newsfirstkannada.com

ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ದಿಢೀರ್ ಬದಲಾವಣೆ, ಓರ್ವ ಸದಸ್ಯನಿಗೆ ಕೊಕ್, ಹೊಸ ಎಂಟ್ರಿ..!

Share :

Published September 4, 2024 at 11:40am

    ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾಗೆ ಒಲಿದ ಲಕ್

    ಪುರುಷರ ಕ್ರಿಕೆಟ್ ತಂಡದ ಆಯ್ಕೆ ಆಗಾರರನ್ನಾಗಿ ನೇಮಕ

    ಬಿಸಿಸಿಐ ದೊಡ್ಡ ನಿರ್ಧಾರಕ್ಕೆ ಇದೇ ಒಂದು ಬಲವಾದ ಕಾರಣ

ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ (Ajay ratra) ಅವರನ್ನು ಪುರುಷರ ಕ್ರಿಕೆಟ್ ತಂಡದ ಆಯ್ಕೆ ಆಗಾರರನ್ನಾಗಿ ನೇಮಕ ಮಾಡಲಾಗಿದೆ. ಅಜಿತ್ ಅಗರ್ಕರ್​ ನೇತೃತ್ವದ ಐದು ಸದಸ್ಯರ ಸಮಿತಿಯಲ್ಲಿ ಸಲಿಲ್​ ಅಂಕೋಲಾ (Salil Ankola) ಅವರನ್ನು ಬದಲಿಸಿದೆ. ಸಂಪ್ರದಾಯದಂತೆ ಎಲ್ಲಾ ಐವರು ಆಯ್ಕೆಗಾರರು ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ.

ಕಳೆದ ವರ್ಷ ಅಗರ್ಕರ್​ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡ ನಂತರ ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆಗಾರರಿದ್ದರು. ಅಂಕೋಲಾ ಅವರು ಅದಾಗಲೇ ಆಯ್ಕೆ ಸಮಿತಿಯ ಭಾಗವಾಗಿದ್ದರು. ಆಯ್ಕೆ ಸಮಿತಿಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯದ ಸಮತೋಲನ ಕಾಯ್ದುಕೊಳ್ಳಲು ಒಬ್ಬ ಸದಸ್ಯರನ್ನು ತೆಗೆಯಲಾಗಿದೆ. ಇನ್ನು ಹೊಸ ಜವಾಬ್ದಾರಿ ಪಡೆದಿರುವ ರಾತ್ರಾ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾತ್ರಾ ಅವರು ಉತ್ತರ ವಲಯವನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!

42 ವರ್ಷದ ರಾತ್ರಾ ಭಾರತದ ಪರ 6 ಟೆಸ್ಟ್​ ಮತ್ತು 12 ಏಕದಿನ ಪಂದ್ಯವನ್ನು ಆಡಿದ್ದಾರೆ. ಅವರು ವಿಕೆಟ್ ಕೀಪರ್ ಬ್ಯಾಟ್ಸ್​​ಮನ್. ಟೆಸ್ಟ್​ನ 10 ಇನ್ನಿಂಗ್ಸ್​ಗಳಲ್ಲಿ 18.11 ಸರಾಸರಿಯಲ್ಲಿ 30.58 ಸ್ಟ್ರೈಕ್​ರೇಟ್​ನಲ್ಲಿ 163 ರನ್​ಗಳಿಸಿದ್ದಾರೆ. ಏಕದಿನದ 8 ಇನ್ನಿಂಗ್ಸ್​ಗಳಲ್ಲಿ 12.85 ಸರಾಸರಿಯಲ್ಲಿ 90 ರನ್​ಗಳಿಸಿದ್ದಾರೆ. ರಾತ್ರಾ ಅವರು ಅಸ್ಸಾಂ, ಪಂಜಾಬ್ ಮತ್ತು ಉತ್ತರ ಪ್ರದೇಶ ರಣಜಿ ತಂಡಗಳ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇದೆ. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯ ಸಂದರ್ಭದಲ್ಲಿ ಟೀಂ ಇಂಡಿಯಾದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು.

ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ದಿಢೀರ್ ಬದಲಾವಣೆ, ಓರ್ವ ಸದಸ್ಯನಿಗೆ ಕೊಕ್, ಹೊಸ ಎಂಟ್ರಿ..!

https://newsfirstlive.com/wp-content/uploads/2024/05/Rohit_Ajit.jpg

Load More