/newsfirstlive-kannada/media/media_files/2025/11/10/actor-dhanveer-2025-11-10-10-30-30.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಸ್ಯಾಂಡಲ್​ವುಡ್ ನಟ ಧನ್ವೀರ್​​ ಅವರತ್ತ ಸಿಸಿಬಿ ಅಧಿಕಾರಿಗಳು ಮುಖ ಮಾಡಿದ್ದು, ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ನಟ ಧನ್ವೀರ್​ಗೆ ಸಂಕಷ್ಟ!?
ಕಳೆದ ಮೂರ್ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಶಂಕಿತ ಉಗ್ರನಿಗೆ, ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ ಅನೇಕ ಘೋರ ಅಪರಾಧಗಳನ್ನ ಮಾಡಿ ಜೈಲು ಸೇರಿರುವ ಕೆಲವು ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ಅದಾಗಿದೆ. ಇದು ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ರುಕ್ಮಿಣಿ ವಸಂತ್ ಬಳಿಕ ಅನುಪಮಾಗೆ ‘ಜಾಲತಾಣ’ದ ಟೆನ್ಶನ್..! ಅಸಲಿಗೆ ಆಗಿದ್ದೇನು?
ಈ ವಿಡಿಯೋ ವೈರಲ್ ಹಿಂದೆ ದರ್ಶನ್ ಆಪ್ತ, ನಟ ಧನ್ವೀರ್ ಇದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಜೈಲಿನ ವಿಡಿಯೋವನ್ನು ಧನ್ವೀರ್ ರಿಲೀಸ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿರುವ ಸಿಸಿಬಿ, ನಟನನ್ನು ತನಿಖೆಗೆ ಒಳಪಡಿಸಿದ್ದಾರೆ. ಧನ್ವೀರ್ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಮೊಬೈಲ್​​ನಲ್ಲಿ ಯಾವುದೇ ವಿಡಿಯೋ ಪತ್ತೆ ಆಗಿಲ್ಲ ಎನ್ನಲಾಗಿದೆ. ವಿಚಾರಣೆ ಬಳಿಕ ಧನ್ವೀರ್ ಅವರನ್ನು ಪೊಲೀಸರು ಕಳುಹಿಸಿದ್ದಾರೆ. ಆದರೆ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
- ಪ್ರಶ್ನೆ-1: ನಟ ಧನ್ವೀರ್​ರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಏನೆಲ್ಲಾ ಪ್ರಶ್ನೆಗಳನ್ನ ಕೇಳಿದ್ದಾರೆ?
- ಪ್ರಶ್ನೆ-2: ದರ್ಶನ್ ಆಪ್ತರಾಗಿರುವ ನಟ ಧನ್ವೀರ್ ಮೇಲೆ ಅನುಮಾನ ಬರೋಕೆ ಕಾರಣವೇನು?
- ಪ್ರಶ್ನೆ-3: ನಟ ಧನ್ವೀರ್, ವಿಡಿಯೋಗಳನ್ನ ಲೀಕ್ ಮಾಡಿದ್ದಾರೆ ಅನ್ನೋದಾದ್ರೆ ಅವ್ರಿಗೆ ಈ ಡಿಯೋಗಳು ಸಿಕ್ಕಿದ್ದು ಹೇಗೆ?
- ಪ್ರಶ್ನೆ-4: ಸದ್ಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮುಂದೆ ಸಿಸಿಬಿ ಪೊಲೀಸರು ತಗೊಳ್ಳೋ ಕ್ರಮವೇನು?
- ಪ್ರಶ್ನೆ-5: ನಟ ಧನ್ವೀರ್​ಗೆ ಇದರಲ್ಲಿ ಯಾವ ರೀತಿಯ ಸಂಕಷ್ಟ ಎದುರಾಗಬಹುದು?
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ದರ್ಶನ್ ಅವರಿಗೆ ಮೂಲ ವ್ಯವಸ್ಥೆ ಕೂಡ ನೀಡಿಲ್ಲ ಎಂಬ ಆರೋಪವಿದೆ. ತಮಗೆ ಹಾಸಿಗೆ, ದಿಂಬು, ಬೆಡ್​ಶೀಟ್ ಬೇಕು ಅಂತಾ ಕೋರಿ ದರ್ಶನ್ ಕೋರ್ಟ್​ ಮೆಟ್ಟಿಲೇರಿದ್ದಾರೆ. ಅದರ ವಿಚಾರಣೆ ನಡೆಯುತ್ತಿದೆ.
/filters:format(webp)/newsfirstlive-kannada/media/media_files/2025/11/10/actor-dhanveer-1-2025-11-10-10-30-45.jpg)
ದರ್ಶನ್ ಅವರನ್ನು ಜೈಲಿನಲ್ಲಿ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ. ಇಲ್ಲಿ ಅಪರಾಧಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನಲ್ಲಿ ಒಬ್ಬರಿಗೆ ಒಂದೊಂದು ನ್ಯಾಯ. ದರ್ಶನ್​ ಅವರನ್ನು ಮಾತ್ರ ಕೆಟ್ಟದಾಗಿ ನೋಡಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ರಾಜಾತಿಥ್ಯದ ವಿಡಿಯೋಗಳು ವೈರಲ್ ಆಗಿವೆ. ಧನ್ವೀರ್​, ದರ್ಶನ್​​ಗೆ ತುಂಬಾನೇ ಆಪ್ತರು. ಆಗಾಗ ಜೈಲಿಗೆ ಹೋಗಿ ಮಾತಾಡಿಸಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಧನ್ವೀರ್ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us