Advertisment

ದರ್ಶನ್, ಪವಿತ್ರ ಗೌಡ ಎದೆಯಲ್ಲಿ ಮತ್ತೆ ಜೈಲಿಗೆ ಹೋಗುವ ಆತಂಕ.. ಸುಪ್ರೀಂ​ನಿಂದ ಇವತ್ತು ಮಹತ್ವದ ತೀರ್ಪು ನಿರೀಕ್ಷೆ

ಸುಪ್ರೀಂ ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಅರ್ಜಿಯ ವಿಚಾರಣೆ ನಡೆಸಿರುವ ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮಹದೇವನ್​ ಪೀಠದಿಂದ ಮಹತ್ವದ ಆದೇಶ ನಿರೀಕ್ಷೆ ಮಾಡಲಾಗಿದೆ.

author-image
Ganesh Kerekuli
ಕೊನೇ ಕ್ಷಣದಲ್ಲಿ ವಕೀಲರ ಬದಲಾವಣೆ.. ನಟ ದರ್ಶನ್​​ಗೆ ಢವಢವ..!
Advertisment
ಇವತ್ತು ಸುಪ್ರೀಂ ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ( Darshan) ಅವರ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮಹದೇವನ್​ ಪೀಠದಿಂದ ಮಹತ್ವದ ಆದೇಶ ನಿರೀಕ್ಷೆ ಮಾಡಲಾಗಿದೆ. 
Advertisment
ಈಗಾಗಲೆ ದರ್ಶನ್, ಪವಿತ್ರಾಗೌಡ, ಇತರ ಆರೋಪಿಗಳ ಹಾಗೂ ರಾಜ್ಯ ಸರ್ಕಾರದ ವಾದ-ಪ್ರತಿವಾದವನ್ನು ಕೋರ್ಟ್ ಆಲಿಸಿದೆ. ಜಾಮಿನು ಅರ್ಜಿ ವಿಚಾರಣೆ ಆಲಿಸಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್​ ನೀಡಿರುವ ಜಾಮೀನು ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ದರ್ಶನ್ ಮತ್ತು ಪವಿತ್ರ ಗೌಡ ಹಾಗೂ ಇತರೆ ಆರೋಪಿಗಳಿಗೆ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ. 
ಇದೇ ಕಾರಣಕ್ಕೆ ದರ್ಶನ್ ಪರ ವಕೀಲರು, ಜಾಮೀನು ರದ್ದು ಮಾಡದಿರಲು ಲಿಖಿತ ಕಾರಣಗಳನ್ನು ನೀಡಿ ಸುಪ್ರೀಂ ಕೋರ್ಟ್​ಗೆ (Supreme Court) ಕಾರಣಗಳನ್ನ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್​ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪುನ್ನು ಸುಪ್ರೀಂ ಕೋರ್ಟ್​​ ಪ್ರಕಟಿಸಬೇಕಿದೆ. ಕರ್ನಾಟಕ ಹೈಕೋರ್ಟ್, ದರ್ಶನ್ ಹಾಗೂ ಇತರರಿಗೆ ಜಾಮೀನು ನೀಡುವಾಗ ಸೂಕ್ತ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅದೇ ಕಾರಣಕ್ಕೆ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್​ಗೆ ಲಿಖಿತ ಕಾರಣಗಳನ್ನು ನೀಡಿದ್ದಾರೆ.
ಸರ್ಕಾರದ ವಾದದಲ್ಲೇನಿದೆ? 
ಸುಪ್ರೀಂ ಕೋರ್ಟ್​​ನಲ್ಲಿ ಸರ್ಕಾರದ ಪರ ವಾದ ಏನು ಅಂತಾ ನೋಡೋದಾದ್ರೆ.. ಮೃತ ರೇಣುಕಾಸ್ವಾಮಿ ಆರೋಪಿ ದರ್ಶನ್ ಅಭಿಮಾನಿಯಾಗಿದ್ದ. ಆರೋಪಿ ದರ್ಶನ್ ಜೊತೆ ಪವಿತ್ರಗೌಡ  ಲಿವ್-ಇನ್ ಸಂಬಂಧದಲ್ಲಿದ್ದರು. ರೇಣುಕಾ ಪವಿತ್ರಾಗೆ ಇನ್​ಸ್ಟಾದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ. ರೇಣುಕಾಸ್ವಾಮಿಯನ್ನ ಅಪಹರಿಸಿ, ಶೆಡ್​​​ನಲ್ಲಿ ಕೊ*ಲೆ ಮಾಡಿದ್ದರು. ಆರೋಪಿಗಳು ಕೊ*ಲೆ ಆದ ಸ್ಥಳದಲ್ಲಿದ್ರು ಅಂತ ತನಿಖೆಯಲ್ಲಿ ಬಯಲಾಗಿದೆ. ಕಿಡ್ನ್ಯಾಪ್ ವೇಳೆ, ಕೊ*ಲೆ ಸ್ಥಳದಲ್ಲಿ ಆರೋಪಿಗಳಿದ್ದಿದ್ದು ತಿಳಿದುಬಂದಿದೆ. 
Advertisment

darshan(2)

ಶೆಡ್​ಗೆ ರೇಣುಕಾಸ್ವಾಮಿ, ಆರೋಪಿಗಳ ಪ್ರವೇಶ ಐವರು ಸಾಕ್ಷಿ ನೋಡಿದ್ದಾರೆ. ಕೊ*ಲೆ ನಡೆದ ಸ್ಥಳದಲ್ಲಿನ ಮಣ್ಣಿನ ಮಾದರಿ, ದರ್ಶನ್, A4 ರಾಘವೇಂದ್ರ, ನಂದೀಶ್ ಮತ್ತು ನಾಗರಾಜು ಪಾದರಕ್ಷೆಗಳಲ್ಲಿ ಸಿಕ್ಕ ಮಾದರಿ ಹೊಂದಾಣಿಕೆ ಆಗಿದೆ. DNAಯಲ್ಲೂ ಮೃತನ ರಕ್ತದ ಕಲೆಗಳು ಕೆಲ ಆರೋಪಿಗಳ ಬಟ್ಟೆಗಳ ಮೇಲೆ ಇದೆ. ಕೊ*ಲೆ ನಡೆದ ಸಮಯದಲ್ಲಿ ಪವಿತ್ರಾ ಗೌಡ ಮತ್ತು A2 ದರ್ಶನ್ ಸಕ್ರಿಯ ಭಾಗಿ ಆಗಿದ್ದಾರೆ.  
ಹೈಕೋರ್ಟ್ ಬೇಲ್ ನೀಡುವ ತೀರ್ಪು ಸರಿಯಾಗಿಲ್ಲ, ದಾಖಲೆಗಳಿಗೆ ವಿರುದ್ಧ ತೀರ್ಪು ನೀಡಲಾಗಿದೆ. ಕೊ*ಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂದಿರೋದು ತಪ್ಪು. ಮೃತನ ರೇಣುಕಾ ಮೈ ಮೇಲಿನ ಗಾಯಗಳು ಇದನ್ನು ಸುಳ್ಳಾಗಿಸುತ್ತವೆ. ಸಾಕ್ಷಿ ಹೇಳಿಕೆ ತಡವಾಗಿ ದಾಖಲಿಸಲಾಗಿದೆ ಅಂತ ಅನುಮಾನಿಸಿದ್ದು ಸರಿಯಲ್ಲ. ವಿಳಂಬಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಸೂಕ್ತ FSL, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಪುರಾವೆಗಳಿವೆ ಅಂತ ಪರಿಗಣಿಸಿಲ್ಲ. ಜಾಮೀನು ವಿಚಾರಣೆ ಹಂತದಲ್ಲಿ ಹೈಕೋರ್ಟ್ ಮಿನಿ ಟ್ರಯಲ್ ನಡೆಸಿದೆ. ಕೊ*ಲೆ ಆರೋಪಿ ದರ್ಶನ್​ಗೆ ಈ ಹಿಂದೆ ಕೂಡ ಅಪರಾಧದ ಹಿನ್ನೆಲೆ ಇದೆ. ಬೆನ್ನು ನೋವಿನ ಅಂತ ಕೋರ್ಟ್​​​ ಹಾಜರಾಗೋದ್ರಿಂದ ವಿನಾಯಿತಿ ಪಡೆದಿದ್ರು. ಮರು ದಿನವೇ ದರ್ಶನ್​​ ಚಲನಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ ಎಂದು ಸರ್ಕಾರ ವಾದ ಮಂಡಿಸಿದೆ. 
Advertisment

ದರ್ಶನ್ ಪರ ನೀಡಿದ ಲಿಖಿತ ಕಾರಣಗಳು..

ಇವತ್ತು ದರ್ಶನ್ ಪರ ನೀಡಿದ ಲಿಖಿತ ಕಾರಣಗಳು.. ದರ್ಶನ್ ಅವರ ಬಂಧನದ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ದರ್ಶನ್ ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು, ಬೆಂಗಳೂರಿನಲ್ಲಿ FIR ದಾಖಲು, ಬಂಧನಕ್ಕೆ ಕಾರಣವನ್ನು ಸಂಜೆ 6:30 ರವರೆಗೂ ಲಿಖಿತವಾಗಿ ನೀಡಿರುವುದಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದೆ ಇರುವುದು ಕಾನೂನು ಉಲ್ಲಂಘನೆ ಆಗಿದೆ. 

 

actor darshan case
ನಟ ದರ್ಶನ್

 

ದರ್ಶನ್ ಜಾಮೀನು ರದ್ದುಪಡಿಸುವುದು ಕಠಿಣ ಕ್ರಮವಾಗಲಿದೆ, ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಸಾಕ್ಷ್ಯವಿಲ್ಲ, ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ದರ್ಶನ್ ಮತ್ತು ಎ-3 ನಡುವೆ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ವಿನಿಮಯ ಆಗಿಲ್ಲ. ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
Advertisment
ಘಟನೆ ನಡೆದ 7 ದಿನಗಳ ನಂತರ ಕಿರಣ್ ಹೇಳಿಕೆ ದಾಖಲಿಸಲಾಗಿದೆ, ಸಾಕ್ಷಿಗಳಾದ ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಕೋರ್ಟ್‌ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ, ಮೂರು ಸೆಕೆಂಡ್ ವೀಡಿಯೊ ಇದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರದ ವಾದದಲ್ಲಿ ಹುರುಳಿಲ್ಲ, ಮೂರು ಸೆಕೆಂಡ್ ಗಳ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ. ಮೂರು ಸೆಕೆಂಡಿನ ವಿಡಿಯೋ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿಲ್ಲ ಅಥವಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲ್ಲ, ಮರಣದ ಸಮಯವನ್ನು ಪ್ರಾಸಿಕ್ಯೂಷನ್ ಕಥೆಗೆ ಅನುಗುಣವಾಗಿ ನಿರ್ಧರಿಸಲಾಗಿದೆ ಎಂದು ಕಾರಣಗಳನ್ನು ನೀಡಲಾಗಿದೆ. ಕೆಲವು ಕಾರಣಗಳನ್ನು ದರ್ಶನ್ ಪರ ವಕೀಲರು ನೀಡಿದ್ದು, ಈ ಎಲ್ಲ ಕಾರಣಗಳನ್ನು ಪರಿಗಣಿಸಿ ದರ್ಶನ್ ಜಾಮೀನನ್ನು ರದ್ದು ಮಾಡಬಾರದು ಅಂತಾ ಮನವಿ ಮಾಡಲಾಗಿದೆ. 

ರೇಣುಕಾಸ್ವಾಮಿ ಪ್ರಕರಣ.. ಕಾಣದ ಕೈಗಳ ಕುತಂತ್ರ ಎಂದಿದ್ದೇಕೆ ಪವಿತ್ರಾಗೌಡ.. ಪೋಸ್ಟ್ ಹಿಂದಿನ ಕಾರಣವೇನು?

ಜೊತೆಗೆ ಕ್ರಿಮಿನಲ್ ಸೆ.161, 164ರಡಿ ದಾಖಲಾಗಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖ ಮಾಡಲಾಗಿದೆ. ಹಲ್ಲೆಯ ಆರೋಪ ಆರೋಪಿಗಳಾದ A6, A7ರ ಮೇಲೆ ಹೊರಿಸಲಾಗಿಲ್ಲ. A2 ಜೊತೆ A6, A7 ಮೃತನ ಹ*ತ್ಯೆಗೆ ಸಂಚು ರೂಪಿಸಿದ್ದಕ್ಕೆ ಪುರಾವೆಗಳಿಲ್ಲ. ಅದಕ್ಕೆ ವಿರುದ್ಧವಾಗಿ A3, A4ರ ಸ್ವಯಂಪ್ರೇರಿತ ಹೇಳಿಕೆಗಳಿವೆ. A6, A7ರ ಸಹಾಯವನ್ನ ಕೋರಿದ್ದಾರೆ ಎಂದು ಸ್ಪಷ್ಟಪಡಿಸುತ್ತದೆ. ದರ್ಶನ್​ಗೆ ಹ*ತ್ಯೆ ಮಾಡುವ ಯೋಜನೆ ಬಗ್ಗೆ ತಿಳಿದಿರಲಿಲ್ಲ ಎಂಬುದು ಸ್ಪಷ್ಟ. ಎಲ್ಲಕ್ಕಿಂತ ಮುಖ್ಯವಾಗಿ A6, A7 ಮೃತ ವ್ಯಕ್ತಿ ಮೇಲೆ ಕೈ ಎತ್ತಿದ್ದಾರೆ ಅಂತ. ಸಾಬೀತುಪಡಿಸುವುದಕ್ಕೆ ದಾಖಲೆ ಸಲ್ಲಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿದ್ದಾರೆ. 
Advertisment
  
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 
Pavitra Gowda Kannada News Pavitra Gowda tattoo Actor Darshan
Advertisment
Advertisment
Advertisment