ಇಂಜಿನಿಯರಿಂಗ್ ಮಾಡೋಕೆ ದೇಶದ ಅಗ್ರಮಾನ್ಯ ಸಂಸ್ಥೆ IIT ಅಂದ್ರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೇಗೋ. ಹಾಗೆಯೇ ಎಂಬಿಎ ರೀತಿಯ ಮ್ಯಾನೇಜ್ಮೆಂಟ್ ಕೋರ್ಸ್ಗಳು ಮಾಡೋಕೆ IIM ಅಂದ್ರೆ Indian Institute of Management ಕೂಡ ಫೇಮಸ್.
IIMನಲ್ಲಿ ಪ್ರವೇಶ ಪಡೆಯುವುದು ಅನೇಕ ವಿದ್ಯಾರ್ಥಿಗಳ ಕನಸು. ಗಮನಿಸಬೇಕಾದ ಅಂಶವೆಂದರೆ IIMನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕಾಮನ್ ಅಡ್ಮಿಷನ್ ಟೆಸ್ಟ್ನಲ್ಲಿ ಪಾಸ್ ಆಗಬೇಕು. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ತುಂಬಾ ಕಡಿಮೆ ಜನರಿಗೆ ಮಾತ್ರ IIMನಲ್ಲಿ ಓದಲು ಅವಕಾಶ ಸಿಗುತ್ತದೆ.
ಈ IIM ಪ್ರವೇಶ ಪರೀಕ್ಷೆ ಅತ್ಯಂತ ಕಠಿಣ ಮತ್ತು ಸ್ಪರ್ಧಾತ್ಮಕವಾದುದ್ದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಪರೀಕ್ಷೆಗೆ ತಯಾರಿ ನಡೆಸಲು ಕೆಲವು ಕಾಮನ್ ಆದ ಸಲಹೆಗಳನ್ನು ಅಭ್ಯರ್ಥಿಗಳು ಪಾಲಿಸಬೇಕಾಗುತ್ತದೆ. ಕಠಿಣ ಪರಿಶ್ರಮ, ದೃಢನಿಶ್ಚಯ ಮತ್ತು ಶಿಸ್ತುಬದ್ದ ತಯಾರಿ ಮುಖ್ಯವಾಗುತ್ತದೆ.
ಇದನ್ನೂ ಓದಿ:ಕೇಂದ್ರದಿಂದ ಗುಡ್ನ್ಯೂಸ್.. UPSC ಫೇಲ್ ಆದ್ರೂ ಸುವರ್ಣಾವಕಾಶ..!
ಇದೇ ಮೊದಲ ಬಾರಿಗೆ IIMನಲ್ಲಿ ಡೇಟಾ ಸೈನ್ಸ್ ಮತ್ತು ಬ್ಯುಸಿನೆಸ್, ಎಕನಾಮಿಕ್ಸ್ ಮತ್ತು ಬ್ಯುಸಿನೆಸ್ ಸಂಬಂಧ ಯುಜಿ ಕೋರ್ಸ್ ಶುರು ಮಾಡಲಾಗುತ್ತಿದೆ. ಅದ್ರಲ್ಲೂ IIM ಬೆಂಗಳೂರು ಸೇರಿದಂತೆ ಬಹುತೇಕ IIMಗಳು ಈ ವರ್ಷದಿಂದಲೇ ಈ ಕೋರ್ಸ್ ಶುರು ಮಾಡುತ್ತಿವೆ ಅನ್ನೋದು ವಿಶೇಷ. ಈ ಕೋರ್ಸ್ ಹೆಸರು ಮತ್ತೇನಲ್ಲ BSc ಹಾನರ್ಸ್ ಇನ್ Economics ಮತ್ತು BSc ಹಾನರ್ಸ್ ಇನ್ Data Science.
ಹಾಗಾದ್ರೆ IIMನಲ್ಲಿ ಈ ಕೋರ್ಸ್ಗೆ ಪ್ರವೇಶ ಪಡೆಯೋದು ಹೇಗೆ? ಎಷ್ಟು IIMಗಳಿವೆ? IIM ಎಂಟ್ರೇನ್ಸ್ ಎಕ್ಸಾಂ ಯಾವಾಗ ಕಂಡಕ್ಟ್ ಮಾಡ್ತಾರೆ? ಅನ್ನೋ ಕಂಪ್ಲೀಟ್ ಡೀಟೈಲ್ಸ್ ಹೇಳ್ತೀವಿ ನೋಡಿ.
ಭಾರತದಲ್ಲಿ ಒಟ್ಟು ಎಷ್ಟು IIMಗಳು ಇವೆ..?
IIM ಅಂದ್ರೆ Indian Institute of Management. IIMಗಳು ದೇಶದ ಅತ್ಯಂತ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಕೋರ್ಸ್ ಆಫರ್ ಮಾಡೋ ಕಾಲೇಜುಗಳು ಆಗಿವೆ. ಎಲ್ಲಾ ವಿದ್ಯಾರ್ಥಿಗಳಿಗೂ ಈ ಸ್ಥಳಗಳಲ್ಲಿ ಅಧ್ಯಯನ ಮಾಡುವ ಬಯಕೆ ಇದ್ದೇ ಇರುತ್ತದೆ. ಇದರಲ್ಲಿ ಸೀಟು ಪಡೆಯಲು ಕಾಮನ್ ಅಡ್ಮಿಷನ್ ಟೆಸ್ಟ್ನಲ್ಲಿ ಉತ್ತಮ RANK ಪಡೆಯಬೇಕು. ಆಗ ಮಾತ್ರ IIMಗೆ ಪ್ರವೇಶ ಸಿಗುತ್ತದೆ.
ಭಾರತದಲ್ಲಿ ಒಟ್ಟು 21 IIMಗಳಿವೆ. ಇದರಲ್ಲಿ IIM ಬೆಂಗಳೂರು, ಕೋಲ್ಕತ್ತಾ, ಅಹ್ಮದಾಬಾದ್, ಲಕ್ನೋ, ಇಂದೋರ್ ಬಹಳ ಫೇಮಸ್ ಆಗಿವೆ. ಕೇಂದ್ರ ಸರ್ಕಾರ ನಡೆಸುವ ಈ ಸಂಸ್ಥೆಗಳು ಮ್ಯಾನೇಜ್ಮೆಂಟ್, ಎಕನಾಮಿಕ್ಸ್, ಫೈನಾನ್ಸ್, ಇಂಟರ್ನ್ಯಾಷನಲ್ ಬ್ಯುಸಿನೆಸ್ಗೆ ಸಂಬಂಧಿಸಿದ ಕೋರ್ಸ್ ಒದಗಿಸುತ್ತವೆ. IIMಗಳು Academic Excellence, Research and ಮ್ಯಾನೇಜ್ಮೆಂಟ್ ಕೋರ್ಸ್ಗಳಿಗೆ ಹೆಸರುವಾಸಿ.
IIMಗಳ ಎಂಟ್ರೇನ್ಸ್ ಎಕ್ಸಾಂ ಯಾವಾಗ?
IIMಗಳಲ್ಲಿ ಪ್ರವೇಶ ಪಡೆಯಲು ನೀವು ಕಾಮನ್ ಅಡ್ಮಿಷನ್ ಟೆಸ್ಟ್ನಲ್ಲಿ ಪಾಸ್ ಆಗಬೇಕು. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ IIMಗಳೇ ಈ ಎಂಟ್ರೇನ್ಸ್ ಎಕ್ಸಾಂ ನಡೆಸುತ್ತವೆ. ದೇಶ ಮತ್ತು ವಿದೇಶದ ಹಲವು ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಾಮನ್ ಅಡ್ಮಿಷನ್ ಟೆಸ್ಟ್ನಲ್ಲಿ ಬಹು ಆಯ್ಕೆ ಉತ್ತರಗಳನ್ನು ನೀಡಲಾಗಿರುತ್ತದೆ. ಒಂದು ಪ್ರಶ್ನೆಗೆ 4 ಉತ್ತರಗಳನ್ನು ನೀಡಲಿದ್ದಾರೆ. ಅದರಲ್ಲಿ ಸರಿಯಾದ ಒಂದು ಉತ್ತರ ಆಯ್ಕೆ ಮಾಡಬೇಕು.
ಇದನ್ನೂ ಓದಿ:SSLC ಒಂದೇ ಅಲ್ಲ, ಪಿಯುಸಿ ಪಾಸಿಂಗ್ ಮಾರ್ಕ್ಸ್ ಕೂಡ ಇಳಿಕೆ..!
ಕಾಮನ್ ಅಡ್ಮಿಷನ್ ಟೆಸ್ಟ್ ಪಾಸಾಗಿ ಅತಿಹೆಚ್ಚು ಅಂಕ ಗಳಿಸಿದವರು IIMನಲ್ಲಿ ಸೀಟು ಪಡೆಯಬಹುದು. ಈ ಪರೀಕ್ಷೆ ಬರೆದು ಅರ್ಹತೆ ಪಡೆದವರು ದೇಶದ ಟಾಪ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಡ್ಮಿಷನ್ ತೆಗೆದುಕೊಳ್ಳಬಹುದು. ಇನ್ನು, IIMಗಳಲ್ಲಿ BSc ಹಾನರ್ಸ್ ಕೋರ್ಸ್ಗಳು ಮಾಡಲು ವರ್ಷಕ್ಕೆ 8.5 ಲಕ್ಷ ಬೇಕು. ಹಾಸ್ಟೆಲ್ ಮೆಸ್ ಶುಲ್ಕಕ್ಕೆ 2 ಲಕ್ಷ ಕಟ್ಟಬೇಕು. 4 ವರ್ಷದ ಈ ಕೋರ್ಸ್ಗೆ 27 ಲಕ್ಷದಿಂದ 40 ಲಕ್ಷವರೆಗೂ ಆಗಲಿದೆ. IIMಗಳಲ್ಲಿ ಈ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಈ ಕೋರ್ಸ್ ಮಾಡಲು ಮಿನಿಮಮ್ ಕ್ವಾಲಿಫಿಕೇಷನ್ ಪಿಯುಸಿ ಆಗಿರಬೇಕು.
ಇದನ್ನೂ ಓದಿ:ಪ್ರಸಾರಭಾರತಿಯಿಂದ ಸದ್ಯದಲ್ಲೇ ದೇಶಾದ್ಯಂತ 30 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ