T20 ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಜಪ
ಈ ಬಾರಿ ಅಮೆರಿಕಾದಲ್ಲಿ ವಿರಾಟರೂಪ ದರ್ಶನ ಪಕ್ಕಾ
ವಿವಾದ ಸೃಷ್ಟಿಸಿದ್ದ ವಿರಾಟ್ ವಿಶ್ವಕಪ್ ಆಯ್ಕೆ
ಚುಟುಕು ವಿಶ್ವಕಪ್ ದಂಗಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಯ ಜಪ ಜೋರಾಗಿದೆ. ಅಮೆರಿಕಾದಲ್ಲಿ ವಿರಾಟರೂಪ ದರ್ಶನ ಪಕ್ಕಾ ಅಂತಾ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಇದರ ನಡುವೆ ಕೆಲವು ಕ್ರಿಕೆಟ್ ಪಂಡಿತರು ಕೊಹ್ಲಿಯನ್ನ ಟೀಕಿಸ್ತಿದ್ದಾರೆ. ಈ ಟೀಕೆಗಳಿಗೆಲ್ಲ ಹೋಲ್ಸೇಲ್ ಆನ್ಸರ್ ಕೊಟ್ಟು, ಫ್ಯಾನ್ಸ್ ಫುಲ್ ಟ್ರೀಟ್ ಕೊಡಲು ವಿರಾಟ್ ಕೊಹ್ಲಿ ಸಜ್ಜಾಗ್ತಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಈಗಾಗಲೇ ಆರಂಭವಾಗಿದ್ದು ವಿಶ್ವಕಪ್ ಸಮರದಲ್ಲಿ ಒಂದು ಪ್ರತಿಷ್ಟಿತ ಟ್ರೋಫಿ ಮೇಲೆ 20 ತಂಡಗಳು ಕಣ್ಣಿಟ್ಟಿವೆ.
ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್ ಬೇರೆಯದ್ದೇ ಕತೆ ಹೇಳ್ತಿದೆ..!
ವಿವಾದ ಸೃಷ್ಟಿಸಿದ್ದ ವಿರಾಟ್ ವಿಶ್ವಕಪ್ ಆಯ್ಕೆ..!
ಈ ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಆಯ್ಕೆಯೇ ವಿವಾದವನ್ನ ಸೃಷ್ಟಿಸಿತ್ತು. ಟಿ20 ವಿಶ್ವಕಪ್ ಸೆಲೆಕ್ಷನ್ ಅಂದಾಗಲೇ ಮೊದಲು ಹುಟ್ಟಿದ್ದ ಪ್ರಶ್ನೆಯೇ ಕೊಹ್ಲಿಯ ಸ್ಟ್ರೈಕ್ರೇಟ್. ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಮುಂದಿಟ್ಟುಕೊಂಡು ಕ್ರಿಕೆಟ್ ಪಂಡಿತರು ಪ್ರಶ್ನೆ ಮಾಡಿದ್ರು. ಕೆಲವರು, ಟಿ20ಗೆ ಅನ್ಫಿಟ್ ಅಂದಿದ್ರು. ಜೊತೆಗೆ ಕೊಹ್ಲಿ ಯಂಗ್ಸ್ಟರ್ ಜಾಗವನ್ನ ಬ್ಲಾಕ್ ಮಾಡ್ತಿದ್ದಾರೆ ಅನ್ನೋ ವಾದವೂ ಹುಟ್ಟಿಕೊಂಡಿತ್ತು.
IPLಗೂ ಮುಂಚೆ ಕೊಹ್ಲಿ ಮೇಲೆ ಟೀಕೆಗಳ ಸುರಿಮಳೆ
ಐಪಿಎಲ್ ಆರಂಭಕ್ಕೂ ಟೀಕೆಗಳ ಟೀಕೆಗಳು ಎದುರಾದ್ವು. ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆಗಳು ಹುಟ್ಟಿದ್ವು. ಈ ಎಲ್ಲಾ ಟೀಕೆ-ಟಿಪ್ಪಣಿಗಳಿಗೆ ವಿರಾಟ್ ಕೊಹ್ಲಿ, ಐಪಿಎಲ್ ಅಖಾಡದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಆನ್ಸರ್ ಕೊಟ್ರು. ರನ್ಮಳೆಯನ್ನೇ ಸುರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ರು. ಬ್ಯಾಟ್ನಿಂದ ಮಾತ್ರವಲ್ಲ.. ಕೆಲವೊಮ್ಮೆ ಮಾತಿನಿಂದಲೂ ಪರೋಕ್ಷವಾಗಿ ತಿವಿದ್ರು.
ವಿಶ್ವಕಪ್ ಅಖಾಡದಲ್ಲಿ ಕಿಂಗ್ ಕೊಹ್ಲಿ 3.O ದರ್ಶನ?
ಐಪಿಎಲ್ ಅಖಾಡದಲ್ಲಿ ಕಿಂಗ್ ಕೊಹ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಇದೀಗ ಅದೇ ರೆಡ್ ಹಾಟ್ ಫಾರ್ಮ್ನಲ್ಲಿ ವಿಶ್ವಕಪ್ ಅಖಾಡಕ್ಕೆ ಎಂಟ್ರಿ ಕೊಡಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ವಿಶ್ವಕಪ್ ತಂಡವನ್ನ ಸೇರೋಕೆ ಮೊದಲೇ, ಟೀಕೆಗಳು ಮತ್ತೆ ಹೆಚ್ಚಾಗಿವೆ. ಐಪಿಎಲ್ ಅಖಾಡದಲ್ಲಿ 150+ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿರೋ ವಿರಾಟ್ ಕೊಹ್ಲಿ, ಅಮೆರಿಕಾದಲ್ಲೂ ಆರ್ಭಟಿಸ್ತಾರೆ ಅನ್ನೋದು ಅಭಿಮಾನಿಗಳು ನಿರೀಕ್ಷೆಯಾಗಿದೆ.
ಐಪಿಎಲ್ ಟೂರ್ನಿಯಂತೆ ಟಿ20 ವಿಶ್ವಕಪ್ ಟೂರ್ನಿಗೂ ಕೊಹ್ಲಿನೆ ಕಿಂಗ್. ಈ ಹಿಂದೆ ಆಡಿದ ಎಲ್ಲಾ ಟಿ20 ವಿಶ್ವಕಪ್ಗಳಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿರೋ ಟ್ರ್ಯಾಕ್ ರೆಕಾರ್ಡ್ ಕೊಹ್ಲಿಯದ್ದಾಗಿದೆ. ಬಿಗ್ಸ್ಟೇಜ್, ಬಿಗ್ಗೇಮ್, ಹೈಪ್ರೆಶರ್ ಗೇಮ್ಗಳಲ್ಲಿ ಕೊಹ್ಲಿಯಷ್ಟು ಕಾಮ್ ಆಗಿ ಇನ್ನಿಂಗ್ಸ್ ಕಟ್ಟೋ ಬ್ಯಾಟ್ಸ್ಮನ್ ಮತ್ತೊಬ್ಬ ಇಲ್ಲ. ಫ್ಯಾನ್ಸ್ ನಿರೀಕ್ಷೆಯಂತೆ ಈ ಟೂರ್ನಿಯಲ್ಲಿ ಕೊಹ್ಲಿ ಸಾಲಿಡ್ ಆಟವಾಡಲಿ. ಟಿ20 ವಿಶ್ವಕಪ್ ಗೆಲ್ಲಿಸಿ, ಟೀಮ್ ಇಂಡಿಯಾಗಿರೋ ICC ಟ್ರೋಫಿ ಬರವನ್ನ ನೀಗಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್