/newsfirstlive-kannada/media/media_files/2026/01/08/toxic-2026-01-08-14-00-09.jpg)
ಯಾರ ಬಗ್ಗೆ ಎಚ್ಚರಿಸಿದ್ದರೋ ಅವ್ನೇ ಎದುರಿಗೆ ಬರ್ತಿದ್ದಾನೆ ಅನ್ನೋ ಒಂದೇ ಒಂದು ಲೈನ್​ನಿಂದ, ಟಾಕ್ಸಿಕ್​ ಟೀಮ್​ ಇಡೀ ಪ್ರಪಂಚಕ್ಕೆ ರಾಯನ ಎಂಟ್ರಿ ಬಗ್ಗೆ ಹಿಂಟ್​ ಕೊಟ್ಬಿಟ್ಟಿತ್ತು. ಹೊಗೆ ಬೆಂಕಿಯ ನಡುವೆ ಬಂದಿದ್ದ ರಾಕಿ ಭಾಯ್​.. ಈಗ ರಾಯ. ಇಲ್ಲಿವರೆಗೂ ಹೀರೋಯಿನ್​ಗಳ ಲುಕ್​ ತೋರಿಸಿದ್ದ ಟೀಮ್​, ಈಗ ಯಶ್​ ಬರ್ತ್​ಡೇಗೆ ರಾಯನ ಎಂಟ್ರಿ ತೋರಿಸಿದ್ದಾರೆ. ಅದೇ ಈಗ ಫಿಲ್ಮ್​ ಇಂಡಸ್ಟ್ರೀಸ್​​ನಲ್ಲಿ ಧೂಳೆಬ್ಬಿಸ್ತಿದೆ.
ರಾಯನ ಎಂಟ್ರಿಗೆ ಜನ ಫಿದಾ ಆಗಿದ್ದಾರೆ. ರಾಕಿ ಭಾಯ್​ಗೂ ಮುನ್ನ ನಯನಾತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಹೀಗೆ ಹಾಟ್ ನಟಿಯ ಎಂಟ್ರಿನೂ ಆಗಿತ್ತು. ಟಾಕ್ಸಿಕ್.. ರಾಕಿಂಗ್ ಸ್ಟಾರ್ ಯಶ್‌ರ ಬಹುನಿರೀಕ್ಷಿತ ಚಿತ್ರ.. ಅತಿದೊಡ್ಡ ತಾರಾಗಣವನ್ನ ಹೊಂದಿರೋ ಬಿಗ್‌ಬಜೆಟ್ ಮೂವಿ.
ಇದನ್ನೂ ಓದಿ: ದಾಖಲೆ ಬರೆದ ಟಾಕ್ಸಿಕ್ ರಾಯಲ್ ಎಂಟ್ರಿ : ಧುರಂಧರ್ 2 ಮುಂದೂಡಿಕೆಯಾಗುತ್ತಾ?
/filters:format(webp)/newsfirstlive-kannada/media/media_files/2026/01/09/toxic-cinema-views-records-2026-01-09-12-03-15.jpg)
ಟಾಕ್ಸಿಕ್ ಚಿತ್ರದ ಒಂದೊಂದೇ ಅಪ್‌ಡೇಟ್‌ಗಳು.. ಒಂದೊಂದೇ ಲುಕ್ಸ್​ಗಳು ಮೂವಿ ಮೇಲೆ ಭಾರೀ ನಿರೀಕ್ಷೆಗಳನ್ನ ಹುಟ್ಟಾಕಿವೆ. ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಮೊದಲು ಇಬ್ಬರ ಫಸ್ಟ್‌ಲುಕ್ ರಿವೀಲ್ ಆಗಿತ್ತು. ಆಮೇಲೆ ಮತ್ತೊಬ್ಬ ಬಿಟೌನ್ ಬೆಡಗಿಯ ಫಸ್ಟ್ ಲುಕ್‌ನ ಚಿತ್ರತಂಡ ರಿಲೀಸ್ ಮಾಡಿತ್ತು. ಆಕೆ ಬೇರಾರು ಅಲ್ಲ.. ಬಾಲಿವುಡ್ ಬೆಡಗಿ ಹುಮಾ ಖುರೇಷಿ. ಆನಂತರ ಬಂದ ನಯನತಾರಾ.. ರಿಕ್ಮಿಣಿ ವಸಂತ ಹೀಗೆ ಹಾಟ್​ ನಟಿಯರ ಲುಕ್​.. ಒನ್​ ಸ್ಟೆಪ್​ ಕಣ್ಣಿಗೆ ಹಬ್ಬ ಮಾಡಿದ್ವು. ಟಾಕ್ಸಿಕ್​ನಲ್ಲಿ ಎಲಿಜಬೆತ್ ಆಗಿ ಹುಮಾ ಖುರೇಷಿ.. ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಮೆಲ್ಲಿಸಾ ಆಗಿ.. ಗಂಗಾ ಪಾತ್ರದಲ್ಲಿ ನಯನತಾರಾ.. ನಾದಿಯಾ ಆಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್​ನಲ್ಲಿ ಇಂಡಿಯಾ ಸಿಇಓ ಆಗಿದ್ದ ರಾಕಿಭಾಯ್​, ರಾಯನಾಗಿ ಟಾಕ್ಸಿಕ್​ ಸಿನಿಮಾದಲ್ಲಿ ವರ್ಲ್ಡ್​​ ಸಿಇಓ ಆಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ.. ಪ್ಯಾನ್ ವರ್ಲ್ಡ್ ಸಿನಿಮಾ. ಈಗಾಗ್ಲೇ ಟಾಕ್ಸಿಕ್​​ನ ಬಹುತೇಕ ಶೂಟಿಂಗ್​ ಮುಗಿದಿದೆ. ಕೆಜಿಎಫ್​​ನ ಅಬ್ಬರದಂತೆ ಇಲ್ಲೂ ರವಿ ಬಸ್ರೂರು ಮ್ಯೂಸಿಕ್​ ಸ್ಪೀಕರ್ಸ್​ನ ಬ್ಲ್ಯಾಸ್ಟ್​ ಮಾಡ್ಲಿದೆ.
ಯಶ್​​ ಇಂಟ್ರೋದಲ್ಲಿ ಕಾಣಿಸಿಕೊಂಡ ನಟಿ ಯಾರು?
ಟೀಸರ್​ ಅಲ್ಲದೇ ಇದ್ರೂ ಟೀಸರ್​ನಂಥಾ ಒಂದು ಕ್ಲಿಪ್​ನಲ್ಲಿ ಯಶ್​​ ಕಾಣಿಸಿಕೊಳ್ಳೋದು ಕೆಲ ಸೆಕೆಂಡ್ಸ್​ ಅಷ್ಟೇ. ಬಟ್​ ಓಪನಿಂಗ್ ಸೀನ್ ಒಂದು ಸ್ಮಶಾನದಲ್ಲಿ ಶುರುವಾಗುತ್ತೆ. ಅದಾದ್ಮೇಲೆ ಎಕ್ಸ್​ಪೆಕ್ಟೇ ಮಾಡದ ಸೀನ್​ ಓಪನ್​ ಆಗಿತ್ತು. ಆ ಸೀನ್​ನಲ್ಲಿ ಕಾಣಿಸಿಕೊಂಡ ನಟಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಯಾಕಂದ್ರೆ ಅದು ನಮ್ಮ ಕನ್ನಡ ಸಿನಿಮಾದ ಸೀನ್​ನಂತೆ ಇಲ್ಲ. ಪಕ್ಕಾ ಹಾಲಿವುಡ್​ ರೇಂಜ್​ನ ಸೀನ್​.
ಇದನ್ನೂ ಓದಿ: ‘ಟಾಕ್ಸಿಕ್’​ನಲ್ಲಿ ಯಶ್ ಕಿವಿ ಕಚ್ಚಿದ ನಟಿ ಯಾರು..?
/filters:format(webp)/newsfirstlive-kannada/media/media_files/2026/01/08/yash-toxic-2026-01-08-10-26-17.jpg)
ಸಿನಿಮಾ ಟೀಮ್ ಹೇಳಿಕೊಂಡಂತೆ.. ಇದು 18 ಪ್ಲಸ್​ಗೆ ಮೂವಿ. ಇಂಥಾ ಹಸಿಬಿಸಿಯಾಗಿ ಕಾಣಿಸಿ.. ಇಡೀ ಸ್ಮಶಾನಕ್ಕೆ ಕೊಳ್ಳಿ ಇಟ್ಟ ಕಳ್ಳಿ ಹೆಸ್ರು ನ್ಯಾಟಲೀ ಬರ್ನ್​ ಅಂತೆ. ಇಡೀ ಸ್ಮಶಾನದಲ್ಲಿ ಬರ್ನ್​ ರೂಪ ಕೊಟ್ಟ ಆಕೆ.. ಅಮೆರಿಕಾ ಮೂಲದ ಖ್ಯಾತ ಹಾಲಿವುಡ್ ನಟಿ... ಮತ್ತೊಂದು ಅಚ್ಚರಿ ಏನಂದ್ರೆ.. ಈಕೆ ಕೂಡ ಟಾಕ್ಸಿಕ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬಾಕೆ ಅಂತೆ. ನ್ಯಾಟಲಿ ಬರ್ನ್ ಒಬ್ಬ ಹಾಲಿವುಡ್ ನಟಿ ಮತ್ತು ನಿರ್ಮಾಪಕಿ ಕೂಡ. ಆಕೆಯ ಒರಿಜಿನಲ್​ ಹೆಸರು ನಟಾಲಿಯಾ ಗುಸ್ಲಿಸ್ತಾಯಿ.
​ಸಿಗಾರ್​ನಂಥ ನಾಟ್​ ಅಲೋವ್ಡ್​ ಮಾದಕ ವಸ್ತು.. ಯಾರೂ ಹೋಗದಂತ ಸ್ಮಶಾನ.. ಫುಲ್​ ಹಸಿಬಿಸಿ ಸೀನ್ಸ್​. ಇದು ಸದ್ಯ ಸಿನಿಮಾ ಪ್ರಪಂಚದಲ್ಲಿ ಚರ್ಚೆ ಹುಟ್ಟಾಕಿದೆ. ಮುಖ್ಯವಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಪ್ಲಸ್​ ಮೈನಸ್ಸಾಗಿ ಮಾತುಕಥೆ ಶುರುವಾಗಿದೆ. ಇದು ನಮ್ಮ ಮಣ್ಣಿನ ಕನ್ನಡ ಸಿನಿಮಾ ಅಲ್ಲ.. ಇದು ಇಂಗ್ಲಿಷ್ ಮೂವಿ ಅಂತೆಲ್ಲಾ ಮಾತು ಕೇಳಿ ಬರ್ತಿದೆ.. ಈಗಾಗ್ಲೇ ಟ್ರೋಲ್ಸ್​ ಕೂಡ ಶುರು ಮಾಡಿದ್ದಾರೆ. ಈ ಹಿಂದೆ ಇದೇ ಟಾಕ್ಸಿಕ್​ನ ಒಂದು ಕ್ಲಿಪ್​ ಸಹ ಇದೇ ಟಾಕನ್ನ ತಗೊಂಡಿತ್ತು.
/filters:format(webp)/newsfirstlive-kannada/media/media_files/2026/01/08/toxic-2-2026-01-08-13-59-55.jpg)
2.51 ನಿಮಿಷ ಇರೋ ಈ ಕ್ಲಿಪ್​.. ಬಾಲಿವುಡ್ ರೇಂಜ್​ಗೆ ಇಂಪ್ರೂವೈಸೇಶನ್ ಆಗಿದೆ. ರಾಯ ಗನ್ ಹಿಡಿದುಕೊಂಡು ಎಂಟ್ರಿಯಾಗುತ್ತಿದ್ದಂತೆ, ಸಮಾಧಿ ಸ್ಥಳ ಮರಣದ ಸ್ಥಲವಾಗುತ್ತೆ. ದೃಶ್ಯದಲ್ಲಿ ಕಂಡಂತೆ ಬ್ಲಾಕ್ ಥೀಮ್ ಆವರಿಸಿಕೊಂಡಿದೆ.. ಯಶ್ ಎಂಟ್ರಿ, ಬಳಸಿರೋ ಕಾರು, ಡ್ರೆಸ್, ಕಾರಿನಲ್ಲಿನ ಸೀನ್, ಸಮಾಧಿ ಸ್ಥಳಕ್ಕೆ ಗನ್ ಹಿಡಿದು ಬರೋ ಸೀನ್,ಫೈರಿಂಗ್, ಸ್ಫೋಟ ಎಲ್ಲಾ ಕುತೂಹಲವನ್ನೇನೋ ಹುಟ್ಟಾಕಿವೆ. ಬಟ್​ ಮಾರ್ಚ್ 19ಕ್ಕೆ ಟಾಕ್ಸಿಕ್​ ಅದೆಷ್ಟು ಡೆಡ್ಲಿ ಅನ್ನೋದು ಗೊತ್ತಾಗಲಿದೆ.
ಹೇಗಿರುತ್ತೆ ಫ್ಯಾಮಿಲಿ ಟೈಮ್?​
ನಿಮ್ಗೆ ಮತ್ತೊಂದು ವಿಷ್ಯ ಹೇಳ್ಬೇಕು.. ನಿಜಕ್ಕೆ ಯಶ್​ ಒಬ್ಬ ಒಳ್ಳೆ ರೈಟರ್​.. ಟಾಕ್ಸಿಕ್​ ಸಿನಿಮಾಗೆ ಯಶ್​ ಕೂಡ ರೈಟರ್​. ಆತನಲ್ಲಿ ಅಂಥಾ ರೈಟರ್​ ಇರೋದು ಮೊದಲು ಗೊತ್ತಾಗಿದ್ದೇ ರಾಧಿಕ ಅವ್ರಿಂದ. ಕೆಜಿಎಫ್​ನಲ್ಲಿ ತಾಯಿಗಿಂತ ಯೋಧ ಇಲ್ಲ ಅನ್ನೋ ಡೈಲಾಗ್​ ಹುಟ್ಟಿದ್ದೇ ರಾಧಿಕಾ ಅವ್ರಿಂದ ಅಂತ ಯಶ್​​ ಹೇಳಿದ್ರು. ರಾಧಿಕಾ ಪ್ರೆಗ್ನೆಂಟ್​ ಇದ್ದಾಗ ಯಶ್​ ಫೋನ್​ ಹಿಡಿದು ಹತ್ರ ಹೋದ್ರೆ.. ಬೈದು ಫೋನ್​ ದೂರ ಇಟ್ಟಿದ್ರಂತೆ. ಅಂದ್ರೆ ಹೊಟ್ಟೆಯಲ್ಲಿದ್ದ ಮಗುವನ್ನ ತಾಯಿ ಹೇಗೆ ರಕ್ಷಣೆ ಮಾಡ್ತಾಳೆ ಅಂತ ಆ ದಿನ ಯಶ್​ಗೆ ಅರ್ಥವಾಗಿತ್ತು. ಹಾಗಾಗಿ ಯಶ್​ಗೆ ರಾಧಿಕಾ ಒಂದು ರೀತಿ ಸಿನಿಮಾ ಮಾಡೋಕೆ ಸ್ಟ್ರೇಂಥಾಗಿದ್ದಾರೆ ಎನ್ನಲಾಗ್ತಿದೆ.
ಯಶ್​ ಈಗ ಪ್ಯಾನ್​ ವರ್ಲ್ಡ್​​ ಸ್ಟಾರ್​.. ಆದ್ರೂ ಅವ್ರು ಫ್ಯಾಮಿಲಿ ಜೊತೆ ಮಗುವಾಗಿರ್ತಾರೆ. ಮಕ್ಕಳ ಜೊತೆ ಕೀಟ್ಲೇ ಮಾಡ್ತಾರೆ.. ಆಡ್ತಾ ಕುಣೀತಾರೆ.. ಬೀಚ್​ನಲ್ಲಿ ಗೂಡ್​ ಕಟ್ತಾರೆ.. ಮಕ್ಕಳ ಜೊತೆ ಸೇರಿ ಮಗುವಾಗಿಬಿಡ್ತಾರೆ. ಒಟ್ಬಲ್ಲಿ ಯಶ್​ ಈಗ ಕಂಪ್ಲೀಟ್​ ಸ್ಟಾರ್​ ಕಂ.. ಫ್ಯಾಮಿಲಿ ಸ್ಟಾರ್​. ಟಾಕ್ಸಿಕ್​ ಮೂವಿಯಿಂದ ಯಶ್​​.. ಇನ್ನೆಂಥ ಹಂತಕ್ಕೆ ತಲುಪ್ತಾರೋ ಕಲ್ಪನೆಗೆ ನಿಲುಕ್ತಿಲ್ಲ.
ಇದನ್ನೂ ಓದಿ: ದಾಖಲೆ ಬರೆದ ಟಾಕ್ಸಿಕ್ ರಾಯಲ್ ಎಂಟ್ರಿ : ಧುರಂಧರ್ 2 ಮುಂದೂಡಿಕೆಯಾಗುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us