Advertisment

ರೇಣುಕಾಸ್ವಾಮಿಗೆ ಪವಿತ್ರಾ ನಂಬರ್ ಸಿಕ್ಕಿದ್ದು ಹೇಗೆ? ಮೆಸೇಜ್‌ ಮಾಡಿ ಬಲೆಗೆ ಬಿದ್ದ ಇಂಚಿಂಚೂ ಮಾಹಿತಿ ಇಲ್ಲಿದೆ!

author-image
Gopal Kulkarni
Updated On
ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಒನ್​​​ ಅಂಡ್​ ಓನ್ಲಿ ದರ್ಶನ್? ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಟ್ವಿಸ್ಟ್‌; ಏನದು?
Advertisment
  • ರೇಣುಕಾಸ್ವಾಮಿಯನ್ನು ಬಲೆಗೆ ಕೆಡವಲು ಏನೆಲ್ಲಾ ಪ್ಲಾನ್ ನಡೀತು ಗೊತ್ತಾ?
  • ನಂಬರ್ ಕೊಟ್ಟ ರೇಣುಕಾಸ್ವಾಮಿ ಪವಿತ್ರಾ ಜೊತೆ ಏನೆಲ್ಲಾ ಮಾತನಾಡಿದ್ದರು
  • ಚಿತ್ರದುರ್ಗದಿಂದ ಬೆಂಗಳೂರಿನವರೆಗೂ ನಡೆದ ಜರ್ನಿಯೇ ರೋಚಕ ಕಥನ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಅಂತಿಮ ಹಂತಕ್ಕೆ ಬಂದಂತಾಗಿದೆ. ಬರೋಬ್ಬರಿ 3991 ಪುಟಗಳ ಜಾರ್ಜ್​ಶೀಟ್​ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವ ಒಂದೊಂದು ಅಂಶವೂ ಕೂಡ ಆರೋಪಿಗಳ ಎದೆಯಲ್ಲಿ ಒನಕೆ ಕುಟ್ಟಿದ ಅನುಭವ ತರುತ್ತದೆ. ಅದರಲ್ಲೂ ಈ ಗ್ಯಾಂಗ್​ ರೇಣುಕಾಸ್ವಾಮಿಯನ್ನು ಬಲೆಗೆ ಬೀಳಿಸಿದ್ದು. ಪವಿತ್ರಾಗೆ ಅವನ ನಂಬರ್ ಸಿಕ್ಕೆದ್ದೇ ಒಂದು ರೋಚಕ ಸ್ಟೋರಿ. ಜಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವ ಪವಿತ್ರಾ ತಪ್ಪೊಪ್ಪಿಗೆ ಹೇಳಿಕೆಯನ್ನು ಗಮನಿಸಿದ್ರೆ ಅದೊಂದು ರೋಚಕ ಅಧ್ಯಾಯ.

Advertisment

publive-image

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆದ ನಂತರ ದರ್ಶನ್​​ ಗ್ಯಾಂಗ್​ನಿಂದ ಮಾಸ್ಟರ್​ ಪ್ಲಾನ್​​; ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಸ್ವ-ಇಚ್ಛಾ ಹೇಳಿಕೆ!
ಜೂನ್ 3ನೇ ತಾರೀಜಿನಂದು ಆತನಿಗೆ ಬುದ್ಧಿ ಕಲಿಸುವ ಸಲುವಾಗಿ "ಡ್ರಾಪ್ ಮೀ ಯುವರ್ ನಂಬರ್" ಎಂದು ಮೆಸೇಜ್‌ ಅನ್ನು ಕಳುಹಿಸಿರುತ್ತೇನೆ. ಅದಕ್ಕೆ ಪ್ರತಿಯಾಗಿ ನನ್ನ ನಂಬನ್ನು ಕೇಳಿರುತ್ತಾನೆ. ಈ ರೀತಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿಷಯವನ್ನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಬಳಿ ದುಃಖದಿಂದ ಇವನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಜೂನ್ 5 ರಂದು ಹೇಳಿಕೊಂಡಿರುತ್ತೇನೆ.

ಆತನು ಯಾರು ಎಂದು ಪತ್ತೆ ಮಾಡಿ ಬುದ್ದಿ ಕಲಿಸಲು ಗೌತಮ್ ಕೆ.ಎಸ್. 1990 ಎನ್ನುವ ಇನ್ಸ್ಸ್ಟಾಗ್ರಾಮ್ ಗೆ ಪವನ್ ಮೊಬೈಲ್ ನಂ. 9030****** ನಾನೇ ಹಾಕಿದ್ದು, ಈ ಸಮಯದಲ್ಲಿ ಪವನ್ ನನ್ನ ಜೊತೆಯಲ್ಲಿರುತ್ತಾನೆ. "ಕಾಲ್ ಮಿ" ಎಂದು ಮಸೇಜ್ ನಾನೇ ಮಾಡಿರುತ್ತೇನೆ. ಅದೇ ಗೌತಮ್ ಎನ್ನುವ ವ್ಯಕ್ತಿ 9035****** ಮೊಬೈಲ್ ನಂಬರ್ ನಿಂದ ರಾತ್ರಿ 9-00 ಗಂಟೆಗೆ ಕಾಲ್ ಮಾಡಿದ್ದು, ಆ ಕಾಲ್‌ನ್ನು ನಾನು ಸ್ವೀಕರಿಸಿದ್ದು, ಆ ವ್ಯಕ್ತಿ ನಾನೇ ಪವಿತ್ರಗೌಡ ಎಂದು ಖಾತ್ರಿ ಪಡಿಸಿಕೊಂಡು ನೀವು ಎಲ್ಲ ಇರುವುದು ಏನು ಮಾಡುವುದು ಎಂದೆಲ್ಲ ಪ್ರಶ್ನೆಗಳನ್ನು ಕೇಳಿ ನನ್ನೊಂದಿಗೆ ಅಶ್ಲೀಲವಾಗಿ 5 ನಿಮಿಷ ಸಂಭಾಷಣೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವಂತೆ ಮಾತನಾಡಿರುತ್ತೇನೆ.

Advertisment

ಇದನ್ನೂ ಓದಿ:20 ಸಾವಿರದಲ್ಲಿ ಇವಳನ್ನ ಮೆಂಟೇನ್ ಮಾಡ್ತಿಯಾ.. ರೇಣುಕಾಸ್ವಾಮಿ ಎದೆ, ಕುತ್ತಿಗೆಗೆ ಬಲವಾಗಿ ಒದ್ದ ದರ್ಶನ್!

ನಂತರ ನಾನು ಕಾಲ್ ಮಾಡಿ ನೀವು ಇರುವುದು ಎಲ್ಲಿ. ಏನು ಕೆಲಸ ಮಾಡುವುದು ಎಂದು ಕೇಳಿದಾಗ ಆತ ನಾನು ಜಿಗಣಿಯಲ್ಲಿರುವುದಾಗಿ ತಿಳಿಸಿದ್ದನು. ಆಗ ನಾನು ಪವನ್‌ಗೆ ಆತನನ್ನು ಏನಾದರೂ ಮಾಡಿ ಪತ್ತೆ ಮಾಡು ಬುದ್ದಿಕಲಿಸಬೇಕೆಂದು ತಿಳಿಸಿದೆನು. ನಂತರ ನಾನು ಮತ್ತು ಪವನ್ ಈ ವಿಷಯವನ್ನು ಸ್ಟೋನಿ ಬ್ರೂಕ್‌ ವಿನಯ್‌ಗೆ ಕರೆ ಮಾಡಿ ತಿಳಿಸಿದ್ದು ಆತನು ಸಹ ಪವನ್‌ಗೆ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡುವಂತೆ ತಿಳಿಸಿದ್ದಲ್ಲದೇ ಮುಂದುವರೆದು ಈ ವಿಷಯವನ್ನು ದರ್ಶನ್ ರವರಿಗೆ ತಿಳಿಸುತ್ತೇನೆಂದು ಹೇಳಿರುತ್ತಾರೆ.

ಇದಾದ ಮಾರನೇ ದಿನ ದಿನಾಂಕ 06/06/2024 ರಂದು ಪವನ್‌ ನನ್ನ ಬಳಿ ಬಂದು ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯನ್ನು ಹುಡುಕಲು ತನ್ನ ಸ್ನೇಹಿತನಾದ ನಂದೀಶ್​ನಿಗೆ ಹಾಗೂ ದರ್ಶನ್ ಹತ್ತಿರ ಸಿವಿಲ್ ವರ್ಕ್ ಮಾಡುತ್ತಿದ್ದ ತೌಸಿಪ್ ಎಂಬುವರಿಗೆ ಕರೆ ಮಾಡಿ ಜಿಗಣಿಯ ಅಪೋಲೋ ಪಾರ್ಮೆಸಿಯ ಬಳಿ ಹೋಗಿ ಹುಡುಕುವಂತೆ ನೇಮಿಸಿರುವುದಾಗ ನನಗೆ ತಿಳಿಸಿದ್ದನು.

Advertisment

publive-image

ನಂತರ ಅದೇ ದಿನ ರೇಣುಕಾಸ್ವಾಮಿಯು ಪವಿತ್ರಗೌಡ ಆದ ನಾನು ಎಂದುಕೊಂಡು ಪವನ್‌ ವಾಟ್ಸಪ್ ಮೂಲಕ ತನ್ನ ಚಿತ್ರದುರ್ಗದ ಮನೆಯ ವಿಳಾಸ ತಾನು ಕೆಲಸ ಮಾಡುತ್ತಿದ್ದ ಚಿತ್ರದುರ್ಗದ ಅಪೋಲೋ ಪಾರ್ಮಸಿಯ ವಿಳಾಸ ಮತ್ತು ಲೊಕೇಷನ್ ಕಳುಹಿಸಿರುವ ಬಗ್ಗೆ ಪವನ್ನು ನನ್ನ ಬಳಿ ಬಂದು ಚರ್ಚಿಸಿರುತ್ತಾನೆ.

ಇದನ್ನೂ ಓದಿ:ದರ್ಶನ್‌ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?

ಆಗ ನಾನು ಪವನ್‌ನ್ನು ಕುರಿತು ಅದೇ ಒಳ್ಳೆ ಸಮಯ ಅವನನ್ನು ಹೇಗಾದರೂ ಮಾಡಿ ಕರೆತರುವಂತೆ ಮತ್ತು ಸರಿಯಾಗಿ ಬುದ್ದಿ ಕಲಿಸೋಣ ಎಂದು ಹೇಳಿರುತ್ತೇನೆ ಆಗ ಪವನ್ ಈ ವಿಷಯವನ್ನು ವಿನಯ್ ರವರ ಹತ್ತಿರ ಚರ್ಚಿಸುವುದಾಗಿ ತಿಳಿಸಿ ಹೋಗಿರುತ್ತಾನೆ. ಇದಾದ ಬಳಿಕ ಪವನ್ನು ನನಗೆ ಕರೆ ಮಾಡಿ ವಿನಯ್ ರವರೊಂದಿಗೆ ಪೋನ್‌ ನಲ್ಲಿ ಮಾತನಾಡಲು ಆತನಿಗೆ ನೀಡಿದ್ದು ಆಗ ವಿನಯ್ ರವರು ನನ್ನೊಂದಿಗೆ ಮಾತನಾಡುತ್ತಾ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ವ್ಯಕ್ತಿಯ ಬಗ್ಗೆ ದರ್ಶನ್ ರವರೊಂದಿಗೆ ಕರೆ ಮಾಡಿ ಮಾತನಾಡಿರುತ್ತೇನೆ. ದರ್ಶನ್ ರವರೂ ಸಹ ಏನಾದರೂ ಮಾಡಿ ಅವನನ್ನು ಕರೆತರುವಂತೆ ಹಾಗೂ ಕರೆತಂದ ನಂತರ ಚೆನ್ನಾಗಿ ಹಲ್ಲೆ ಮಾಡಿ ಒಂದು ಗತಿ ಕಾಣಿಸೋಣ ಇದಕೋಸ್ಕರ ಅವಶ್ಯವಿದ್ದಲ್ಲಿ ಚಿತ್ರದುರ್ಗದ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಳ್ಳುವಂತೆ ತಿಳಿಸಿರುವುದಾಗಿ ಈ ಬಗ್ಗೆ ಹೆಚ್ಚಿನ ವಿಷಯವನ್ನು ಪನನ್‌ಗೆ ತಿಳಿಸಿದ್ದು ಅವನು ಬಂದು ನಿಮಗೆ ಎಲ್ಲಾ ಮಾಹಿತಿ ನೀಡುತ್ತಾನೆಂದು ಹೇಳಿದ್ದರು ಇದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆನು. ಅದರಂತೆ ಪವನ್ ಮನೆಗೆ ವಾಪಸ್ಸು ಬಂದು ರೇಣುಕಾಸ್ವಾಮಿ ಕಳುಹಿಸಿದ ಪೋಟೋಗಳು, ಸಂದೇಶಗಳನ್ನು ವಿನಯ್ ರವರಿಗೆ ತೋರಿಸಿದ್ದು ವಿನಯ್ ರವದು ದರ್ಶನ್ ಸಾರ್ ಹತ್ತಿರ ಮಾತನಾಡಿ ಅವರ ಅಭಿಮಾನಿಗಳಿಂದ ಅತನನ್ನು ಹುಡುಕಿಸಿ ಕರೆತರುವಂತೆ ತಿಳಿಸಿರುವುದಾಗಿ ಹೇಳಿದನು.

Advertisment

ಆದಾದ ನಂತರ ದಿನಾಂಕ 07/08/2024 ರಂದು ಪವನ್‌ ನನ್ನ ಮನೆಯಲ್ಲಿ ಎಂದಿನಂತೆ ಸಾಮನ್ಯ ಕೆಲಸ ಮಾಡಿಕೊಂಡು ಇದ್ದನು. ಈಗ ನಾನು ಮೆಸೇಜ್ ಕಳುಹಿಸುತ್ತಿದ್ದ ವ್ಯಕ್ತಿಯ ಹುಡುಕಾಟದ ಬಗ್ಗೆ ಪವನ್ ಏಜಿ ವಿಚಾರ ಮಾಡುತ್ತಿದ್ದೆನು. ಅದಕ್ಕೆ ಪವನ್‌ ಚಿತ್ರದುರ್ಗದಲ್ಲಿ ಅತನನು ಹುಡುಕಲು ಅಲ್ಲಿನ ದರ್ಶನ್ ಅಭಿಮಾನಿಗಳನ್ನು ಒಪ್ಪಿಸಿದ್ದು. ಅವರುಗಳು ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ವಿಳಾಸವನ್ನು ಹುಡುಕುವ ಕೆಲಸವನ್ನು ಮಾಡುತ್ತಿರುವುದಾಗಿ ಜೊತೆಗೆ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ಜೊತೆಗೂ ಸಹ ನಿರಂತರವಾಗಿ ಮೆಸೇಜ್‌ಗಳನ್ನು ಮಾಡುತ್ತಿದ್ದು ಆತನು ಈ ದಿನ ಮದ್ಯಾಹ್ನ ಚಿತ್ರದುರ್ಗದ ಕೋರ್ಟ್‌ ಗೆ ಕೇಸ್‌ ವೊಂದರೆ ವಿಚಾರಣೆಗಾಗಿ ಹೋಗುತ್ತಿರುವುದಾಗಿ ಸಂದೇಶ ಕಳುಹಿಸಿದ್ದು ಅಲ್ಲಿಗೆ ಹೋಗಿ ಹುಡುಕುವಂತೆ ತಿಳಿಸಿರುವುದಾಗಿ ಮತ್ತು ಈ ವಿಷಯವನ್ನು ಸಹ ದರ್ಶನ್ ಮತ್ತು ವಿನಯ್ ರವರಿಗೆ ಕರೆ ಮಾಡಿ ತಿಳಿಸಿರುವುದಾಗಿ ಹೇಳಿದ್ದನು. ಇದಾದ ನಂತರ ಅದಿನ ಸಂಜೆ ಪವನ್ ನೊಂದಿಗೆ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ವ್ಯಕ್ತಿಯು ಇನ್ನೂ ಪತ್ತೆಯಾಗಿಲ್ಲ ಪತ್ತೆಯಾದ ನಂತರ ತಿಳಿಸುವುದಾಗಿ ಹೇಳಿದ್ದನು.

ದಿನಾಂಕ: 08-06-2024 ರಂದು ಮದ್ಯಾಹ್ನ 1-00 ರಿಂದ 2-00 ಗಂಟೆ ಸಮಯದಲ್ಲಿ ದರ್ಶನ್ ರವರು ನನಗೆ ಫೋನ್ ಮಾಡಿ ಮೆಸೇಜ್ ಮಾಡುತ್ತಿದ್ದ ಗೌತಮ್ ಎನ್ನುವ ವ್ಯಕ್ತಿಯನ್ನು ನಮ್ಮ ಹುಡುಗರು ಅಪಹರಣ ಮಾಡಿಕೊಂಡು ಬಂದಿರುತ್ತಾರೆಂದು ತಿಳಿಸಿದರು. ಪ್ರದೋಶ್ ರವರ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್​ ನಲ್ಲಿ ದರ್ಶನ್, ವಿನಯ್ ಹಾಗೂ ಪ್ರದೋಶ್ ರವರು ಡ್ರೈವ್ ಮಾಡಿಕೊಂಡು ನಮ್ಮ ಮನೆಯ ಹತ್ತಿರಕ್ಕೆ ಬಂದಿದ್ದು, ಆತನಿಗೆ ಬುದ್ದಿ ಕಲಿಸೋಣ ಬಾ ಎಂದು ನನ್ನನ್ನು ಅದೇ ಕಾರಿನಲ್ಲಿ ಕೂರಿಸಿಕೊಂಡು ಬಂದರು ನಾನು ದರ್ಶನ್ ಪಕ್ಷ ಕಾರಿನಲ್ಲಿ ಕುಳಿತ್ತಿದ್ದು.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ದಿನ ನಡೆದಿದ್ದೇನು? ನಟ ದರ್ಶನ್​​​ ಬಿಚ್ಚಿಟ್ಟ ಇಂಚಿಂಚೂ ಶಾಕಿಂಗ್​ ಮಾಹಿತಿ ಇಲ್ಲಿದೆ!

Advertisment

ನಾವು 4 ಜನರು ನಮ್ಮ ಮನೆಯಿಂದ ಅಂದಾಜು 5- ರಿಂದ 10 ನಿಮಷದವರೆಗೆ ಸಂಚಾರ ಮಾಡಿ ಸಂಜೆ ಸುಮಾರು 4-45 ಗಂಟೆಗೆ ಬಹಳಷ್ಟು ವಾಹನಗಳನ್ನು ನಿಲ್ಲಿಸಿದ್ದ ಗೋಡೌನ್ ಇರುವ ಸ್ಥಳಕ್ಕೆ ಕರೆದುಕೊಂಡು ಹೋದರು, ಅಲ್ಲಿ ನನ್ನ ಮತ್ತು ದರ್ಶನ್ ಮನೆಯಲ್ಲಿ ಕೆಲಸ ಮಾಡುವ ನಂದೀಶ್, ಇದ್ದರು, ದರ್ಶನ್ ಅಭಿಮಾನಿ ಸಂಘದ ಉಪಾಧ್ಯಕ್ಷ ನಾಗರಾಜು ಮತ್ತು ಪವನ್ ಹಿಂದೆ ಸ್ಕಾರ್ಪಿಯೋ ಕಾರ್‌ನಲ್ಲಿ ಬಂದರು. ಹಾಗೂ ಟೀ ಷರ್ಟ್ ಮತ್ತು ನೀಲಿ ಬಣ್ಣದ ಅಂಡರ್ ವೇರ್ ಹಾಕಿದ್ದ ಒಬ್ಬ ವ್ಯಕ್ತಿ ಅಲ್ಲಿಯೇ ಇದ್ದನು. ಆತನು ಗೋಳಾಡಿಕೊಂಡು ಕ್ಷಮೆ ಕೇಳುತ್ತಿದ್ದನು.

publive-image

ದರ್ಶನ್ ರವರು ಇದೇ ವ್ಯಕ್ತಿಯೇ ಗೌತಮ್.ಕೆ.ಎಸ್. 1990 ಖಾತೆಯಿಂದ ನಿನಗೆ ಅಶ್ಲೀಲ ಮಸೇಜ್, ಪೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದವನು ಇವನ ಓರಿಜಿನಲ್ ಹೆಸರು ರೇಣುಕಾಸ್ವಾಮಿ, ಚಿತ್ರದುರ್ಗದ ವಾಸಿಯಾಗಿದ್ದು ಈತನನ್ನು ಅಲ್ಲಿಯ -ದರ್ಶನ್ ಅಣ್ಣ ರವರ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ @ ರಘು, ಜಗದೀಶ ಜಗ್ಗ, ರವರು ಆತನ ಸ್ನೇಹಿತ ರವಿ ಎಂಬುವರ ಇಟಿಯಾನ್ ಕಾರ್ನನಲ್ಲಿ ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬಂದಿರುತ್ತಾರೆಂದು ತಿಳಿಸಿದರು. ಪವನ್ ಕೂಡ ಅದನ್ನೇ ತಿಳಿಸಿದ ಈಗ ದರ್ಶನ್, ನಾಗರಾಜು, ಪವನ್, ನಂದೀಶ್, ರವರುಗಳು ರೇಣುಕಾಸ್ವಾಮಿಯ ತಲೆ, ಎದೆಯ ಮೇಲೆ ಕೈಕಾಲುಗಳ ಮೇಲೆ ಮರದ ರಂಬೆಗಳಿಂದ ಮನಸೋ ಇಚ್ಛೆ ಹೊಡೆದು ಹಲ್ಲೆ ಮಾಡಿದರು.

publive-image

ನಾನು ಸಹ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ ಇವನೇನಾ ಎಂದು ನನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಆತನ ಕಪಾಳ ಮತ್ತು ಮುಖದ ಮೇಲೆ ಹೊಡೆದು ಆತನನ್ನು ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದಾಗ ಎಲ್ಲರೂ ಸೇರಿ ಆತನಿಗೆ ಹಲ್ಲೆ ಮಾಡಲು ಶುರು ಮಾಡಿದ್ದು ಆಗ ದರ್ಶನ್ ರವರು ನನ್ನನ್ನು ಮನೆಗೆ ಹೊರಡುವಂತೆ ಹೇಳಿದರು.

ನಂತರ ನಾನು ಸಂಜೆ ಸುಮಾರು 5-30 ಗಂಟೆಗೆ ವಿನಯ್ ರವರು ರೆಡ್ ಬಣ್ಣದ ರ್ಯಾಂಗ್‌ಲರ್ ಜೀಪ್ ನಾನಿದ್ದ ಸ್ಥಳಕ್ಕೆ ಬಂದಿದ್ದು ನೀನು ಮನೆಗೆ ಹೋಗು ಅವನಿಗೆ ಸರಿಯಾಗಿ ಬುದ್ದಿ ಕಲಿಸುತ್ತನೆಂದು ದರ್ಶನ್ ನನಗೆ ಹೇಳಿ ಕಳುಹಿಸಿದರು. ನಾನು ಸ್ಥಳದಲ್ಲಿದ್ದ ಅವಧಿಯಲ್ಲಿ ಅನೇಕ ಬಾರಿ, ದರ್ಶನ್, ನಾಗರಾಜು, ಪವನ್, ರಾಘವೇಂದ್ರ, ನಂದೀಶ ಹಾಗೂ ಇತರರು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.
ಇದೇ ದಿನ ರಾತ್ರಿ 9-30 ಗಂಟೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿ ಸತ್ತು ಹೋಗಿರುತ್ತಾನೆಂದು ಪವನ್ ಹಾಗೂ ದರ್ಶನ್ ಹೇಳಿದ್ದು, ಆ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದು ಹೇಳಿದರು.

ದಿನಾಂಕ 12-06-2024ರಂದು ನಾನು ಯಲಕಚೇನಹಳ್ಳಿಯಲ್ಲಿರುವ ನನ್ನ ತಾಯಿ ಮನೆಗೆ ಹೋಗಿ ರಾತ್ರಿ ಅಲ್ಲಿಯೇ ತಂಗಿರುತ್ತೇನೆ. ಮಾರನೇ ದಿನ ಬೆಳಗ್ಗೆ ಸುಮಾರು 9 ಗಂಟೆಗೆ ದರ್ಶನ್​ ರವರು ಫೋನ್ ಮಾಡಿ ರೇಣುಕಾಸ್ವಾಮಿ ಕೊಲೆಯಾಗಿರು ಬಗ್ಗೆ ಕಾಪಾಕ್ಷಿಪಾಳ್ಯದಲ್ಲಿ ಕೇಸ್​ ಆಗಿರುತ್ತದೆ. ನೀನು ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗು ಎಂದು ತಿಳಿಸಿದ ಮೇರೆಗೆ ನಾನು ಅದರಂತೆ ಆರ್​ಆರ್​ ನಗರದಲ್ಲಿರುವ ನಮ್ಮ ಮನೆಗೆ ಬಂದಿದ್ದ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಹೋಗುವಂತೆ ತಿಳಿಸಿದ ಮೇರೆಗೆ ನಾನು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಬಂದು ಕಾಮಾಕ್ಷಿಪಾಳ್ಯ ಪೊಲೀಸ್​​ ಠಾಣೆಯ ಪೊಲೀಸ್​​ ಇನ್ಸೆಪೆಕ್ಟರ್​​ ಬಳಿ ಶರಣಾಗಿರುತ್ತೇನೆ. ಸದರಿ ಹೇಳಿಕೆಯನ್ನು ಮಹಿಳಾ ಪೊಲೀಸ್​​ ಸಬ್​​ ಇನ್ಸ್​​ಪೆಕ್ಟರ್​ ರವರ ಸಮಕ್ಷಮ ನನ್ನ ಹೇಳಿಕೆಯನ್ನು ನೀಡಿರುತ್ತೇನೆ.

ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದರೇ ನಾನು, ದರ್ಶನ್​, ಪವನ್, ನಂದೀಶ್​​, ಪ್ರದೂಷ್​​, ಲಕ್ಷ್ಮಣ್, ವಿನಯ್, ರಾಘವೇಂದ್ರ ಹಾಗೂ ಇತರರು ಲಾಠಿ, ಮರದಕೊಂಬೆ, ಹಗ್ಗ ಮತ್ತು ಚಪ್ಪಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಸ್ಥಳವನ್ನು ತೋರಿಸುತ್ತೇನೆ. ನನ್ನ ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್​​ ಫೋನ್ ನನ್ನ ಹತ್ತಿರವೇ ಇದ್ದು ಹಾಜರುಪಡಿಸಿರುತ್ತೇನೆ ಎಂದು ಪವಿತ್ರಾ ತನ್ನ ಸ್ವಇಚ್ಛೆ ಹೇಳಿಕೆಯಲ್ಲಿ ಪೊಲೀಸರೆದುರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment