/newsfirstlive-kannada/media/post_attachments/wp-content/uploads/2025/03/tanisha.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳನ್ನು ವೀಕ್ಷಕರು ಇನ್ನೂ ಮರೆತ್ತಿಲ್ಲ. ಸೀಸನ್ ಮುಗಿದು ಹೋದರು ಸ್ಪರ್ಧಿಗಳು ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್ಫಾಲೋ ವಿಚಾರಕ್ಕೂ ಉತ್ತರ..!
ಅದರಲ್ಲೂ ಬಿಗ್ಬಾಸ್ನಿಂದಲೇ ಬೆಂಕಿ ಅಂತ ಫೇಮಸ್ ಆಗಿದ್ದ ತನಿಷಾ ಕುಪ್ಪಂಡ ಅಭಿಮಾನಿಗಳ ಜೊತೆಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ ತನಿಷಾ ಕುಪ್ಪಂಡ.
ಸದ್ಯ ನಟಿ ತನಿಷಾ ಕುಪ್ಪಂಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ನಿನ್ನೆ ತನಿಷಾ ಅವರ ತಾಯಿ ಲೀಲಾ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಇದೆ ಖುಷಿಯಲ್ಲಿದ್ದ ನಟಿ ತನಿಷಾ ಅಮ್ಮನ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.
View this post on Instagram
ಅಮ್ಮನ ಹುಟ್ಟು ಹಬ್ಬಕ್ಕಾಗಿಯೇ ತನಿಷಾ ಕುಪ್ಪಂಡ ಪಾರ್ಟಿಯೊಂದನ್ನು ಹಮ್ಮಿಕೊಂಡಿದ್ದರು. ಇದೇ ಪಾರ್ಟಿಯಲ್ಲಿ ತನಿಷಾ ಅವರು ಅಮ್ಮ ಲೀಲಾ ಜೊತೆಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ