Advertisment

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ವರ್ತೂರು ಸಂತೋಷ್‌ ಸಂಕಷ್ಟ? ಇಂದು ಮತ್ತೊಂದು ದೂರು ದಾಖಲು

author-image
admin
Updated On
ಹುಲಿ ಉಗುರಿನ ಪೆಂಡೆಂಟ್​ ತಂದ ಕುತ್ತು; ಸೆಲೆಬ್ರಿಟಿಗಳ ವಿರುದ್ಧ ಸಾಲು, ಸಾಲು ದೂರು; ಕಾನೂನು ಕ್ರಮ ಜಾರಿಯಾಗುತ್ತಾ?
Advertisment
  • ವರ್ತೂರು ಸಂತೋಷ್ ಅವರ ಬಂಧನದ ಬಳಿಕ ಫೋಟೋ ವೈರಲ್‌
  • 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಇದು ಅಪರಾಧವಾಗುತ್ತದೆ
  • ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು ನೀಡಲು ತಯಾರಿ

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ. ವರ್ತೂರು ಸಂತೋಷ್ ಅವರ ಈ ಪ್ರಕರಣ ರಾಜ್ಯಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಹುಲಿ ಉಗುರಿನ ಇದೇ ಕ್ರೇಜ್ ರಾಜ್ಯದ ಕೆಲವು ಸೆಲೆಬ್ರಿಟಿಗಳಿಗೂ‌ ಮುಳುವಾಗುವ ಸಾಧ್ಯತೆ ಇದೆ.

Advertisment

ವರ್ತೂರು ಸಂತೋಷ್ ಅವರ ಬಂಧನ ಬಳಿಕ ಅದೇ ರೀತಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಅದೇ ಫೋಟೋಗಳು ಸೆಲೆಬ್ರಿಟಿಗಳಿಗೆ ಸಂಕಟ ತಂದೊಡ್ಡುವ ಸುಳಿವು ನೀಡಿದೆ.

ಹುಲಿ ಉಗುರಿನ ಪೆಂಡೆಂಟ್ ಧರಿಸುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಪರಾಧವಾಗುತ್ತದೆ. ಗೊತ್ತಿದ್ದು ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಹುಲಿ ಉಗುರು ಹಾಕಿಕೊಂಡಿರುವ ಸೆಲೆಬ್ರಿಟಿಗಳ ವೈರಲ್‌ ಫೋಟೋಗಳ ಆಧಾರದ ಮೇಲೆ ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ಮತ್ತೊಂದು ಸಂಘಟನೆ ದೂರು ನೀಡಲು ಮುಂದಾಗಿದೆ.

publive-image

ಇಂದು ಸರ್ವ ಸಂಘಟನೆಗಳ ಒಕ್ಕೂಟದ ಸಿಎಂ ಶಿವಕುಮಾರ್ ನಾಯಕ ನೇತೃತ್ವದಲ್ಲಿ ನಟ ದರ್ಶನ್ ಹಾಗೂ ವಿನಯ್‌ ಗುರೂಜಿ ವಿರುದ್ಧ ದೂರು ನೀಡಲಾಗುತ್ತಿದೆ. ಮಲ್ಲೇಶ್ವರಂನಲ್ಲಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ದೂರು ನೀಡಲು ಶಿವಕುಮಾರ್ ನಾಯಕ ಮುಂದಾಗಿದ್ದಾರೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಸೆಲೆಬ್ರಿಟಿಗಳನ್ನು ವಿಚಾರಣೆಗೊಳಪಡಿಸಿ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

Advertisment

ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಂಧನದ ಬಳಿಕ ನಟ ದರ್ಶನ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಫೋಟೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು ನ್ಯಾಯನಾ ಎಂದು ಪ್ರಶ್ನಿಸಲಾಗುತ್ತಿತ್ತು. ಇದೀಗ ವಿವಿಧ ಸಂಘಟನೆಗಳು ಸೆಲೆಬ್ರಿಟಿಗಳ ಮೇಲೆ ದೂರು ದಾಖಲು ಮುಂದಾಗಿದ್ದು, ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment