ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ.. ಭಾರೀ ಷರತ್ತು ವಿಧಿಸಿದ ಶ್ರೀಮಂತ ಕ್ರಿಕೆಟ್ ಮಂಡಳಿ

author-image
Ganesh
Updated On
ಅಂದು ಕೋಚ್​ ಹುದ್ದೆಗೆ ಅನ್​ಫಿಟ್ ಅಂದ್ರು​​​.. ಟೀಕೆ ಟಿಪ್ಪಣಿಗಳ ಮೆಟ್ಟಿ ನಿಂತ ‘ದ್ರೋಣಾಚಾರ್ಯ’ನ ರೋಚಕ ಕಥೆ..!
Advertisment
  • ರಾಹುಲ್ ದ್ರಾವಿಡ್ ಅಧಿಕಾರವಧಿ ಅಂತ್ಯ ಹಿನ್ನೆಲೆ, ಅರ್ಜಿ ಆಹ್ವಾನ
  • ರಾಹುಲ್ ದ್ರಾವಿಡ್ ಕೂಡ ಮತ್ತೆ ಅರ್ಜಿ ಸಲ್ಲಿಸಬಹುದು ಎಂದ ಶಾ
  • ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಇಂಟ್ರೆಸ್ಟಿಂಗ್ ಆಗಿದೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕೋಚ್​​ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಟೀಂ ಇಂಡಿಯಾದ ಹೆಡ್​ ಕೋಚ್ ಆಗಿರುವ ರಾಹುಲ್ ದ್ರಾವಿಡ್​​ ಅಧಿಕಾರಾವಧಿ ಜೂನ್​ನಲ್ಲಿ ಕೊನೆಗೊಳ್ಳಲಿದೆ. ಟಿ-20 ವಿಶ್ವಕಪ್ ಮುಗಿದ ನಂತರ ಟೀಂ ಇಂಡಿಯಾಗೆ ಹೊಸ ಕೋಚ್ ಪಡೆಯಲಿದೆ.

ನಿನ್ನೆ ಬಿಸಿಸಿಐ ಸೋಮವಾರ ಮುಖ್ಯ ಕೋಚ್​ಗೆ ಅರ್ಜಿಯನ್ನು ಆಹ್ವಾನಿಸಿದೆ. ಮೇ 27ರ ಸೋಮವಾರ ಸಂಜೆ 6 ಗಂಟೆಯೊಳಗೆ ಆಕಾಂಕ್ಷಿತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಕೋಚ್‌ಗಳ ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಪರಿಶೀಲನೆಯ ಮೂಲಕ ನಡೆಯುತ್ತದೆ. ನಂತರ ವೈಯಕ್ತಿಕ ಸಂದರ್ಶನ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಲಾಗುತ್ತದೆ.

ಇದನ್ನೂ ಓದಿ:ಹೀಗಾದರೆ.. ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಗಳು ಪ್ಲೇ ಆಫ್​ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!​

publive-image

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು?

  • ಕನಿಷ್ಠ 30 ಟೆಸ್ಟ್ ಅಥವಾ 50 ODI ಪಂದ್ಯಗಳನ್ನು ಆಡಿದ ಅನುಭವ ಇರಬೇಕು
  • ಟೆಸ್ಟ್ ಪಂದ್ಯವನ್ನಾಡುವ ಯಾವುದಾದರೂ ಒಂದು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿರಬೇಕು
  • ಕನಿಷ್ಠ 3 ವರ್ಷಗಳ ಕಾಲ ಐಪಿಎಲ್ ಅಥವಾ ಅದಕ್ಕೆ ಸಮಾನವಾದ ಇಂಟರ್ನ್ಯಾಷನಲ್ ಲೀಗ್ ಅಥವಾ ಪ್ರಥಮ ದರ್ಜೆ ತಂಡ ಅಥವಾ ರಾಷ್ಟ್ರೀಯ ಎ ತಂಡದ ಸಹಾಯಕ ಸದಸ್ಯ ಅಥವಾ ಮುಖ್ಯ ಕೋಚ್ ಆಗಿ ಕೆಲಸ ಮಾಡಿರಬೇಕು
  • 60 ವರ್ಷಕ್ಕಿಂತ ಕಡಿಮೆಯಿರಬೇಕು.

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

publive-image

ಹೊಸ ಕೋಚ್‌ನ ಅಧಿಕಾರಾವಧಿ ಎಷ್ಟು?
ಟೀಮ್ ಇಂಡಿಯಾದ ಮುಖ್ಯ ಕೋಚ್‌ನ ಅಧಿಕಾರಾವಧಿಯು ಜುಲೈ 1, 2024 ರಿಂದ ಪ್ರಾರಂಭವಾಗುತ್ತದೆ. ಅದರ ಅಧಿಕಾರದ ಅವಧಿ ಡಿಸೆಂಬರ್ 31, 2027 ರವರೆಗೆ ಇರುತ್ತದೆ. ಹೊಸ ಮುಖ್ಯ ಕೋಚ್‌ನ ಅವಧಿಯಲ್ಲಿ, ಟೀಮ್ ಇಂಡಿಯಾ ಒಟ್ಟು 5 ಐಸಿಸಿ ಟ್ರೋಫಿಗಳನ್ನು ಆಡಲಿದೆ. ಇದರಲ್ಲಿ ಚಾಂಪಿಯನ್ಸ್ ಟ್ರೋಫಿ, ಟಿ 20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಡೆಯಲಿವೆ.

ಇದನ್ನೂ ಓದಿ:LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

ದ್ರಾವಿಡ್ ಮುಖ್ಯ ಕೋಚ್ ಆಗಿದ್ದು ಯಾವಾಗ?
ದ್ರಾವಿಡ್ 2021 ನವೆಂಬರ್​ನಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೇಗೇರಿದ್ದರು. 2023ರಲ್ಲಿ ನಡೆದ ODI ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಂಡಿತ್ತು. BCCI ಕೆಲವು ದಿನಗಳವರೆಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತ್ತು. ರಾಹುಲ್ ದ್ರಾವಿಡ್ ಜೊತೆಗೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಯ ಇತರೆ ಸದಸ್ಯರ ಅಧಿಕಾರಾವಧಿಯನ್ನು ವಿಸ್ತರಿಸಲಾಯಿತು. ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಸ್ಥಾನಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment