newsfirstkannada.com

ಪಾಂಡ್ಯ, ತಿಲಕ್ ವರ್ಮಾ ಮಧ್ಯೆ ಭಾರೀ ಗಲಾಟೆ.. ಜಗಳ ಬಿಡಿಸಲು ರೋಹಿತ್ ಹೋದಾಗ ಆಗಿದ್ದೇನು?

Share :

Published May 3, 2024 at 2:43pm

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಸೋಲು

    ಸೋಲಿಗೆ ತಿಲಕ್​ನ ಗುರಿ ಮಾಡಿದ ಹಾರ್ದಿಕ್.​.!

    ಡ್ರೆಸ್ಸಿಂಗ್​ ರೂಮ್​ನಲ್ಲಿ ನಡೀತಾ ಜೋರು ಜಗಳ..?

ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯಲ್ಲಿ ಎಲ್ಲಾ ಸರಿಯಿಲ್ಲ ಅನ್ನೋದು ಮತ್ತೆ ಜಗಜ್ಜಾಹೀರಾಗಿದೆ. ಡ್ರೆಸ್ಸಿಂಗ್​ ರೂಮ್​​ನಲ್ಲಿ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ-ತಿಲಕ್​ ವರ್ಮಾ ಜೋರು ಜಗಳ ನಡೆದೇ ಬಿಟ್ಟಿದೆ. ಜಗಳ ಬಿಡಿಸಲು ಹೋದ ರೋಹಿತ್​ ಶರ್ಮಾ ಹೈರಾಣಾಗಿದ್ದಾರೆ. ಅಷ್ಟಕ್ಕೂ ಹಾರ್ದಿಕ್​-ತಿಲಕ್​ ನಡುವೆ ಆಗಿದ್ದೇನು? ಏನಿದು ಕಥೆ?

ಈ ಸೀಸನ್​ನ ಐಪಿಎಲ್​ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಒಡೆದ ಮನೆಯಾಗಿದ್ದಿದ್ದು ನಿಮ್ಗೆಲ್ಲಾ ಗೊತ್ತಿರೋ ವಿಚಾರನೇ.. ರೋಹಿತ್ ಶರ್ಮಾ​ಗೆ ನಾಯಕತ್ವದಿಂದ ಕೊಕ್​ ಕೊಟ್ಟಿದ್ದು, ಹಾರ್ದಿಕ್​​ ಪಾಂಡ್ಯಾಗೆ ಪಟ್ಟ ಕಟ್ಟಿದ್ದು, ಒನ್​ ಫ್ಯಾಮಿಲಿಯನ್ನ ಮೆನಿ ಫ್ಯಾಮಿಲಿಯನ್ನಾಗಿಸಿತ್ತು. ಐಪಿಎಲ್​ ಆರಂಭಿಕ ಹಂತದಲ್ಲಿ ಮುಂಬೈ ಇಂಡಿಯನ್ಸ್​​ನ ಪರಿಸ್ಥಿತಿ​​ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು.

ಇದನ್ನೂ ಓದಿ:ವಿಶ್ವಕಪ್​​ನಿಂದ ರಾಹುಲ್​ಗೆ ಕೊಕ್..! ಬಾಲಿವುಡ್ ಸ್ಟಾರ್ ಆಕ್ರೋಶ.. ಬಿಸಿಸಿಐಗೆ LSG ಟಾಂಟ್​..!

ಆರಂಭದಲ್ಲಿ ಕಾಂಟ್ರವರ್ಸಿಯಿಂದಲೇ ಮುಂಬೈ ಫ್ರಾಂಚೈಸಿ ಸದ್ದು ಮಾಡಿತ್ತು. ನಿಜ. ಕಳೆದ ಕೆಲ ಪಂದ್ಯಗಳಿಂದ ವಿವಾದದ ಕಾವು ಕಡಿಮೆಯಾಗಿತ್ತು. ಎಲ್ಲಾ ಸರಿಯಾಯ್ತು, ವಿವಾದಕ್ಕೆ ಫುಲ್​ ಸ್ಟಾಫ್​ ಬಿತ್ತು ಎಂಬ ತಿರ್ಮಾನಕ್ಕೆ ಎಲ್ಲಾ ಬಂದಿದ್ರು. ಅಸಲಿಗೆ ವಿವಾದದ ಅಂತ್ಯವಾಗಿರಲಿಲ್ಲ.. ಬೂದಿ ಮುಚ್ಚಿದ ಕೆಂಡವಾಗಿತ್ತು. ಇದೀಗ ಮತ್ತೆ ಹೊಗೆಯಾಡಲು ಶುರುವಾಗಿದೆ.

ನನ್ನ ಪ್ರಕಾರ, ಮಧ್ಯದ ಕೆಲ ಓವರ್​​ಗಳಲ್ಲಿ ನಾವು ಇನ್ನಷ್ಟು ಅವಕಾಶಗಳನ್ನ ತೆಗೆದುಕೊಳ್ಳಬಹುದಿತ್ತು. ಅಕ್ಷರ್​ ಪಟೇಲ್​, ಎಡಗೈ ಬ್ಯಾಟ್ಸ್​ಮನ್​ಗೆ ಬೌಲಿಂಗ್​ ಮಾಡ್ತಿದ್ರು. ಅವರ ಬೌಲಿಂಗ್​ನಲ್ಲಿ ಉತ್ತಮ ಆಟವಾಡಬಹುದಿತ್ತು. ಪಂದ್ಯದ ಬಗ್ಗೆ ಅರಿವು ಇರಲಿಲ್ಲ. ಅಂತಿಮವಾಗಿ ಅದು ಸೋಲಿಗೆ ಗುರಿ ಮಾಡಿತು.

ಇದನ್ನೂ ಓದಿ:ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

ಸೋಲಿಗೆ ತಿಲಕ್​ ವರ್ಮಾನ ಗುರಿ ಮಾಡಿದ ಹಾರ್ದಿಕ್​..!
ಪ್ಲೇ ಆಫ್​ ಎಂಟ್ರಿಗೆ ಗೆಲ್ಲಲೇಬೇಕಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಎದುರಿನ ಪಂದ್ಯದಲ್ಲಿ ಸೋಲುಂಡಿತು. ಇದ್ರ ಬೆನ್ನಲ್ಲೇ, ಸೋಲಿನ ಬಗ್ಗೆ ಮಾತನಾಡಿದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಹೇಳಿದ ಮಾತುಗಳಿವು. ಅಂದ್ಹಾಗೆ ಹಾರ್ದಿಕ್​ ಪಾಂಡ್ಯಾ ಹೇಳಿದ ಎಡಗೈ ಬ್ಯಾಟರ್​ ಬೇರಾರೂ ಅಲ್ಲ.. ಆ ಪಂದ್ಯದ ಹೈಯೆಸ್ಟ್​ ರನ್​ ಸ್ಕೋರರ್​ ತಿಲಕ್​ ವರ್ಮಾ

ಹಾರ್ದಿಕ್ ಪಾಂಡ್ಯ​ ವಿರುದ್ಧ ತಿಲಕ್​ ವರ್ಮಾ ಕೆಂಡ
ಡೆಲ್ಲಿ ಕ್ಯಾಪಿಟಲ್ಸ್​ ಎದುರಿನ ಪಂದ್ಯದಲ್ಲಿ ತಿಲಕ್​ ವರ್ಮಾ ಮುಂಬೈ ಪರ ಏಕಾಂಗಿಯಾಗಿ ಹೋರಾಡಿದ್ರು. 32 ಎಸೆತಗಳಲ್ಲಿ 63 ರನ್​​ ಚಚ್ಚಿದ್ರು. ಇದೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಜೊತೆಗೆ ಉತ್ತಮ ಪಾರ್ಟನರ್​​ಶಿಪ್​​ ಕೂಡ ಬ್ಯುಲ್ಡ್​ ಮಾಡಿದ್ರು. ಹಾಗಿದ್ರೂ, ಪಂದ್ಯದ ಬಳಿಕ ಹಾರ್ದಿಕ್​ ಸೋಲಿಗೆ ತಿಲಕ್​ ವರ್ಮಾ ಬ್ಯಾಟಿಂಗ್​ ಶೈಲಿ ಕಾರಣ ಎಂದು ಹೇಳಿದ್ರು. ಇದೇ ಕಾರಣಕ್ಕೆ ಮುಂಬೈ ತಂಡದಲ್ಲಿ ಮತ್ತೆ ಕಿತ್ತಾಟ ಶುರುವಾಗಿದೆ.

ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್​ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!

ಡ್ರೆಸ್ಸಿಂಗ್​ ರೂಮ್​ನಲ್ಲಿ ರಂಪಾಟ, ವಾಗ್ವಾದ..?
ಹಾರ್ದಿಕ್​ ಪಾಂಡ್ಯ ಸೋಲಿಗೆ ತಿಲಕ್​ ವರ್ಮಾ ಕಾರಣ ಎಂದ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ ಜೋರು ರಂಪಾಟವೇ ನಡೆದಿದ್ಯಂತೆ. ಹಾರ್ದಿಕ್​ ಮೇಲೆ ಪೂರ್ತಿ ಸಿಟ್ಟಾಗಿದ್ದ ತಿಲಕ್ ವರ್ಮಾ​, ಡ್ರೆಸ್ಸಿಂಗ್​ ರೂಮ್​ನಲ್ಲಿ ವಾಗ್ವಾದ ನಡೆಸಿದ್ದಾರಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜೋರು ಜಗಳವೇ ನಡೆದಿದೆ ಅನ್ನೋ ಆಘಾತಕಾರಿ ವಿಚಾರದ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ತಾರಕಕ್ಕೇರಿದ ಜಗಳ, ರೋಹಿತ್​ ಮಧ್ಯಪ್ರವೇಶ..?

ಡ್ರೆಸ್ಸಿಂಗ್​ ರೂಮ್​ನಲ್ಲಿ ಹಾರ್ದಿಕ್​, ತಿಲಕ್​ ನಡುವೆ ತೀವ್ರ ತರದಲ್ಲಿ ಜಗಳ ನಡೆದಿದ್ಯಂತೆ. ಇಬ್ಬರೂ ಕೂಡ ಸಮಾಧಾನವಾಗುವಂತೆ ಕಾಣದೇ ಇದ್ದಾಗ, ಮಾಜಿ ಕ್ಯಾಪ್ಟನ್​ ರೋಹಿತ್​ ಮಧ್ಯ ಪ್ರವೇಶ ಮಾಡಿದ್ದಾರಂತೆ. ಆ ಬಳಿಕವಷ್ಟೇ ಪರಿಸ್ಥಿತಿ ತಿಳಿಯಾಗಿದ್ದಂತೆ. ಅಂತಿಮವಾಗಿ ಫ್ರಾಂಚೈಸಿಯ ಓನರ್ಸ್​ ಇಬ್ಬರೂ ಆಟಗಾರರನ್ನ ಸಮಾಧಾನ ಪಡೆಸಿದ್ರು, ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು; ಮೂರು ವರ್ಷದ ಬಳಿಕ ಸೀರಮ್ ಸಂಸ್ಥೆ ವಿರುದ್ಧ ಕೇಸ್..! ​

ಒನ್​​ ಫ್ಯಾಮಿಲಿ ಈಗ ಮೆನಿ ಫ್ಯಾಮಿಲಿ..!
ಒನ್​ಫ್ಯಾಮಿಲಿ ಅಂತಾ ಒಗ್ಗಟ್ಟಿನ ಮಂತ್ರ ಪಠಿಸ್ತಾ ಇದ್ದ ಮುಂಬೈ, ಇದೀಗ ಮೆನಿ ಫ್ಯಾಮಿಲಿಯಾಗಿದೆ. ಹಾರ್ದಿಕ್​ – ತಿಲಕ್​ ನಡುವಿನ ಜಗಳ ತಂಡದ ವಾತಾವರಣವನ್ನ ಇನ್ನಷ್ಟು ಹದಗೆಡಿಸಿದೆ. ಇದನೆಲ್ಲಾ ನೋಡಿದ್ರೆ, ಮುಂದಿನ ಸೀಸನ್​ನಲ್ಲಿ ಮುಂಬೈ ತಂಡದಲ್ಲಿ ಭಾರೀ ಬದಲಾವಣೆಗಳಾಗೋ ಸಾಧ್ಯತೆ ದಟ್ಟವಾಗಿದೆ. ತಂಡದ ಕೋರ್​​ ಟೀಮ್​ನ ಭಾಗವಾಗಿರೋ ಆಟಗಾರರೇ ಮೆಗಾ ಆಕ್ಷನ್​ಗೆ ಧುಮಿಕಿದ್ರೂ ಅಚ್ಚರಿ ಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಂಡ್ಯ, ತಿಲಕ್ ವರ್ಮಾ ಮಧ್ಯೆ ಭಾರೀ ಗಲಾಟೆ.. ಜಗಳ ಬಿಡಿಸಲು ರೋಹಿತ್ ಹೋದಾಗ ಆಗಿದ್ದೇನು?

https://newsfirstlive.com/wp-content/uploads/2024/05/HARDIK-PANDYA-2.jpg

Load More