newsfirstkannada.com

ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?

Share :

Published September 14, 2024 at 9:49pm

Update September 14, 2024 at 9:50pm

    ಯಾರಿಗೂ ತೊಂದರೆ ಕೊಟ್ಟಿಲ್ಲ! ಆರೋಪಗಳು ಸತ್ಯಕ್ಕೆ ದೂರ!

    ಲೋಕಸಭೆ ಮುನ್ನವೇ ನಡೆದಿತ್ತಾ ಸಂಚು, ಮುನಿರತ್ನ ಏನಂದ್ರು?

    ಜಂಟಿ ಕಾರ್ಯಾಚರಣೆ; ಕೇಸರಿ ಶಾಸಕರಿಗೆ ಮೊದಲೇ ಗೊತ್ತಿತ್ತಾ?

ಬೆಂಗಳೂರು:  ಬಿಜೆಪಿ ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ. ಗುತ್ತಿಗೆದಾರರು ಮಾತ್ರ ಕೇಸರಿ ಪಕ್ಷಕ್ಕೆ ಕಂಟಕ ಆಗ್ತಾನೆ ಇದ್ದಾರೆ. ಹಿಂದಿನ ಬಿಜೆಪಿ ಸರ್ಕಾರವನ್ನ ಗುತ್ತಿಗೆದಾರರ 40 ಪರ್ಸೆಂಟ್​​ ಬೆಂಕಿ ಸುಟ್ಟ ರೀತಿ ಇನ್ನೂ ನಮ್ಮ ಕಣ್ಮುಂದಿದೆ. ಇದೀಗ ಅದೇ ಕಂಟ್ರ್ಯಾಕ್ಟರ್‌ ಕಿಚ್ಚು ಕೇಸರಿ ಶಾಸಕನ ಸುಡಲು ಆರಂಭಿಸಿದೆ.

ಕಮಲ ಪಾಳಯದ ಬಲಿಷ್ಠ ನಾಯಕ ಮುನಿರತ್ನ ವಿರುದ್ಧ ಸದ್ಯ ಜೀವಬೆದರಿಕೆ ಮತ್ತು ಜಾತಿ ನಿಂದನೆ ಆರೋಪಗಳು ಸದ್ಯ ಅವರ ವಿರುದ್ಧ ಕೇಳಿ ಬರುತ್ತಿವೆ.ಆರೋಪಗಳು ಕೇಳಿ ಬರುತ್ತಿದ್ದಂತೆ, ಶಾಸಕ ಮುನಿರತ್ನ ನಾಪತ್ತೆಯಾಗಿದ್ರು. ಇದಾದ ಬಳಿ ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ಮಾರ್ಗದಲ್ಲಿ ಮುನಿರತ್ನ ಬಂಧನವಾಗಿದೆ. ಆದ್ರೆ ಈ ಆರೋಪದ ಬಗ್ಗೆ ಶಾಸಕ ಮುನಿರತ್ನ ಕೊಟ್ಟ ಸ್ಪಷನೆ ಏನು? ಇದು ರಾಜಕೀಯ ಪಿತೂರಿನಾ? ಮುನಿರತ್ನ ಹೇಳಿದ್ದೇನು ಅನ್ನೋದರ ಸಂಪೂರ್ಣ ವರದಿ ಈ ಲೇಖನದಲ್ಲಿದೆ.

ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್.. ದೂರು ಕೊಟ್ಟ ಗುತ್ತಿಗೆದಾರ ಚೆಲುವರಾಜು ಏನಂದ್ರು?

ಗುತ್ತಿಗೆದಾರ ಚೆಲುವರಾಜು ಮುನಿರತ್ನ ವಿರುದ್ಧ ಜಾತಿ ನಿಂದನೆ ಮತ್ತು ವಸೂಲಿ ಆರೋಪ ಹೊರಿಸ್ತಿದ್ದಂತೆ ಶಾಸಕ ಮುನಿರತ್ನ ತಕ್ಷಣವೇ ಎರಡು ವಿಡಿಯೋಗಳನ್ನ ರಿಲೀಸ್ ಮಾಡಿದ್ರು. ಈ ವಿಡಿಯೋದಲ್ಲಿ ತಮ್ಮ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ರು. ಇದು ಪಕ್ಕಾ ರಾಜಕೀಯ ಪಿತೂರಿ, ಈ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿವೆ ಅಂತಾ ಪ್ರತ್ಯಾರೋಪ ಮಾಡಿದ್ರು. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯಿಂದಲೇ ತಮ್ಮ ವಿರುದ್ಧ ಈ ರೀತಿಯ ಸಂಚು ನಡೆದಿತ್ತು ಅಂತ ಹೇಳೋ ಮೂಲಕ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಮುನಿರತ್ನರನ್ನ ಇಂತಾದೊಂದು ಸಂಕಷ್ಟಕ್ಕೆ ಸಿಲುಕಿಸೋದಕ್ಕೆ ಲೋಕಸಭೆ ಚುನಾವಣೆಯಿಂದಲೂ ಸಂಚು ನಡೀತಾ ಇತ್ತಂತೆ. ಅಸಲಿಗೆ ಇವತ್ತು ಮುನಿರತ್ನ ಮೇಲೆ ದೂರು ಕೊಟ್ಟಿರುವ ಗುತ್ತಿಗೆದಾರ ಕಳೆದ ಏಳು ಎಂಟು ವರ್ಷಗಳಿಂದ ಮುನಿರತ್ನ ಹತ್ತಿರ ಕೆಲಸ ಮಾಡ್ತಿದ್ರಂತೆ. ಹೀಗಿರುವಾಗ ಏಳು ಎಂಟು ವರ್ಷದಿಂದ ತೊಂದರೆ ಕೊಡದೆ ಇರುವ ನಾನು ಈಗ ಹೇಗೆ ತೊಂದರೆ ಕೊಡೋದಕ್ಕೆ ಸಾಧ್ಯ ಅನ್ನೋದು ಮುನಿರತ್ನ ಪ್ರಶ್ನೆ.

ಇದನ್ನೂ ಓದಿ: ‘ನನಗೆ ಮೊದಲೇ ಗೊತ್ತಿತ್ತು.. ಜೈಲಿಗೆ ಕಳಿಸಲು ಇಬ್ಬರಿಂದ ಜಂಟಿ ಆಪರೇಷನ್’- ಮುನಿರತ್ನ ವಿಡಿಯೋ ಬಿಡುಗಡೆ

ಇಲ್ಲಿ ಇನ್ನೂ ಒಂದು ವಿಚಾರವನ್ನು ಮುನಿರತ್ನ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ. ಅದೇನಂದ್ರೆ ದೇವರಾಜು ಅರಸು ಟ್ರಕ್​ ಟರ್ಮಿನಲ್​ನಲ್ಲಿ ನಡೀತಾ ಇರೋ ಅವ್ಯವಹಾರದ ಬಗ್ಗೆ ತನಿಖೆ ಮಾಡೋಕೆ ಸೂಚಿಸಿದ್ದೆ ತಾವು ಅಂತ ಹೇಳಿದ್ದಾರೆ. ಈ ಟ್ರಕ್ ಟರ್ಮಿನಲ್​ನಲ್ಲಿ ಪ್ರತಿ ತಿಂಗಳು 15 ಲಕ್ಷ ಅವ್ಯವಹಾರ ನಡೀತಾ ಇತ್ತಂತೆ. ಈ ಬಗ್ಗೆ ಖುದ್ದು ಮುನಿರತ್ನ ಪತ್ರ ಬರೆದು ತನಿಖೆ ಮಡೋದಕ್ಕೆ ಹೇಳಿದ್ರಂತೆ. ಯಾವತ್ತೋ ಮುನಿರತ್ನ ತನಿಖೆ ಬಗ್ಗೆ ಧ್ವನಿ ಎತ್ತಿದ್ರೋ ಅಲ್ಲಿಂದಲೇ ಈ ಸಂಚು ಶುರುವಾಯ್ತು ಅನ್ನೋದು ಮುನಿರತ್ನ ಆರೋಪ.

ಮುನಿರತ್ನ ವಿಧಾನಸಭೆ ಚುನಾವಣೆ ಗೆದ್ದಾಗಿನಿಂದಲೂ ಮುನಿರತ್ನನ್ನ ಅರೆಸ್ಟ್‌ ಮಾಡಿಸ್ಬೇಕು. ಒಳಗೆ ಕಳಿಸಬೇಕು ಅನ್ನೋ ಪಿತೂರಿ ನಡೀತಾ ಇತ್ತಂತೆ. ಮುನಿರತ್ನ ವಿರುದ್ಧ ದೂರು ಕೊಟ್ಟು ಜೈಲಿಗೆ ಕಳಿಸಬೇಕು ಅನ್ನೋದಷ್ಟೆ ವೈರಿಗಳ ಉದ್ದೇಶ. ಇದೊಂದು ಜಂಟಿ ಕಾರ್ಯಾಚರಣೆ ಅಂತ ಹೇಳೋ ಮೂಲಕ ಡೈರೆಕ್ಟಾಗೇ ಡಿಕೆ ಸುರೇಶ್ ವಿರುದ್ಧ ಕೆಂಡ ಕಾರಿದ್ರು.

ಇದನ್ನೂ ಓದಿ: ಶಾಸಕ ಮುನಿರತ್ನಗೆ ಬಿಗ್ ಶಾಕ್; BJP ಪಕ್ಷದಿಂದ 5 ದಿನಗಳ ಡೆಡ್​ಲೈನ್!

ಇನ್ನು, ತಮ್ಮ ರಾಜಕೀಯ ಎದುರಾಳಿ ವಿರುದ್ಧ ಕೇಳಿಬಂದಿರೋ ಆರೋಪದ ಬಗ್ಗೆ ನ್ಯೂಸ್ ಫಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಕುಸುಮಾ ಒಬ್ಬ ಗುತ್ತಿಗೆದಾರನಿಗೆ ಲಂಚ ಕೇಳಿ ಅಂತ ನಾವು ಹೇಳಿಕೊಟ್ಟಿದ್ವ? ಅವಾಚ್ಯವಾಗಿ ನಿಂದಿಸಿ ಅಂತ ನಾವು ಹೇಳಿದ್ವಾ? ಅಂತ ಮುನಿರತ್ನ ವಿರುದ್ಧ ಮಾತಿನ ಬಾಣ ಬಿಟ್ಟಿದ್ದಾರೆ.

ನನ್ನ ಮೇಲೆ ಒಕ್ಕಲಿಗ ಸಮುದಾಯ ಎತ್ತಿ ಕಟ್ಟೋಕೆ ಈ ಸಂಚು!
ಮುನಿರತ್ನ ಹೇಳುವಂತೆ ಈಗ ದೂರು ಕೊಟ್ಟಿರುವ ಈ ಚೆಲುವರಾಜು ಒಕ್ಕಲಿಗ ಸಮುದಾಯದವರ ವಿರುದ್ಧವೂ ಹತ್ತಾರು ದೂರು ಕೊಟ್ಟಿದ್ದಾನಂತೆ. ಸುಮಾರು 20 ಜನರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾನಂತೆ. ಅದೇ ವ್ಯಕ್ತಿ ಇವತ್ತು ನನ್ನ ಮೇಲೆಯೂ ದೂರು ಕೊಟ್ಟಿದ್ದಾನೆ. ನಾನು ಯಾವತ್ತು ದಲಿತ ಸಮುದಾಯದ ಬಗ್ಗೆ ಮಾತನಾಡಿಲ್ಲ. ಅಂತಾ ವ್ಯಕ್ತಿಯೂ ನಾನಲ್ಲ ಅಂತ ದೂರು ಕೊಟ್ಟ ಚೆಲುವರಾಜು ವಿರುದ್ಧ ಮುನಿರತ್ನ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಅರೆಸ್ಟ್ ಆದ ಮುನಿರತ್ನ ಆಡಿಯೋ ವೈರಲ್‌.. ಒಕ್ಕಲಿಗ, ದಲಿತ ಸಂಘಟನೆ ಕೆಂಗಣ್ಣಿಗೆ ಗುರಿಯಾದ ಶಾಸಕ; ಈ ಬಗ್ಗೆ ಏನಂದ್ರು?
ಮುನಿರತ್ನ ಪದೇ ಪದೇ ಪುನುರುಚ್ಚರಿಸಿದ ಹೆಸರು ಅಂದ್ರೆ ಕಾಂಗ್ರೆಸ್​​ನ ಕುಸುಮಾ ಮತ್ತು ಬಂಡೆ ಸಹೋದರ ಡಿ ಕೆ ಸುರೇಶ್​. ಈ ಕುಸುಮಾ ಆ್ಯಂಡ್ ಗ್ಯಾಂಗ್ ಮತ್ತು ಡಿ ಕೆ ಸುರೇಶ್ ಇಬ್ಬರು ಜಂಟಿಯಾಗಿ ಸಂಚು ಮಾಡಿ ತಮ್ಮನ್ನ ಒಕ್ಕಲಿಗ ಸಮುದಾಯದ ಮೇಲೆ ಎತ್ತಿ ಕಟ್ಟೋಕೆ ನೋಡಿದ್ದಾರೆ. ಅದರ ಪ್ರತಿಫಲವೇ ಈ ಆರೋಪ ಅಂತ ಮುನಿರತ್ನ ಕೆಂಡ ಕಾರಿದ್ದಾರೆ.

20 ಲಕ್ಷ ರೂ. ಲಂಚ ಕೇಳುವ ಪರಿಸ್ಥಿತಿ ಬಂದ್ರೆ ರಾಜಕೀಯ ಬಿಡ್ತಿನಿ!
ಲಂಚ ಕೇಳಿರುವ ಆರೋಪ ಹೊತ್ತಿರುವ ಮುನಿರತ್ನ. ಒಂದ್ವಳೆ 15-20 ಲಕ್ಷ ಲಂಚ ಕೇಳುವ ಪರಿಸ್ಥಿತಿ ಬಂದ್ರೆ ರಾಜಕೀಯವನ್ನೆ ಬಿಟ್ಟೋಗ್ತೀನಿ. ಹೊರತು ಇಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ, ಬೆಂಗಳೂರಲ್ಲಿ ಗುತ್ತಿಗೆದಾರರು ಯಾಕೆ ಬರ್ತಿಲ್ಲ ಅನ್ನೋದು ಜನರಿಗೆ ಗೊತ್ತಿದೆ ಅಂತ ತಮ್ಮ ಮೇಲಿರುವ ಆರೋಪವನ್ನ ತಳ್ಳಿ ಹಾಕಿದ್ದಾರೆ.
ಇವತ್ತು ರಾಜರಾಜೇಶ್ವರಿ ಕ್ಷೇತ್ರ ಹಾಳಾಗೋದಕ್ಕೆ ಕಾರಣವೇ ಕುಸುಮಾ ಅಂತ ಮುನಿರತ್ನ ಕಿಡಿ ಕಾರಿದ್ದಾರೆ. ಎರಡು ಸಲ ಕುಸಮಾ ತಂದೆ ಹನುಮಂತರಾಯಪ್ಪ ಸೋತಿದ್ರು. ಉಪ ಚುನಾವಣೆಯಲ್ಲಿ ಮಗಳನ್ನ ನಿಲ್ಲಿಸಿ ಸೋಲಸಿದ್ರು. ಲೋಕಸಭೆ ಚುನಾವಣೆಯಲ್ಲಿ ಡಿಕೆ ಸುರೇಶ್ ಸೋಲೋದಕ್ಕೆ ಕಾರಣವೂ ಅವರೇ.. ಇವತ್ತು ಕ್ಷೇತ್ರ ಹಾಳಾಗೋಕ್ಕು ಕಾರಣ ಅವರೇ ಅಂತ ಮುನಿರತ್ನ ಅಕ್ಷರಶಃ ಆಕ್ರೋಶ ಹೊರ ಹಾಕಿದ್ದಾರೆ.

ದಶಕಗಳ ನಾಯಕತ್ವಕ್ಕೆ ಬೀಳುತ್ತಾ ಕಪ್ಪು ಚುಕ್ಕೆ?
ಮುನಿರತ್ನಂ ಸುಬ್ರಮಣ್ಯ ನಾಯ್ಡು, ಈ ಹೆಸರು ಮೊದ ಮೊದಲು ಸಿನಿಮಾಗಳಲ್ಲೇ ಹೆಚ್ಚು ಕೇಳಿಬರುತ್ತಿತ್ತು. ಆದ್ರೆ,​ ಮುಂದೆ ರಾಜಕೀಯ ಕ್ಷೇತ್ರದಲ್ಲೂ ಅಷ್ಟೇ ಭರ್ಜರಿ ಸದ್ದು ಮಾಡೋಕೆ ಶುರುವಾಗಿತ್ತು. ನಿರ್ಮಾಪಕರಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲುವುಗಳನ್ನ ನೋಡಿದ್ದ ಮುನಿರತ್ನ ಅವರು. ರಾಜಕೀಯ ಕ್ಷೇತ್ರದಲ್ಲೂ ಸಚಿವರಾಗಿ, ಶಾಸಕರಾಗಿ ರಾಜ್ಯ ರಾಜಕೀಯದಲ್ಲಿನ ಹಿರಿ ನಾಯಕರ ಪಟ್ಟಿ ಅಂತ ನೋಡಿದ್ರೆ, ಅದರಲ್ಲೂ ಅವರಿಗೆ ಸ್ಥಾನ ಇರುತ್ತೆ. ಆದ್ರೆ​ ಈಗ ಅವರ ಮಾತು ತಂದ ಕುತ್ತಿನಿಂದ ರಾಜಕೀಯದಲ್ಲಿ ಮತ್ತೊಂದು ಬಗೆಯ ಬೆಂಕಿ ಹೊತ್ತಿಕೊಳ್ಳುತ್ತಾ ಅನ್ನೋ ಪ್ರಶ್ನೆ ಹುಟ್ಟಾಕಿದೆ.

2010ರಲ್ಲಿ ಯಶವಂತಪುರ ವಾರ್ಡ್, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂಟ್ರಾಕ್ಟರ್ ಆಗಿ ವೃತ್ತಿಯನ್ನ ಶುರು ಮಾಡಿದ್ದ ಮುನಿರತ್ನ, 2 ವರ್ಷ ಪಾಲಿಕೆಯಲ್ಲಿ ರಾಜಕೀಯ ರೂಪುರೇಷೆಗಳನ್ನ ಗಮನಿಸಿದ್ರು. 2013ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ, ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಶಾಸಕ ಸ್ಥಾನ ಗಿಟ್ಟಿಸಿಕೊಂಡ್ರು. ಅಲ್ಲಿಂದ ಐದು ವರ್ಷ ಹಿಂತಿರುಗಿ ನೋಡಿದ್ದೇ ಇಲ್ಲ. ಮುನಿರತ್ನ ಅಂದ್ರೆ ಮಿನಿಮಮ್​​ ಗ್ಯಾರಂಟಿ ಮತಗಳು ಅನ್ನೋ ಲೆಕ್ಕದಲ್ಲಿ, ಪಕ್ಷದಲ್ಲಿ ಬಲವಾಗಿ ಬೇರೂರಿದ್ರು. ಮತ್ತೆ 2018ರ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ ಅಭ್ಯರ್ಥಿಯಾಗಿ 2ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗಲೂ, ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಅಭೂತಪೂರ್ವ ಜಯ ಸಿಕ್ಕಿತ್ತು. ಈ ಬಾರಿಯ ಗೆಲವು ಮುನಿರತ್ನ ಅವರ ರಾಜಕೀಯ ದಿಕ್ಕನ್ನೇ ಬದಲಾಯಿಸಿತ್ತು.

ಇದನ್ನೂ ಓದಿ: ಬಿಜೆಪಿ MLA ಮುನಿರತ್ನ ಅರೆಸ್ಟ್.. 2 ಕೇಸ್‌ನಲ್ಲಿ ಪೊಲೀಸರು ಹಾಕಿರೋ ಸೆಕ್ಷನ್​ಗಳು ಯಾವುವು?

ಕೆಲ ವರ್ಷಗಳ ಹಿಂದೆ ಕೈ ಪಾಳಯದಿಂದ ಕಮಲದ ಗೂಡಿಗೆ ಸೇರಿದ್ದ ಮುನಿರತ್ನ, ಎಷ್ಟೋ ಮಂದಿ ನಾಯಕರು ಘರ್​​ವಾಪ್ಸಿಯಾದ್ರೂ ತಾನೂ ಮಾತ್ರ ನಾನಂತೂ ಬಿಜೆಪಿ ಬಿಟ್ಟು ಹೋಗೋದಿಲ್ಲ. ಮತ್ತೆ ಕಾಂಗ್ರೆಸ್​​​ ಪಕ್ಷಕ್ಕೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಒಂದು ವೇಳೆ ಅಗತ್ಯ ಬಿದ್ರೆ ನಾನು ರಾಜಕೀಯದಿಂದ ನಿವೃತ್ತಿಯಾಗ್ತೇನೆ ಅಂತ ಖಡಕ್ಕಾಗಿ ಹೇಳ್ತಾನೆ ಇದ್ದಾರೆ. ಅದರಂತೆ ಪಕ್ಷದಲ್ಲೇ ಇದ್ದು ಇವತ್ತಿಗೂ ಶಾಸಕ ಪಟ್ಟದಲ್ಲಿದ್ದು ಮೆರೆದಿದ್ದಾರೆ. ಹಿಂದೆ ಇದೇ ಬಿಬಿಎಂಪಿಯಲ್ಲಿ ಗುತ್ತಿಗೆದಾರರಾಗಿದ್ದ ಮುನಿರತ್ನಗೆ ಅದೇ ಗುತ್ತಿಗೆದಾರನಿಂದ ಅರೆಸ್ಟ್ ಆಗುವಂತೆ ಮಾಡಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?

https://newsfirstlive.com/wp-content/uploads/2024/09/MUNIRATNA-ARREST.jpg

Load More