Advertisment

ಸಿಂಗಾಪುರದಲ್ಲಿಲ್ಲ HDK ಫ್ಯಾಮಿಲಿ; ಡಿಕೆಶಿ ಆರೋಪ ಬೆನ್ನಲ್ಲೇ ಫಾರಿನ್ ಟ್ರಿಪ್ ಫೋಟೋ ರಿಲೀಸ್

author-image
admin
Updated On
ಸಿಂಗಾಪುರದಲ್ಲಿಲ್ಲ HDK ಫ್ಯಾಮಿಲಿ; ಡಿಕೆಶಿ ಆರೋಪ ಬೆನ್ನಲ್ಲೇ ಫಾರಿನ್ ಟ್ರಿಪ್ ಫೋಟೋ ರಿಲೀಸ್
Advertisment
  • ಸಿಂಗಾಪುರದಲ್ಲಿ ಸಂಚು ಮಾಡಿದ್ದಾರೆಂದು ಡಿಕೆಶಿ ಆರೋಪ
  • ಡಿಕೆಶಿ ಆರೋಪ ಬೆನ್ನಲ್ಲೇ ಹೆಚ್​ಡಿಕೆ ಫೋಟೋ ರಿಲೀಸ್
  • ಫೋಟೋ ಬಿಟ್ಟು ಡಿಕೆ ಹೇಳಿಕೆಗೆ ಟಕ್ಕರ್ ಕೊಟ್ರಾ ದಳಪತಿ?

ಬೆಂಗಳೂರು: ಇಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡ್ತಿದ್ದಾರೆ. ಸರ್ಕಾರ ಬೀಳಿಸೋ ತಂತ್ರದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಮಾತು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ದರಾಮಯ್ಯ​ ಸರ್ಕಾರದ ಪತನಕ್ಕೆ ವಿದೇಶದಲ್ಲಿ ಸ್ಕೆಚ್‌ ರೆಡಿ ಆಗ್ತಿದ್ಯಾ ಅನ್ನೋ ಚರ್ಚೆಗಳು ನಡೆದಿತ್ತು. ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದ ಈ ಬಾಂಬ್‌ ಸಿಡಿಸಿದ ಮೂರು ದಿನದ ಬಳಿಕ ಫಾರಿನ್ ಪಾಲಿಟಿಕ್ಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

Advertisment

ಡಿಕೆ ಶಿವಕುಮಾರ್ ಸಿಂಗಾಪುರದ ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶದಲ್ಲಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಫ್ಯಾಮಿಲಿ ಫೋಟೋ ರಿಲೀಸ್ ಮಾಡಲಾಗಿದೆ. ಯುರೋಪ್‌ ಸುತ್ತಾಡುತ್ತಿರುವ ಹೆಚ್​ಡಿಕೆ ಕುಟುಂಬ ಸದ್ಯ ಫಿನ್‌ಲ್ಯಾಂಡ್‌ನಲ್ಲಿದೆ. ದಳಪತಿ ಕುಟುಂಬದ ಸದಸ್ಯರು ಫಿನ್‌ಲ್ಯಾಂಡ್‌ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದು, ನಾವು ಸಿಂಗಾಪುರದಲ್ಲಿ ಇಲ್ಲ ಅನ್ನೋ ಸಂದೇಶ ಸಾರಲಾಗಿದೆ.

publive-image

ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದ ಬಳಿಕ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಫಾರಿನ್‌ ಟೂರ್ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದಲ್ಲಿ ಸರ್ಕಾರ ಬೀಳಿಸೋ ಸಂಚು ಮಾಡಿದ್ದಾರೆಂದು ಹೇಳಿಕೆ ನೀಡಿದ್ದರು. ಪರೋಕ್ಷವಾಗಿ ಕುಮಾರಸ್ವಾಮಿ ಅವರ ಕುರಿತು ನೀಡಿದ್ದ ಹೇಳಿಕೆಗೆ ಫೋಟೋ ರಿಲೀಸ್ ಮಾಡೋ ಮೂಲಕ ಜೆಡಿಎಸ್ ನಾಯಕರು ಟಕ್ಕರ್ ಕೊಟ್ಟಿದ್ದಾರೆ. ಸದ್ಯ ಯುರೋಪ್​​ನ ಫಿನ್​​ಲ್ಯಾಂಡ್​​ನಲ್ಲಿ ದಳಪತಿ ತುಂಬು ಕುಟುಂಬ ವಾಸ್ತವ್ಯ ಹೂಡಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment