/newsfirstlive-kannada/media/media_files/2025/12/11/devil-movie-2-2025-12-11-09-09-54.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ (The Devil) ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ರಾಜ್ಯದ 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.
ಮಿಲನಾ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಗಿಲ್ಲಿ ನಟ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕಾಂತರಾಜ್ ಡೈಲಾಗ್ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಕರ್ಣ ಸೀರಿಯಲ್​​ನಲ್ಲಿ ರೋಚಕ ಟ್ವಿಸ್ಟ್​.. ವೀಕ್ಷಕರು ಥ್ರಿಲ್..!
/filters:format(webp)/newsfirstlive-kannada/media/media_files/2025/12/11/devil-movie-2025-12-11-09-12-05.jpg)
ಅಭಿಮಾನಿಗಳಿಗೆ ಹಬ್ಬದ ವಾತಾವರಣ
ದರ್ಶನ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಆಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ದರ್ಶನ್ ಡೈಲಾಗ್ ಹೇಳಿ ಅಭಿಮಾನಿಗಳ ಡ್ಯಾನ್ಸ್ ಮಾಡಿದ್ದಾರೆ. ಬೆಳಗ್ಗೆ 6.30 ರಿಂದ ನರ್ತಕಿ ಚಿತ್ರಮಂದಿರದಲ್ಲಿ ಶೋ ಆರಂಭವಾಗಿದೆ. ನರ್ತಕಿ ಮುಂಭಾಗ ದರ್ಶನ್​ ಅವರ 72 ಅಡಿ ಕಟೌಟ್ ನಿಲ್ಲಿಸಲಾಗಿದೆ.
ಇದನ್ನೂ ಓದಿ: ಡೆವಿಲ್ ದಾಖಲೆ ಉಡೀಸ್ ಮಾಡಿದ ಮಾರ್ಕ್.. ಫ್ಯಾನ್ಸ್ ನಡುವೆ ವಾರ್..!
/filters:format(webp)/newsfirstlive-kannada/media/media_files/2025/12/11/devil-movie-4-2025-12-11-09-11-34.jpg)
ರಾಜ್ಯದ ಬಹುತೇಕ ಥಿಯೇಟರ್​ಗಳತ್ತ ದರ್ಶನ್​ ಫ್ಯಾನ್ಸ್ ಲಗ್ಗೆ ಇಡುತ್ತಿದ್ದಾರೆ. ಅಂತೆಯೇ ಬಾಗಲಕೋಟೆಯ ಜಮಖಂಡಿಯಲ್ಲೂ ಡೆವಿಲ್​ ಅಬ್ಬರ ಜೋರಾಗಿದೆ. ಶೋಗೂ ಮುನ್ನ ಥಿಯೇಟರ್ ಮುಂದೆ ಸಂಭ್ರಮಿಸಿದ್ದಾರೆ. ಬಾಸ್, ಬಾಸ್, ಡಿ ಬಾಸ್ ಎಂದು ಘೋಷವಾಕ್ಯ ಕೂಗಿದ್ದಾರೆ.
ಕೊಟೆನಾಡು ಚಿತ್ರದುರ್ಗದಲ್ಲೂ ಡೆವಿಲ್ ಅಬ್ಬರ ಜೋರಾಗಿದೆ. ನಗರದ ಪ್ರಸನ್ನ ಥಿಯೇಟರ್​ನಲ್ಲಿ ಫಸ್ಟ್ ಡೇ, ಫಸ್ಟ್ ಶೋ ನೋಡೋದಕ್ಕೆ ನೂಕು ನುಗ್ಗಲು ಉಂಟಾಗಿದೆ. ಮುಂಜಾನೆಯೇ ಥಿಯೇಟರ್ ಮುಂಭಾಗ ಜಮಾಯಿಸಿದ್ದಾರೆ. ನಟ ದರ್ಶನ್ ಅವರ 25 ಅಡಿ ಕಟೌಟ್​ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿ: ಜೈಲಲ್ಲಿರೋ ದರ್ಶನ್‌ಗೆ ಡೆವಿಲ್ ಸಕ್ಸಸ್ ಅದೆಷ್ಟು ಅಗತ್ಯ?
ಏನೇ ಆಗೋಗ್ಲಿ ನಿನ್ನ ಬಿಡೋರ್ ನಾವಲ್ಲ...🔥😎@dasadarshan 👑#TheDevilFDFS#TheDevil#DBoss#BossOfSandalwoodpic.twitter.com/dRhRI0NESh
— DEVIL 👿 (@boss_fan6106) December 11, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us