/newsfirstlive-kannada/media/media_files/2025/08/08/dr-vishnuvardhan-2025-08-08-19-20-27.jpg)
ಸಾಹಸಸಿಂಹ ವಿಷ್ಣುವರ್ಧನ್
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ.ವಿಷ್ಣವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಜಾಗದ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಪುಣ್ಯಸ್ಮರಣೆಗೂ ಅವಕಾಶ ಕೊಟ್ಟಿರಲಿಲ್ಲ. ಇದೀಗ ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ ಆಗಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ. ಸಮಾಧಿ ನೆಲಸ ಮಾಡಿರೋದನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಹಾಗಿದ್ದರೆ ವಿಷ್ಣು ಸಮಾಧಿ ವಿವಾದ ಏನು..?
ಸ್ಯಾಂಡಲ್ವುಡ್ನ ಸಹಾಸಸಿಂಹ ಡಾ.ವಿಷ್ಣುವರ್ಧನ್ ಡಿಸೆಂಬರ್ 30, 2009 ರಂದು ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಯಿತು. ಆದರೆ, ಅದು ವಿವಾದಿತ ಜಾಗ ಎನ್ನುವುದು ಆ ಕ್ಷಣಕ್ಕೆ ಯಾರೂ ಆಲೋಚಿಸಿರಲಿಲ್ಲ. ಸಮಾಧಿ ಮಾಡಿದ ಬಳಿಕ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳಿಬಂತು.
ಅಭಿಮಾನಿ ಹಾಗೂ ಕುಟುಂಬದವರು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸಿದರು. ಅಂತೆಯೇ 2010-11ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 11 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿತು. ಆದರೆ ಅಭಿಮಾನ್ ಸ್ಟಡಿಯೋ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹಿರಿಯ ನಟ ಬಾಲಕೃಷ್ಣ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತು.
ಯಾಕೆ ವಿರೋಧ..?
ಅಭಿಮಾನ್ ಸ್ಟುಡಿಯೋಗೆ ಸಂಬಂಧಿಸಿದ ಪ್ರಕರಣವು 2004ರಿಂದಲೇ ಕೋರ್ಟ್ನಲ್ಲಿತ್ತು. ಬಾಲಣ್ಣ ಅವರು ಅಭಿಮಾನ್ ಸ್ಟುಡಿಯೋಗೆ ಎಂದು 20 ಎಕೆರೆ ಜಾಗ ಪಡೆದಿದ್ದರು. ಆದರೆ ಅದರಲ್ಲಿ ಬಾಲಣ್ಣ ಕುಟುಂಬ 10 ಎಕರೆ ಮಾರಿ ಉಳಿದ ಹತ್ತು ಎಕೆರೆಯಲ್ಲಿ ಸ್ಟುಡಿಯೋ ಅಭಿವೃದ್ಧಿ ಮಾಡ್ತೇವೆ ಎಂದಿತ್ತು. ಆ ಸಂದರ್ಭದಲ್ಲಿ ಸ್ಟುಡಿಯೋ ಅಭಿವೃದ್ಧಿ ಆಗಿಲ್ಲ ಅಂದ್ರೆ ಸರ್ಕಾರಕ್ಕೆ ವಶಪಡಿಸಿಕೊಳ್ಳುವ ಅಧಿಕಾರವಿತ್ತು.
ಇದನ್ನೂ ಓದಿ: ಕಾಂತಾರ ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ಸಹಕಲಾವಿದ ನಿಧನ
/filters:format(webp)/newsfirstlive-kannada/media/media_files/2025/08/08/vishnuvardhan-smaraka-2-2025-08-08-15-28-23.jpg)
ಆದರೆ ಸ್ಟುಡಿಯೋ ಅಭಿವೃದ್ಧಿಯೂ ಆಗಿಲ್ಲ. ಸರ್ಕಾರವೂ ಆ ಜಾಗವನ್ನು ಪಡಿಸಿಕೊಳ್ಳಲಿಲ್ಲ. ವಿಷ್ಣು ವರ್ಧನ್ ನಿಧನದ ನಂತರ ಅಭಿಮಾನ್ ಸ್ಟುಡಿಯೋ ಬಳಿ ಸಮಾಧಿ ಮಾಡಲಾಯಿತು. ಅದಕ್ಕೆ ಬಾಲಣ್ಣ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ಸ್ಟುಡಿಯೋ ಜಾಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣಕ್ಕೆ ಹಿನ್ನಡೆಗೆ ಕಾರಣವಾಯಿತು. ಸ್ಟುಡಿಯೋ ಕಾರ್ಯನಿರ್ವಹಣೆಯ ಸಂಬಂಧ ಸರ್ಕಾರ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ತನಿಖಾ ತಂಡವು ಸ್ಟುಡಿಯೊದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಲು ಸೂಚಿಸಿತ್ತು. ಈ ಸಂದರ್ಭದಲ್ಲಿ ನಟ ಬಾಲಕೃಷ್ಣ ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ಸೂಕ್ತ ದಾಖಲೆಗಳನ್ನಾಗಲೀ ದೃಢೀಕರಣ ಪತ್ರವನ್ನಾಗಲೀ ಮಾಡಿಸಿಕೊಳ್ಳದೆ ಎಡವಿತು. ಈ ಅವಕಾಶ ಬಳಸಿಕೊಂಡ ಬಾಲಕೃಷ್ಣ ಮಕ್ಕಳು 28.9.2015ರಲ್ಲಿ ಸರ್ಕಾರದ ಮುಟ್ಟುಗೋಲು ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು.
ಇದನ್ನೂ ಓದಿ:ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗೆ ಹೈಕೋರ್ಟ್ ನಿಂದ ತಡೆಯಾಜ್ಞೆ
/filters:format(webp)/newsfirstlive-kannada/media/media_files/2025/08/08/vishnuvardhan-smaraka-2025-08-08-15-27-58.jpg)
ಕೊನೆಗೆ ಸರ್ಕಾರದ ವಿರುದ್ಧವೇ ಬಾಲಣ್ಣ ಕುಟುಂಬ ತಡೆಯಾಜ್ಞೆ ತಂದಿತು. ಹೀಗಾಗಿ ಬಾಲಕೃಷ್ಣ ಕುಟುಂಬದವರ ನಿರ್ಧಾರಗಳಿಂದಾಗಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡ್ಡಿ ಉಂಟಾಯಿತು. ಬಾಲಣ್ಣ ಮಗಳು ಗೀತಾಬಾಲಿ ಆಸ್ತಿ ಮಾರಾಟ ವಿಚಾರದಲ್ಲಿ ಆಕ್ಷೇಪವಿದ್ದ ಕಾರಣ ಸರ್ಕಾರ, ಅಂಬರೀಶ್ ಯಾರೇ ಪ್ರಯತ್ನ ಪಟ್ಟರೂ ಆಗಿಲ್ಲ.
ಹೀಗಾಗಿ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ಇದ್ದ ಮತ್ತೊಂದು ಜಾಗವನ್ನು ಸರ್ಕಾರ ನಿಗಧಿ ಮಾಡಿತ್ತು. ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ನಡೆಯಿತು. ಆದರೆ, ಅದು ಅರಣ್ಯ ಪ್ರದೇಶ ಎನ್ನುವ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಈ ಘಟನೆ ಬಳಿಕ ವಿಷ್ಣು ಕುಟುಂಬ ಮೈಸೂರಿಗೆ ಸ್ಮಾರಕ ಸ್ಥಳಾಂತರಕ್ಕೆ ಪಟ್ಟು ಹಿಡಿಯಿತು. ಇದರ ಮಧ್ಯೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಲಿ ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: ರಾತ್ರೋರಾತ್ರಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮ -ಅಸಲಿಗೆ ಆಗಿದ್ದೇನು..?
/filters:format(webp)/newsfirstlive-kannada/media/media_files/2025/08/08/vishnuvardhan-smaraka-1-2025-08-08-15-21-49.jpg)
ಕುಟುಂಬದವರ ಆಶಯದಂತೆ ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡ್ತು. ಮೈಸೂರಿನಲ್ಲಿ ಭೂಮಿ ಮಂಜೂರಾದರೂ, ರೈತರ ವಿರೋಧದಿಂದಾಗಿ ನಿರ್ಮಾಣ ವಿಳಂಬವಾಯಿತು. ಕೊನೆಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ ಮತ್ತು ಲೋಕಾರ್ಪಣೆ ಕೂಡ ಆಗಿದೆ. ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗಬೇಕೆಂದು ಹೋರಾಟ ಮಾಡಿದ್ದರು. ನ್ಯಾಯಾಲಯದಲ್ಲಿ ಬಾಲಣ್ಣ ಕುಟುಂಬದ ವಿರುದ್ಧ ಅರ್ಜಿ ಸಲ್ಲಿಸಿದ್ದರು. 2023 ರಲ್ಲಿ ಅಭಿಮಾನಿಗಳಿಗೆ ಈ ಪ್ರಕರಣದಲ್ಲಿ ಹಕ್ಕು ಇಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲಿಂದ ಬಾಲಣ್ಣ ಕುಟುಂಬ ತಡೆಯಾಜ್ಞೆ ತಂದು ಆ ಜಾಗಕ್ಕೆ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧ ಹೇರಿದೆ. ಈಗ ಏಕಾಏಕಿ ಕೋರ್ಟ್ ಆದೇಶ ಪಡೆದು ಸಮಾಧಿ ತೆರವು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ