newsfirstkannada.com

CSK vs RCB : ಚೆನ್ನೈ ವಿರುದ್ಧ ಆರ್​ಸಿಬಿ ಈ 5 ಚಾಲೆಂಜ್ ಗೆದ್ದರೆ ಪ್ಲೇ ಆಫ್ ಪಕ್ಕಾ..!

Share :

Published May 16, 2024 at 3:03pm

  ಟಾಸ್​ ಗೆದ್ರೆ ಯಾರಿಗೆ ಲಾಭ? ಯಾವ ಆಯ್ಕೆ ಬೆಸ್ಟ್​?

  ಅಭಿಮಾನಿಗಳ​ ಕುತೂಹಲ ಹೆಚ್ಚಿಸಿದ ಪಂದ್ಯ

  ಚೆನ್ನೈ ಎದುರು RCB ಮಾಡಬೇಕಾಗಿರೋದೇನು..?

ಚೆನ್ನೈ ಸೂಪರ್​ ಕಿಂಗ್ಸ್​​ ವರ್ಸಸ್ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಬಿಗ್​ ಬ್ಯಾಟಲ್​ ಮೇಲೆ ಕ್ರಿಕೆಟ್​ ಲೋಕದ ಕಣ್ಣಿದೆ. ಹೋಮ್​ಗ್ರೌಂಡ್​ ಚಿನ್ನಸ್ವಾಮಿ ಅಂಗಳದಲ್ಲಿ, ಹೋಮ್​ಕ್ರೌಡ್​​​ ಎದುರು, ಹೈಪ್ರೆಷರ್ ಗೇಮ್​ನಲ್ಲಿ ಆರ್​​ಸಿಬಿ ಗೆಲ್ಲುತ್ತ ಅನ್ನೋದು ಎಲ್ಲರ ಕುತೂಹಲ. ಸತತ 5 ಪಂದ್ಯಗಳಲ್ಲಿ ಆರ್​​ಸಿಬಿ ಗೆದ್ದಿದೆ ನಿಜ. ಆದ್ರೂ ಸಿಎಸ್​ಕೆ ಗೆಲ್ಲೋದು ಟಫ್​ ಟಾಸ್ಕ್​. ಚಿನ್ನಸ್ವಾಮಿ ಅಂಗಳದಲ್ಲಿ ಆರ್​​ಸಿಬಿ ಮುಂದೆ ಸಿಕ್ಕಾಪಟ್ಟೆ ಚಾಲೆಂಜಸ್​ ಇವೆ.

ಐಪಿಎಲ್​ ಟೂರ್ನಿಯ ಮಹಾಕದನದ ಕಾವು ಕ್ರಿಕೆಟ್​ ಲೋಕದಲ್ಲಿ ಜೋರಾಗಿದೆ. ಚೆನ್ನೈ ವರ್ಸಸ್ ಬೆಂಗಳೂರು ನಡುವಿನ ಕದನ ಕುತೂಹಲ ಅಭಿಮಾನಿಗಳ ವಲಯದಲ್ಲಿ ತೀವ್ರಗೊಂಡಿದೆ. ಚೆನ್ನೈ ಎದುರು ಕಳಪೆ ರೆಕಾರ್ಡ್​ ಹೊಂದಿರೋ ಆರ್​​ಸಿಬಿಗೆ ಸಾಮಾನ್ಯವಾದ ಜಯ ಸಾಧಿಸೋದೆ ಸವಾಲಿನ ವಿಚಾರ. ಅಂತಾದ್ರಲ್ಲಿ, ಮೇ 18ರಂದು ಭರ್ಜರಿ ಗೆಲುವನ್ನ ಸಾಧಿಸಬೇಕಿದೆ. ಜಯದ ಜೊತೆಗೆ ರನ್​ರೇಟ್​ ಹೆಚ್ಚಿಸಿಕೊಂಡರೆ ಮಾತ್ರ ಪ್ಲೇ ಆಫ್​ ಡೋರ್​ ಓಪನ್​ ಆಗಲಿದೆ. ಇದೆಲ್ಲಾ ಸಾಧ್ಯವಾಗಬೇಕಂದ್ರೆ ಹಲವು ಸವಾಲುಗಳನ್ನ ಆರ್​​ಸಿಬಿ ಮೆಟ್ಟಿನಿಲ್ಲಬೇಕಿದೆ.

ಇದನ್ನೂ ಓದಿ:ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ

ಚಾಲೆಂಜ್​ ನಂ.1: ಟಾಸ್​​​ ಗೆಲ್ಲಲೇಬೇಕು, ಚೇಸಿಂಗ್​ ಆಯ್ಕೆ ಮಾಡ್ಕೋಬೇಕು
ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್​​ ಡಿಸೈಡಿಂಗ್​ ಫ್ಯಾಕ್ಟರ್​​. ಆರ್​​ಸಿಬಿ ಸ್ಟ್ರೆಂಥ್​​ ಚೇಸಿಂಗ್​. ಹೀಗಾಗಿ ಟಾಸ್​ ಗೆದ್ದು, ಚೇಸಿಂಗ್​ ಆಯ್ಕೆ ಮಾಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ವಿರಾಟ್​ ಕೊಹ್ಲಿಯಂಥ ಚೇಸ್​ ಮಾಸ್ಟರ್​, ದಿನೇಶ್​ ಕಾರ್ತಿಕ್​ರಂತ ಫಿನಿಷರ್​​ ಇದ್ದಾಗ ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್​ ಆರ್​​ಸಿಬಿಗೆ ಇನ್ನಷ್ಟು ಸುಲಭವಾಗಲಿದೆ.

ಚಾಲೆಂಜ್​ ನಂ.2: 160ರಿಂದ 170ರೊಳಗೆ ಚೆನ್ನೈ ಆಟಕ್ಕೆ ಬ್ರೇಕ್​​ ಹಾಕ್ಬೇಕು
ಚೆನ್ನೈ ತಂಡ ಮೊದಲು ಬ್ಯಾಟಿಂಗ್​ಗಿಳಿದಿದ್ದೇ ಆದ್ರೆ, ಕನಿಷ್ಟ 160ರಿಂದ 170 ರನ್​ಗಳಿಗೆ ಸಿಎಸ್​​ಕೆ ತಂಡವನ್ನ ಕಟ್ಟಿ ಹಾಕಬೇಕಿದೆ. ಕಳಪೆ ಫಾರ್ಮ್​ನಿಂದ ಹೊರ ಬಂದಿರುವ ಆರ್​​ಸಿಬಿ ಬೌಲರ್ಸ್​ ಡೆಲ್ಲಿ ವಿರುದ್ಧ ಮಾಡಿದಂತೆ, ಚೆನ್ನೈ ವಿರುದ್ಧವೂ ಸೂಪರ್ಬ್​ ಬೌಲಿಂಗ್​ ಪರ್ಫಾಮೆನ್ಸ್​ ನೀಡಬೇಕಿದೆ. ಕನಿಷ್ಟ 160ರಿಂದ 170ರೊಳಗೆ ಸಿಎಸ್​​ಕೆ ಆಲೌಟ್​ ಮಾಡಿದ್ರೆ, ವೇಗವಾಗಿ ಟಾರ್ಗೆಟ್​ ಚೇಸ್​ ಮಾಡಲು ಸಾಧ್ಯವಾಗುತ್ತೆ. ರನ್​ರೇಟ್​ ಹೆಚ್ಚಿಸಿಕೊಳ್ಳಲೂ ನೆರವಾಗಲಿದೆ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

ಚಾಲೆಂಜ್​ ನಂ.3: ಋತುರಾಜ್​, ದುಬೆಗೆ ಘರ್ಜಿಸಲು ಅವಕಾಶ ಕೊಡಬಾರ್ದು
ಸಿಎಸ್​​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಹಾಗೂ ಸ್ಫೋಟಕ ಬ್ಯಾಟರ್​​ ಶಿವಂ ದುಬೆಗೆ ಸೆಟಲ್​ ಆಗಲು ಅವಕಾಶವನ್ನೇ ನೀಡಬಾರದು. ಈ ಇಬ್ಬರು ಸೆಟಲ್​ ಆದ್ರೆ, ಸಿಕ್ಕಾಪಟ್ಟೇ ಡೇಂಜರಸ್​​. ಕೊನೆಯವರೆಗೂ ಕ್ರಿಸ್​ ಕಚ್ಚಿ ನಿಲ್ತಾರೆ. ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ಸುಲಭವಾಗಿ ರನ್​ ಹೊಳೆಯನ್ನೂ ಹರಿಸ್ತಾರೆ. ಇವರಿಬ್ಬರ ಆಟಕ್ಕೆ ಬ್ರೇಕ್​ ಹಾಕಿದ್ರೆ, ಆರ್​​ಸಿಬಿ ಪ್ಲೇ ಆಫ್​ ಹಾದಿ ಸಲೀಸಾಗಲಿದೆ.

ಚಾಲೆಂಜ್​ ನಂ.4: CSK ಸ್ಪಿನ್ನರ್ಸ್​ ಎದುರು ಎಚ್ಚರಿಕೆಯ ಆಟ ಆಡ್ಬೇಕು
ರವೀಂದ್ರ ಜಡೇಜಾ, ಮಿಚೆಲ್​ ಸ್ಯಾಂಟ್ನೆರ್​, ಮಹೀಶ ತೀಕ್ಷಣ.. ಚೆನ್ನೈ ತಂಡ ಬೌಲಿಂಗ್​ ಬೆನ್ನೆಲುಬಾಗಿದ್ದಾರೆ. ತಮ್ಮ ಸ್ಪಿನ್​ ಮೋಡಿಯಿಂದಲೇ ಎದುರಾಳಿಗಳ ಆಟಕ್ಕೆ ಅಂತ್ಯ ಹಾಡೋ ಸಾಮರ್ಥ್ಯವಿದೆ. ಚಿನ್ನಸ್ವಾಮಿ ಪಿಚ್​ ಸ್ಪಿನ್​ಗೆ ನೆರವು ನೀಡೋ ಸಾಧ್ಯತೆಯಿದ್ದು, ಆರ್​​ಸಿಬಿ ಬ್ಯಾಟರ್ಸ್​​ ಎಚ್ಚರಿಕೆಯ ಆಟವಾಡಬೇಕಿದೆ. ತಾಳ್ಮೆಯಿಂದ ವಿಕೆಟ್​ ಕಾಯ್ದುಕೊಂಡು ರನ್​ರೇಟ್​​ ಮೆಂಟೇನ್​ ಮಾಡಿದ್ರೆ ಸಾಕು.

ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್​.. ಹೈದರಾಬಾದ್​ ಸೋತರೆ ಆರ್​ಸಿಬಿಗೆ ಭಾರೀ ಲಾಭ.. ಅದು ಹೇಗೆ..?

ಚಾಲೆಂಜ್​ ನಂ.5: ಒತ್ತಡಕ್ಕೆ ಒಳಗಾದ್ರೆ ಸೋಲು ಕಟ್ಟಿಟ್ಟ ಬುತ್ತಿ
ಮೇ 18ರ ಕದನ ಎರಡೂ ತಂಡಗಳ ಪಾಲಿನ ಡು ಆರ್​ ಡೈ ಕದನ. ಲೀಗ್​ ಪಂದ್ಯವಾದ್ರೂ ಇದಕ್ಕೆ ಎಲಿಮಿನೇಟರ್​ ಟಚ್ ಸಿಕ್ಕಿದೆ. ಬಲಿಷ್ಟ ಸಿಎಸ್​ಕೆ ಎದುರು, ಬಿಗ್​ ಮಾರ್ಜಿನ್​ನಲ್ಲಿ ಗೆಲ್ಲಬೇಕಾಗಿರೋದ್ರಿಂದ ಆರ್​​ಸಿಬಿ ಆಟಗಾರರ ಮೇಲೆ ಪ್ರೆಶರ್​ ಬ್ಯುಲ್ಡ್​ ಮಾಡೋ ಸಾಧ್ಯತೆಯಿದೆ. ಆಟಗಾರರು ಒತ್ತಡಕ್ಕೆ ಒಳಗಾದ್ರೆ, ಕಥೆ ಮುಗಿದಂತೆ. ಸೋಲು ಕಟ್ಟಿಟ್ಟ ಬುತ್ತಿ. ಈ ಪಂದ್ಯವನ್ನೂ ಜಸ್ಟ್​ ಅನದರ್​ ಗೇಮ್​ ಎಂಬಂತೆ ಆಡಿದ್ರೆ ಮಾತ್ರ ಪ್ಲೇ ಆಫ್​ ಎಂಟ್ರಿ ಸಾಧ್ಯ.

ಸತತ 5 ಪಂದ್ಯ ಗೆದ್ದು, ಗೆಲುವಿನ ನಾಗಾಲೋಟ ಮುಂದುವರೆಸಿರೋ ಆರ್​​ಸಿಬಿಯ ಮುಂದೆ ಇದೀಗ ಹಲವು ಸವಾಲುಗಳಿವೆ. ಆ ಚಾಲೆಂಜ್​ಗಳನ್ನ ರಾಯಲ್​ ಚಾಲೆಂಜರ್ಸ್​ ದಿಟ್ಟವಾಗಿ ಎದುರಿಸಿದ್ರೆ 6ನೇ ಪಂದ್ಯದಲ್ಲೂ ಗೆಲುವು ಆರ್​​ಸಿಬಿಯದ್ದೇ. ಅಪ್ಪಿತಪ್ಪಿ ಎಡವಿದ್ರೆ ಸಿಎಸ್​​ಕೆ ಗೆದ್ದು ಬೀಗಲಿದೆ. ಈ ಸೀಸನ್​ನಲ್ಲೂ ಆರ್​​ಸಿಬಿ ಫ್ಯಾನ್ಸ್​ ಕಪ್​ ನಮ್ದಲ್ಲ ಅನ್ನಬೇಕಾಗುತ್ತದೆ.

ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

CSK vs RCB : ಚೆನ್ನೈ ವಿರುದ್ಧ ಆರ್​ಸಿಬಿ ಈ 5 ಚಾಲೆಂಜ್ ಗೆದ್ದರೆ ಪ್ಲೇ ಆಫ್ ಪಕ್ಕಾ..!

https://newsfirstlive.com/wp-content/uploads/2024/05/CSK-RCB.jpg

Load More