UPSC ಕ್ಲಿಯರ್ ಮಾಡಿ ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕು ಅನ್ನೋದು ಎಷ್ಟೋ ಯುವ ಜನರ ಕನಸು. ಕೆಲವೊಮ್ಮೆ UPSC ಪರೀಕ್ಷೆಯಲ್ಲಿ ಪಾಸಾದ್ರೂ ಸಂದರ್ಶನದ ಹಂತದಲ್ಲಿ ಫೇಲ್ ಆಗ್ತಾರೆ. ಇಂತಹ ಅಭ್ಯರ್ಥಿಗಳಿಗೆ ಉದ್ಯೋಗ ವೇದಿಕೆ ಕಲ್ಪಿಸಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 'ಪ್ರತಿಭಾ ಸೇತು' ಅನ್ನೋ ಆ್ಯಪ್ ಶುರು ಮಾಡಿದೆ. ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಪಾಸಾಗಿ ಸಂದರ್ಶನ ಫೇಲ್ ಆದೋರಿಗೆ ಉತ್ತಮ ಉದ್ಯೋಗ ಕೊಡಿಸೋದು ಇದರ ಮುಖ್ಯ ಉದ್ದೇಶ.
ಏನಿದು ಪ್ರತಿಭಾ ಸೇತು?
ಹಲವು ವರ್ಷಗಳ ಹಿಂದೆ UPSC, ಸಾರ್ವಜನಿಕ ಬಹಿರಂಗ ಯೋಜನೆ ಅನ್ನೋ ಸ್ಕೀಮ್ ಶುರು ಮಾಡಿತ್ತು. ಈಗ ಇದನ್ನೇ ರಿವೈಸ್ ಮಾಡಿರೋ UPSC 'ಪ್ರತಿಭಾ ಸೇತು' ಎಂದು ಹೆಸರಿಟ್ಟಿದೆ. ವೃತ್ತಿಪರ ಸಂಪನ್ಮೂಲ ಮತ್ತು ಪ್ರತಿಭಾ ಏಕೀಕರಣ, ನೇಮಕಾತಿ ಆಕಾಂಕ್ಷಿಗಳಿಗೆ ಸೇತುವೆ ಅನ್ನೋದು ಇದರ ಪೂರ್ಣ ಹೆಸರು.
ಇದನ್ನೂ ಓದಿ:ಪ್ರಸಾರಭಾರತಿಯಿಂದ ಸದ್ಯದಲ್ಲೇ ದೇಶಾದ್ಯಂತ 30 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
UPSC ಈ ಆ್ಯಪ್ನಲ್ಲಿ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ಲೋಡ್ ಮಾಡುತ್ತೆ. ಇಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪ್ರತಿಭೆಗೆ ತಕ್ಕ ಕೆಲಸ ಕೊಡಿಸೋದು UPSCಯ ಮೇನ್ ಇಂಟೆನ್ಶನ್. ಪ್ರತಿಭಾ ಸೇತು ಆ್ಯಪ್ನಿಂದ ನಾನಾ ರೀತಿಯ ಅನುಕೂಲಗಳೂ ಇವೆ. ಇದು ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಗೆ ಉನ್ನತ ಪ್ರತಿಭೆಗಳೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತೆ.
ಹೇಗೆ ಕೆಲಸ ಮಾಡುತ್ತೆ..?
ಅರ್ಹ UPSC ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತೆ. ESE, CDS ಇತ್ಯಾದಿಗಳಂತಹ UPSC ಪರೀಕ್ಷೆಗಳ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾದ 10,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಆತಿಥ್ಯ ವಹಿಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯದದಲ್ಲಿ ಅಭ್ಯರ್ಥಿಗಳಿಗೆ ಸೂಕ್ತ, ಉನ್ನತ ಹುದ್ದೆಗಳನ್ನು ಕೊಡಿಸುತ್ತದೆ.
ಈಗಾಗಲೇ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಮಾಹಿತಿಯನ್ನು ಪ್ರತಿಭಾ ಸೇತು ಆ್ಯಪ್ಗೆ ಅಪ್ಲೋಡ್ ಮಾಡಲಾಗಿದೆ. ಇವ್ರ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಸಂಪರ್ಕ ವಿವರಗಳನ್ನೂ ದಾಖಲಿಸಲಾಗಿದೆ. ಇಲ್ಲಿ ಖಾಸಗಿ ಕಂಪನಿಗಳು UPSC ಪಾಸಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್..!
ನಾಗರಿಕ ಸೇವಾ ಪರೀಕ್ಷೆ, ಭಾರತೀಯ ಅರಣ್ಯ ಸೇವಾ ಪರೀಕ್ಷೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ, ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ, ಭೂ-ವಿಜ್ಞಾನ, ಭಾರತೀಯ ಆರ್ಥಿಕ ಸೇವೆ ಸೇರಿ ಹಲವು ಪರೀಕ್ಷೆಗಳಲ್ಲಿ ಪಾಸಾದವರಿಗೆ ಅದ್ಭುತ ಅವಕಾಶಗಳು ಸಿಗಲಿವೆ.
ಇದು ಆಕಾಂಕ್ಷಿಗಳಿಗೆ ಸಿಗೋ ಲಾಭವಾದ್ರೆ, ಉದ್ಯೋಗದಾತರಿಗೂ ಇದರಿಂದ ಸಾಕಷ್ಟು ಅನುಕೂಲ ಇದೆ. ಸರ್ಕಾರಿ ಸಂಸ್ಥೆಗಳು, ಪಿಎಸ್‌ಯುಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಯುಪಿಎಸ್‌ಸಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ:SSLC ಒಂದೇ ಅಲ್ಲ, ಪಿಯುಸಿ ಪಾಸಿಂಗ್ ಮಾರ್ಕ್ಸ್ ಕೂಡ ಇಳಿಕೆ..!
ನೋಂದಾಯಿತ ಸಂಸ್ಥೆಗಳಿಗೆ ಲಾಗಿನ್ ಐಡಿಗಳನ್ನು ನೀಡಲಾಗುತ್ತದೆ. ಖಾಸಗಿ ಕಂಪನಿಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೀಡಿರೋ ಕಾರ್ಪೊರೇಟ್ ಗುರುತಿನ ಸಂಖ್ಯೆ ನೀಡಬೇಕು. ಆಗ ಅವರಿಗೆ ಇಲ್ಲಿರೋ ಡೇಟಾ ಸಿಗಲಿದೆ. ಡೇಟಾ ಸಿಕ್ಕ ನಂತರ ಉದ್ಯೋಗದಾತರು ಸಂದರ್ಶನಗಳು, ಮೌಲ್ಯಮಾಪನಗಳು ಮತ್ತು ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಬಹುದು.
UPSC ಪ್ರತಿಭಾ ಸೇತು ಪೋರ್ಟಲ್‌ಗೆ ನೋಂದಾಯಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು upsconline.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದರಲ್ಲಿ ಅಗತ್ಯ ವಿವರಗಳನ್ನು ನೀಡಿ, ನೋಂದಾಯಿಸಿಕೊಳ್ಳುವ ಮೂಲಕ ಪೋರ್ಟಲ್ ಬಳಕೆ ಮಾಡಬಹುದಾಗಿದೆ.
ಇದನ್ನೂ ಓದಿ:‘ನಾವು ರವಿ ಬೆಳಗೆರೆ ಕಡೆಯವರು ಸ್ವಾಮಿ..’ ದರ್ಶನ್ ಕೇಸ್ ವಿಚಾರಣೆ ವೇಳೆ ಕೋರ್ಟ್ನಲ್ಲಿ ಅನಾಮಿಕ ಟ್ವಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ