newsfirstkannada.com

×

ರಾಮನಗರ ಹೆಸರು ಬದಲಾವಣೆ.. ಡಿಕೆಶಿ ಲೆಕ್ಕಾಚಾರವೇನು? ಜನರು ಎಲ್ಲಾ ದಾಖಲೆಗಳನ್ನು ಬದಲಾವಣೆ ಮಾಡ್ಬೇಕಾಗುತ್ತಾ?

Share :

Published July 10, 2024 at 7:14am

    ರಾಮನಗರ ಹೆಸರಿನ ಹಿಂದೆ ಬಿದ್ದ ಡಿ ಕೆ ಶಿವಕುಮಾರ್​

    ‘ರಾಮ ನಾಮ’ ಜಪಿಸಿದ ‘ದಳ’ ಮೇಲೆ ಇಕ್ಬಾಲ್​ ‘ಬಾಣ’!

    ರಾಮನಗರ ಜಿಲ್ಲೆ ಹೆಸರು ಬದಲಿಗೆ ನಿಖಿಲ್ ವಿರೋಧ

ಒಂದಕ್ಕೆ ಪುರಾಣದ ನಂಟು. ಇನ್ನೊಂದಕ್ಕೆ ಇತಿಹಾಸದ ಗಂಟು. ಈಗ ಪುರಾಣ ಮತ್ತು ಇತಿಹಾಸದ ನಡುವಿನ ಹೆಸರಿಗಾಗಿ ವರ್ತಮಾನದಲ್ಲಿ ಮಹಾಭಾರತ ಸೃಷ್ಟಿ ಆಗ್ತಿದೆ. ಈ ಮಹಾಭಾರತ ಕಥನಕ್ಕೆ ಡಿಸಿಎಂ ಶಿವಕುಮಾರ್​​ ಅವರೇ ಕರ್ತೃ. ಹೆಸರಿನ ಹಿಂದೆ ಬಿದ್ದ ಡಿಕೆಶಿ ಮನದ ಲೆಕ್ಕಾಚಾರ ಏನೋ? ಎತ್ತ ಗೊತ್ತಿಲ್ಲ. ಜಿಲ್ಲೆಯ ಜನ್ಮಕ್ಕೆ ಬುನಾದಿ ಹಾಕಿದ ಹೆಚ್​ಡಿಕೆ ವಿರುದ್ಧ ಕಾಲ್ಕೆರೆದ ಕದನಕ್ಕೆ ಬಿದ್ದ ಡಿಕೆಶಿ, ಈ ನಾಮದ ನಾಮಾವಶೇಷಕ್ಕೆ ಗುದ್ಲಿ ಹಿಡಿದು ನಿಂತಿದ್ದಾರೆ.

ಇದು ರಾಮನ ಮೇಲಿನ ದ್ವೇಷವೋ? ರಿಯಲ್ ಎಸ್ಟೇಟ್ ದುರಾಸೆಯೋ? ಅಥವಾ ಬೆಂಗಳೂರು ನಂಟಿನ ಪ್ರೀತಿಯೋ ಬಲ್ಲವರಾರು. ಅದೇನೋ ಅಂಥರಲ್ಲ, ಉದ್ಯೋಗ ಇಲ್ಲದ ಬಡಗಿ ಅದೇನೋ ಕೆತ್ತಿದ್ನಂತೆ ಅನ್ನೋಂಗಾಯ್ತು ಸರ್ಕಾರದ ಕಥೆ. ಮಾಡೋ ಕೆಲಸಗಳು ನೂರೆಂಟು ಇದ್ರೂ ಹೆಸರಿನ ಹಿಂದೆ ಬಿದ್ದಿರುವ ಡಿಸಿಎಂ ಡಿಕೆಶಿ, ಅದೊಂದು ಹೆಸರು ನಾಮಾವಶೇಷ ಮಾಡೋ ಉದ್ದೇಶ ಇದ್ದಂತಿದೆ. ವರ್ಷದ ಬಳಿಕ ರಾಮನಗರ ನಾಮಾಂಕಿತ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಅವಾಂತರ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಈ ನದಿ! ಸೇತುವೆ ಮುಳುಗಡೆ

ರಾಮನಗರಕ್ಕಾಗಿ ಶುರುವಾಯ್ತು ಅಸಲೀ ಮಹಾಯುದ್ಧ!

ಸರಿಯಾದ ಸಮಯ. ಸರಿಯಾದ ಅವಕಾಶ, ಸ್ಪಷ್ಟ ಗುರಿ, ಅದ್ಭುತ ಅಸ್ತ್ರ. ಇದು ಕೆಪಿಸಿಸಿ ಕಲೆಗಾರನ ಕಲೆಗಾರಿಕೆ. ಚನ್ನಪಟ್ಟಣ ಬೈ ಎಲೆಕ್ಷನ್ ಗೆಲ್ಲಲು ಡಿಕೆಶಿ ಹೂಡಿದ ಈ ಹೊಸ ಅಸ್ತ್ರಕ್ಕೆ ಶಿಕಾರಿ ರಾಮನಗರಕ್ಕೆ ಮೂರು ನಾಮ. ಜಿಲ್ಲೆ ಘೋಷಿಸಿದ ಈ ನಾಮದ ಹಿಂದಿನ ಶಕ್ತಿಯಾಗಿದ್ದ ಹೆಚ್​ಡಿಕೆನೇ ಡಿಕೆಶಿಯ ಟಾರ್ಗೆಟ್​​ ಅನ್ನೋದು ಅಸಲೀ ಸತ್ಯ. ಇದೇ ವಿಚಾರ ವರ್ಷದ ಬಳಿಕ ಸಂಘರ್ಷದ ವೇದಿಕೆ ಕಲ್ಪಿಸಿದೆ. ಹೊಸ ರಾಮಾಯಣಕ್ಕೆ ನಾಂದಿಯೂ ಹಾಡಿದೆ.

ಇದನ್ನೂ ಓದಿ: ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’; ಬಿಗ್​ಬಾಸ್​ ಸ್ಪರ್ಧಿ ಮೇಲೆ ಗಾಯಕ​ ಅರ್ಮಾನ್ ಮಲಿಕ್​ ಕೆಂಡಾಮಂಡಲ

ಹೆಸರು ಬದಲಾವಣೆ ಹಿಂದಿದೆ ತುಷ್ಟೀಕರಣ ಅಜೆಂಡಾ!

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸುವುದಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ವಿರೋಧಿಸಿದ್ದಾರೆ. ಕೆಲವರನ್ನು ತುಷ್ಟೀಕರಣ ಮಾಡ್ಲಿಕ್ಕೆ ಮಾತ್ರ ರಾಮನಗರ ಹೆಸರು ಬದಲಾವಣೆ ಮಾಡಲಾಗ್ತಿದೆ ಅಂತ ಕಿಡಿಕಾರಿದ್ದಾರೆ.

ಇನ್ನು, ಕಳೆದ ವರ್ಷವಷ್ಟೇ ಗೆದ್ದು ವಿಧಾನಸಭೆ ಪ್ರವೇಶಿಸಿದ ರಾಮನಗರ ಶಾಸಕ ಇಕ್ಬಾಲ್​​ ಹುಸೇನ್​​​, ಅವರಿಗೆ ಈ ಜಿಲ್ಲೆಯ ಪರಿಚಯವೇ ಇಲ್ಲ ಅಂತ ನಾಲ್ಕು ದಶಕದ ನಂಟು ಹೊಂದಿದ ಹೆಚ್​ಡಿಕೆಯನ್ನೇ ಗೇಲಿ ಮಾಡಿದ್ದಾರೆ. ಅಲ್ಲದೆ, ರಾಮನ ಹೆಸರು ಪ್ರಸ್ತಾಪಿಸಿದ್ದಕ್ಕೂ ಇಕ್ಬಾಲ್​ ಕೊಟ್ಟಿದ್ದು, ಧರ್ಮವೇ ಬೇರೆ, ರಾಜಕಾರಣವೇ ಬೇರೆ ಅನ್ನೋ ಉತ್ತರ.

ಇದನ್ನೂ ಓದಿ: ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟ ಬಿಗ್​ಬಾಸ್​ ಪ್ರಥಮ್​​.. ಯಾವ ಸೀರಿಯಲ್​​ ಗೊತ್ತಾ?

ಒಟ್ಟಾರೆ, ಪುರಾಣ ಪ್ರಸಿದ್ಧವಾದ ರಾಮನಗರ ಹೆಸರಿಗೆ ಸದ್ಯ ಕಂಟಕ ಬಂದಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗೊಮ್ಮೆ ಹೊಸ ನಾಮಕರಣ ಮಾಡ್ತಾ ಹೋದ್ರೆ ಅದರ ಹೊರೆ ಅನುಭವಿಸೋದು ಯಾರು? ದಾಖಲೆಗಳ ಬದಲಾವಣೆಗೆ ಮತ್ತದೇ ದುಂದುವೆಚ್ಛವಲ್ಲದೇ ಮತ್ತೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಗರ ಹೆಸರು ಬದಲಾವಣೆ.. ಡಿಕೆಶಿ ಲೆಕ್ಕಾಚಾರವೇನು? ಜನರು ಎಲ್ಲಾ ದಾಖಲೆಗಳನ್ನು ಬದಲಾವಣೆ ಮಾಡ್ಬೇಕಾಗುತ್ತಾ?

https://newsfirstlive.com/wp-content/uploads/2024/06/DK-SHIVAKUMAR-4.jpg

Load More