newsfirstkannada.com

PBKS vs CSK; ಜಡ್ಡು ಆಲ್​​ರೌಂಡರ್ ಆಟಕ್ಕೆ ಬೆಚ್ಚಿ ಬಿದ್ದ ಪಂಜಾಬ್.. ಚೆನ್ನೈ ಪ್ಲೇ ಆಫ್ ಕನಸು ಜೀವಂತ!

Share :

Published May 5, 2024 at 7:30pm

Update May 5, 2024 at 8:04pm

    ಚೆನ್ನೈ ಸೂಪರ್ ಕಿಂಗ್ಸ್​ ಬೌಲರ್​ ಪಡೆಗೆ ತಲೆ ಬಾಗಿದ ಪಂಜಾಬ್​

    ಜಡೇಜಾ, ದೇಶಪಾಂಡ್ಯ, ಸಿಂಗ್ ಚೆನ್ನೈ ಪರ ಉತ್ತಮ ಬೌಲಿಂಗ್

    ​ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯ

ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 28 ರನ್​ಗಳಿಂದ ಅಮೋಘ ಗೆಲವು ಸಾಧಿಸಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್​ಗೆ ಪಂಜಾಬ್​ ಸೋಲೋಪ್ಪಿಕೊಂಡಿದೆ.

ಟಾಸ್ ಗೆದ್ದುಕೊಂಡ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಚೆನ್ನೈ ಪರ ಓಪನರ್ಸ್ ಅಜಿಂಕ್ಯಾ ರಹಾನೆ, ಕ್ಯಾಪ್ಟನ್​ ರುತುರಾಜ್ ಉತ್ತಮ ಆರಂಭವೇನು ಪಡೆಯಲಿಲ್ಲ. ತಂಡದ ಮೊತ್ತ ಕೇವಲ 12 ಇರುವಾಗಲೇ ರಹಾನೆ ಔಟ್ ಆದ್ರೆ ರುತುರಾಜ್ ಗಾಯಕ್ವಾಡ್ 32 ರನ್​ಗೆ ಪೆವಿಲಿಯನ್ ನಡೆದರು. ಮಿಚೆಲ್ ಸ್ವಲ್ಪ ಹೊತ್ತು ಕ್ರೀಸ್​ನಲ್ಲಿದ್ದು 30 ರನ್​ಗೆ ಎಲ್​ಬಿ ಬಲೆಗೆ ಬಿದ್ದರು. ಇನ್ನು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ 43 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಇವರನ್ನು ಬಿಟ್ಟರೇ ಧೋನಿ ಸೇರಿ ಉಳಿದ ಬ್ಯಾಟ್ಸ್​ಮನ್​ಗಳೆಲ್ಲ 20 ರನ್​ ಗಳಿಸುವುದಕ್ಕೂ ಮೊದಲೇ ಔಟ್ ಆದರು. ಹೀಗಾಗಿ 20 ಓವರ್​ಗಳಲ್ಲಿ ಪಂಜಾಬ್​ಗೆ 167 ರನ್​​ಗಳ ಟಾರ್ಗೆಟ್ ಅನ್ನು ಚೆನ್ನೈ ನೀಡಿತ್ತು.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಇದನ್ನೂ ಓದಿ: ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

ಈ ಟಾರ್ಗೆಟ್ ಬೆನ್ನಟ್ಟಿದ್ದ ಪಂಜಾಬ್​ ಆರಂಭದಲ್ಲಿ ಭಾರೀ ನಷ್ಟ ಅನುಭವಿಸಿತು. ಕೇವಲ 7 ರನ್​ಗೆ ಜಾನಿ ಬೈರ್ಸ್ಟೋವ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಪ್ರಭಾಸಿಮ್ರಾನ್ ಕೆಲ ಹೊತ್ತು ಚೆನ್ನೈ ಬೌಲರ್ಸ್​ ಅನ್ನು ಕಾಡಿ 30 ರನ್​ ಗಳಿಸಿ ಆಡುವಾಗ ಜಡೇಜಾ ಬೌಲಿಂಗ್​ನಲ್ಲಿ ಔಟ್ ಆದರು. ಶಶಾಂಕ್ ಸಿಂಗ್ 27 ಬಿಟ್ಟರೇ ಉಳಿದ ಬ್ಯಾಟ್ಸ್​ಮನ್​ಗಳು 17ರ ಗಡಿ ಕೂಡ ದಾಟಲಿಲ್ಲ. ಹೀಗಾಗಿ ಪಂಜಾಬ್ ಬ್ಯಾಟಿಂಗ್​ ಮಾಡಲು ಭಾರೀ ಕಷ್ಟ ಪಟ್ಟಿತು ಎನ್ನಬಹುದು. ಈ ಮೂಲಕ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 139 ರನ್​ ಮಾತ್ರ ಗಳಿಸಲು ಶಕ್ತವಾಯಿತು. ಇದರಿಂದ 28 ರನ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್​ ಗಲುವಿನ ನಗೆ ಬೀರಿತು.

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಚೆನ್ನೈ ಪರ 43 ರನ್​ ಸಿಡಿಸಿದ್ದು ಅಲ್ಲದೇ ಪ್ರಮುಖ 3 ವಿಕೆಟ್​ಗಳನ್ನ ರವೀಂದ್ರ ಜಡೇಜಾ ಪಡೆದರು. ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

PBKS vs CSK; ಜಡ್ಡು ಆಲ್​​ರೌಂಡರ್ ಆಟಕ್ಕೆ ಬೆಚ್ಚಿ ಬಿದ್ದ ಪಂಜಾಬ್.. ಚೆನ್ನೈ ಪ್ಲೇ ಆಫ್ ಕನಸು ಜೀವಂತ!

https://newsfirstlive.com/wp-content/uploads/2024/05/CSK_1.jpg

Load More