newsfirstkannada.com

×

ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ

Share :

Published October 29, 2024 at 12:25pm

Update October 29, 2024 at 12:26pm

    ಹಿಂದೂ ಯುವಕ ಎಂದು ಸುಳ್ಳು ಹೇಳಿ ಪ್ರೀತಿ ಮಾಡಿದ್ದ ಕಿರಾತಕ

    ಮದುವೆಯಾಗಿ ಪತ್ನಿ ಗರ್ಭಿಣಿ ಆದ ಮೇಲೆ ಕುಟ್ಟಿ ಸೈತಾನ್ ಪೂಜೆ

    ಹೆಂಡತಿಯನ್ನ ತನ್ನ ಧರ್ಮಕ್ಕೆ ಮತಾಂತರ ಮಾಡಿದ್ದ ಕಿರಾತಕ ಗಂಡ

ಬೆಂಗಳೂರು: ಕುಟ್ಟಿ ಸೈತಾನ್ ಪೂಜೆಗೆ ನಮ್ಮ ಮಗನನ್ನ ಬಲಿ ಕೊಟ್ರೆ ನಿಧಿ ಸಿಗುತ್ತೆ, ಇದರಿಂದ ಕುಟುಂಬದ ಸಮೃದ್ಧಿಯಾಗುತ್ತೆ ಎಂದು ಕಿರುಕುಳ ನೀಡುತ್ತಿದ್ದ ಗಂಡನ ವಿರುದ್ಧ ಹೆಂಡತಿ ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ.

ಕೆ.ಆರ್.ಪುರಂ ನಿವಾಸಿ ಸದ್ದಾಂ ವಿರುದ್ಧ ಹೆಂಡತಿಯಿಂದ ದೂರು ದಾಖಲು ಮಾಡಲಾಗಿದೆ. ಈ ಇಬ್ಬರು 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪ್ರೀತಿ ಮಾಡುವಾಗ ನಾನು ಹಿಂದೂ ಯುವಕ, ನನ್ನ ಹೆಸರು ಆದಿಈಶ್ವರ್ ಎಂದು ಸುಳ್ಳು ಹೇಳಿದ್ದ ಸದ್ದಾಂ, ಹಿಂದೂ ಯುವತಿಯನ್ನ ಮದುವೆಯಾಗಿದ್ದನು. ವಿವಾಹವಾಗಿ ಪತ್ನಿ ಗರ್ಭಿಣಿಯಾದ ನಂತರ ನಾನು ಹಿಂದೂ ಅಲ್ಲ, ಇಸ್ಲಾಂ ಧರ್ಮಕ್ಕೆ ಸೇರಿದವನು. ನನ್ನ ಹೆಸರು ಸದ್ದಾಂ ಎಂದು ನಿಜ ಹೇಳಿದ್ದನು.

ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

ಇದೆಲ್ಲ ಆದ ಮೇಲೆ ಪತ್ನಿಗೆ ಕಿರುಕುಳ ನೀಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯ ಹೆಸರನ್ನು ಬದಲಾವಣೆ ಮಾಡಿದ್ದನು. ಪ್ರೀತಿಸಿ ಮದುವೆಯಾಗಿದ್ದರಿಂದ ಧರ್ಮ ಯಾವುದಾದರೇನು ಎಂದು ಕೂಡಿ ಬಾಳಿದರೆ ಸಾಕು ಎಂದು ಪತ್ನಿ ಸುಮ್ಮನಿದ್ದಳು. ಆದರೆ ದಿನದಿಂದ ದಿನಕ್ಕೆ ಸದ್ದಾಂನ ವರ್ತನೆ ಬದಲಾವಣೆ ಆಗುತ್ತಾ ಬರುತ್ತಿತ್ತು. ಯಾವಾಗ ಗಂಡು ಮಗು ಜನಿಸಿತೋ ಅವಾಗ ಕುಟ್ಟಿ ಸೈತಾನ್ ಪೂಜೆ ಮಾಡಿಸಬೇಕು ಎಂದು ಹೇಳುತ್ತಿದ್ದನು.

ಈ ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನ ಬಲಿ ಕೊಡಬೇಕು. ಇದನ್ನು ಮಾಡಿದರೆ ನಿಧಿ ಸಿಗುತ್ತದೆ. ಜೊತೆಗೆ ಕುಟುಂಬದ ಸಮೃದ್ಧಿಯಾಗಿ ಬೆಳೆಯುತ್ತದೆ ಎಂದು ಹೇಳಿ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದನು. ತಡರಾತ್ರಿ ಎದ್ದು ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆಯನ್ನ ಸದ್ದಾಂ ಅಭ್ಯಾಸ ಮಾಡುತ್ತಿದ್ದ. ಗಂಡನ ಕ್ರೂರತ್ವ ಸಹಿಸಿ, ಅವನ ವರ್ತನೆ ಕಂಡು ಮನೆಯಿಂದ ತಪ್ಪಿಸಿಕೊಂಡು ಹೋಗಿ ತುಮಕೂರಿನಲ್ಲಿರುವ ತವರು ಮನೆಯನ್ನ ಮಹಿಳೆ ಸೇರಿದ್ದಳು.

ಇದನ್ನೂ ಓದಿ: Sabarimala; ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

ಹೆಂಡತಿ ತವರು ಮನೆಗೂ ಬಂದ ಗಂಡ ಬಲಿ ಕೊಡಬೇಕು ಮಗುವನ್ನ ಕೊಡು ಎಂದು ಟಾರ್ಚರ್ ನೀಡಲು ಮತ್ತೆ ಪ್ರಾರಂಭಿಸಿದ. ಈ ವೇಳೆ ಅತ್ತೆ ನಡುವೆ ನಡುವೆ ಜಗಳ ಬಿಡಿಸಲು ಬಂದಾಗ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಸಂಬಂಧ ಕೆ.ಆರ್.ಪುರಂ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ನೊಂದ ಮಹಿಳೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ

https://newsfirstlive.com/wp-content/uploads/2024/10/BNG_SAITAN_POOJE.jpg

Load More