/newsfirstlive-kannada/media/media_files/2025/09/06/duniya-vijay-2-2025-09-06-15-46-48.jpg)
ದುನಿಯಾ ವಿಜಯ್
ಪ್ರತಿಷ್ಠಿತ SIIMA-2025 ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡದ ನಟರಿಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ದುನಿಯಾ ವಿಜಯ್ (Duniya Vijay) ವೇದಿಕೆಯಲ್ಲೇ ಕೋಪಗೊಂಡು, ಆಯೋಜಕರಿಗೆ ಖಡಕ್ ಸಂದೇಶ ಸಾರಿದ್ದಾರೆ.
ದುಬೈ ಸೈಮಾ ಅವಾರ್ಡ್-ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು. ಈ ವೇಳೆ ಕನ್ನಡದ ನಟರನ್ನು ಕಡೆಗಣಿಸಲಾಗಿದೆ ಅನ್ನೋದು ದುನಿಯಾ ವಿಜಿ ಆರೋಪ. ಯಾರೂ ಇಲ್ಲದಿದ್ದಾಗ ಸ್ಟೇಜ್ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟು ಸರಿ? ಕನ್ನಡ ಮೇಲಿದೆ ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮದಲ್ಲಿ ಈ ರೀತಿ ಮಾಡಬೇಡಿ. ಹೀಗಾದ್ರೆ ಇನ್ಮುಂದೆ ನಾವ್ಯಾರೂ ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನ ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರ್ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಭುವನ್ ಪೊನ್ನಣ್ಣಗೆ ಭಟ್ಟರು ಆ್ಯಕ್ಷನ್ ಕಟ್.. ತಾವೇ ಬರೆದ ಹಾಡಿನ ಸಾಲೇ ಚಿತ್ರದ ಹೆಸರು..!
ದುನಿಯಾ ವಿಜಯ್ ಕನ್ನಡ ಪರ ದನಿಗೆ ದುಬೈ ಕನ್ನಡಿಗರಿಂದ ಬಹುಪರಾಕ್ ಹೇಳಿದ್ದಾರೆ. ವಿಜಯ್ ನಂತರ ಕಿಚ್ಚ ಸುದೀಪ್ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಸುದೀಪ್ ಪರವಾಗಿ ವಿ.ನಾಗೇಂದ್ರ ಪ್ರಸಾದ್ ಸ್ವೀಕರಿಸಿದಾಗಲೂ ಯಾರೂ ಇರಲಿಲ್ಲ. ದುನಿಯಾ ವಿಜಯ್ ಅವರಿಗೆ ‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಘೋಷಣೆಯಾಯ್ತು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ದುನಿಯಾ ವಿಜಯ್ ಅಲ್ಲಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ದುನಿಯಾ ವಿಜಯ್ ಆಕ್ರೋಶಕ್ಕೆ ಕಾರಣ ಏನು..?
ಸೈಮಾ ಕಾರ್ಯಕ್ರಮ ಸಾಮಾನ್ಯವಾಗಿ ಎರಡು ದಿನ ನಡೆಯುತ್ತದೆ. ಪ್ರತಿದಿನ ಎರಡು ಭಾಷೆಯ ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಿನ್ನೆಯ ದಿನ ಕನ್ನಡ ಮತ್ತು ತೆಲುಗು ನಟ, ನಟಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಟ ಸುದೀಪ್ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತ್ತು. ಆದರೆ ಆಯೋಜಕರು ತೆಲುಗು ಸಿನಿಮಾದವರಿಗೆ ಮೊದಲ ಆದ್ಯತೆ ನೀಡಿದರು. ಮೊದಲಿಗೆ ತೆಲುಗು ಸಿನಿಮಾ ನಟರಿಗೆ ಪ್ರಶಸ್ತಿ ನೀಡಿದರು. ಪ್ರಶಸ್ತಿ ವಿತರಣೆ ಮುಗಿಯವ ವೇಳೆಗೆ ಸಾಕಷ್ಟ ಸಮಯ ಮೀರಿ ಹೋಗಿತ್ತು. ಪರಿಣಾಮ ಎಲ್ಲಾ ಸೆಲೆಬ್ರಿಟಿಗಳು ಅಲ್ಲಿಂದ ನಿರ್ಗಮಿಸಿದ್ದರು. ವೇದಿಕೆಯ ಮುಂಭಾಗ ಖಾಲಿ ಇದ್ದಾಗ, ಕನ್ನಡದ ನಟರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿರೋದೇ ದುನಿಯಾ ವಿಜಯ್ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ರಾಜಮೌಳಿ ಬಿಗ್ ಪ್ಲಾನ್; ಮಹೇಶ್ ಬಾಬು ಸಿನಿಮಾ ಪ್ಯಾನ್ ಇಂಡಿಯಾವಲ್ಲ, ಪ್ಯಾನ್ ವರ್ಲ್ಡ್ ಮೂವಿ
ಇದು ಹೊಸದಲ್ಲ..!
ಕಳೆದ ಬಾರಿ ಸೈಮಾ ಪ್ರಶಸ್ತಿ ಸಮಾರಂಭ ನಡೆದಾಗಲೂ ಕನ್ನಡದ ನಟ, ನಟಿಯರಿಗೆ ಅವಮಾನ ಆಗಿತ್ತು. ಸೂಕ್ತ ವಸತಿ, ಪ್ರಯಾಣ ಸೌಲಭ್ಯಗಳನ್ನು ನೀಡಲಾಗಿರಲಿಲ್ಲ. ಈ ಬಾರಿ ಎಲ್ಲವೂ ಸರಿ ಹೋಗಲಿದೆ ಎಂಬ ನಿರೀಕ್ಷೆ ಇತ್ತು. ಆದರೀಗ ಅದು ಹುಸಿಯಾಗಿದೆ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಸಮಾರಂಭ ಇದಾಗಿದೆ.
ಇದನ್ನೂ ಓದಿ:ಕಾಂತಾರ ಪ್ರೀಕ್ವೆಲ್ ರಿಲೀಸ್ಗೆ ಕೇವಲ 27 ದಿನಗಳು ಬಾಕಿ.. ಹೊಂಬಾಳೆ ಹೊಸ ಅಪ್ಡೇಟ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ