Advertisment

ಬಳ್ಳಾರಿ ಜೈಲು ಸೇರಿದರೂ ದರ್ಶನ್​ಗೆ ತಪ್ಪದ ಸಂಕಷ್ಟ.. ಚೈರ್​ ಮೇಲೂ ಕೇಸ್​, ಬೆಡ್​ ಮೇಲೆ ಕೂತಿದ್ದಕ್ಕೂ ಕೇಸ್

author-image
AS Harshith
Updated On
ದರ್ಶನ್ ಬಾಯಲ್ಲಿ ಈಗ 10 ಪಶ್ಚಾತಾಪದ ಮಾತು.. ಪತ್ನಿ ವಿಜಯಲಕ್ಷ್ಮಿ ನೆನೆದು ಭಾವುಕ; ಹೇಳಿದ್ದೇನು?
Advertisment
  • ದರ್ಶನ್​​ಗೆ ಸಿಗರೇಟು ತಂದ ಪಜೀತಿ
  • ನಾಗನ ಟೀ ಪಾರ್ಟಿಯಿಂದಾಗಿ ದರ್ಶನ್​ ಬಳ್ಳಾರಿಗೆ ಶಿಫ್ಟ್​
  • ಬಳ್ಳಾರಿ ಕಂಬಿ ಹಿಂದೆ ದಾಸ.. ಎದುರಾಯ್ತು ಮತ್ತೊಂದು ಸಂಕಷ್ಟ

ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿರುವ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇನುಕಾಸ್ವಾಮಿ A2 ಕೊಲೆ ಆರೋಪಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಯಿಂದ ದೂರು ದಾಖಲಾಗಿದೆ.ವ

Advertisment

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್​​ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಫೋಟೋ, ವಿಡಿಯೋ ಸಮೇತ ಬಯಲಾಗಿತ್ತು. ವಿಲ್ಸನ್​​ ಗಾರ್ಡನ್​ ನಾಗ ಏರ್ಪಡಿಸಿದ ಟೀ ಪಾರ್ಟಿ ದರ್ಶನ್​ರನ್ನು ಸಂಕಷ್ಟಕ್ಕೆ ದೂಡಿದ್ದು ಒಂದೆಡೆಯಾದರೆ, ರೌಡಿ ವೇಲು ಕ್ಲಿಕ್ಕಿಸಿದ ಫೋಟೋದಿಂದ ದರ್ಶನ್​ಗೆ ಮತ್ತೊಂದು ಸಮಸ್ಯೆ ಎದುರಾಯಿತು. ಇದರ ಜೊತೆ ಜೊತೆಗೆ ರೌಡಿ ಶೀಟರ್​ ಜೊತೆಗೆ ವಿಡಿಯೋ ಕರೆಯಲ್ಲಿ ಮಾತನಾಡಿದ ದೃಶ್ಯವೂ ಮಾಧ್ಯಮಗಳಿಗೆ ಸಿಕ್ಕಿತ್ತು. ಇದಲ್ಲದೆ ದರ್ಶನ್​ ಬೆಡ್​​ ಕುಳಿತ್ತಿದ್ದ ದೃಶ್ಯವು ವೈರಲ್​ ಆಯ್ತು.

publive-image

ಇದನ್ನೂ ಓದಿ: ದರ್ಶನ್​ ಬ್ಯಾಗ್​ನಲ್ಲಿ 20 ಪುಸ್ತಕಗಳು.. ಅವು ಯಾವ್ಯಾವುವು? ಮನಸು ಬದಲಾಯಿಸಬಹುದೇ?

ಈಗಾಗಲೇ ಮೂರು ಎಫ್​ಐಆರ್​ ದರ್ಶನ್​ ಮೇಲೆ ದಾಖಲಾಗಿದ್ದು, ದರ್ಶನ್​ ಬೆಡ್​ ಮೇಲೆ ಕುಳಿತ ವಿಚಾರಕ್ಕೆ ಮತ್ತೊಂದು ದೂರು ದಾಖಲಾಗಿದೆ. ಇದು ಅವರಿಗೆ ಸಂಕಷ್ಟ ತಂದೊಡ್ಡಿದೆ.

Advertisment

ಇದನ್ನೂ ಓದಿ: ಮಖಾನ ತಿಂದ್ರೆ ದೇಹಕ್ಕೆ ಹಲವು ಲಾಭ.. ಮೂಳೆಯ ಆರೋಗ್ಯ ವೃದ್ಧಿಸುತ್ತೆ ಕಣ್ರಿ ಫಾಕ್ಸ್​ ನಟ್​!

ರೌಡಿ ಶೀಟರ್ ಬೇಕರಿ ರಘು ಜೊತೆಗೆ ಬೆಡ್ ಮೇಲೆ ಕುಳಿತಿದ್ದ ದರ್ಶನ್ ಫೋಟೋ ಮತ್ತೊಂದು ಸಮಸ್ಯೆ ತಂದೊಡ್ಡಿದೆ. ಆ ಫೋಟೊ ಸಂಬಂಧಿಸಿದಂತೆ ದೂರು ದಾಖಲಾಗಿದೆ. ನಿನ್ನೆ ಜೈಲಾಧಿಕಾರಿಯಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೆ ಪ್ರತ್ಯೇಕವಾದ ಎಫ್ಐಆರ್ ದಾಖಲಾಗಿಲ್ಲ. ಅದರೆ ದಾಖಲಾಗಿರುವ ಎಫ್ಐಆರ್​​ಗೆ ಈ ದೂರನ್ನು ಸೇರಿಸಿಕೊಂಡು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

publive-image

ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಸ್ವರ್ಣ ಇಂದು ಖರೀದಿಸಿದರೆ ಉತ್ತಮವೇ?

Advertisment

ದರ್ಶನ್ ವಿರುದ್ಧ ಜೈಲು ನಿಯಮ ಉಲ್ಲಂಘನೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ತನಿಖಾಧಿಕಾರಿ ಬಳ್ಳಾರಿ ಜೈಲಿಗೆ ತೆರಳಿ ಮಾಹಿತಿ ಕಲೆ ಹಾಕಲಿದ್ದಾರೆ. ನಟ ದರ್ಶನ್ ರಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment