newsfirstkannada.com

ಮುಡಾ ಹಗರಣದಲ್ಲಿ ಓರ್ವ ಅಧಿಕಾರಿಯ ತಲೆದಂಡ; ಇತ್ತ ಚಾಮುಂಡಿ ಮೊರೆ ಹೋದ CM

Share :

Published September 3, 2024 at 7:47am

    ಮೂಡಾ ಹಗರಣದಲ್ಲಿ ದಿನೇ ದಿನೇ ಸಿಎಂ ಸಿದ್ದರಾಮಯ್ಯಗೆ ಟೆನ್ಷನ್

    ಸೆಪ್ಟೆಂಬರ್ 9ರಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ

    ರಾಜಮನೆತನದ ವಿರೋಧದ ನಡುವೆಯೂ ಪ್ರಾಧಿಕಾರದ ಸಭೆ

ಮೂಡಾ ಹಗರಣದಲ್ಲಿ ದಿನೇ ದಿನೇ ಸಿಎಂ ಸಿದ್ದರಾಮಯ್ಯರಿಗೆ ಟೆನ್ಷನ್ ಹೆಚ್ಚಾಗ್ತಿದೆ. ಹೈಕಮಾಂಡ್ ಅಭಯವಿದ್ರೂ ಕೋರ್ಟ್​ನಲ್ಲಿ ಏನಾಗುತ್ತೋ ಏನೋ ಅಂತ ವಿಚಾರಣೆ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ ಹಗರಣದಲ್ಲಿ ಅಧಿಕಾರಿಯೊಬ್ಬರ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ಈ ನಡುವೆ ಸಿಎಂ ಚಾಮುಂಡಿ ಮೊರೆ ಹೋಗಿದ್ದಾರೆ.

ಮುಡಾ ಹಗರಣ ಸದ್ಯ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದು ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಿನ್ನೆ ಹೈಕೋರ್ಟ್​ ಮತ್ತೆ ಮುಂದೂಡಿದೆ. ಸೆಪ್ಟೆಂಬರ್ 9ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆ ಮಾಡಲಿದ್ದು ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ಈ ನಡುವೆ ಮೂಡಾ ಹಗರಣ ಸಂಬಂಧ ಒಬ್ಬರಿಗೆ ಸರ್ಕಾರ ಶಾಕ್ ಕೊಟ್ಟಿದೆ.

ಇದನ್ನೂ ಓದಿ:ಮುಡಾ ಮಾಜಿ ಆಯುಕ್ತನಿಗೆ ಸರ್ಕಾರದಿಂದ ಬಿಗ್ ಗಿಫ್ಟ್: ಹಲವು ಅನುಮಾನ ಮೂಡಿಸಿದ ನೇಮಕ

ಮುಡಾ ಹಗರಣ ಸಂಬಂಧ ಅಧಿಕಾರಿಯ ತಲೆದಂಡ
ಮುಡಾ ಹಗರಣದ ಬೆನ್ನಲ್ಲೇ ಅಧಿಕಾರಿಯೊಬ್ಬರ ತಲೆದಂಡವಾಗಿದೆ. ಹಗರಣದ ಆರೋಪವಾಗುತ್ತಿದ್ದಂತೆ ಮುಡಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರ, ಈಗ ಅವರನ್ನು ಅಮಾನತು ಮಾಡಿದೆ. ಹಾವೇರಿ ವಿವಿ ಕುಲಸಚಿವರಾಗಿ 2 ದಿನಗಳ ಹಿಂದೆಯಷ್ಟೇ ಆಯ್ಕೆಯಾಗಿದ್ದ ಹಾಗೂ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್​ನ್ನ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯಪಾಲರ ಆದೇಶನುಸಾರ ಅಮಾನತು ಮಾಡಲಾಗಿದೆ.

ಮುಡಾ ಹಗರಣದಿಂದ ಪಾರಾಗಲು ಸಿಎಂ ಚಾಮುಂಡಿ ಮೊರೆ
ಇನ್ನು ಮುಡಾ ಹಗರಣದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 10 ರಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿಎಂ ಇದೀಗ ಮತ್ತೆ ಚಾಮುಂಡಿ ತಾಯಿಯ ಮೊರೆ ಹೋಗಿದ್ದಾರೆ. ದೇವರ ದರ್ಶನದ ಬಳಿಕ ಬೆಟ್ಟದ ಅಭಿವೃದ್ದಿ ಪ್ರಾಧಿಕಾರ ಸಭೆ ನಡೆಸಲಿದ್ದಾರೆ. ಮೈಸೂರು ರಾಜಮನೆತನದ ವಿರೋಧದ ನಡುವೆಯೂ ಪ್ರಾಧಿಕಾರದ ಸಭೆ ನಡೆಸಲಿದ್ದು ಇದು ಒಡೆಯರ್ ಕುಟುಂಬದ ಕೆಂಗಣ್ಣಿಗೆ ಕಾರಣವಾಗಲಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಪಟ್ಟು ಸಡಿಲಿಸದ ಸೈನಿಕ; ಬೈ ಎಲೆಕ್ಷನ್ ಬಗ್ಗೆ​ ಮೈತ್ರಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಏನು?

ಒಟ್ಟಾರೆ ಈ ಮೂಡಾ ಹಗರಣ ಸಿಎಂ ಸಿದ್ದರಾಮಯ್ಯರಿಗೆ ಮುಳ್ಳಾಗಿ ಕಾಡ್ತಿದೆ. ಸದ್ಯ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ತಲೆದಂಡವಾಗಿದೆ. ಇನ್ನೇನಿದ್ರೂ ಸೆಪ್ಟೆಂಬರ್ 9ರಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ತಾಯಿ ಕಾಪಾಡಮ್ಮ ಅಂತ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಡಾ ಹಗರಣದಲ್ಲಿ ಓರ್ವ ಅಧಿಕಾರಿಯ ತಲೆದಂಡ; ಇತ್ತ ಚಾಮುಂಡಿ ಮೊರೆ ಹೋದ CM

https://newsfirstlive.com/wp-content/uploads/2024/08/SIDDARAMAIAH-3-2.jpg

Load More