/newsfirstlive-kannada/media/post_attachments/wp-content/uploads/2024/08/MS_DHONI-3.jpg)
ಟೀಂ ಇಂಡಿಯಾದ ಮಾಜಿ ಆಟಗಾರ ದಿನೇಶ್​​ ಕಾರ್ತಿಕ್​ ‘ನಾನು ದೊಡ್ಡ ತಪ್ಪು ಮಾಡಿದೆ’ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಮಹೇಂದ್ರ ಸಿಂಗ್​ ಧೋನಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ದಿನೇಶ್​​ ಕಾರ್ತಿಕ್ ಆಲ್​ ಟೈಮ್​ ಇಂಡಿಯಾ ಪ್ಲೇಯಿಂಗ್​ 11 ತಂಡವನ್ನು ಆಯ್ಕೆ ಮಾಡಿದ್ದರು. ಆದರೆ ಅದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್​​ ಧೋನಿಯನ್ನು ಸೇರಿಸಿಕೊಂಡಿರಲಿಲ್ಲ. ಮಾಹಿಯನ್ನು ಹೊರಗಿಟ್ಟಾಗ ಕ್ರಿಕೆಟ್​​ ಅಭಿಮಾನಿಗಳ ಆಫಾತಕ್ಕೆ ಒಳಗಾಗಿದ್ದಲ್ಲದೆ ದಿನೇಶ್​ ಕಾರ್ತಿಕ್​​ರನ್ನು ಟೀಕೆ ಮಾಡಲು ಶುರು ಮಾಡಿದರು.
/newsfirstlive-kannada/media/post_attachments/wp-content/uploads/2024/07/MS-DHONI.jpg)
ಆದರೀಗ ಈ ಟೀಕೆ ಬೆನ್ನಲ್ಲೇ ದಿನೇಶ್​​ ಕಾರ್ತಿಕ್​​ ತಮ್ಮ ತಪ್ಪನ್ನು ತಿದ್ದಿಕೊಂಡು ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ಇದು ನಾನು ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ. ಜೊತೆಗೆ ಅದಕ್ಕೆ ತಕ್ಕಂತೆ ಸಮರ್ಥನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?
/newsfirstlive-kannada/media/post_attachments/wp-content/uploads/2024/08/DINESH-KARTHIK.jpg)
ದಿನೇಶ್​ ಕಾರ್ತಿಕ್​, ‘ಸಹೋದರರೇ, ನಾನು ದೊಡ್ಡ ತಪ್ಪು ಮಾಡಿದೆ. ನಿಜವಾಗಿಯೂ ಅಂದು ತಪ್ಪಾಗಿದೆ. ವಿಡಿಯೋ ಹೊರಬಂದ ಬಳಿಕ ನನಗೆ ಅದರ ಅರಿವಾಗಿದೆ. ನಾನು ತಂಡದಲ್ಲಿ 11 ಜನರನ್ನು ಆಯ್ಕೆ ಮಾಡಿದಾಗ ಬಹಳಷ್ಟು ಸಂಗತಿ ಎದುರಾಗಿದ್ದವು. ಈ ವೇಳೆ ನಾನು ನಿಜವಾಗಿಯೂ ವಿಕೆಟ್​ ಕೀಪರನ್ನು ಮರೆತ್ತಿದ್ದೇನೆ. ಅದೃಷ್ಟವಶಾತ್​ ರಾಹುಲ್​ ದ್ರಾವಿಡ್​​ ಇಲೆವೆನ್​​ನ ಭಾಗವಾಗಿರುವುದರಿಂದ ನಾನು ಅರೆಕಾಲಿಕ ವಿಕೆಟ್​ ಕೀಪರ್​​ ಇಟ್ಟುಕೊಂಡಿದ್ದೇನೆ ಎಂದು ಎಲ್ಲರೂ ಭಾವಿಸಿದರು. ಆದರೆ ನಾನು ನಿಜವಾಗಿಯೂ ರಾಹುಲ್​​ ದ್ರಾವಿಡ್​​ ಅವರನ್ನು ವಿಕೆಟ್​ ಕೀಪರ್​​ ಎಂದು ಭಾವಿಸಿರಲಿಲ್ಲ. ಧೋನಿ ನಿಜವಾಗಿಯೂ ಇಲೆವೆನ್​ನ ಭಾಗವಾಗಿದ್ದಾರೆ. ನಾಯಕತ್ವವು ಅವರ ಬಳಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?
ನಾನು ವಿಕೆಟ್​​ ಕೀಪರ್​​ ಆಗಿರುವುದರಿಂದ ಅವರನ್ನು ಸೇರಿಸಲು ಮರೆತ್ತಿದ್ದೆ. ಇದು ದೊಡ್ಡ ತಪ್ಪು. ಇಂತಹ ತಪ್ಪು ನಡೆಯಬಾರದಿತ್ತು. ಇದು ನನಗೆ ಸ್ಪಷ್ಟವಾಗಿದೆ. ಧೋನಿ ಎಲ್ಲಾ ಫಾರ್ಮ್ಯಾಟ್​​ಗೆ ಸಂಪೂರ್ಣ ಫಿಟ್​ ಆಗಿದ್ದಾರೆ. ಧೋನಿ ಕೇವಲ ಭಾರತೀಯರಲ್ಲ. ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ದಿನೇಶ್​​ ಕಾರ್ತಿಕ್​ ಹೇಳಿದ್ದಾರೆ.
ನಾನು ತಂಡವನ್ನು ಮಾಡಿದರೆ ಖಂಡಿತಾವಾಗಿಯೂ ಬದಲಾವಣೆ ಮಾಡುತ್ತೇನೆ. ಧೋನಿ 7ನೇ ಸ್ಥಾನದಲ್ಲಿರುತ್ತಾರೆ. ಅವರು ನಾಯಕರಾಗುತ್ತಾರೆ. ಅದರಲ್ಲಿ ಅನುಮಾನವಿಲ್ಲ ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us