newsfirstkannada.com

ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?

Share :

Published September 26, 2024 at 8:15am

    ಪ್ರಧಾನಿ ಮೋದಿ ಭೇಟಿಯಾಗಿದ್ದ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ

    ಶತ್ರು ಮೇಲೆ ಕ್ರೂಸ್‌ ಕ್ಷಿಪಣಿ ದಾಳಿಗೆ ಉಕ್ರೇನ್‌ ಬಿಗ್ ಪ್ಲಾನ್​?

    ರಷ್ಯಾ ಬೆದರಿಕೆ ಕುರಿತು ವಿಶ್ವಸಂಸ್ಥೆಯಲ್ಲಿ ಎಚ್ಚರಿಸಿದ ಝೆಲೆನ್​ಸ್ಕಿ

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆ ಜಗತ್ತಿನಲ್ಲಿ ಮಹಾಯುದ್ಧದ ಭೀತಿ ಉಂಟುಮಾಡಿದೆ. ರಷ್ಯಾದ ಮೇಲೆ ಕ್ಷಿಪಣಿ ದಾಳಿಗೆ ಉಕ್ರೇನ್​ ತಯಾರಿ ನಡೆಸಿರುವ ವದಂತಿ ಹರಿದಾಡ್ತಿದೆ. ಇದರ ಬೆನ್ನಲ್ಲೇ ಉನ್ನತ ಅಧಿಕಾರಿಗಳ ಸಭೆ ಕರೆದಿರೋ ಪುಟಿನ್. ನ್ಯೂಕ್ಲಿಯರ್​ ದಾಳಿಗೆ ರಷ್ಯಾ ಮುಂದಾಗುವ ಸಾಧ್ಯತೆ ಇದ್ದು, ಇದು 3ನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡ್ತಿರುವಂತಿದೆ.

ತಣ್ಣಗಾಗಿದ್ದ ರಷ್ಯಾ-ಉಕ್ರೇನ್​ ಯುದ್ಧ ಮತ್ತೆ ಉಲ್ಬಣ ಆಗುತ್ತಾ?

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು ಮುಂದಿನ ಫೆಬ್ರವರಿ ತಿಂಗಳಿಗೆ ಅಂದ್ರೆ, 2025ರ ಫೆಬ್ರವರಿ ತಿಂಗಳಿಗೆ ಬರೋಬ್ಬರಿ 3 ವರ್ಷ ಕಂಪ್ಲೀಟ್ ಆಗಲಿದೆ. ರಷ್ಯಾ ವಿರುದ್ಧ ಯುದ್ಧದಲ್ಲಿ ನರಳಿ ಹೋಗಿರುವ ಉಕ್ರೇನ್ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಈ ಸಮಯದಲ್ಲಿ, ಜೀವ ಉಳಿಸಿಕೊಂಡರೆ ಸಾಕು ದೇವರೆ ಎಂಬಂತಾಗಿದೆ. ಇದರ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಮತ್ತೆ ಉಲ್ಬಣ ಆಗುತ್ತಾ ಅನ್ನೋ ಆತಂಕ ಮೂಡಿದೆ.

ಇದನ್ನೂ ಓದಿ: ತಿಮ್ಮಪ್ಪನ ಭಕ್ತರೊಂದಿಗೆ ಚೆಲ್ಲಾಟ; ತಿರುಪತಿ ಲಡ್ಡುಗಳಲ್ಲಿ ದನದ ಕೊಬ್ಬು ಪತ್ತೆಯಾಗಿದ್ದು ಹೇಗೆ?

ಉನ್ನತಾಧಿಕಾರಿಗಳ ತುರ್ತುಸಭೆ ಕರೆದ ಪುಟಿನ್‌

ರಷ್ಯಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಕ್ರೂಸ್‌ ಕ್ಷಿಪಣಿಗಳಿಂದ ದಾಳಿ ನಡೆಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಬೆಂಬಲ ನೀಡಿವೆ ಎಂಬ ವದಂತಿ ಹರಿದಾಡುತ್ತಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಈ ರೀತಿ ದಾಳಿ ಮಾಡಲು ಅಮೆರಿಕ & ನ್ಯಾಟೋ ಒಕ್ಕೂಟದ ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ. ಕಳೆದ ವಾರ ಯುಕೆ ತನ್ನ ʻಸ್ಟಾರ್ಮ್‌ ಶ್ಯಾಡೋʼ ಕ್ರೂಸ್‌ ಕ್ಷಿಪಣಿಯನ್ನು ರಷ್ಯಾ ಮೇಲೆ ಪ್ರಯೋಗಿಸುವ ಯೋಜನೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಅಲರ್ಟ್​ ಆದ ಪುಟಿನ್​ ಮಾಸ್ಕೋ ಭದ್ರತಾ ಮಂಡಳಿಯ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದು ಮಿಸೈಲ್‌ ದಾಳಿ ತಡೆಗಟ್ಟುವಿಕೆಯ ಬಗ್ಗೆ ಚರ್ಚಿಸಿದ್ದಾರೆ. ಪರಿಸ್ಥಿತಿ ಕೈ ಮೀರಿದ್ರೆ, ನ್ಯೂಕ್ಲಿಯರ್​ ಬಳಕೆ ಮಾಡ್ಬೇಕಾಗುತ್ತೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ವಾರ್ನ್​ ಮಾಡಿದ್ದಾರೆ.

ದಾಳಿಯಲ್ಲಿ ಭಾಗವಹಿಸುವಿಕೆ ಅಥವಾ ಅಣ್ವಸ್ತ್ರ ರಾಜ್ಯದ ಬೆಂಬಲದೊಂದಿಗೆ ರಷ್ಯಾದ ಒಕ್ಕೂಟದ ಮೇಲಿನ ಅವರ ಜಂಟಿ ದಾಳಿಗಳನ್ನ ಪ್ರಸ್ತಾಪಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ರಷ್ಯಾ ಪರಿವರ್ತನೆಯ ಷರತ್ತುಗಳನ್ನ ಸಹ ಸ್ಪಷ್ಟವಾಗಿ ಹೇಳಲಾಗಿದೆ. ಮತ್ತು ಅವರು ನಮ್ಮ ರಾಜ್ಯದ ಗಡಿಯನ್ನ ದಾಟುತ್ತಿದ್ದಾರೆ. ನನ್ನ ಪ್ರಕಾರ ಕಾರ್ಯತಂತ್ರ ಮತ್ತು ಯುದ್ಧತಂತ್ರದ ಏರ್‌ಕ್ರಾಫ್ಟ್‌ಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು, ಹೈಪರ್‌ಸಾನಿಕ್ ಮತ್ತು ಇತರ ವಿಮಾನಗಳು, ಶಸ್ತ್ರಾಸ್ತ್ರಗಳನ್ನು ಬಳಸುವ ಹಕ್ಕನ್ನ ನಾವು ಕಾಯ್ದಿರಿಸಿದ್ದೇವೆ.

ವ್ಲಾಡಿಮಿರ್ ಪುಟಿನ್, ರಷ್ಯಾದ ಅಧ್ಯಕ್ಷ

ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್​ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!

ರಷ್ಯಾ ನಡೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೈಕಾಲು ನಡುಕ!

ಪುಟಿನ್ ತನ್ನ ಆಡಳಿತದ ಅತ್ಯಂತ ಶಕ್ತಿಶಾಲಿ ಅಧಿಕಾರಿಗಳನ್ನ ಭೇಟಿಯಾಗಿ ಯುದ್ಧ ತಂತ್ರವನ್ನ ಚರ್ಚಿಸಿದ್ದಾರೆ. ಅದರಲ್ಲೂ ರಷ್ಯಾದ ಮಿಲಿಟರಿ ಉಗ್ರಾಣದಲ್ಲಿ ಬೆಚ್ಚಗೆ ಮಲಗಿರುವ ನ್ಯೂಕ್ಲಿಯರ್ ಬಾಂಬ್‌ಗಳು ಹೊರಗೆ ಬರುತ್ತವೆ ಎಂಬ ಸುದ್ದಿ ಹೊರಬಿದಿದ್ದೇ ತಡ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೈಕಾಲು ನಡುಗಿ ಹೋಗಿವೆ. ರಷ್ಯಾದ ನ್ಯೂಕ್ಲಿಯರ್​ ಬೆದರಿಕೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ಝೆಲೆನ್​ಸ್ಕಿ ಪ್ರಸ್ತಾಪ ಮಾಡಿದ್ದು, ಶಾಂತಿ ಸಭೆಯನ್ನು ಬೆಂಬಲಿಸುವಂತೆ ಉಕ್ರೇನ್​ ಅಧ್ಯಕ್ಷ, ವಿಶ್ವ ನಾಯಕರ ಬಳಿ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ, ಉಕ್ರೇನ್​ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ರು. ಮೊನ್ನೆ ವಿಶ್ವಸಂಸ್ಥೆಯಲ್ಲಿ ಭಾಷಣಕ್ಕೂ ಮೊದಲು ಝೆಲೆನ್​ಸ್ಕಿಯನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಸಂಧಾನ ಮಾತುಕತೆ ನಡುವೆ, ಮತ್ತೆ ಯುದ್ಧದ ಕಾರ್ಮೊಡ ಆವರಿಸತೊಡಗಿದೆ. ಒಂದ್ವೇಳೆ ರಷ್ಯಾ ಮೇಲೆ ಉಕ್ರೇನ್​ ಕ್ರೂಸ್​ ದಾಳಿ ನಡೆಸಿದ್ರೆ, ಈ ಜಗತ್ತು 3ನೇ ಮಹಾಯುದ್ಧಕ್ಕೂ ಸಾಕ್ಷಿಯಾದ್ರೂ ಅಚ್ಚರಿ ಇಲ್ಲ. ಸಂಧಾನಕ್ಕೆ ನಾವು ಸಿದ್ಧ ಅಂತಾ ಉಕ್ರೇನ್ ಹೇಳಿದೆ. ಇದಕ್ಕೆ ರಷ್ಯಾ ಏನ್​ ಹೇಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?

https://newsfirstlive.com/wp-content/uploads/2024/09/russia_ukraine_1.jpg

Load More