/newsfirstlive-kannada/media/media_files/2025/08/27/students-exams-2025-08-27-19-43-17.jpg)
ವಿದ್ಯಾರ್ಥಿಗಳ ಭವಿಷ್ಯ ಉಜ್ವಲಿಸೋ ಟರ್ನಿಂಗ್ ಪಾಯಿಂಟೇ SSLC ಎಕ್ಸಾಂ. SSLC, ಪರೀಕ್ಷೆ ಅನ್ನೋ ಮಾತು ಕೇಳಿ ಬಂದಾಗ ಪಾಸಿಂಗ್ ಪರ್ಸಂಟೇಜ್ ಇಳಿಸಿ ಅನ್ನೋ ಕೂಗು ಯಾವತ್ತೂ ರೇಸ್ನಲ್ಲಿರುತ್ತೆ. ಆದ್ರೀಗ ಶಾಲಾ ಶಿಕ್ಷಣ ಇಲಾಖೆ SSLC ಪರೀಕ್ಷೆ ಜೊತೆಗೆ ಪಿಯುಸಿಗೂ ಅಂಕ ಕಡಿತಕ್ಕೆ ಮುಂದಾಗಿದೆ. ಸರ್ಕಾರ ಸಾರ್ವಜನಿಕರಿಗೆ ಕೊಟ್ಟಿದ್ದ ಆಕ್ಷೇಪಣೆ ಅವಧಿಯೂ ಮುಕ್ತಾಯ ಆಗಿದೆ.
SSLC ಮತ್ತು ಪಿಯುಸಿ ಪಾಸಿಂಗ್ ಮಾರ್ಕ್ಸ್ ಇಳಿಕೆ
ಕೇಂದ್ರಿಯ ಪಠ್ಯಕ್ರಮದ ಮಾದರಿಯಲ್ಲಿಯೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಮತ್ತು SSLC ಪರೀಕ್ಷೆ ಪ್ಲಾನ್ ಅನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ವಿದ್ಯಾರ್ಥಿಗಳು ಇನ್ನು ಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಮಾದರಿಯಲ್ಲೇ SSLC, PUCL ಪರೀಕ್ಷೆ ಪ್ಲಾನ್ ಮಾಡ್ತಿದೆ. CBSE ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು SSLCಯಲ್ಲಿ ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇಕಡಾ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಇದೀಗ ಅದೇ ಮಾದರಿ ಜಾರಿಗೆ ಮುಂದಾಗಿದ್ದು, ಸದ್ಯ ಇದಕ್ಕೆ ಪರ ವಿರೋಧ ಕೇಳಿ ಬರ್ತಿದೆ. ಪೋಷಕರ ಸಂಘಟನೆಯಿಂದ ಪಾಸಿಟೀವ್ ಪ್ರತಿಕ್ರಿಯೆ ಬಂದಿದ್ದು ಅದಷ್ಟು ಬೇಗ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು ಅಂತ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಕಾಲೇಜು ಶುರುವಾಗಿ 3 ವರ್ಷ..ಆದರೆ, ಇನ್ನೂ ಸಿಬ್ಬಂದಿ ನೇಮಕವೇ ಆಗಿಲ್ಲ..!
ಪಾಸಿಂಗ್ ಅಂಕ
- PUC, SSLC ಪಾಸಿಂಗ್ ಅಂಕ 33% ಇಳಿಕೆಗೆ ಶಿಕ್ಷಣ ಇಲಾಖೆ ಚಿಂತನೆ
- ಸದ್ಯ ಇದ್ದ 35% ಪಾಸಿಂಗ್ ಮಾರ್ಕ್ಸ್ 33% ಕ್ಕೆ ಇಳಿಕೆಗೆ ಇಲಾಖೆ ಮುಂದು
- ಇನ್ಮುಂದೆ 30 ಅಂಕಗಳನ್ನ ಪಡೆದ್ರೆ ಉತೀರ್ಣ ಮಾಡಲು ನಿರ್ಧಾರ
- ಈ ಬಗ್ಗೆ 15 ದಿನಗಳ ಸಮಯ ನೀಡಿ ಅಕ್ಷೇಪಣೆ ಸಲ್ಲಿಸಲು ಹೇಳಿತ್ತು
- ಜನರ, ಪಾಲಕರ ಅಭಿಪ್ರಾಯದ ಮೇಲೆ ಆದೇಶಕ್ಕೆ ಸರ್ಕಾರ ಮುಂದು
- ಈಗ ಪೋಷಕರ ಅಭಿಪ್ರಾಯ ಅಕ್ಷೇಪಣೆ ಸಲ್ಲಿಕೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತ
- ಇದ್ರಿಂದ ಶಿಕ್ಷಣ ಗುಣಮಟ್ಟ ಕುಸಿಯೋ ಬಗ್ಗೆ ಪೋಷಕರಿಂದ ವಿರೋಧ
ಇದನ್ನೂ ಓದಿ:ರಾಜ್ಯ ಸರ್ಕಾರಿ ನೇಮಕಾತಿಗೆ ಗ್ರೀನ್ ಸಿಗ್ನಲ್: ದಲಿತ ಒಳಮೀಸಲಾತಿ ಹಂಚಿಕೆ ಮಾಡಿ ಸರ್ಕಾರದ ಆದೇಶ
ಸರ್ಕಾರ ನಿರ್ಧಾರಕ್ಕೆ ಪರ ವಿರೋಧ ಕೇಳಿ ಬರ್ತಿದೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲೆಗಳ ಒಕ್ಕೂಟದಿಂದ ಮಿಶ್ರ ಅಭಿಪ್ರಾಯ ಕೇಳಿ ಬಂದಿದ್ದು ಸರ್ಕಾರ ಗೊಂದಲಕ್ಕೆ ಸಿಲುಕಿದೆ. ಸದ್ಯ ಈ ಬಗ್ಗೆ ಸಭೆ ಮೇಲೆ ಸಭೆ ನಡೆಸುತ್ತಿದ್ದು ಇನ್ನೊಂದು ವಾರದಲ್ಲಿ ಅಧಿಕೃತ ಆದೇಶ ಬರಲಿದೆ.
ಒಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಬೇರೆ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲಿಯೂ ಶೇಕಡಾವಾರು 33 ಪರ್ಸೆಂಟ್ ತರಬೇಕು ಎಂದು ಶಿಕ್ಷಣ ಇಲಾಖೆ ಈಗ ಪಾಸಿಂಗ್ ಮಾರ್ಕ್ಸ್ಗಳನ್ನ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ರಾಜ್ಯದಲ್ಲಿ ಪರ ವಿರೋಧ ಕೇಳಿ ಬಂದಿದ್ದು, ಸರ್ಕಾರ ಯಾವ ನಿರ್ಧಾರಕ್ಕೆ ಬರತ್ತೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ರೈಲ್ವೇಯಲ್ಲಿ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಆಹ್ವಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ