ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್​ಗೆ ಹೈಕೋರ್ಟ್​ನಿಂದ ತಡೆಯಾಜ್ಞೆ

ನಟಿ ಶ್ವೇತಾ ಮೆನನ್ , ಅಸೋಸಿಯೇಷನ್ ಆಫ್ ಮಲಯಾಳಂ ಸಿನಿ ಆರ್ಟಿಸ್ಟ್ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿದ್ದಂತೆ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಶ್ಲೀಲ, ಅಸಭ್ಯ ದೃಶ್ಯಗಳಲ್ಲಿ ನಟಿಸಿದ ಆರೋಪದಡಿ ಕೇಸ್ ದಾಖಲಾಗಿತ್ತು. ಈ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ

author-image
Chandramohan
actress shwetha menon33
Advertisment
  • ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾಗಿ ಶ್ವೇತಾ ಮೆನನ್ ವಿರುದ್ಧ ಕೇಸ್ ದಾಖಲು
  • ಹೈಕೋರ್ಟ್ ಮೆಟ್ಟಿಲೇರಿ ಕೇಸ್‌ಗೆ ತಡೆಯಾಜ್ಞೆ ಪಡೆದ ನಟಿ ಶ್ವೇತಾ ಮೆನನ್‌
  • ಸಿನಿಮಾಗಳು ಸೆನ್ಸಾರ್ ಆಗಿಯೇ ಬಿಡುಗಡೆ ಆಗಿವೆ ಎಂದ ನಟಿ

ಕೇರಳದಲ್ಲಿ ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಕ್ಕಾಗಿ ಕೋರ್ಟ್ ಆದೇಶದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರ ವಿರುದ್ಧ ನಟಿ ಶ್ವೇತಾ ಮೆನನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನ ಜಸ್ಟೀಸ್ ವಿ.ಜಿ.ಅರುಣ್ ಅವರ ಪೀಠವು ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ನಟಿ ಶ್ವೇತಾ ಮೆನನ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ಖ್ಯಾತ ನಟಿಯ ಕಸೀನ್​ಗೆ ಚೂಪಾದ ವಸ್ತುವಿನಿಂದ ಇರಿತ.. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೋಯಿತು ಜೀವ

ತಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕೆಂದು ನಟಿ ಶ್ವೇತಾ ಮೆನನ್ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಮೇಲ್ನೋಟಕ್ಕೆ ನಟಿಯ ಪರ ವಕೀಲರ ವಾದದಲ್ಲಿ ಹುರುಳಿದೆ ಎಂದು ಅನ್ನಿಸುತ್ತಿದೆ. ದೂರು ಅನ್ನು ತನಿಖೆಗೆ ಆದೇಶಿಸುವ ಮುನ್ನ, ಪೊಲೀಸರಿಂದ ಈ ಬಗ್ಗೆ ವರದಿ ತರಿಸಿಕೊಳ್ಳಬೇಕಾಗಿತ್ತು. ತನಿಖೆ ನಡೆಸುವುದನ್ನು ಅನುಸರಿಸಬೇಕಾಗಿತ್ತು.

ದೂರು ಸಲ್ಲಿಸಿದ ಅಲ್ಪ ಅವಧಿಯಲ್ಲೇ, ದೂರನ್ನು ತನಿಖೆಗಾಗಿ ಪೊಲೀಸರಿಗೆ ಫಾರ್ವರ್ಡ್ ಮಾಡಲಾಗಿದೆ. ಸರಿಯಾದ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಎರ್ನಾಕುಲಂನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್​ರಿಂದ ದೂರಅನ್ನು ಪೊಲೀಸರ ತನಿಖೆಗೆ ಫಾರ್ವರ್ಡ್ ಮಾಡುವ ಮುನ್ನ ಪಾಲಿಸಿದ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಿ ವರದಿ ತರಿಸಿಕೊಳ್ಳಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 1075/2025 ಗೆ ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ದೂರುದಾರರಿಗೂ ನೋಟೀಸ್ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. 

ಇದನ್ನೂ ಓದಿ: ಐಶ್ಚರ್ಯಾಗೆ ಡಿವೋರ್ಸ್ ನೀಡಿ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರಾ ನಟ ಧನುಷ್..?

actress shwetha menon


ಮುಂದಿನ ವಿಚಾರಣೆ ವೇಳೆ ಪೊಲೀಸರು ಹಾಗೂ ದೂರುದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್, ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್​ ರದ್ದುಪಡಿಸಬೇಕೇ ಬೇಡವೇ ಎಂಬ ಬಗ್ಗೆ  ಅಂತಿಮ ಆದೇಶ ನೀಡಲಿದೆ.

ಮಲಯಾಳಂ ನಟಿ ಶ್ವೇತಾ ಮೆನನ್, ಸಾಲ್ಟ್ ಎನ್ ಪೆಪ್ಪರ್, ರತಿನಿವೀಡಂ, ಕಾಳಿಮನು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿದ್ದಾರೆ.  ಆಗಸ್ಟ್ 15 ರಂದು ಚುನಾವಣೆ ನಿಗದಿಯಾಗಿದೆ. ಇದರ ಮಧ್ಯೆಯೇ ಮಾರ್ಟಿನ್ ಮೆನಚರಿ ಎಂಬುವವರು ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ದೂರು ನೀಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ದುರುದ್ದೇಶಪೂರಿತ. ತಮ್ಮ ವಿರುದ್ಧ ಹೊರಿಸಿರುವ ಸೆಕ್ಷನ್ ಗಳಡಿ ಯಾವುದೇ ತಪ್ಪು ಮಾಡಿಲ್ಲ ಎಂದು ನಟಿ ಶ್ವೇತಾ ಮೆನನ್ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: ಕಾಂತಾರ ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ಸಹಕಲಾವಿದ ನಿಧನ

ಕಾಂಡೊಮ್ ಜಾಹೀರಾತಿನಲ್ಲಿ ನಟಿ ಶ್ವೇತಾ ಮೆನನ್ ನಟಿಸಿದ್ದಾರೆ ಎಂದು ಮಾರ್ಟಿನ್ ಮೆನಚರಿ ದೂರು  ನೀಡಿದ್ದಾರೆ. ತಾವು ನಟಿಸಿದ ಎಲ್ಲಾ ಸಿನಿಮಾಗಳನ್ನು ಸೆನ್ಸಾರ್ ಬೋರ್ಡ್ ಸೆನ್ಸಾರ್ ಮಾಡಿ ಸರ್ಟಿಫಿಕೇಟ್ ನೀಡಿದೆ. ಅನೇಕ ವರ್ಷಗಳಿಂದ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ಸಾರ್ವಜನಿಕ ವಲಯದಲ್ಲಿ ಎಲ್ಲರಿಗೂ ಲಭ್ಯವಿದೆ. ಪಲೇರಿ ಮಾಣಿಕ್ಯಂನಲ್ಲಿ ನಟಿಸಿದ ಪಾತ್ರಕ್ಕೆ ಉತ್ತಮ ನಟಿ ಎಂದು ಕೇರಳ ರಾಜ್ಯ ಪ್ರಶಸ್ತಿ ಬಂದಿದೆ.

ಕಾಂಡೊಮ್ ಜಾಹೀರಾತಿನಲ್ಲಿ ಬಹಳಷ್ಟು ವರ್ಷಗಳ ಹಿಂದೆ ನಟಿಸಲಾಗಿತ್ತು. ಆ ಜಾಹೀರಾತನ್ನು ಕೂಡ ಸೆನ್ಸಾರ್ ಮಾಡಿ ಸರ್ಟಿಫಿಕೇಟ್ ನೀಡಲಾಗಿತ್ತು ಎಂದು ಮಲಯಾಳಂ ನಟಿ ಶ್ವೇತಾ ಮೆನನ್, ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ. ತಾವು ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಕಾರಣಕ್ಕೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದು ನಟಿ ಶ್ವೇತಾ ಮೆನನ್ ಹೇಳಿದ್ದಾರೆ. 

ಇದನ್ನೂ ಓದಿ: ಡಾ.ವಿಷ್ಣುವರ್ಧನ್ ಸ್ಮಾರಕ ವಿವಾದದ ಹಿನ್ನೆಲೆ ಏನು..? ರಾತ್ರೋರಾತ್ರಿ ನೆಲಸಮ ಆಗಿದ್ದೇಕೆ..?

actress shwetha menon222

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

shwetha menon kerala actress malayalam actress AMMA ELECTION KERLALA HIGH COURT ERNAKULAM CENTRAL POLICE STATION
Advertisment