/newsfirstlive-kannada/media/post_attachments/wp-content/uploads/2024/05/RCB-37.jpg)
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಸತತ 4 ಪಂದ್ಯಗಳನ್ನು ಗೆದ್ದುಕೊಂಡು ಪ್ಲೇ-ಆಫ್ ಕನಸು ಕಾಣುತ್ತಿದೆ. ಅಂದ್ಹಾಗೆ ಆರ್ಸಿಬಿಯ ಪ್ಲೇ-ಆಫ್ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿದೆ. ಅಂದುಕೊಂಡಷ್ಟು ಪ್ಲೇ-ಆಫ್ ಹಾದಿ ಸುಲಭ ಇಲ್ಲವೇ ಇಲ್ಲ.
ಯಾಕೆಂದರೆ.. ಸದ್ಯದ ಪಾಯಿಂಟ್ಸ್ ಟೇಬಲ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಟಾಪ್ನಲ್ಲಿವೆ. ಈ ಎರಡು ತಂಡಗಳು ಈಗಾಗಲೇ 16 ಅಂಕಗಳನ್ನು ಗಳಿಸಿರೋದ್ರಿಂದ ಪ್ಲೇ-ಆಫ್ ಹಾದಿ ಸುಗಮವಾಗಿದೆ. ಜೊತೆಗೆ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಪೈಪೋಟಿ ನಡೆಸುತ್ತಿವೆ.
ಇದನ್ನೂ ಓದಿ:KL ರಾಹುಲ್ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!
ಆರ್ಸಿಬಿ ತಂಡವು ಪ್ಲೇ-ಆಫ್ಗೆ ಪ್ರವೇಶ ಮಾಡಬೇಕು ಅಂದರೆ..
ಈಗಾಗಲೇ 12 ಪಂದ್ಯಗಳನ್ನು ಆಡಿ 7 ಪಂದ್ಯಗಳನ್ನು ಗೆದ್ದಿರುವ ಹೈದರಾಬಾದ್ 14 ಅಂಕಗಳನ್ನು ಹೊಂದಿದೆ. ಇತ್ತ ಚೆನ್ನೈ 11 ಪಂದ್ಯಗಳನ್ನು ಆಡಿ 6 ರಲ್ಲಿ ಗೆದ್ದು 12 ಅಂಕಗಳೊಂದಿಗೆ ಪ್ಲೇ-ಆಫ್ ಲೆಕ್ಕಾಚಾರ ಹಾಕ್ತಿದೆ. ಈ ಎರಡು ತಂಡಗಳ ಜೊತೆ ಆರ್ಸಿಬಿ ಪ್ಲೇ-ಆಫ್ ಪ್ರವೇಶಿಸಲು ಪ್ರಬಲ ಪೈಪೋಟಿ ನೀಡಬೇಕಿದೆ. ಹೈದರಾಬಾದ್, ಚೆನ್ನೈ ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲಬೇಕು. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಲ್ಎಸ್ಜಿ ತಂಡದ ಸೋಲು ಗೆಲುವಿನ ಮೇಲೂ ಆರ್ಸಿಬಿ ಭವಿಷ್ಯ ನಿಂತಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಅದು ಹೇಗೆಂದರೆ..
ಸದ್ಯ ಫಾಫ್ ನೇತೃತ್ವದ ಆರ್ಸಿಬಿ ತಂಡವು 5 ಪಂದ್ಯಗಳನ್ನು ಗೆದ್ದುಕೊಂಡು 10 ಪಾಯಿಂಟ್ಸ್ ಗಳಿಸಿದೆ. 10 ಪಾಯಿಂಟ್ಸ್ ಗಳಿಸಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಖುಷಿಯ ವಿಚಾರ ಏನೆಂದರೆ ನೆಟ್ ರನ್ ರೇಟ್ ಸದ್ಯ ಚೆನ್ನಾಗಿಯೇ ಇಟ್ಟುಕೊಂಡಿರುವ ಆರ್ಸಿಬಿ ಮುಂದೆ ಎರಡು ಪಂದ್ಯಗಳು ಎದುರಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಆರ್ಸಿಬಿ ಗೆಲ್ಲಬೇಕು. ಆಗ ಮಾತ್ರ ಆರ್ಸಿಬಿ ಪಾಯಿಂಟ್ಸ್ 14ಕ್ಕೇ ಏರಿಕೆ ಆಗಲಿದೆ. 14 ಅಂಕ ಗಳಿಸಿದರೂ ಆರ್ಸಿಬಿ ಭವಿಷ್ಯ ಹೈದರಾಬಾದ್, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಿರುತ್ತದೆ.
ಮುಂದಿನ ಪಂದ್ಯಗಳ ಫಲಿತಾಂಶ ಹೇಗೆ ಆಗಬೇಕು..?
- ಚೆನ್ನೈ ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಗುಜರಾತ್, ರಾಜಸ್ಥಾನ್ ಹಾಗೂ ಆರ್ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಧೋನಿ ಬಳಗ ಸೋಲಬೇಕು.
- ಹೈದರಾಬಾದ್ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಗುಜರಾತ್ ಹಾಗೂ ಪಂಜಾಬ್ ವಿರುದ್ಧ ಹೈದರಾಬಾದ್ ಸೋಲಬೇಕು. ಅಂದರೆ ಎರಡೂ ಪಂದ್ಯಗಳಲ್ಲೂ ಹೈದರಾಬಾದ್ ಸೋಲಬೇಕಿದೆ.
- ಡೆಲ್ಲಿ ಕ್ಯಾಪಿಟಲ್ಸ್ಗೂ ಎರಡು ಪಂದ್ಯಗಳು ಇವೆ. ಆರ್ಸಿಬಿ ಹಾಗೂ ಎಲ್ಎಸ್ಜಿ ವಿರುದ್ಧ ಪಂತ್ ಪಡೆ ಸೋಲಲೇಬೇಕು
- ಇನ್ನು ಲಕ್ನೋ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಬೇಕು. ಜೊತೆಗೆ ಮುಂಬೈ ವಿರುದ್ಧ ಸೋಲಬೇಕಿದೆ. ಅಂದರೆ ಮುಂಬೈ ವಿರುದ್ಧ ಕೆಎಲ್ ರಾಹುಲ್ ಬಳಗ ಸೋಲಲೇಬೇಕು.
- ಈ ಮೇಲಿನ ಸಮೀಕರಣ ಸರಿ ಹೋದರೆ ಆರ್ಸಿಬಿ ಮೂರನೇ ಸ್ಥಾನ, ಲಕ್ನೋ ನಾಲ್ಕನೇ ಸ್ಥಾನ ಪಡೆಯಬಹುದು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ತಂಡವನ್ನು ಸೋಲಿಸಿದರೂ ಆರ್ಸಿಬಿ ಮೂರನೇ ಸ್ಥಾನದಲ್ಲಿ ಉಳಿಯಬಹುದು. ಏಕೆಂದರೆ ಪಂತ್ ತಂಡದ ನೆಟ್ ರನ್ ರೇಟ್ ಆರ್ಸಿಬಿಗಿಂತ ಕೆಟ್ಟದಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮಳೆ.. ಮಳೆ.. ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ..!
4ನೇ ಸ್ಥಾನ ಪಡೆಯೋದು ಹೇಗೆ..?
- ಆರ್ಸಿಬಿ ಉಳಿದಿರುವ ಎರಡೂ ಪಂದ್ಯಗಳು ಗೆಲ್ಲಬೇಕು. ಅಲ್ಲದೇ SRH ಮತ್ತ CSK ಉಳಿದ ಪಂದ್ಯಗಳನ್ನು ಸೋಲುತ್ತವೆ ಎಂದು ಭಾವಿಸಬೇಕು. ಒಂದು ವೇಳೆ SRH ಮತ್ತು CSK 16 ಅಂಕಗಳನ್ನು ತಲುಪಿದರೆ ಆರ್ಸಿಬಿ ಕನಸು ನುಚ್ಚು ನೂರಾಗಲಿದೆ. ಯಾಕೆಂದರೆ ಆರ್ಸಿಬಿ 14 ಪಾಯಿಂಟ್ಸ್ಗಳನ್ನಷ್ಟೇ ಗಳಿಸಲು ಸಾಧ್ಯವಾಗುತ್ತದೆ.
- ಒಂದು ವೇಳೆ SRH ಅಥವಾ CSK ಯಾವುದಾದರೂ ಒಂದು ತಂಡ 16 ಅಥವಾ 18 ಅಂಕಗಳನ್ನು ಪಡೆದುಕೊಂಡರೂ ಆರ್ಸಿಬಿಗೆ ಲಾಭ ಇದೆ. ಆದರಿಲ್ಲ ಯಾವುದಾದರೂ ಒಂದು ತಂಡದ ಪಾಯಿಂಟ್ಸ್ 14 ಮೀರಿ ಹೋಗುವಂತಿಲ್ಲ. ಯಾಕೆಂದರೆ ಇಲ್ಲಿ ಆರ್ಸಿಬಿ ಜೊತೆ ಪೈಪೋಟಿ ನಡೆಸುವ ಒಂದು ತಂಡದ ಪಾಯಿಂಟ್ಸ್ ಕೂಡ 14 ಆಗಿರುತ್ತದೆ.
- ಇಂತಹ ಪರಿಸ್ಥಿತಿಯಲ್ಲಿ ಆರ್ಸಿಬಿ ರನ್ ರೇಟ್ CSK/SRH ಮತ್ತು LSG/DCಗಿಂತ ಉತ್ತಮವಾಗಿರಬೇಕು. ಅಂತೆಯೇ ಮೇ 14 ರಂದು ನಡೆಯುವ ಪಂದ್ಯದಲ್ಲಿ ಎಲ್ಎಸ್ಜಿ, ಡೆಲ್ಲಿಯನ್ನು ಸೋಲಿಸಲು ಆರ್ಸಿಬಿ ಬಯಸುತ್ತದೆ. ಯಾಕೆಂದರೆ ಇಲ್ಲಿ ಎಲ್ಎಸ್ಜಿ ನೆಟ್ ರನ್ ರೇಟ್ ಕಮ್ಮಿ ಇದೆ.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ಉಳಿದ ಐಪಿಎಲ್ ಲೀಗ್ ಪಂದ್ಯಗಳು
- ಮೇ 10: GT vs CSK
- ಮೇ 11: KKR vs MI
- ಮೇ 12: CSK vs RR
- ಮೇ 12: RCB vs DC
- ಮೇ 13: GT vs KKR
- ಮೇ 14: DC vs LSG
- ಮೇ 15: SRH vs GT
- ಮೇ 17: MI vs LSG
- ಮೇ 18: RCB vs CSK
- ಮೇ 19: SRH vs PBKS
- ಮೇ 19: RR vs KKR
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ