newsfirstkannada.com

ಚನ್ನಗಿರಿ ಪೊಲೀಸ್ ಠಾಣೆಗೆ ಬಂದ 6 ನಿಮಿಷದಲ್ಲಿ ಆರೋಪಿ ಸಾವು; ನಡೆದಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ

Share :

Published May 25, 2024 at 7:59pm

Update May 25, 2024 at 8:34pm

  ನೋಡ ನೋಡುತ್ತಿದ್ದಂತೆ ಸ್ಟೇಷನ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಧ್ವಂಸ

  ಮಟ್ಕಾ ಬರೆಯುತ್ತಿದ್ದ ಎಂಬ ಆರೋಪದಲ್ಲಿ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದ ಪೊಲೀಸರು

  ನಮ್ಮ ಮಗನ ಸಾವಿಗೆ ಪೊಲೀಸ್​ ಅಧಿಕಾರಿಗಳೇ ಕಾರಣ ಅಂತ ಕುಟುಂಬಸ್ಥರ ಆರೋಪ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮಟ್ಕಾ ಬರೆಯುತ್ತಿದ್ದ ಎಂಬ ಆರೋಪದಲ್ಲಿ ಆರೋಪಿಯೊಬ್ಬನ್ನ ಸ್ಟೇಷನ್​ಗೆ​ ಕರೆದುಕೊಂಡು ಬಂದ ನಂತರ ಆತ ಮೃತಪಟ್ಟಿದ್ದಾನೆ. ಹಾಗಾಗಿ, ಇದು ಲಾಕಪ್ ಡೆತ್, ಪೊಲೀಸ್​ ಅಧಿಕಾರಿಗಳೇ ದೌರ್ಜನ್ಯ ಮಾಡಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಚನ್ನಗಿರಿ ಪೊಲೀಸರ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಲಾಕಪ್​ನಲ್ಲಿ ಮೃತಪಟ್ಟ ವ್ಯಕ್ತಿ ಹೆಸರು ಆದಿಲ್. 36 ವರ್ಷದ ಆದಿಲ್ ಚನ್ನಗಿರಿಯಲ್ಲೇ ವಾಸವಿದ್ದ. ಮಟ್ಕಾ ವ್ಯಾಪಾರ ಮಾಡುತ್ತಿದ್ದ ಎಂಬ ಆರೋಪದಡಿ ಮೇ 24ರ ಸಂಜೆ ಪೊಲೀಸರು ಆತನನ್ನ ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಬಂದಿದ್ದಾರೆ. ಸ್ಟೇಷನ್​ಗೆ ಬಂದು 6-7 ನಿಮಿಷದಲ್ಲಿ ಆದಿಲ್​ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಾದೃಷ್ಟವಶಾತ್ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲೇ ಆದಿಲ್ ಮೃತಪಟ್ಟಿದ್ದ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಯಾವಾಗ ಆದಿಲ್ ಸಾವನ್ನಪ್ಪಿದ ಅಂತ ಗೊತ್ತಾಯ್ತೋ ಆಗ ಕುಟುಂಬಸ್ಥರು ಆಸ್ಪತ್ರೆ ಬಳಿ ಓಡೋಡಿ ಬಂದಿದ್ದಾರೆ. ಆದಿಲ್​ಗೆ ಏನಾಯ್ತು? ಪೊಲೀಸರು ಯಾಕೆ ಕರೆದುಕೊಂಡು ಬಂದಿದ್ದರೂ ಅನ್ನೋದು ಸಹ ಗೊತ್ತಿರಲಿಲ್ಲವಂತೆ. ಪೊಲೀಸರನ್ನ ಕೇಳಿದ್ರೆ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾನೆ ಅಂತ ಹೇಳಿದ್ದಾರೆ. ಆದರೆ ಕುಟುಂಬಸ್ಥರು ಪೊಲೀಸರ ಸಮರ್ಥನೆಯನ್ನ ಒಪ್ಪಲಿಲ್ಲ. ಯಾಕಂದ್ರೆ ಆದಿಲ್​ ತುಂಬಾ ಆರೋಗ್ಯವಾಗಿದ್ದ ಅನ್ನೋದು ಕುಟುಂಬಸ್ಥರ ವಾದವಾಗಿತ್ತು. ಆದಿಲ್ ಬೆನ್ನ ಮೇಲೆ ಗಾಯವಾಗಿದೆ. ಪೊಲೀಸರೇ ನಮ್ಮ ಮಗನನ್ನ ಹೊಡೆದು ಸಾಯಿಸಿದ್ದಾರೆ ಎಂದು ಚಿಕ್ಕಪ್ಪ ಮೆಹಬ್ ಆಲಿ ಆರೋಪಿಸಿದ್ದಾರೆ. ಅಷ್ಟೊತ್ತಿಗೆ ಸ್ಟೇಷನ್​ ಬಳಿ ಪರಿಸ್ಥಿತಿ ಗಂಭೀರವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಆದಿಲ್​ನ ಲಾಕಪ್ ಡೆತ್ ಮಾಡಿದ್ರು ಅನ್ನೋ ಆಕ್ರೋಶದಿಂದ ಧಗಧಗ ಅಂತ ಕುದಿಯುತ್ತಿದ್ದರು. ನೋಡು ನೋಡುತ್ತಿದ್ದಂತೆ ಸ್ಟೇಷನ್ ಬಳಿ ಬೆಂಕಿ ಹೊತ್ತಿಕೊಂಡಿತ್ತು. ಆ ಕಡೆ ಸ್ಟೇಷನ್ ಒಳಗೆ ಆದಿಲ್ ತಂದೆ-ತಾಯಿ, ಸಂಬಂಧಿಕರಿಗೆ ಪೊಲೀಸರು ಘಟನೆ ಬಗ್ಗೆ ವಿವರಣೆ ಕೊಡ್ತಿದ್ರೆ, ಈ ಕಡೆ ಉದ್ರಿಕ್ತರು ಠಾಣೆ ಮೇಲೆ ದಾಳಿ ಮಾಡಿಯೇ ಬಿಟ್ಟರು.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಸ್ಟೇಷನ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಗಳನ್ನ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದರು. ಕುರ್ಚಿ, ಟೇಬಲ್​ಗಳನ್ನ ಎತ್ತು ಬಿಸಾಡಿ ಅಟ್ಟಹಾಸ ಮರೆದರು. ತಡೆಯೋಕೆ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ದೌರ್ಜನ್ಯ ಮಾಡಿದ್ದಾರೆ. ಮತ್ತೊಂದು ಕಡೆ ಪ್ರತಿಭಟನೆಕಾರರ ಆಕ್ರೋಶವನ್ನ ತಡೆಯೋಕೆ ಪೊಲೀಸರು ಹರ ಸಾಹಸ ಪಟ್ಟಿದ್ದಾರೆ. ಸ್ಟೇಷನ್​ನಲ್ಲಿದ್ದ ಸಿಬ್ಬಂದಿಯಿಂದ ಈ ಉದ್ರಿಕ್ತರನ್ನ ನಿಯಂತ್ರಿಸೋದು ತೀರಾ ಕಷ್ಟವಾಗಿದೆ. ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಕೂಡಲೇ ಅಶ್ರುವಾಯು ಸಿಡಿಸಿ, ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನ ಓಡಿಸುವ ಪಯತ್ನ ಮಡಲಾಗಿದೆ. ಆದರೆ ಅಷ್ಟೊತ್ತಿಗೆ ಈ ಗಲಾಟೆಯಲ್ಲಿ 7 ವಾಹನಗಳು ಜಖಂಗೊಂಡಿದ್ದು, ಸುಮಾರು 11 ಜನ ಪೊಲೀಸರಿಗೆ ಗಾಯಗಳಾಗಿದ್ದವು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದಾವಣಗೆರೆ ಚನ್ನಗಿರಿ ಪೊಲೀಸ್​ ಸ್ಟೇಷನ್​ನಲ್ಲಿ ನಡೆದ ಅನುಮಾನಸ್ಪಾದ ಸಾವಿನ ಪ್ರಕರಣ ಸೆನ್ಸೇಷನ್ ಆಗಿತ್ತು. ಲಾಕಪ್ ಡೆತ್ ಆಗಿದೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಆ ಕಡೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡೋಕೆ ಶುರು ಮಾಡಿದ್ರು.

ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುವ ವಾತವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಯಾಕಂದ್ರೆ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳಲ್ಲ ಆ ರೀತಿ ಬಳಕೆ ಮಾಡಿಕೊಂಡಿದ್ದಾರೆ ಸರ್ಕಾರದವರು. ಅದರಿಂದ ರಾಜ್ಯದಲ್ಲಿ ಕಾನೂನು ಸಂಪೂರ್ಣ ಕುಸಿತವಾಗಿದೆ. ಇದು ಸರ್ಕಾರದ ಸ್ವಯಂ ಜವಾಬ್ದಾರಿ, ಅವರೇ ಮಾಡಿಕೊಂಡ ಕೆಲಸ ಇದು. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಅಂತ ಹೇಳಿದ್ದಾರೆ.

ಈ ಕಡೆ ರಾಜಕೀಯವಾಗಿ ಪ್ರಕರಣದ ಬಗ್ಗೆ ಚರ್ಚೆ ಆಗ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದರು. ಅದು ಲಾಕಪ್ ಡೆತ್ ಅಲ್ಲ. ಅವನಿಗೆ ಮೂರ್ಛೆ ರೋಗ ಇತ್ತು. ಆ ರೋಗಿದಿಂದ ಆತ ಮೃತ ಪಟ್ಟಿದ್ದಾನೆ. ಆದರೆ ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತ್ತಿಗ ಆದೇಶ ಮಾಡಿದ್ದೇನೆ. ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್ ಪಿ‌ಗಳ ಅಮಾನತ್ತು ಮಾಡಲಾಗಿದೆ. ಆದರೆ ಈ ಇದು ಲಾಕಪ್ ಡೆತ್ ಅಲ್ಲ ಎಂಬುದನ್ನ ಸ್ಪಷ್ಟ ಪಡಿಸುತ್ತೇನೆ.

ಇನ್ನು, ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ದೂರು ಇದ್ದ ಕಾರಣ ಅವರನ್ನು ಪೋಲಿಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕರೆದುಕೊಂಡು ಬಂದ ಬಳಿಕ ಏಳು ನಿಮಿಷದೊಳಗೆ ತೀರಿಕೊಂಡಿದ್ದಾರೆ. ಅದಕ್ಕೆ ಪೊಲೀಸ್ ನವರೇ ಸಾಯಿಸಿದ್ದಾರೆ ಅನ್ನೋ ರೀತಿಯಲ್ಲಿ ಹೇಳಿದ್ದಾರೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತೆ ಅಂತ ಹೇಳಿದ್ರು.

ಮೂರ್ಛೆ ರೋಗದಿಂದ ಆದಿಲ್ ಸಾವನ್ನಪ್ಪಿದ್ದಾನೆ ಎಂದು ಸಿಎಂ ಹೇಳಿದ್ರೆ, ಆ ಕಡೆ ಮೃತ ಆದಿಲ್ ತಂದೆ ಖಲೀಮುಲ್ಲಾ ಸಿಎಂ ಹೇಳಿಕೆಯನ್ನ ಖಂಡಿಸಿದ್ದಾರೆ. ನನ್ನ ಮಗನಿಗೆ ಮೂರ್ಛೆ ರೋಗ ಇರಲಿಲ್ಲ, ಅವನು ಆರೋಗ್ಯವಾಗಿದ್ದ ಎಂದಿದ್ದಾರೆ. ಆದರೆ ಆದಿಲ್ ಸಾವಿನ ಬಗ್ಗೆ ಮಾತಾಡಿರುವ ಖಲೀಮುಲ್ಲಾ, ನನ್ನ ಮಗ ಬಿಪಿ ಲೋ ಆಗಿ ಸಾವನ್ನಪ್ಪಿದ್ದಾನೆ, ಪೊಲೀಸರ ಮೇಲೆ ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಹೇಳಿ ಲಾಕಪ್ ಡೆತ್ ಎಂಬ ಆರೋಪವನ್ನ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: BREAKING: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕರ್ನಾಟಕ ಮೂಲದ ಮೂವರು ದಾರುಣ ಸಾವು

ಈ ನಡುವೆ ಆದಿಲ್​ ಪೋಸ್ಟ್​ ಮಾರ್ಟಮ್ ಮುಗಿದು ಮೃತದೇಹವನ್ನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಶಿವಮೊಗ್ಗ ರಸ್ತೆಯ ಕೈಮರ ಸರ್ಕಲ್ ಬಳಿ ಇರುವ ಖಬ್ರಸ್ಥಾನದಲ್ಲಿ ಆದಿಲ್ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಚನ್ನಗಿರಿ ಪಟ್ಟಣದಲ್ಲಿ ಶಿವಮೊಗ್ಗ ಹಾಗೂ ದಾವಣಗೆರೆ ಪೊಲೀಸರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಈ ನಡುವೆ ಕುಟುಂಬಸ್ಥರು ಅನುಮಾನಸ್ಪಾದ ಸಾವು ಎಂದು ದೂರು ನೀಡಿರುವ ಹಿನ್ನೆಲೆ ನ್ಯಾಯಾಂಗ ತನಿಖೆ ಮಾಡುವುದಾಗಿ ಎಸ್​ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಇದೆಲ್ಲದರ ನಡುವೆ ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನ ಮೂಡ್ತಿದೆ. ಯಾಕಂದ್ರೆ ಬೆಳಗ್ಗೆ ನನ್ನ ಮಗ ಲೋ ಬಿಪಿಯಿಂದ ಸತ್ತಿದ್ದಾನೆ ಅಂದಿದ್ದ ಆದಿಲ್ ತಂದೆ ಸಂಜೆ ವೇಳೆ ಯೂಟರ್ನ್ ಹಿಡೆದಿದ್ದಾರೆ. ಗಾಬರಿಯಲ್ಲಿ ಏನೋ ಹೇಳ್ಬಿಟ್ಟೆ. ನನ್ನ ಮಗನ ಬಗ್ಗೆ ಅನುಮಾನ ಇದೆ ಎಂದಿದ್ದಾರೆ. ಇನ್ನು ಆ ಕಡೆ ಆದಿಲ್​ ಮೇಲೆ ಯಾವುದೇ ಕ್ರಿಮಿನಲ್ ಕೇಸ್​ ಅಂತಾನೂ ಹೇಳಲಾಗ್ತಿದೆ! ಸದ್ಯದ ಕೇಸ್​ನಲ್ಲೂ ಎಫ್​ಐಆರ್ ದಾಖಲಾಗಿರಲಿಲ್ಲವಂತೆ. ಹಾಗಾದ್ರೆ ಆದಿಲ್​ನ ಪೊಲೀಸರು ಕರೆದುಕೊಂಡು ಬಂದಿದ್ದೇಕೆ? ಆದಿಲ್​ಗೆ ಮೂರ್ಛೆ ರೋಗ ಇರಲಿಲ್ಲ ಅಂತ ಕುಟುಂಬಸ್ಥರು ಹೇಳ್ತಿದ್ದಾರೆ. ಹಾಗಾದ್ರೆ ಸ್ಟೇಷನ್​​ಗೆ ಕರೆದುಕೊಂಡು ಬಂದ ಆರೇಳು ನಿಮಿಷದಲ್ಲಿ ಆದಿಲ್ ಕುಸಿದು ಬಿದ್ದಿದ್ದೇಕೆ? ಇದೆಲ್ಲ ಗೊತ್ತಾಗಬೇಕಾದ್ರೆ ಪೋಸ್ಟ್​ ಮಾರ್ಟಮ್ ರಿಪೋರ್ಟ್​ ಬರಬೇಕು. ಅದರ ಜೊತೆಗೆ ಸರಿಯಾದ ತನಿಖೆ ಆಗಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚನ್ನಗಿರಿ ಪೊಲೀಸ್ ಠಾಣೆಗೆ ಬಂದ 6 ನಿಮಿಷದಲ್ಲಿ ಆರೋಪಿ ಸಾವು; ನಡೆದಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/05/dwd1.jpg

Load More