ಅವಿವಾಹಿತರನ್ನು ಮದುವೆ ಮಾಡಿಸಲು ಹೊರಟ ಸರ್ಕಾರ
ಲೈಂಗಿಕತೆಗೆ ಉತ್ತೇಜನ ನೀಡಲು ಹೀಗೊಂದು ಪ್ಲಾನ್ ಮಾಡಿತಾ?
ಎಲ್ಲದರಲ್ಲೂ ಮುಂದಿರುವ ಇಲ್ಲಿನ ಜನರು ಈ ವಿಚಾರದಲ್ಲಿ ಹಿಂದೆ ಏಕೆ?
ಅಯ್ಯೋ.. ಮದುವೆಯಾಗ್ರಿ.. ಸಂಸಾರ ನಡೆಸ್ರಿ ಅಂತ ಯಾವ ಸರ್ಕಾರ ಹೇಳುತ್ತೆ?. ಲೈಂಗಿಕತೆ ಉತ್ತೇಜಿಸುವ ಬಗ್ಗೆ ಯಾವ ಸರ್ಕಾರ ಗಮನ ಕೊಡುತ್ತೆ?. ಮನೆಯವರೇ ಮಗ-ಮಗಳಿಗೆ ಮದುವೆ ಮಾಡಿಸಲು ಹೋಗಿ ಬೇಸತ್ತ ಅನೇಕ ಘಟನೆಗಳು ಕಣ್ಣ ಮುಂದೆ ಇರುವಾಗ ಸರ್ಕಾರವೊಂದು ಅವಿವಾಹಿತರನ್ನು ಮದುವೆ ಮಾಡಿಸಲು ಮುಂದಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು. ಯಾಕಂದ್ರೆ ಈ ಸ್ಟೋರಿ ಪೂರ್ತಿ ಓದಿ.
ಈ ಕಾಲದಲ್ಲಿ ಸಂಗಾತಿ ಹುಡುಕುವುದೇ ಒಂದು ದೊಡ್ಡ ಸರ್ಕಸ್. ಅಂತದರಲ್ಲಿ ಸರ್ಕಾರವೇ ಡೇಟಿಂಗ್ ಆ್ಯಪ್ ನಿರ್ಮಿಸಿ ಲೈಂಗಿಕತೆಗೆ ಉತ್ತೇಜನ ನೀಡುತ್ತೆ ಅಂದ್ರೆ ತಮಾಷೆ ಅಲ್ಲವೇ ಅಲ್ಲ. ಅಂತಹ ಕೆಲಸವನ್ನು ಜಪಾನ್ ಸರ್ಕಾರ ಮಾಡುತ್ತಿದೆ. ಅವಿವಾಹಿತರಿಗೆ ಇನ್ನೂ ಕಾಲ ಮಿಂಚಿಲ್ಲ ಗುರೂ.. ಮದುವೆಯಾಗ್ರಿ, ಸಂಸಾರ ನಡೆಸ್ರಿ ಎಂದು ಬೆನ್ನುತಟ್ಟಿ ಹೇಳುತ್ತಿದೆ.
ಪುಟಾರಿ ಸ್ಟೋರಿ
ಜಪಾನ್ ಮುಂದುವರೆದ ದೇಶ. ತಂತ್ರಜ್ಞಾನ, ಶಿಕ್ಷಣ, ಸಿರಿವಂತಿಕೆ ಇವೆಲ್ಲದರ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಇದೆ. ಭೂಕಂಪಕ್ಕೆ ನಡುಗಿದರೂ ಮತ್ತೆ ಸೆಟೆದು ನಿಲ್ಲುವ ತಾಕತ್ ಅದಕ್ಕಿದೆ. ಆದರೆ ಇಷ್ಟೆಲ್ಲಾ ಸಾಮರ್ಥ್ಯವಿರುವ ದೇಶದಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚುತ್ತಿದೆಯಾ? ಜನರು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರಾ?. ಜನನ ಪ್ರಮಾಣ ಕುಗ್ಗುತ್ತಿದೆಯಾ?. ಇವೆಲ್ಲ ವಿಚಾರಕ್ಕೆ ಸರ್ಕಾರ ಪ್ಲಾನ್ ಮಾಡಿದೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು
ಜಪಾನ್ ಸರ್ಕಾರ ಅವಿವಾಹಿತರನ್ನು ವಿವಾಹಿತರನ್ನಾಗಿ ಮಾಡಿಸಲು ಟೊಂಕ ಕಟ್ಟಿ ನಿಂತಿದೆ. ಅದಕ್ಕಾಗಿ ‘ಟೋಕಿಯೋ ಪುಟಾರಿ ಸ್ಟೋರಿ’ ಎಂಬ ಡೇಟಿಂಗ್ ಆ್ಯಪ್ ಪರಿಚಯಿಸಿದೆ. ಅದರ ಮೂಲಕವಾದರು ಪ್ರೀತಿ ಬೀಳಲು, ಮದುವೆಯಾಗಲು, ಸಂಸಾರ ನಡೆಸಲು ಉತ್ತೇಜನ ನೀಡುತ್ತಿದೆ.
ಇದನ್ನೂ ಓದಿ: ನಕಲಿ ಆಧಾರ್ ಕಾರ್ಡ್ ಬಳಸಿ ಸಂಸತ್ ಪ್ರವೇಶಿಸಲು ಯತ್ನ.. ಮೂವರು ಅರೆಸ್ಟ್.. ಎಲ್ಲಿಯವರು ಗೊತ್ತಾ?
ಜಪಾನ್ ಜನನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ಡೇಟಿಂಗ್ ಆ್ಯಪ್ ಪರಿಚಯಿಸಿದೆ. ಅಚ್ಚರಿಯ ಸಂಗತಿ ಎಂದರೆ ಜಪಾನ್ನಲ್ಲಿ 50 ವರ್ಷ ವಯಸ್ಸಿನ ಸುಮಾರು 32 ಪ್ರತಿಶತದಷ್ಟು ಪುರುಷರು ವಿವಾಹವಾಗದೆ ಇದ್ದಾರೆ. 24 ಪ್ರತಿಶತದಷ್ಟು ಮಹಿಳೆಯರು ಮದುವೆ ಬೇಡ ಅಂತ ಸುಮ್ಮನ್ನಿದ್ದಾರೆ. ಇದನ್ನು ಕಂಡು ತಲೆಕೆಡಿಸಿಕೊಂಡ ಸರ್ಕಾರ ಅವಿವಾಹಿತರನ್ನು ಮದುವೆ ಮಾಡಿಸಲು ಮುಂದಾಗಿದೆ ಎಂದರೆ ನಂಬಲು ಅಸಾಧ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ