newsfirstkannada.com

ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯ ಕೆಂಪುಕೋಟೆ ಸಜ್ಜು; ಸತತ 11ನೇ ಬಾರಿ ‘ನಮೋ’ ಭಾಷಣ

Share :

Published August 15, 2024 at 6:55am

    ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

    ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಾರಾಜಿಸ್ತಿದೆ ತ್ರಿವರ್ಣ ಧ್ವಜ

    ವಿಕಸಿತ ಭಾರತ @ 2047 ಅನ್ನೋ ಥೀಮ್​ನಲ್ಲಿ ಆಚರಣೆ

ಆಗಸ್ಟ್ 15.. ಭಾರತಕ್ಕೆ ಸ್ವಾತ್ರಂತ್ಯ ಸಿಕ್ಕ ದಿನ. ಬ್ರಿಟಿಷ್ ಆಳ್ವಿಕೆ, ದಬ್ಬಾಳಿಕೆಯಿಂದ ಮುಕ್ತವಾದ ದಿನ. ಹೀಗಾಗಿ ಇಂದು ಇಡೀ ಭಾರತೀಯರಿಗೆ ವಿಶೇಷವಾದ ದಿನ. ಈ ಸುದಿನದಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ಧೂರಿ ಆಚರಣೆ ಮಾಡಲಾಗ್ತಿದೆ. ಪ್ರತಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆ ದೇಶದ್ದೂದ್ದಕ್ಕೂ ತ್ರಿವರ್ಣ ಧ್ವರ್ಜ ರಾರಾಜಿಸ್ತಿದೆ.

ಇದನ್ನೂ ಓದಿ: 78ನೇ ಸ್ವಾತಂತ್ರ್ಯ ದಿನಾಚರಣೆ; ಕೆಂಪು ಕೋಟೆಯಲ್ಲೇಕೆ ಧ್ವಜಾರೋಹಣ? ಏನಿದರ ಇತಿಹಾಸ?

ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಈಗಾಗಲೇ ದಾಖಲೆ ಬರೆದಿರುವ ನರೇಂದ್ರ ಮೋದಿ ಹೊಸ ದಾಖಲೆಗೆ ಮುನ್ನುಡಿ ಬರೆಯಲಿದ್ದಾರೆ. ಕಳೆದ ಬಾರಿ ಸತತ 10ನೇ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​​ ದಾಖಲೆಯನ್ನ ಮೋದಿ ಸರಿಗಟ್ಟಿದ್ರು. ಈ ಬಾರಿ ಮಾಜಿ ಪ್ರಧಾನಿ ಜವಹರ್​ ಲಾಲ್​ ನೆಹರು ಹಾಗೂ ಇಂದಿರಾ ಗಾಂಧಿ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದು, ಮತ್ತೊಂದು ಹಿಸ್ಟರಿ ಕ್ರಿಯೇಟ್ ಆಗಲಿದೆ. ಕಳೆದ ಬಾರಿ 90 ನಿಮಿಷಗಳ ಕಾಲ ಮಾಡಿ ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿರೀಕ್ಷೆಯೂ ಇದೆ. ಇಡೀ ದೇಶದ ಜನತೆ ಮೋದಿ ಭಾಷಣಕ್ಕಾಗಿ ಕಾತುರರಾಗಿದ್ದಾರೆ.

ರಾಜ್ಯದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇವತ್ತು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಬೆಳಗ್ಗೆ 8.58ಕ್ಕೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ತೆರೆದ ಜೀಪ್​ನಲ್ಲಿ ಪೆರೇಡ್ ವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ. ನಂತರ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಭಾಷಣ ಮಾಡಲಿದ್ದಾರೆ. ಜಿಲ್ಲಾಡಳಿತ ನಗರದಾದ್ಯಂತ ಫುಲ್ ಅಲರ್ಟ್​ ಆಗಿದ್ದು, ಮಾನಿಕ್ ಷಾ ಮೈದಾನದ ಸುತ್ತಾ ಪೊಲೀಸ್ ಪಡೆಯ ಸರ್ಪಗಾವಲೇ ನಿರ್ಮಾಣವಾಗಿದೆ.

ಮಾಣಿಕ್ ಷಾ ಮೈದಾನದಲ್ಲಿ ಏನಿರಲಿದೆ?

ಮಾಣಿಕ್ ಷಾ ಮೈದಾನದಲ್ಲಿ ಇಂದು ಸ್ವಾತಂತ್ರ್ಯೋತ್ಸವ ಹಿನ್ನಲೆ ಮಹಿಳಾ ಪೊಲೀಸ್, ಡಾಗ್ ಸ್ಕ್ವಾಡ್​, ಹೋಂ ಗಾರ್ಡ್​ ಸೇರಿದಂತೆ 35 ತುಕಡಿಗಳಿಂದ ಪರೇಡ್ ನಡೆಯಲಿದೆ. ಒಟ್ಟು ಒಂದು ಸಾವಿರದ 150 ಮಂದಿ ಪರೇಡ್​ನಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಿಳಿಸುವ ವಿಶೇಷ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ. ಮಲ್ಲಕಂಬ, ಪ್ಯಾರ ಮೋಟರ್ ಹಾಗೂ ಮೋಟಾರ್ ಸೈಕಲ್ ಪ್ರದರ್ಶನ ಇರಲಿದೆ. ಅದಲ್ಲದೇ, ಅಂಗಾಂಗ ದಾನ ಮಾಡಿದ 64 ಕುಟುಂಬಗಳಿಗೆ ಮುಖ್ಯಮಂತ್ರಿ ಗಳು ಪ್ರಶಂಸಾ ಪತ್ರ ವಿತರಣೆ ಮಾಡಲಿದ್ದಾರೆ. ಇನ್ನು, 100ಕ್ಕೂ ಹೆಚ್ಚು ಸಿಸಿಟಿವಿಗಳ ಕಣ್ಗಾವಲಿರಲಿದ್ದು, 2 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: ರೀಲ್ಸ್ ಚೆಲುವೆಯ ದುರಂತ.. ಬೆಟ್ಟದ ಮೇಲೆ ನಡೆದ ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ; ಆಗಿದ್ದೇನು?

ಅದಲ್ಲದೇ, ಅಂಬ್ಯುಲೆನ್ಸ್​ಗಳ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ವಾಹನಗಳ ನಿಯೋಜನೆ ಮಾಡಲಾಗಿದೆ. ಅದಲ್ಲದೇ, ಸಾರ್ವಜನಿಕರು ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ತ್ರಿವರ್ಣ ಧ್ವಜ ಹೊರತುಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮದ್ಯದ ಬಾಟಲಿ, ಮಾದಕ ವಸ್ತು, ಪಟಾಕಿ, ಸ್ಫೋಟಕ ವಸ್ತುಗಳು, ಬಣ್ಣದ ದ್ರವ, ನೀರಿನ ಬಾಟಲಿ ಇತ್ಯಾದಿ ವಸ್ತುಗಳನ್ನು ಮೈದಾನದ ಒಳಗೆ ತರುವುದನ್ನು ನಿಷೇಧಿಸಲಾಗಿದೆ. ಇಡೀ ಕರುನಾಡು ಕೂಡ ರಾತ್ರಿಯಿಂದಲೇ ಸಾಂತಂತ್ಯ ಸಂಭ್ರಮದಲ್ಲಿ ಮಿಂದಿದ್ದಿದೆ.

ಒಟ್ಟಾರೆ, ಆಗಸ್ಟ್ 15ನ್ನ ಭಾರತಾಂಭೆ ಜನ್ಮ ದಿನವೆಂದೇ ಆಚರಣೆ ಮಾಡಲಾಗುತ್ತೆ. ಇಂದು ದೇಶದಾದ್ಯಂತ ಸ್ವಾತಂತ್ರ್ಯದ ಭಾವುಟ ರಾರಾಜಿಸಲಿದೆ. ಭಾರತಾಂಬೆಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಸ್ಮರಣೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯ ಕೆಂಪುಕೋಟೆ ಸಜ್ಜು; ಸತತ 11ನೇ ಬಾರಿ ‘ನಮೋ’ ಭಾಷಣ

https://newsfirstlive.com/wp-content/uploads/2024/08/MODI.jpg

Load More