/newsfirstlive-kannada/media/post_attachments/wp-content/uploads/2024/06/CHANDRABABU-3.jpg)
ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ, ನೂತನ ಎನ್ಡಿಎ ಸರ್ಕಾರದ ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು (Chandrababu Naidu) ಅವರು ರಾಜಕೀಯದಿಂದ ಹಿಡಿದು ಷೇರು ಮಾರುಕಟ್ಟೆವರೆಗೂ ಪ್ರಾಬಲ್ಯ ಹೊಂದಿದ್ದಾರೆ. ನಾಯ್ಡುಗೆ ಸಂಬಂಧಿಸಿದ ಕಂಪನಿಯು ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಅದ್ಭುತ ಆದಾಯವನ್ನು ಗಳಿಸಿದೆ. ಕೇವಲ ಐದು ದಿನಗಳ ಅಂತರದಲ್ಲಿ ನಾಯ್ಡು ಕುಟುಂಬ 800 ಕೋಟಿಗೂ ಅಧಿಕ ಆದಾಯಗಳಿಸಿದೆ!
ಇದನ್ನೂ ಓದಿ:Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು
ಏನಿದು ಕತೆ..?
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದ ಇಲ್ಲಿಯವರೆಗೆ ನಿರೀಕ್ಷೆಗೂ ಮೀರಿ ಆದಾಯದಲ್ಲಿ ಏರಿಕೆ ಆಗ್ತಿದೆ. ಸಹಜವಾಗಿಯೇ ನಾಯ್ಡು ಕುಟುಂಬದ ಸಂಪತ್ತಿನಲ್ಲಿ ದಾಖಲೆಯ ಹೆಚ್ಚಳವಾಗಿದೆ. ಚಂದ್ರಬಾಬು ನಾಯ್ಡು ಅವರು 1992ರಲ್ಲಿ ‘ಹೆರಿಟೇಜ್ ಫುಡ್ಸ್ ಲಿಮಿಟೆಡ್’ (Heritage Foods) ಕಂಪನಿ ಹುಟ್ಟಿಹಾಕಿದ್ದರು. ಇದು ವ್ಯಾಪಾರದಲ್ಲಿ ಮೂರು ವಿಭಾಗವನ್ನು ಹೊಂದಿದೆ. ಡೈರಿ (dairy), (Retail) ಮತ್ತು ಅಗ್ರಿ (Agri) ಎಂಬ ಡಿವಿಸನ್ ಇದೆ.
ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಹೆರಿಟೇಜ್ ಫುಡ್ಸ್ನ ಪ್ರವರ್ತಕರಲ್ಲಿ ಒಬ್ಬರು ಎಂದು ಕಂಪನಿಯ ಎಕ್ಸ್ಚೇಂಜ್ ಫೈಲಿಂಗ್ ತಿಳಿಸಿದೆ. ಇದರ ಷೇರು ಐದು ದಿನಗಳಲ್ಲಿ ಹೂಡಿಕೆದಾರರಿಗೆ 55.79 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರು 101ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಹೆರಿಟೇಜ್ ಫುಡ್ಸ್ ಷೇರುಗಳು ನಿನ್ನೆ 661.25 ರೂಪಾಯಿನಲ್ಲಿ ಶೇಕಡಾ 10 ಅಪ್ಪರ್ ಸರ್ಕ್ಯೂಟ್ನೊಂದಿಗೆ ಮುಕ್ತಾಯಗೊಂಡವು. ಇದು 52 ವಾರಗಳಲ್ಲಿಯೇ ಗರಿಷ್ಠಮಟ್ಟವಾಗಿದೆ. ಹೆರಿಟೇಜ್ ಫುಡ್ಸ್ ಷೇರುಗಳ ಭಾರೀ ಏರಿಕೆಯಿಂದಾಗಿ ಚಂದ್ರಬಾಬು ನಾಯ್ಡು ಕುಟುಂಬವು 850 ಕೋಟಿ ರೂಪಾಯಿ ಆದಾಯಗಳಿಸಿದೆ. ಬಿಎಸ್ಇ ಷೇರುದಾರರ ಪ್ರಕಾರ.. ನಾಯ್ಡು ಕುಟುಂಬದ ಒಟ್ಟು ಪಾಲು ಶೇಕಡಾ 35.71 ಆಗಿದೆ. ಇದು 3,31,36,005 ಷೇರುಗಳಿಗೆ ಸಮಾನವಾಗಿದೆ.
ಇದನ್ನೂ ಓದಿ:ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!
ಚುನಾವಣೆ ಫಲಿತಾಂಶಕ್ಕೂ ಮೊದಲು ಹೆರಿಟೇಜ್ ಫುಡ್ಸ್ನ ಷೇರು ಮೌಲ್ಯ 424 ರೂಪಾಯಿ ಆಗಿತ್ತು. ಇದೀಗ ಅದು ದಾಖಲೆಯ ಗರೀಷ್ಠ 661.25 ರೂಪಾಯಿನಲ್ಲಿ ವಹಿವಾಟು ನಡೆಸುತ್ತಿದೆ. ಅಂದರೆ ಶೇಕಡ 55 ರಷ್ಟು ಏರಿಕೆಯಾಗಿದೆ.
ಯಾರಿಗೆ ಎಷ್ಟು ಪಾಲು..?
ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಕಂಪನಿಯ ಬಿಗೆಸ್ಟ್ ಶೇರ್ಹೋಲ್ಡರ್ ಆಗಿದ್ದಾರೆ. ಶೇಕಡಾ 24.37, 0.06 ಪಾಲನ್ನು ಹೊಂದಿರುವ ಇವರು ಹೆರಿಟೇಜ್ ಫುಡ್ಸ್ನಲ್ಲಿ 2,26,11,525 ಸ್ಟಾಕ್ಸ್ ಹೊಂದಿದ್ದಾರೆ.
ಪುತ್ರ ನಾರಾ ಲೋಕೇಶ್ ಶೇ.10.82 ರಷ್ಟು ಪಾಲು ಹೋಗಲಿದೆ. ಇವರೂ ಕೂಡ ಹೆರಿಟೇಜ್ ಫುಡ್ಸ್ನ ಪ್ರಮುಖ ಪ್ರವರ್ತಕರಾಗಿದ್ದಾರೆ. ಲೋಕೇಶ್ ಅವರು ಕಂಪನಿಯಲ್ಲಿ 1,00,37,453 ಷೇರ್ಗಳನ್ನು ಹೊಂದಿದ್ದಾರೆ. ಇದೀಗ ಇವರ net worth 237.8 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ನಾಯ್ಡು ಅವರ ಸೊಸೆ ಬ್ರಾಹ್ಮಣಿ ಶೇಕಡಾ 0.46 ರಷ್ಟು ಪಾಲು ಹೊಂದಿದ್ರೆ ಮೊಮ್ಮಗ ದೇವಾಂಶ್ ಶೇಕಡಾ 0.06ರಷ್ಟು ಪಾಲನ್ನು ಹೊಂದಿದ್ದಾರೆ.
ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?
ಜೂನ್ 4 ರಂದು ಲೋಕಸಭೆ ಚುನಾವಣೆ ಹಾಗೂ ಆಂಧ್ರ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟ ಆಗಿದೆ. ಚುನಾವಣೆಯಲ್ಲಿ ನಾಯ್ಡು ನೇತೃತ್ವದ ಟಿಡಿಪಿ ಆಂಧ್ರದಲ್ಲಿ ಸರ್ಕಾರ ರಚನೆ ಮಾಡಲಿದೆ. ಒಟ್ಟು 175 ವಿಧಾನಸಭೆ ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನಾಯ್ಡು ಅವರು ಮತ್ತೊಮ್ಮೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಲೋಕಸಭೆ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಗೆದ್ದು, ಎನ್ಡಿಗೆ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಕುಟುಂಬದ ಆದಾಯದಲ್ಲಿ ದಿಢೀರ್ ಏರಿಕೆ ಆಗಿದೆ.
ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ