newsfirstkannada.com

ವಯಸ್ಸು 24.. ಮನೆ ಬಾಡಿಗೆ ಕೊಟ್ಟವರನ್ನೇ ಕೊಲೆ ಮಾಡಿದ ಶೋಕಿ ರಾಣಿ; ಮೋನಿಕಾ ತಗ್ಲಾಕೊಂಡಿದ್ಹೇಗೆ?

Share :

Published May 15, 2024 at 7:44pm

Update May 15, 2024 at 7:40pm

    ನಟಿಯರನ್ನೇ ಮೀರಿಸೋ ಟ್ಯಾಲೆಂಟ್​ ಇರೋ ಕಿಲಾಡಿ ಯುವತಿ ಇವಳು

    75 ಜನ ಫಾಲೋವರ್ಸ್​ ಇದ್ರೂ 7 ಲಕ್ಷ ​ಇರೋ ರೇಂಜ್​ಗೆ ರೀಲ್ಸ್

    ಮನೆ ಒಡತಿಯನ್ನೇ ಕೊಲೆ ಮಾಡಿರುವ ವಿಚಾರ ಬಯಲಾಗಿದ್ದು ಹೇಗೆ?

ಬೆಂಗಳೂರು ಲೈಫ್​ ಅಂದ್ಮೇಲೆ ಕೈಯಲ್ಲಿ ಕೆಲಸ ಇರಬೇಕು. ಕೈ ತುಂಬಾ ದುಡ್ಡಿರಬೇಕು. ಇವೆರಡು ಇದ್ದೋರು ಮಾತ್ರ ಸಿಲಿಕಾನ್ ಸಿಟಿಯಲ್ಲಿ ಬಿಂದಾಸ್ ಲೈಫ್ ಲೀಡ್ ಮಾಡಬಹುದು. ಬಟ್, ಶೋಕಿ ಜೀವನದ ಆಸೆ. ಕೈಯಲ್ಲಿ ಕಾಸಿರಲ್ಲ, ಕಾಸು ಬರೋಥರಾ ಕೆಲಸನೂ ಇರಲ್ಲ. ಆಗ್ಲೇ ನೋಡಿ ಇಂಥಹಾ ಕ್ರಿಮಿನಲ್​ ಐಡಿಯಾಗಳು ತಲೆಗೆ ಹೊಳೆಯುತ್ವೆ. ಶೋಕಿ ಜೀವನಕ್ಕಾಗಿ ಮನೆ ಬಾಡಿಗೆ ಕೇಳ್ಕೊಂಡು ಬಂದೋಳು ಮನೆ ಒಡೆತಿಯನ್ನೇ ಕೊಂದಿರೋ ಘಟನೆ ಬೆಂಗಳೂರಿಗರನ್ನ ಬೆಚ್ಚಿಬೀಳಿಸಿದೆ. ಈ ಘಟನೆ ಮೇ 10 ರಂದು ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ.

ಅಬ್ಬಬ್ಬಾ.. ಅದೇನ್ ಪರ್ಫಾಮೆನ್ಸ್​.. ಈಕೆಯ ಪರ್ಫಾಮೆನ್ಸ್​ಗೆ ರಾಜಮೌಳಿನೂ ಬಿದ್ದೋಗ್ತಾರೆ.. ರಾಮ್ ಗೋಪಾಲ್​ ವರ್ಮಾನೂ ಸೋತೋಗ್ತಾರೆ. ಹಾಗಂತ ಈಕೆ ಸಿನಿಮಾ ನಟಿ ಅಂದ್ಕೋಬೇಡಿ. ಸಿನಿಮಾ ನಟಿಯರನ್ನ ಮೀರಿಸೋ ಟ್ಯಾಲೆಂಟ್​ ಇರೋ ಕಿಲಾಡಿ ಅಂದ್ಕೋಳಿ. ಬರೀ ಕಿಲಾಡಿ ಮಾತ್ರವಲ್ಲ, ಖತರ್ನಾಕ್​ ಕ್ರಿಮಿನಲ್​ ಕೂಡ.

ಇದನ್ನೂ ಓದಿ: ಜಿಲ್ಲೆಯಲ್ಲಿ ಭೀಕರ ಬರ, ಕುಡಿಯುವ ನೀರಿಗೂ ಹಾಹಾಕಾರ.. ಮಳೆಗಾಗಿ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು

ಜಸ್ಟ್​ 24.. ಡಾಟಾ ಎಂಟ್ರಿ ಕಂಪನಿಯಲ್ಲಿ ಕೆಲಸ ಮಾಡ್ತಾಳೆ

ಹೆಸರು ಮೊನಿಕಾ.. ಏಜ್ ಜಸ್ಟ್​ 24.. ಡಾಟಾ ಎಂಟ್ರಿ ಕಂಪನಿಯಲ್ಲಿ ಕೆಲಸ ಮಾಡ್ತಾಳೆ. ಟೈಮ್​ ಸಿಕ್ಕಾಗೆಲ್ಲ ರೀಲ್ಸ್​ ಮಾಡ್ತಾಳೆ. ಹಾಗಂತ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್​ ಗಟ್ಟಲೇ ಫಾಲೋವರ್ಸ್​ ಇದ್ದಾರೆ, ಕುಂತ್ರು ನಿಂತ್ರು ಈಕೆ ಹಿಂದೆ ಹುಡುಗರು ಬೀಳ್ತಾರೆ ಅಂದ್ಕೋಬೇಡಿ. ಮೊನಿಕಾಗಿರೋದು ಜಸ್ಟ್​ 75 ಫಾಲೋವರ್ಸ್​ ಅಷ್ಟೇ. 75 ಜನ ಫಾಲೋವರ್ಸ್​ ಇದ್ದರೂ 7 ಸಾವಿರನೋ ಅಥವಾ 7 ಲಕ್ಷನೋ ಫಾಲೋವರ್ಸ್​ ಇರೋ ರೇಂಜ್​ಗೆ ರೀಲ್ಸ್​ ಮಾಡ್ತಿದ್ಲು ಅನ್ನೋದನ್ನ ನೆನಪಿಸಿಕೊಂಡ್ರೆ ಮನಸ್ಸಿಗೆ ಸ್ವಲ್ಪ ಕಷ್ಟ ಆಗುತ್ತೆ. ಹೋಗ್ಲಿ ಬಿಡಿ. ಸೋಶಿಯಲ್ ಮೀಡಿಯಾ ಹುಚ್ಚು ಹತ್ತಿಸಿಕೊಂಡೋರ ಬಗ್ಗೆ ನಾವು ಏನೂ ಹೇಳೋಕೆ ಆಗಲ್ಲ.

ಇವತ್ತೋ ನಾಳೆನೋ ಫೇಮಸ್ ಆಗ್ತಿದ್ದಳೇನೋ!

ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೆ ಅಲ್ವಾ! ಫೇಮಸ್​ ಆಗ್ಬೇಕು, ಟ್ರೆಂಡ್ ಆಗ್ಬೇಕು, ಟ್ರೋಲ್ ಆಗ್ಬೇಕು ಅಂತ ಏನೇನೋ ಮಾಡೋ ಮಾನಸಿಕ ಮನುಷ್ಯರು ಸಾಕಷ್ಟು ಜನ ಸಿಗ್ತಾರೆ. ಬಹುಶಃ ಮೊನಿಕಾಳದ್ದು ಇದೇ ಮನಸ್ಥಿತಿ ಇದ್ದಿದ್ರೆ, ಇವತ್ತೋ ನಾಳೆನೋ ಫೇಮಸ್ ಆಗ್ತಿದ್ದಳೇನೋ. ಅಥವಾ ಆಕೆ ಮಾಡ್ತಿದ್ದ ರೀಲ್ಸ್​ ಯಾವುದಾದರೂ ಟ್ರೆಂಡ್ ಆಗಿ ಸೋಶಿಯಲ್ ಮೀಡಿಯಾ ಸ್ಟಾರ್​ ಆಗ್ತಿದ್ದಳೇನೋ? ಆದರೆ, ಆಕೆ ಫೇಮಸ್​ ಆಗೋದಕ್ಕಿಂತ, ಸೋಶಿಯಲ್ ಮೀಡಿಯಾ ಸ್ಟಾರ್​ ಆಗೋದಕ್ಕಿಂತ ಒಂದೇ ಸಲ ಲೈಫ್​ ಸೆಟ್ಲಾ ಮಾಡ್ಕೊಳ್ಳೋ ಶೋಕಿಗೆ ಬಿದ್ದಿದ್ದಳು ಅನಿಸುತ್ತೆ. ಅದಕ್ಕೆ ಮಾಡಬಾರದು ಕೆಲಸ ಮಾಡಿ ಈಗ ಅಂದರ್ ಆಗಿದ್ದಾಳೆ.

ಮೊನಿಕಾಗೆ ದುಡ್ಡಿನ ಹುಚ್ಚು ಹಿಡಿದಿತ್ತು

ಒಂದು ಕಡೆ ರೀಲ್ಸ್​ ಲೈಫ್.. ಮತ್ತೊಂದೆಡೆ ಡಾಟಾ ಎಂಟ್ರಿ ಕೆಲಸ.. ಇದ್ದಿದ್ದರಲ್ಲಿ ಲೈಫ್ ಮ್ಯಾನೇಜ್ ಮಾಡ್ಕೊಂಡು ಹೋಗ್ತಿದ್ದ ಮೊನಿಕಾ, ಅದ್ಯಾಕೋ ಲಕ್ಷುರಿ ಲೈಫ್​ನ ಆಸೆಗೆ ಬಿದ್ದಿದ್ದಳು. ಮಾಡ್ತಿರೋ ಕೆಲಸ, ಸಿಗ್ತಿರೋ ಸಂಬಳದಿಂದ ಏನೋ ಆಗ್ತಿಲ್ಲ ಅಂದ್ಕೊಂಡ ಮೋನಿಕಾಗೆ ದುಡ್ಡಿನ ಹುಚ್ಚು ಹಿಡಿದಿತ್ತು. ಒಂದೇ ಸಲ ಶ್ರೀಮಂತೆಯಾಗಿಬಿಡಬೇಕು ಅನ್ನೋ ದುರಾಸೆ ಅಂಟಿತ್ತು. ಈ ದುರಾಸೆನೇ ಈಗ ಮೋನಿಕಾ ಪಾಲಿಗೆ ಮುಳುವಾಗಿದೆ.

ಇದನ್ನೂ ಓದಿ: ಮುಂಬೈ ಹೋರ್ಡಿಂಗ್​ ಬಿದ್ದ ಕೇಸ್​ಗೆ ಹೊಸ ಟ್ವಿಸ್ಟ್​.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್​ ಶೋ

ಮಾಡಬಾರದು ಕೆಲಸ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ

ಮೋನಿಕಾ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾಳೆ. ಮಾಡಬಾರದು ಕೆಲಸ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ.. ತನ್ನ ಮೊಬೈಲ್ ಕ್ಯಾಮೆರಾ ಮುಂದೆ ನಿಂತ್ಕೊಂಡು ಬಿಂದಾಸ್ ಆಗಿ ರೀಲ್ಸ್​ ಮಾಡ್ತಿದ್ದ ಮೋನಿಕಾ ಈಗ ಮಾಧ್ಯಮಗಳ ಮುಂದೆ ಮುಖನೇ ತೋರಿಸದೇ ಮುಖ ಮುಚ್ಕೊಂಡು ಹೋಗೋ ಪರಿಸ್ಥಿತಿಗೆ ಬಿದ್ದಿದ್ದಾಳೆ. ಮಾಡಿದ ತಪ್ಪಿಗೆ ಗೋಳೋ ಅಂತ ಕಣ್ಣೀರು ಹಾಕ್ತಿದ್ದಾಳೆ.

ಮನೆ ಬಾಡಿಗೆ ಕೊಟ್ಟ ಒಡತಿಯನ್ನೇ ಕೊಂದ ಮೊನಿಕಾ!

24 ವರ್ಷದ ಮೋನಿಕಾ ಕೆಂಗೇರಿಯ ಕೊನಸಂದ್ರದಲ್ಲಿರುವ ದಿವ್ಯಾ ಹಾಗೂ ಗುರುಮೂರ್ತಿ ದಂಪತಿಯ ಮನೆಯಲ್ಲಿ ಬಾಡಿಗೆಗೆ ಇದ್ದಳು. ಮದುವೆ ಆಗಿದೆ ಅಂತೇಳಿ ಮನೆ ಬಾಡಿಗೆ ಪಡೆದುಕೊಂಡಿದ್ದ ಮೊನಿಕಾಗೆ ಒಬ್ಬ ಬಾಯ್​ಫ್ರೆಂಡ್​ ಸಹ ಇದ್ದನಂತೆ. ಆದರೆ ಮನೆಯಲ್ಲಿ ಮೊನಿಕಾ ಒಬ್ಬಳೇ ಇರ್ತಿದ್ದಳು ಎನ್ನಲಾಗಿದೆ. ಟಾಟಾ ಏಸ್​ ಇಟ್ಕೊಂಡಿದ್ದ ಬಾಯ್​ಫ್ರೆಂಡ್​ ಆಗಾಗ ಬಂದು ಹೋಗ್ತಿದ್ದ. ಹೀಗೆ ಕಳೆದ 3 ತಿಂಗಳ ಹಿಂದೆಯಷ್ಟೇ ದಿವ್ಯಾ ಅವರ ಮನೆಗೆ ಬಾಡಿಗೆಗೆ ಬಂದಿದ್ದ ಮೊನಿಕಾ, ಮನೆ ಒಡತಿಯನ್ನೇ ಕೊಲೆ ಮಾಡಿರುವ ವಿಚಾರ ಬಯಲಾಗಿದೆ.

ಮೋನಿಕಾ ಕೊಲೆ ಮಾಡಿದ್ದೇಕೆ? ಕೊಲೆ ಮಾಡಿ ಹೇಗೆ ತಪ್ಪಿಸಿಕೊಂಡಿದ್ದಳು.? ಈ ಕೊಲೆಯ ಹಿಂದಿನ ಕಾರಣ ಏನು ಅನ್ನೋದಕ್ಕಿಂತ ಮೊದಲು ಸ್ವಲ್ಪ ಆಕೆಯ ಬಗ್ಗೆ ಮಾಹಿತಿ ಇಲ್ಲಿದೆ.

4 ತಿಂಗಳ ಹಿಂದಷ್ಟೇ ದಂಪತಿ ಮನೆಯ ಗೃಹ ಪ್ರವೇಶ ಮಾಡಿದ್ದರು

ಮೋನಿಕಾ ಮೂಲತಃ ಕೋಲಾರದ ಚಿಂತಾಮಣಿಯವಳು. ಎಸ್​ಎಸ್​ಎಲ್​ಸಿ ಮುಗಿಸಿದ್ದ ಮೊನಿಕಾ ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯೊಂದರಲ್ಲಿ ಡೇಟಾ ಎಂಟ್ರಿ ಕೆಲಸ ಮಾಡ್ತಿದ್ದಳು. ಈ ನಡುವೆ ಅದೇನ್ ಆಯ್ತೋ ಗೊತ್ತಿಲ್ಲ ಆ ಕೆಲಸನೂ ಬಿಟ್ಟಿದ್ದಳು ಅಂತಾ ಗೊತ್ತಾಗಿದೆ. ಹೀಗರಬೇಕಾದರೆ 3 ತಿಂಗಳ ಹಿಂದೆಯಷ್ಟೇ ಮೃತ ದಿವ್ಯಾ ಅವರ ಮನೆಗೆ ಮೊನಿಕಾ ಬಾಡಿಗೆಗೆ ಬಂದಿದ್ದಳು. ಗ್ರೌಂಡ್​ ಫ್ಲೋರ್​ನಲ್ಲಿ ಮೊನಿಕಾ ಬಾಡಿಗೆಗೆ ಇದ್ದರೆ ಮನೆ ಓನರ್ ದಿವ್ಯಾ ಮತ್ತು ಗುರುಮೂರ್ತಿ ದಂಪತಿ ಫಸ್ಟ್​ ಫ್ಲೋರ್​ನಲ್ಲಿ ವಾಸವಾಗಿದ್ದರು. ಸರ್ಪ್ರೈಸ್​ ಅಂದ್ರೆ 4 ತಿಂಗಳ ಹಿಂದಷ್ಟೇ ದಿವ್ಯಾ-ಗುರುಮೂರ್ತಿ ದಂಪತಿ ಈ ಮನೆಯ ಗೃಹ ಪ್ರವೇಶ ಮಾಡಿ ವಾಸವಾಗಿದ್ದರು. ಗೃಹ ಪ್ರವೇಶವಾದ 1 ತಿಂಗಳ ಬಳಿಕ ಮೊನಿಕಾ ಬಾಡಿಗೆಗೆ ಬಂದಿದ್ದಳು. ದಿವ್ಯಾ ಅವರ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರೆ, ದಿವ್ಯಾ ಗೃಹಿಣಿಯಾಗಿದ್ದಳು. ಈ ದಂಪತಿಗೆ ಒಂದು ಮಗುವಿದ್ದು, ಅತ್ತೆ-ಮಾವ ಜೊತೆಯಲ್ಲೇ ವಾಸವಿದ್ದರು. ಪ್ರತಿನಿತ್ಯ ಗಂಡ, ಅತ್ತೆ-ಮಾವ ಕೆಲಸಕ್ಕೆ ಹೋಗ್ತಿದ್ರೆ ದಿವ್ಯಾ ಮತ್ತು ಮಗು ಮನೆಯಲ್ಲೇ ಇರ್ತಿದ್ದರು. ನಾಲ್ಕು ತಿಂಗಳು ಎಲ್ಲವೂ ಅಂದುಕೊಂಡಂತೆ ಹೋಗ್ತಿತ್ತು.. ಆದ್ರೆ ಮೇ 10ನೇ ತಾರೀಖು ಮನೆಯವರೆಲ್ಲ ಕೆಲಸಕ್ಕೆ ಹೋದ ಮೇಲೆ ಈ ಕಡೆ ದಿವ್ಯಾಳ ಕೊಲೆಯಾಗಿದೆ.

ಅಕ್ಕ-ಪಕ್ಕದವರಿಗೂ ಯಾವ ಸುಳಿವು ಇರಲ್ಲ

ದಿವ್ಯಾ ಕೊಲೆಯಾಗಿತ್ತು.. ಕೆಲಸಕ್ಕೆ ಹೋಗಿದ್ದ ಗಂಡ ಎಂದಿನಂತೆ ಮನೆಗೆ ಫೋನ್ ಮಾಡಿದ್ದ. ಎಷ್ಟೇ ಫೋನ್ ಮಾಡಿದ್ದರು ದಿವ್ಯಾ ಫೋನ್ ರಿಸೀವ್ ಮಾಡದೇ ಇದ್ದಾಗ ಅನುಮಾನಗೊಂಡ ಪತಿ, ಮನೆಗೆ ಬಂದು ನೋಡಿದಾಗ ದಿವ್ಯಾ ಹೆಣವಾಗಿ ಬಿದ್ದಿದ್ದಳು. ಆದ್ರೆ ದಿವ್ಯಾಳನ್ನ ಕೊಂದಿದ್ಯಾರು? ಯಾಕೆ ಕೊಲೆ ಮಾಡಿದ್ರು? ಏನಾಯ್ತು ಅನ್ನೋದು ಪತಿಗೇ ಗೊತ್ತೇ ಆಗಲ್ಲ. ಮನೆಗೆ ಯಾರ್ ಬಂದ್ರು? ಯಾರು ಹೋದ್ರು ಅನ್ನೋದು ಗೊತ್ತಾಗಲ್ಲ. ಅಕ್ಕ-ಪಕ್ಕದವರಿಗೂ ಯಾವ ಸುಳಿವು ಇರಲ್ಲ. ದಿವ್ಯಾಳ ಹತ್ಯೆಯಾಗಿದೇ ಅಂತ ಗೊತ್ತಾದ್ಮೇಲೆ ಕೆಂಗೇರಿ ಉಪನಗರ ಪೊಲೀಸರು ಸಹ ಸ್ಥಳಕ್ಕೆ ಬರ್ತಾರೆ. ದಿವ್ಯಾಳ ಮನೆ ಹಾಗೂ ಮನೆಯ ಸುತ್ತಾಮುತ್ತಲಿನವರ ಬಳಿ ಮಾಹಿತಿ ಕಲೆ ಹಾಕ್ತಾರೆ. ಆದ್ರೆ ಕೊಲೆ ಮಾಡಿದ್ದು ಯಾರು? ಯಾಕೆ ಕೊಲೆ ಮಾಡಿದ್ರು ಅನ್ನೋದು ಗೊತ್ತಾಗಲ್ಲ. ಇನ್​ಫ್ಯಾಕ್ಟ್​ ದಿವ್ಯಾ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮೊನಿಕಾಳನ್ನ ಸಹ ವಿಚಾರಿಸಲಾಗುತ್ತೆ. ಆಗ ಮೊನಿಕಾ ತನಗೇನೂ ಗೊತ್ತೇ ಇಲ್ಲ ರೀತಿ ರಿಯಾಕ್ಟ್​ ಮಾಡ್ತಾಳೆ. ಆಗಷ್ಟೇ ಹೊರಗಿಂದ ಬಂದವರಂತೆ ನಟಿಸುವ ಮೊನಿಕಾ ಕೊಲೆಯ ಬಗ್ಗೆ ತನಗೇನು ಗೊತ್ತಿಲ್ಲ, ಕಳ್ಳರು ಯಾರಾದರೂ ಬಂದಿರಬಹುದಾ ಅಂತ ಹೇಳ್ತಾಳೆ. ಆ ಕ್ಷಣಕ್ಕೆ ಮೊನಿಕಾಳನ್ನ ಅಷ್ಟು ಸೀರಿಯಸ್​ ಆಗಿ ತೆಗೆದುಕೊಳ್ಳದ ಪೊಲೀಸರು ಸರಿ ಅಂತ ತನಿಖೆ ಮುಂದುವರಿಸ್ತಾರೆ.

ಅಲ್ಲಿರೋ ಸ್ಥಳಿಯರ ವಾದವೇ ಬೇರೆ ಇತ್ತು

ದಿವ್ಯಾಳ ಕೊಲೆ ಯಾಕಾಯ್ತು? ಯಾರು ಮಾಡಿದ್ದರು ಅನ್ನೋದರ ಬಗ್ಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಆದರೆ ದಿವ್ಯಾಳ ಕೊರಳಲ್ಲಿ ಇದ್ದ ಚಿನ್ನದ ಸರ ಕಾಣೆಯಾಗಿದ್ದರಿಂದ ಇದು ಕಳ್ಳರ ಕೈಚಳಕ ಇರಬಹುದು ಅನ್ನೋ ಅನುಮಾನ ವ್ಯಕ್ತವಾಗಿತ್ತು. ಮನೆ ಬಾಡಿಗೆಗೆ ಇದ್ದ ಮೊನಿಕಾ ಸಹ ಇದೇ ಅನುಮಾನವನ್ನ ಪೊಲಿಸರ ಬಳಿ ವ್ಯಕ್ತಪಡಿಸಿದ್ದಳು. ಆದ್ರೆ, ಅಲ್ಲಿರೋ ಸ್ಥಳಿಯರ ವಾದವೇ ಬೇರೆಯಾಗಿತ್ತು. ಯಾಕಂದ್ರೆ ಇದೇ ಏರಿಯಾದಲ್ಲಿ 12-13 ವರ್ಷಗಳಿಂದ ವಾಸಿಸುತ್ತಿರುವ ಜನರು ಕಳ್ಳತನ ಅವಕಾಶ ಕಡಿಮೆ, ಇದ್ಯಾರೋ ಇಲ್ಲಿರೋರೇ ಮಾಡಿರಬೇಕು ಅಂತ ಅಂದ್ಕೊಂಡಿದ್ದರಂತೆ.

ಹಾಗ್ನೋಡಿದ್ರೆ ಸ್ಥಳೀಯರ ಅನುಮಾನ ಮೊನಿಕಾ ಮೇಲೇನೆ ಇತ್ತು.. ಯಾಕಂದ್ರೆ ದಿವ್ಯಾ ಅವರು ಈ ಮನೆಗೆ ಬಂದಾಗಿಂದ ಹೊರಗೆ ಯಾರ ಬಳಿಯೂ ಮಾತಾಡುವುದು, ಹೊರಗೆ ಹೋಗುವುದು ಮಾಡಿಲ್ಲವಂತೆ. ಮೊನಿಕಾ ಜೊತೆಗೆ ಹೆಚ್ಚು ಮಾತಾಡಿರುವುದನ್ನ ಸ್ಥಳಿಯರು ನೋಡಿದ್ದರು. ಇನ್ನು ಮೊನಿಕಾಗೆ ಬಾಯ್​ಫ್ರೆಂಡ್​ ಇದ್ದ ಕಾರಣ ಅವನು ಆಗಾಗ ಬಂದು ಹೋಗ್ತಿದ್ದನ್ನು ಗಮನಿಸಿದ್ದರು. ಈ ನಡುವೆ ಒಂದು ದಿನ ಮೊನಿಕಾ ಕಣ್ಣೀರಿಡುತ್ತಾ ಹೋಗಿದ್ದನ್ನ ಸಹ ಸ್ಥಳಿಯರು ನೋಡಿದ್ದರಂತೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

10, 13 ವರ್ಷಗಳಿಂದ ಕಳ್ಳತನ ಆಗಿಲ್ಲ

ನಾವು ಇಲ್ಲಿಗೆ ಬಂದು 13 ವರ್ಷಗಳು ಆಯಿತು. ಇಲ್ಲಿವರೆಗೆ ಯಾವುದೇ ಕಳ್ಳತನ ಆಗಿಲ್ಲ. ಈ ರೀತಿ ಎಲ್ಲಿಯು ಆಗಿಲ್ಲ. ಇದೇ ಫಸ್ಟ್ ಈ ರೀತಿ ಆಗಿರೋದು. ಯಾರೋ ಇಲ್ಲಿರೋರೆ ಮನೆಯವರೋ ಯಾರೋ ಮಾಡಿದ್ದಾರೆ. ಈ ಬಗ್ಗೆ ಡೌಟ್ ಇತ್ತು. ಆದರೆ ಇವಳು ಮಾಡಿದ್ದಾಳೆ ಅಂತ ನಂಬೋಕೆ ಆಗ್ತಿಲ್ಲ. ಮನೆ ಹೊರಗೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಗಂಡ ಹೆಂಡತಿ ಅಂತ ಹೇಳಿ ಬಂದಿದ್ದರು. ಎಲ್ಲಿಂದ ಬಂದಿದ್ದಾರೆ ಅಂತ ಗೊತ್ತಿಲ್ಲ, ಅವನು ಟಾಟಾ ಎಸೆ ಹಾಕ್ಕೊಂಡು ಬರ್ತಿದ್ದ.

-ಸ್ಥಳಿಯ ಮಹಿಳೆ

ದಿವ್ಯಾ ಹತ್ಯೆಯಾಗಿತ್ತು.. ಪೊಲೀಸರು ಹಂತಕರು ಯಾರು ಅಂತ ವಿಚಾರಣೆ ಮಾಡ್ತಿದ್ದರು. ಮನೆಯಲ್ಲಿ ಬಾಡಿಗಿಗೆ ಇದ್ದ ಮೊನಿಕಾ ಮೇಲೆ ಅನುಮಾನ ಇದ್ದರೂ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಅವಕಾಶ ಇರಲಿಲ್ಲ. ಆದ್ರೆ, ಮೊನಿಕಾಳೇ ದಿವ್ಯಾಳ ಕೊಲೆ ಮಾಡಿದ್ದು ಅನ್ನೋ ವಿಚಾರ ಈಗ ಪೊಲೀಸರ ಇನ್ವಿಸ್ಟಿಗೇಶನ್​ನಲ್ಲಿ ಬಯಲಾಗಿದೆ. ಮೊನಿಕಾನೇ ತನ್ನ ಮನೆ ಒಡತಿಯನ್ನ ಕೊಂದಿರುವ ಸತ್ಯ ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯಸ್ಸು 24.. ಮನೆ ಬಾಡಿಗೆ ಕೊಟ್ಟವರನ್ನೇ ಕೊಲೆ ಮಾಡಿದ ಶೋಕಿ ರಾಣಿ; ಮೋನಿಕಾ ತಗ್ಲಾಕೊಂಡಿದ್ಹೇಗೆ?

https://newsfirstlive.com/wp-content/uploads/2024/05/BNG_MURDER.jpg

Load More