ಸಂಡೇ ಇಂಡೋ-ಪಾಕ್ ಹೈವೋಲ್ಟೇಜ್ ಮ್ಯಾಚ್
ಬಾ ಬಾ ನಾ ರೆಡಿ ಅಂತಿದ್ದಾರೆ ಕಿಂಗ್ ಕೊಹ್ಲಿ
ಎದುರಾಗಲೆಲ್ಲಾ ಪಾಕ್ಗೆ ತೋರಿಸಿದ್ದಾರೆ ನರಕ
ಈತನಿಗೆ ಆಟ ಅಂತ ಬಂದ್ರೆ ಎದುರಾಳಿ ಲೆಕ್ಕಕ್ಕಿಲ್ಲ. ಗೊತ್ತಿರೋದು ಒಂದೇ ರನ್, ರನ್, ರನ್. ಈಗ ಅದೇ ರನ್ ಭರಾಟೆಗೆ ಕಿಂಗ್ ಕೊಹ್ಲಿ ಹಪಾಹಪಿಸ್ತಿದ್ದಾರೆ. ಸಂಡೇ ನಡೆಯುವ ಮೆಗಾ ಬ್ಯಾಟಲ್ನಲ್ಲಿ ಕೊಹ್ಲಿ ಪರಮವೈರಿ ಪಾಕಿಸ್ತಾನಕ್ಕೆ ನರಕ ತೋರಿಸಲು ಸಜ್ಜಾಗಿದ್ದಾರೆ. ಪಾಕ್ ಎಷ್ಟೇ ಪ್ಲಾನ್ ಮಾಡಿದ್ರೂ ವಿರಾಟರೂಪದ ಮುಂದೆ ಠುಸ್ ಪಟಾಕ್ ಆಗೋದು ಗ್ಯಾರಂಟಿ.
ಶತ್ರು ಸಂಹಾರಕ್ಕೆ ವೀರಸೇನಾನಿ ಕೊಹ್ಲಿ ರೆಡಿ
IND VS PAKISTAN..! ಕ್ರಿಕೆಟ್ ಲೋಕದ ಬದ್ಧ ದುಷ್ಮನ್ಸ್. ಈ ಪರಮವೈರಿಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಜೂನ್ 9 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ ಯುದ್ಧದಲ್ಲಿ ಹೋರಾಡಲಿವೆ. ಈ ಬಿಗ್ವಾರ್ನಲ್ಲಿ ವೀರಾಸೇನಾನಿಯಂತೆ ಹೋರಾಡಿ, ಎದುರಾಳಿ ಸೊಕ್ಕಡಗಿಸಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
ಪಾಕ್ ವಿರುದ್ಧ ನೆಕ್ಸ್ಟ್ ಲೆವೆಲ್ ಪರ್ಫಾಮೆನ್ಸ್..!
ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಎದುರಾಳಿ ಯಾವುದೇ ಆಗಿರ್ಲಿ. ಕೊಹ್ಲಿ ಬ್ಯಾಟ್ ಮಾತ್ರ ಘರ್ಜಿಸುತ್ತೆ. ಅದೆಂಥ ಟಫ್ ಸಿಚುವೇಶನ್ ಇರ್ಲಿ. ಟೊಂಕಕಟ್ಟಿ ಹೋರಾಡ್ತಾರೆ. ಅಂತ್ರದಲ್ಲಿ ಬದ್ಧವೈರಿ ಪಾಕ್ ಎದುರಾಳಿ ಅಂದ್ರೆ ಕೇಳ್ಬೇಕಾ? ಆಟದ ವೈಖರಿ ನೆಕ್ಸ್ಟ್ ಲೆವೆಲ್ನಲ್ಲಿ ಇರುತ್ತೆ ಬಿಡಿ.
ಟಿ20 ವಿಶ್ವಕಪ್ನಲ್ಲಿ ಎದುರಾಗೆಲೆಲ್ಲಾ ಕಿಂಗ್ ಕೊಹ್ಲಿ ಪಾಕ್ಗೆ ಅಕ್ಷರಶಃ ನರಕವನ್ನೇ ತೋರಿಸಿದ್ದಾರೆ. ಯಾವತ್ತೂ ಪಾಕ್ಗೆ ತಲೆಬಾಗಿಲ್ಲ. ಅದ್ಭುತ ಆಟದಿಂದ ಎದುರಾಳಿ ತಲೆಬಾಗುವಂತೆ ಮಾಡಿದ್ದಾರೆ. ವಿಶ್ವವಿಕ್ರಮನ ವಿರಾಟರೂಪ ಸದ್ಯ ಬಾಬರ್ ಅಝಂ ಪಡೆಗೆ ಇನ್ನಿಲ್ಲದ ನಡುಕ ಹುಟ್ಟಿಸಿದೆ.
ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್.. ಜಸ್ಟ್ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!
ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಕೊಹ್ಲಿ
ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಇಲ್ಲಿಯತನಕ 10 ಟಿ20 ವಿಶ್ವಕಪ್ ಇನ್ನಿಂಗ್ಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಾದ್ಭುತ 81.33ರ ಎವರೇಜ್ನಲ್ಲಿ 488 ರನ್ ಕೊಳ್ಳೆ ಹೊಡೆದಿದ್ದಾರೆ. ಶತಕ ಬಾರದಿದ್ರು 5 ಹಾಫ್ಸೆಂಚುರಿ ಸಿಡಿಸಿದ್ದಾರೆ.
ಕಳೆದ 5 ಇನ್ನಿಂಗ್ಸ್ಗಳಲ್ಲಿ ನಾಲ್ಕು ಅರ್ಧಶತಕ
ಸೆಂಚುರಿ ಸಾಮ್ರಾಟ ಪಾಕ್ ವಿರುದ್ಧ ರನ್ ಪ್ರಹಾರ ನಡೆಸಿದ್ದಾರೆ. ಕಳೆದ ಐದು ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 4 ಅರ್ಧಶತಕ ಸಿಡಿಸಿದ್ದಾರೆ. 4 ಪಂದ್ಯಗಳಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ.
ಕಳೆದ ಐದು ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ
2016ರ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಕೊಹ್ಲಿ ಅಜೇಯ 55 ರನ್ ಗಳಿಸಿದ್ರು. ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು. 2021 ರಲ್ಲಿ 57 ರನ್ ಗಳಿಸಿದಾಗ ಭಾರತ ಪರಾಭವಗೊಂಡಿತು. 2022 ರಲ್ಲಿ ಕೊಹ್ಲಿ 35 ರನ್ ಸಿಡಿಸಿದ್ರು. ಆ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿತ್ತು. ಅದೇ ವರ್ಷ 60 ರನ್ ಚಚ್ಚಿದ್ರು. ಆಗಲೂ ಭಾರತ ಜಯಿಸಿತ್ತು. ಕೊನೆ ಬಾರಿ ಮುಖಾಮುಖಿಯಾದಾಗ ಅಜೇಯ 82 ಸಿಡಿಸಿದ್ದಲ್ಲದೇ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ರು.
ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್ನೋಟ್ನಲ್ಲಿ ಕಾರಣ ರಿವೀಲ್..
ಸಂಡೇ ಬ್ಯಾಟಲ್ನಲ್ಲಿ ಪಾಕ್ಗೆ ಕಾದೈತೆ ಹಬ್ಬ..!
ಬರೀ ಇತಿಹಾಸ ಮಾತ್ರವಲ್ಲ. ಪ್ರಸೆಂಟ್ ಕೂಡ ಕಿಂಗ್ ಕೊಹ್ಲಿ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್ನಲ್ಲಿ 741 ರನ್ ಚಚ್ಚಿ ಟಾಪ್ ಸ್ಕೋರರ್ ಅನ್ನಿಸಿಕೊಂಡಿದ್ರು. ಸದ್ಯ ಗುಡ್ ರಿದಮ್ನಲ್ಲಿರೋ ಕೊಹ್ಲಿಯನ್ನ ಕಟ್ಟಿಹಾಕೋದು ಕಷ್ಟದ ಕೆಲಸ. ಹಾಗಾಗಿ ಇವತ್ತಿನ ಬಿಗ್ ರೈವರ್ಲಿ ಬ್ಯಾಟಲ್ನಲ್ಲಿ ಕೊಹ್ಲಿ ಅಬ್ಬರಿಸಿ ಬದ್ಧವೈರಿ ಪಾಕ್ಗೆ ಸೋಲಿನ ದರ್ಶನ ಮಾಡಿಸಿದ್ರು ಆಶ್ಚರ್ಯವಿಲ್ಲ.
ಇದನ್ನೂ ಓದಿ:ವಿಶ್ವಕಪ್ನಲ್ಲೂ RCB ಬ್ಯಾಟ್ಸ್ಮನ್ ಫ್ಲಾಪ್ ಶೋ.. ಇವತ್ತು ಗಳಿಸಿದ ರನ್ ಎಷ್ಟು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ