ಆರ್​​ಸಿಬಿ ಅಭಿಮಾನಿಗಳಿಗೆ ಮತ್ತೊಂದು ಗುಡ್​ನ್ಯೂಸ್​; ಆತಂಕಕ್ಕೆ ಒಳಗಾಗಿದ್ದ ಕೊಹ್ಲಿ ಫ್ಯಾನ್ಸ್ ನಿಟ್ಟುಸಿರು..!

author-image
Ganesh
Updated On
ಆರ್​​ಸಿಬಿ ಅಭಿಮಾನಿಗಳಿಗೆ ಮತ್ತೊಂದು ಗುಡ್​ನ್ಯೂಸ್​; ಆತಂಕಕ್ಕೆ ಒಳಗಾಗಿದ್ದ ಕೊಹ್ಲಿ ಫ್ಯಾನ್ಸ್ ನಿಟ್ಟುಸಿರು..!
Advertisment
  • ವಿರಾಟ್​ ಕೊಹ್ಲಿ ಈ ಬಾರಿಯ ಐಪಿಎಲ್​ ಆಡ್ತಾರಾ?
  • ಮಿಲಿಯನ್​ ಡಾಲರ್​ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ
  • ಮಾರ್ಚ್​ 16ಕ್ಕೆ ಆರ್​​ಸಿಬಿ ಕ್ಯಾಂಪ್​​ಗೆ ಕೊಹ್ಲಿ ಎಂಟ್ರಿ?

ಐಪಿಎಲ್​ ಆರಂಭಕ್ಕೂ ಮುನ್ನ ಆರ್​​ಸಿಬಿ​ ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಸಿಕ್ಕಿದೆ. ವಿರಾಟ್​ ಕೊಹ್ಲಿ ಈ ಬಾರಿಯ ಐಪಿಎಲ್​ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಇಷ್ಟು ದಿನ ಅಭಿಮಾನಿಗಳನ್ನ ಬಿಟ್ಟೂ ಬಿಡದೇ ಕಾಡ್ತಿತ್ತು. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಕಿಂಗ್​​ ಕೊಹ್ಲಿಯ ಕಮ್​ಬ್ಯಾಕ್​ಗೆ ಮಹೂರ್ತವೂ ಫಿಕ್ಸ್​ ಆಗಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇಡೀ ಭಾರತದಲ್ಲಿ ಐಪಿಎಲ್​ ಫೀವರ್​ ನೆಕ್ಸ್ಟ್​​ ಲೆವೆಲ್​ನಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್​​ ಜಾತ್ರೆ ಆರಂಭವಾಗಲಿದ್ದು, ಐಪಿಎಲ್​​ ಕಿಕ್​ನಲ್ಲಿ ತೇಲಾಡಲು ಫ್ಯಾನ್ಸ್​ ಕಾತರರಾಗಿದ್ದಾರೆ. ಆದ್ರೆ, ಆರ್​​ಸಿಬಿ ಅಭಿಮಾನಿಗಳು ಮಾತ್ರ ಗೊಂದಲದಲ್ಲಿದ್ದಾರೆ. ಇದಕ್ಕೆ ಕಾರಣ ಕಿಂಗ್​ ಕೊಹ್ಲಿ..!

ವಿರಾಟ್​​ ಕೊಹ್ಲಿ.. IPLನ ಸುಲ್ತಾನ.. ಎಂತದ್ದೇ ಸಿಚ್ಯುವೇಶನ್​ ಇರ್ಲಿ.. ಕೊಹ್ಲಿ ಕಣದಲ್ಲಿದ್ರೆ ಸಾಕು. ಆರ್​​ಸಿಬಿ ಫ್ಯಾನ್ಸ್​​ ಜೋಶ್​ ಬೇರೆ ಲೆವೆಲ್​ನಲ್ಲಿರುತ್ತೆ. ಗೆದ್ದೇ ಗೆಲ್ತೀವಿ ಅನ್ನೋ ಆತ್ಮವಿಶ್ವಾಸ ಅಭಿಮಾನಿಗಳಲ್ಲಿರುತ್ತೆ. ಕೊಹ್ಲಿಯ ತಾಕತ್ತು ಅಂಥಾದ್ದು. ಆದರೆ ಬೆಂಗಳೂರಲ್ಲಿ ಆರ್​​ಸಿಬಿ ಕ್ಯಾಂಪ್​ ಆರಂಭವಾದ್ರೂ ಕೊಹ್ಲಿ ಈ ಬಾರಿಯ ಐಪಿಎಲ್​ ಆಡ್ತಾರಾ? ಇಲ್ವಾ? ಅನ್ನೋದ್ರ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಇದೇ ಅಭಿಮಾನಿಗಳನ್ನ ಗೊಂದಲಕ್ಕೆ ದೂಡಿತ್ತು. ಇದೀಗ ಗೊಂದಲಕ್ಕೆ ಬ್ರೇಕ್​ ಬಿದ್ದಿದೆ.

ಕಿಂಗ್​ ಕೊಹ್ಲಿ ಕಮ್​ಬ್ಯಾಕ್​ಗೆ ಮಹೂರ್ತ ಫಿಕ್ಸ್​​
​ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ ಯಾವಾಗ? ಕಿಂಗ್​ ಕೊಹ್ಲಿ ಐಪಿಎಲ್​ ಆಡ್ತಾರಾ? ಅಭಿಮಾನಿಗಳ ವಲಯದ​ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕೇ ಬಿಟ್ಟಿದೆ. ಲಂಡನ್​ನಿಂದ ಭಾರತಕ್ಕೆ ಹಾರಲು ವಿರಾಟ್​​ ಕೊಹ್ಲಿ ಸಜ್ಜಾಗಿದ್ದಾರೆ. ಕೊಹ್ಲಿ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದು, ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಮಾರ್ಚ್​ 16ಕ್ಕೆ ಆರ್​​ಸಿಬಿ ಕ್ಯಾಂಪ್​​ಗೆ ಕೊಹ್ಲಿ ಎಂಟ್ರಿ?
ಬೆಂಗಳೂರಿನಲ್ಲಿ ಐಪಿಎಲ್​ ಟೂರ್ನಿಗೆ ಆರ್​​ಸಿಬಿ ಫ್ರಾಂಚೈಸಿಯ ಸಿದ್ಧತೆ ಆರಂಭವಾಗಿದೆ. ಆಟಗಾರರು, ಸಪೋರ್ಟ್​ ಸ್ಟಾಫ್​ ಒಬ್ಬೊಬ್ಬರಾಗಿ ತಂಡವನ್ನು ಕೂಡಿಕೊಳ್ತಿದ್ದಾರೆ. ಇದೀಗ ವಿರಾಟ್​ ಕೊಹ್ಲಿಯ ಎಂಟ್ರಿಗೂ ಮಹೂರ್ತ ಫಿಕ್ಸ್​ ಆಗಿದೆ. ಮಾರ್ಚ್​​ 16ರಂದು ವಿರಾಟ್​​​ ಕೊಹ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಅನ್​ಬಾಕ್ಸ್​ ಇವೆಂಟ್​ನಲ್ಲಿ ಕೊಹ್ಲಿ ದರ್ಶನ
ವಿರಾಟ್​ ಕೊಹ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ತಿಂಗಳುಗಳೇ ಉರುಳಿವೆ. ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ ಬಳಿಕ ಕೊಹ್ಲಿ, ವಿದೇಶಕ್ಕೆ ಹಾರಿದ್ರು. ಇದೀಗ ಮಾರ್ಚ್​​ 19ರಂದು ಚಿನ್ನಸ್ವಾಮಿ ಮೈದಾನದಲ್ಲಿ ಅನ್​ಬಾಕ್ಸ್​ ಇವೆಂಟ್​​ ನಡೆಸಲು ಆರ್​​ಸಿಬಿ ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ದರ್ಶನ ಕೂಡ ಅಭಿಮಾನಿಗಳಿಗೆ ಆಗಲಿದೆ.

ಕೊಹ್ಲಿ ಪಾಲಿಗೆ ಐಪಿಎಲ್​​ ಅಗ್ನಿಪರೀಕ್ಷೆಯ ಕಣ
ಐಪಿಎಲ್​ ಆರಂಭಕ್ಕೂ ಮುನ್ನವೇ ಕೊಹ್ಲಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನವಿಲ್ಲ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಈ ಬಾರಿಯ ಐಪಿಎಲ್​ ಟೂರ್ನಿ ಕೊಹ್ಲಿ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಮಿಲಿಯನ್​ ಡಾಲರ್​​ ಟೂರ್ನಿಯಲ್ಲಿ ಕೊಹ್ಲಿ, ಸಾಲಿಡ್​​ ಫಾರ್ಮ್​ನಲ್ಲಿ ಆಟವಾಡಿ, ಕನ್ಸಿಸ್ಟೆಂಟ್​ ಆಗಿ ರನ್​​ಗಳಿಸಿದ್ರೆ, ವಿಶ್ವಕಪ್​ ಟಿಕೆಟ್​​ ಸಿಗಲಿದೆ. ಫ್ಲಾಪ್​ ಆದ್ರೆ, ಈಗ ಹಬ್ಬಿರುವ ಸುದ್ದಿ ನಿಜವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment