ಧೋನಿ ವಿಚಾರದಲ್ಲಿ ನಾನು ದೊಡ್ಡ ತಪ್ಪು ಮಾಡಿದೆ
ವಿಡಿಯೋ ಹೊರಬಂದ ಬಳಿಕ ನನಗೆ ಅದರ ಅರಿವಾಗಿದೆ
ಇಂತಹ ತಪ್ಪು ನಡೆಯಬಾರದಿತ್ತು ಈಗ ನನಗೆ ಸ್ಪಷ್ಟವಾಗಿದೆ
ಟೀಂ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ‘ನಾನು ದೊಡ್ಡ ತಪ್ಪು ಮಾಡಿದೆ’ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ದಿನೇಶ್ ಕಾರ್ತಿಕ್ ಆಲ್ ಟೈಮ್ ಇಂಡಿಯಾ ಪ್ಲೇಯಿಂಗ್ 11 ತಂಡವನ್ನು ಆಯ್ಕೆ ಮಾಡಿದ್ದರು. ಆದರೆ ಅದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿಯನ್ನು ಸೇರಿಸಿಕೊಂಡಿರಲಿಲ್ಲ. ಮಾಹಿಯನ್ನು ಹೊರಗಿಟ್ಟಾಗ ಕ್ರಿಕೆಟ್ ಅಭಿಮಾನಿಗಳ ಆಫಾತಕ್ಕೆ ಒಳಗಾಗಿದ್ದಲ್ಲದೆ ದಿನೇಶ್ ಕಾರ್ತಿಕ್ರನ್ನು ಟೀಕೆ ಮಾಡಲು ಶುರು ಮಾಡಿದರು.
ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ KL ರಾಹುಲ್ ನಿವೃತ್ತಿ ಸುದ್ದಿ.. ಇದು ಅಸಲಿಯೇ? ನಕಲಿಯೇ? ಇಲ್ಲಿದೆ ಮಾಹಿತಿ
ಆದರೀಗ ಈ ಟೀಕೆ ಬೆನ್ನಲ್ಲೇ ದಿನೇಶ್ ಕಾರ್ತಿಕ್ ತಮ್ಮ ತಪ್ಪನ್ನು ತಿದ್ದಿಕೊಂಡು ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ಇದು ನಾನು ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ. ಜೊತೆಗೆ ಅದಕ್ಕೆ ತಕ್ಕಂತೆ ಸಮರ್ಥನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?
ದಿನೇಶ್ ಕಾರ್ತಿಕ್, ‘ಸಹೋದರರೇ, ನಾನು ದೊಡ್ಡ ತಪ್ಪು ಮಾಡಿದೆ. ನಿಜವಾಗಿಯೂ ಅಂದು ತಪ್ಪಾಗಿದೆ. ವಿಡಿಯೋ ಹೊರಬಂದ ಬಳಿಕ ನನಗೆ ಅದರ ಅರಿವಾಗಿದೆ. ನಾನು ತಂಡದಲ್ಲಿ 11 ಜನರನ್ನು ಆಯ್ಕೆ ಮಾಡಿದಾಗ ಬಹಳಷ್ಟು ಸಂಗತಿ ಎದುರಾಗಿದ್ದವು. ಈ ವೇಳೆ ನಾನು ನಿಜವಾಗಿಯೂ ವಿಕೆಟ್ ಕೀಪರನ್ನು ಮರೆತ್ತಿದ್ದೇನೆ. ಅದೃಷ್ಟವಶಾತ್ ರಾಹುಲ್ ದ್ರಾವಿಡ್ ಇಲೆವೆನ್ನ ಭಾಗವಾಗಿರುವುದರಿಂದ ನಾನು ಅರೆಕಾಲಿಕ ವಿಕೆಟ್ ಕೀಪರ್ ಇಟ್ಟುಕೊಂಡಿದ್ದೇನೆ ಎಂದು ಎಲ್ಲರೂ ಭಾವಿಸಿದರು. ಆದರೆ ನಾನು ನಿಜವಾಗಿಯೂ ರಾಹುಲ್ ದ್ರಾವಿಡ್ ಅವರನ್ನು ವಿಕೆಟ್ ಕೀಪರ್ ಎಂದು ಭಾವಿಸಿರಲಿಲ್ಲ. ಧೋನಿ ನಿಜವಾಗಿಯೂ ಇಲೆವೆನ್ನ ಭಾಗವಾಗಿದ್ದಾರೆ. ನಾಯಕತ್ವವು ಅವರ ಬಳಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?
ನಾನು ವಿಕೆಟ್ ಕೀಪರ್ ಆಗಿರುವುದರಿಂದ ಅವರನ್ನು ಸೇರಿಸಲು ಮರೆತ್ತಿದ್ದೆ. ಇದು ದೊಡ್ಡ ತಪ್ಪು. ಇಂತಹ ತಪ್ಪು ನಡೆಯಬಾರದಿತ್ತು. ಇದು ನನಗೆ ಸ್ಪಷ್ಟವಾಗಿದೆ. ಧೋನಿ ಎಲ್ಲಾ ಫಾರ್ಮ್ಯಾಟ್ಗೆ ಸಂಪೂರ್ಣ ಫಿಟ್ ಆಗಿದ್ದಾರೆ. ಧೋನಿ ಕೇವಲ ಭಾರತೀಯರಲ್ಲ. ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ನಾನು ತಂಡವನ್ನು ಮಾಡಿದರೆ ಖಂಡಿತಾವಾಗಿಯೂ ಬದಲಾವಣೆ ಮಾಡುತ್ತೇನೆ. ಧೋನಿ 7ನೇ ಸ್ಥಾನದಲ್ಲಿರುತ್ತಾರೆ. ಅವರು ನಾಯಕರಾಗುತ್ತಾರೆ. ಅದರಲ್ಲಿ ಅನುಮಾನವಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ