/newsfirstlive-kannada/media/media_files/2025/08/24/hims-2-2025-08-24-17-40-18.jpg)
ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಅದರೆ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಸಿಬ್ಬಂದಿ ಕೊರತೆಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೊಸ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
114 ಹುದ್ದೆಗಳು ಖಾಲಿ
ನೂತನ ಕಾಲೇಜಿನಲ್ಲಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟು 202 ಹುದ್ದೆಗಳ ಅಗತ್ಯ ಇದೆ. 202ರಲ್ಲಿ ಈಗ ಕೇವಲ 88 ಜನ ಮಾತ್ರ ಕಾರ್ಯ ನಿರ್ವಹಿಸ್ತಿದ್ದಾರೆ. 114 ಹುದ್ದೆಗಳು ಖಾಲಿಯಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರ ಶೀಘ್ರದಲ್ಲೇ ಖಾಲಿಯಿರುವ ಉಪನ್ಯಾಸಕರ ಹುದ್ದೆಯನ್ನ ತುಂಬಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: BMTC ಬಸ್ ಚಾಲಕರೇ ಎಚ್ಚರ.. ಅಪ್ಪಿತಪ್ಪಿ ಈ ತಪ್ಪುಗಳು ಮಾಡಿದ್ರೆ ವಜಾ ಗ್ಯಾರಂಟಿ
ಮೂರು ವರ್ಷಗಳಿಂದ ಹಾವೇರಿಯಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜು ಪ್ರಾರಂಭ ಆಗಿದೆ. ಈಗಾಗಲೇ ಬಹುತೇಕ ಕಾಲೇಜು ಕಾಮಾಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಪ್ರೊಫೆಸರ್, ಸಹಾಯಕ ಪ್ರೊಫೆಸರ್, ಹಾಗೂ ಟ್ಯೂಟರ್ಗಳು ಸೇರಿದಂತೆ 88 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಖಾಲಿ ಇರೋ ಪ್ಯಾರಾ ಮೆಡಿಕಲ್, ಅನಾಟಮಿ, ಫಾರ್ಮಕೊಲಜಿ, ಫೆಥಾಲಜಿ ಹಾಗೂ ಮೈಕ್ರೋ ಬಯೊಲಾಜಿ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಶೀಘ್ರದಲ್ಲೇ ಹುದ್ದೆಗಳು ಭರ್ತಿ ಮಾಡಿಕೊಳ್ಳಬೇಕು. ಈ ಬಗ್ಗೆ ಹಾವೇರಿ ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಸಿಬ್ಬಂದಿಗಳ ಕೊರತೆ ಬಗ್ಗೆ ಸಭೆಯನ್ನ ಮಾಡಲಾಗಿದೆ. ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿರ ಗಮನಕ್ಕೆ ತಂದು ಹುದ್ದೆಗಳನ್ನ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತೇವೆ ಅಂತಾರೆ ಸಚಿವರು.
ಇದನ್ನೂ ಓದಿ: ದಾಖಲೆ ಸಮೇತ ಬೆಳ್ತಂಗಡಿ ಠಾಣೆಗೆ ಬಂದ ಯೂಟ್ಯೂಬರ್ ಸಮೀರ್ MD
ಒಟ್ಟಿನಲ್ಲಿ ಹಾವೇರಿಯ ಹಿಮ್ಸ್ ಮೆಡಿಕಲ್ ಕಾಲೇಜ್ ಪ್ರಾರಂಭವಾಗಿ ಮೂರು ವರ್ಷ ಆಗಿದೆ. ಅದರೂ ಕೂಡ ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ವೈದ್ಯರಾಗೋ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇನ್ನಾದರೂ ಸರ್ಕಾರ ಖಾಲಿ ಇರುವ ಪ್ರೊಫೆಸರ್ ಹುದ್ದೆಗಳನ್ನ ಭರ್ತಿ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕಿದೆ.
ಇದನ್ನೂ ಓದಿ:KC ವೀರೇಂದ್ರ ಪಪ್ಪಿ ಬೆಟ್ಟಿಂಗ್ ದಂಧೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ