆ ವಿಶ್ರಾಂತಿ ಬಯಸಿರೋ ಕೊಹ್ಲಿ ಮೊದಲ ಬ್ಯಾಚ್ ಜೊತೆ ಪ್ರಯಾಣಿಸಿಲ್ಲ. ಈ ತಿಂಗಳಾಂತ್ಯದಲ್ಲಿ ಅಮೇರಿಕಾಗೆ ಫ್ಲೈಟ್ ಏರಲಿದ್ದಾರೆ ಎಂದು ಹೇಳಲಾಗ್ತಿದೆ. ಜೂನ್ 1 ರಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ವಿರಾಟ್ ಆಡುವುದು ಅನುಮಾನ ಎನ್ನಲಾಗ್ತಿದೆ. ಹಾಗೊಂದು ವೇಳೆ ಕೊಹ್ಲಿ ವಾರ್ಮ್ಅಪ್ ಮ್ಯಾಚ್ ತಪ್ಪಿಸಿಕೊಂಡ್ರೆ ಕೊಹ್ಲಿಗೆ ಬಿಗ್ ಲಾಸ್ ಆಗಲಿದೆ. ಯಾಕಂದ್ರೆ ಮೆಗಾ ಬ್ಯಾಟಲ್ ಮುನ್ನ ಭಾರತ ಆಡುವುದು ಏಕೈಕ ಅಭ್ಯಾಸ ಪಂದ್ಯ ಮಾತ್ರ. ಇದನ್ನ ಬಿಟ್ರೆ ನೇರವಾಗಿ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಅಖಾಡಕ್ಕೆ ಧುಮುಕಲಿದೆ. ಕೊಹ್ಲಿ ಸಿದ್ಧತೆ ನಡೆಸದೇ ಏಕ್ದಮ್ ವಿಶ್ವಕಪ್ ಆಡಿದ್ರೆ ಪರ್ಫಾಮೆನ್ಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!
ಅಮೆರಿಕಾದಲ್ಲಿ ಕಿಂಗ್ ಕೊಹ್ಲಿ ಅಟ್ಟರ್ ಫ್ಲಾಪ್ ಶೋ..!
ಭಾರತ ತಂಡ ಗುಂಪು ಹಂತದ 4 ಪಂದ್ಯಗಳನ್ನ ಅಮೆರಿಕಾದಲ್ಲೆ ಆಡಲಿದೆ. ಈ ನೆಲದಲ್ಲಿ ಕಿಂಗ್ ಕೊಹ್ಲಿ ಅಟ್ಟರ್ ಫ್ಲಾಪ್ ಶೋ ನೀಡಿದ್ದಾರೆ. ಈ ದಯನೀಯ ವೈಫಲ್ಯ ಸದ್ಯ ಅಭಿಮಾನಿಗಳನ್ನ ಆತಂಕಕ್ಕೆ ದೂಡಿದೆ.
ಅಮೆರಿಕಾದಲ್ಲಿ ಕಿಂಗ್ ಕೊಹ್ಲಿ..!
ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅಮೆರಿಕಾದಲ್ಲಿ ಈವರೆಗೆ 4 ಪಂದ್ಯಗಳನ್ನ ಆಡಿದ್ದಾರೆ. ಬರೀ 63 ರನ್ ಅಷ್ಟೇ ಬಾರಿಸಿದ್ದಾರೆ. ಅದಕ್ಕಾಗಿ 61 ಎಸೆತ ತೆಗೆದುಕೊಂಡಿದ್ದಾರೆ. ಇನ್ನು ಬ್ಯಾಟಿಂಗ್ ಎವರೇಜ್ 21 ಆಗಿದೆ. ಕಿಂಗ್ ಕೊಹ್ಲಿ ವೃತ್ತಿ ಜೀವನದಲ್ಲಿ ಎರಡು ಬಾರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಎರಡೂ ಪ್ರವಾಸದಲ್ಲಿ ಅತಿಕೆಟ್ಟ ಆಟವಾಡಿದ್ದಾರೆ. 2016ರ ಮೊದಲ ಪ್ರವಾಸದಲ್ಲಿ ಕೊಹ್ಲಿ 1 ಇನ್ನಿಂಗ್ಸ್ ಆಡಿ ಬರೀ 16 ರನ್ ಗಳಿಸಲಷ್ಟೇ ಶಕ್ತರಾಗಿದ್ರು. 2019 ರಲ್ಲೂ ಅದೇ ರಾಗ ಅದೇ ಹಾಡು ಎನ್ನುವಂತೆ ಬ್ಯಾಟ್ ಬೀಸಿದ್ರು. 2 ಇನ್ನಿಂಗ್ಸ್ ಆಡಿ ಕೇವಲ 47 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!
ಕಿಂಗ್ ಕೊಹ್ಲಿಗೆ ಮುಂಬರೋ ಟಿ20 ವಿಶ್ವಕಪ್ ಅಂತೂ ಸುಲಭವಿಲ್ಲ. 17ನೇ ಐಪಿಎಲ್ನ ರನ್ರಾಜನ ಮುಂದೆ ಟಫ್ ಚಾಲೆಂಜಸ್ಗಳಿವೆ. ವೈಫಲ್ಯ ಮೆಟ್ಟಿ ನಿಲ್ಲೋದ್ರ ಜೊತೆ ಅಮೆರಿಕಾ ಕಂಡಿಷನ್ಗೆ ಹೊಂದಿಕೊಳ್ಳಬೇಕಾದ ಸವಾಲಿದೆ. ಈ ಸವಾಲಿನ ಚಕ್ರವ್ಯೂಹವನ್ನ ಹೇಗೆ ಬೇಧಿಸ್ತಾರೆ ಅನ್ನೋದನ್ನ ಕಾದು ನೋಡಬೇಕು.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್